ಕೊನೆಗೂ ಮದುವೆ ಆಗುತ್ತಿರುವ ಹುಡುಗನನ್ನು ಪರಿಚಯಿಸಿದ ಚೈತ್ರಾ ಕುಂದಾಪುರ; ವರ ಯಾರು?
ಬಿಗ್‌ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿ ಚೈತ್ರಾ ಕುಂದಾಪುರ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ಮದುವೆ ಸಂಭ್ರಮದಲ್ಲಿದ್ದ ಚೈತ್ರಾ ಕುಂದಾಪುರ ಸಪ್ತಪದಿ ತುಳಿಯಲಿರುವ ವರನ ಬಗ್ಗೆ ಮಾಹಿತಿ ಕೊಟ್ಟಿರಲಿಲ್ಲ. ಕೇವಲ ಮದುವೆ ಆಗುವುದಾಗಿ ಅಷ್ಟೇ ಹೇಳಿದ್ದರು. ಇನ್ನೇನು ಮದುವೆ ಒಂದು ದಿನ ಇದೆ ಎನ್ನುವಾಗಲೇ ವರನನ್ನು ಪರಿಚಯಿಸಿದ್ದಾರೆ.
ಚೈತ್ರಾ ಕುಂದಾಪುರ ಮದುವೆ ನಾಳೆ (ಮೇ 9)ರಂದು ನಡೆಯಲಿದೆ. ಅದಕ್ಕೂ ಮುನ್ನ ಮೆಹಂದಿ ಕಾರ್ಯಕ್ರಮದಲ್ಲೂ ಭಾಗಿಯಾಗಿದ್ದರು. ಅಷ್ಟೇ ಅಲ್ಲದೆ ಮೆಹೆಂದಿ ಕಾರ್ಯಕ್ರಮವನ್ನು ಯಾಕೆ ಮಾಡಬೇಕು? ಅದರ ಹಿಂದಿರುವ ಹಿನ್ನೆಲೆಯೇನು? ಅನ್ನೋದನ್ನು ಚೈತ್ರಾ ಕುಂದಾಪುರ ವಿವರಿಸಿದ್ದರು. ಆಗಲೂ ಅವರು ಮದುವೆ ಆಗುತ್ತಿರುವ ಹುಡುಗನ ಬಗ್ಗೆ ಮಾಹಿತಿಯನ್ನು ನೀಡಿರಲಿಲ್ಲ.

ಈಗ ತನ್ನ ಇನ್‌ಸ್ಟಾಗ್ರಾಂನಲ್ಲಿ ಪ್ರೀ ವೆಡ್ಡಿಂಗ್ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಅವರು ಸಪ್ತಪದಿ ತುಳಿಯಲಿರುವ ಹುಡುಗನ ಪರಿಚಯ ಮಾಡಿಕೊಟ್ಟಿದ್ದಾರೆ. ಚೈತ್ರಾ ಕುಂದಾಪುರ ನಾಳೆ ಶ್ರೀಕಾಂತ್ ಕಶ್ಯಪ್ ಎಂಬುವವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಸದ್ಯ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಚೈತ್ರಾ ಕುಂದಾಪುರ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ತಾವು ಮದುವೆ ಆಗುತ್ತಿರುವ ಹುಡುಗನ ವಿಡಿಯೋವನ್ನು ಹಂಚಿಕೊಂಡು, ಕಷ್ಟ ಕಾಲದಲ್ಲಿ ಜೊತೆಯಲ್ಲಿ ನಿಂತ ಹುಡುಗನ ಬಗ್ಗೆ ಮಾತಾಡಿದ್ದಾರೆ. "It's time to reveal..ಬದುಕಿನ ಸಂಕಷ್ಟದಿಂದ ಸಂಭ್ರಮದವರೆಗೂ ಜೊತೆ ನಿಂತ ಜೀವದೊಂದಿಗೆ ಸಪ್ತಪದಿ ಇಡುವ ಸಮಯ ಬಂದಿದೆ. ನಿಮ್ಮೆಲ್ಲರ ಹಾರೈಕೆ ನಮ್ಮನ್ನು ಕಾಯಲಿ.." ಎಂದು ಚೈತ್ರಾ ಕುಂದಾಪುರ ಹೇಳಿದ್ದಾರೆ.
ವಿವಾದಗಳಲ್ಲಿ ಸಿಲುಕಿದ್ದ ಚೈತ್ರಾ ಕುಂದಾಪುರಗೆ ಬಿಗ್‌ಬಾಸ್ ಕನ್ನಡ ಹೊಸ ಇಮೇಜ್ ಅನ್ನು ಕೊಟ್ಟಿತ್ತು. ಜನರು ಕೂಡ ಪ್ರೀತಿಯನ್ನು ನೀಡಿದ್ದರು. ಈಗ ಮದುವೆ ಸಂಭ್ರಮದಲ್ಲಿ ಇದ್ದಾರೆ. "ನಮ್ಮದು 12 ವರ್ಷಗಳ ಸುಧೀರ್ಘ ಪ್ರೀತಿ. ನಾನು ಲವ್ ಕಮ್ ಅರೇಂಜ್ಡ್ ಮ್ಯಾರೇಜ್ ಆಗುತ್ತಿದ್ದೇನೆ. ಹಿರಿಯರ ಒಪ್ಪಿಗೆಯನ್ನು ಪಡೆದು ಪ್ರೀತಿಸಿದ ಹುಡುಗನೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದೇನೆ. ಮೇ 9 ರಂದು ಕುಂದಾಪುರದಲ್ಲಿ ಮದುವೆ ಆಗುತ್ತಿದ್ದು, ಕೇವಲ 100 ಮಂದಿಗೆ ಮಾತ್ರ ಆಹ್ವಾನ ನೀಡಲಾಗಿದೆ. ಸರಳವಾಗಿ ದೇವಸ್ಥಾನದಲ್ಲಿ ಮದುವೆ ಆಗುತ್ತಿದ್ದೇನೆ" ಎಂದು ಪಬ್ಲಿಕ್ ಟಿವಿ ಡಿಜಿಟಲ್‌ಗೆ ಮಾಹಿತಿ ನೀಡಿದ್ದಾರೆ.
ಚೈತ್ರಾ ಕುಂದಾಪುರ ಮದುವೆ ಬಗ್ಗೆ ಕೆಲವು ದಿನಗಳಿಂದ ಗುಲ್ಲೆದ್ದಿದ್ದರೂ, ಹುಡುಗನ ಬಗ್ಗೆ ಸುಳಿವನ್ನು ಬಿಟ್ಟು ಕೊಟ್ಟಿರಲಿಲ್ಲ. ಇತ್ತೀಚೆಗೆ 'ಮಜಾ ಟಾಕೀಸ್'ಗೆ ಅತಿಥಿಯಾಗಿ ಬಂದಿದ್ದ ಚೈತ್ರಾ ಕುಂದಾಪುರ ಅಲ್ಲಿಯೂ ಮದುವೆ ಪ್ರಸ್ತಾಪ ಆದಾಗಲೂ ಹುಡುಗನ ಬಗ್ಗೆ ಮಾತಾಡಿರಲಿಲ್ಲ. ಸೃಜನ್ ಲೋಕೇಶ್ ಸೇರಿದಂತೆ ಅತಿಥಿಗಳು ಚೈತ್ರಾ ಕುಂದಾಪುರ ಅವರನ್ನು ಕಾಲೆಳೆದಿದ್ದರು. ಮಜಾ ಟಾಕೀಸ್‌ನಲ್ಲಿ ತಮ್ಮದು 12 ವರ್ಷದ ಪ್ರೀತಿ. ಶ್ರೀಕಾಂತ್ ಕಶ್ಯಪ್ ಅವರೊಂದಿಗೆ ಕಾಲೇಜಿನಲ್ಲಿ ಪ್ರೀತಿ ಆಗಿತ್ತು. ಈಗ ವಿವಾಹವಾಗುತ್ತಿದ್ದೇನೆ. ತಮ್ಮದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್ ಎಂದು ಹೇಳಿದ್ದಾರೆ.


Click it and Unblock the Notifications











