Divya Uruduga: ರೇಷ್ಮೆ ಸೀರೆ, ಮಲ್ಲಿಗೆ ಹೂ.. ಫೋಟೊಶೂಟ್.. ದಿವ್ಯಾ ಉರುಡುಗ ಕೊಟ್ಟ ಸುಳಿವೇನು?

ದಿವ್ಯಾ ಉರುಡುಗ , ಅರವಿಂದ್ ಕೆಪಿ ಈ ಜೋಡಿ ಬಗ್ಗೆ ಯಾರಿಗೆ ಗೊತ್ತಿಲ್ಲ. ಬಿಗ್ ಬಾಸ್ ಮೂಲಕ ಕಿರುತೆರೆ ವೀಕ್ಷಕರಿಗೆ ಮತ್ತಷ್ಟು ಹತ್ತಿರವಾದ ಜೋಡಿ ಇದು. ಅದರಲ್ಲೂ ದಿವ್ಯಾ ಉರುಡುಗ ಕನ್ನಡ ಕಿರುತೆರೆ, ಸಿನಿಮಾ, ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡು ವೀಕ್ಷಕರ ಮನಗೆದ್ದಿರೋ ನಟಿ.

ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡ ಬಳಿಕ ಕನ್ನಡ ಅಭಿಮಾನಿಗಳ ಹೃದಯವನ್ನೇ ಗೆದ್ದಿದ್ದಾರೆ. ಇದೇ ರಿಯಾಲಿಟಿ ಶೋನಲ್ಲೇ ದಿವ್ಯಾ ಜೊತೆ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದ ಅರವಿಂದ್ ಕೆಪಿ ಹೆಸರು ಕೂಡ ಅಷ್ಟೇ ಜನಪ್ರಿಯವಾಗಿದೆ. ಇಲ್ಲಿಂದ ಇಬ್ಬರೂ ಪ್ರೀತಿಯಲ್ಲಿ ಬಿದ್ದಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿತ್ತು. ಆದರೆ, ಈ ಬಗ್ಗೆ ದಿವ್ಯಾ ಹಾಗೂ ಅರವಿಂದ್ ಇಬ್ಬರೂ ಅಧಿಕೃತವಾಗಿ ಹೇಳಿಕೆ ಕೊಟ್ಟಿರಲಿಲ್ಲ.

divya-uruduga-and-aravind-kp-movie

ಆದ್ರೀಗ ದಿವ್ಯಾ ಉರುಡುಗ ಗುಡ್ ನ್ಯೂಸ್ ಎನ್ನುತ್ತಾ ಅಭಿಮಾನಿಗಳ ಮುಂದೆ ಬಂದಿದ್ದಾರೆ. ರೇಷ್ಮೆ ಸೀರೆ, ಮಲ್ಲಿಗೆ ಹೂ ಮುಡಿದು ಮದುಮಗಳ ಹಾಗೆ ಕಂಗೊಳಿಸುತ್ತಾ ಇದ್ದಾರೆ. ಅಲ್ಲದೆ ಸದ್ಯದಲ್ಲೇ ಅನೌನ್ಸ್‌ಮೆಂಟ್ ಮಾಡುತ್ತೇವೆ ಅಂತಾನೂ ಹೇಳಿದ್ದಾರೆ. ಇಷ್ಟೆಲ್ಲ ನೋಡಿದ ಮೇಲೆ ದಿವ್ಯಾ ಉರುಡುಗ ಮದುವೆ ವಿಷಯವನ್ನೇ ವಿಚಾರ ಬಹಿರಂಗ ಪಡಿಸಬಹುದು ಎಂದು ಅಂದಾಜು ಹಾಕಲಾಗುತ್ತಿದೆ.

ದಿವ್ಯಾ ಉರುಡುಗ ಹೊರಹಾಕಿರೋ ವಿಡಿಯೋ ನೋಡಿದರೆ ಇದೊಂದು ಪಕ್ಕಾ ಮದುವೆ ಸುದ್ದಿ ಅನುಮಾನ ಎಲ್ಲರಲ್ಲೂ ಮೂಡುತ್ತಿದೆ. ಬಿಗ್ ಬಾಸ್ ಮನೆಗೆ ಹೋಗಿ ಬಂದಲ್ಲಿಂದ ದಿವ್ಯಾ ಉರುಡುಗ ಹೆಸರು ಅರವಿಂದ್ ಕೆಪಿ ಜೊತೆ ಕೇಳಿ ಬಂದಿತ್ತು. ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಅನ್ನೋ ಸುದ್ದಿ ಓಡಾಡಿತ್ತು. ಅಲ್ಲದೆ ಇಬ್ಬರೂ ಶೀಘ್ರದಲ್ಲಿಯೇ ಮದುವೆನೂ ಆಗುತ್ತಾರೆ ಅನ್ನೋ ಸುದ್ದಿನೂ ಹಬ್ಬಿತ್ತು. ಅದಕ್ಕೀಗ ಈ ವಿಡಿಯೋ ಸಾಕ್ಷಿಯಂತಿದೆ.

ದಿವ್ಯಾ ಉರುಡುಗ ಹಾಗೂ ಬೈಕ್ ರೈಡರ್ ಅರವಿಂದ್ ಕೆಪಿ ಮೊದಲಬಾರಿಗೆ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಭೇಟಿಯಾಗಿದ್ದರು. ದಿವ್ಯಾ ಹಾಗೂ ಅರವಿಂದ್ ಬಿಗ್ ಮನೆಯೊಳಗೆ ಸಿಕ್ಕಾಪಟ್ಟೆ ಆತ್ಮೀಯರಾಗಿದ್ದರು. ಆಗ ಇದು ಕೇವಲ ಶೋಗಷ್ಟೇ ಅಂತ ಆಡಿಕೊಂಡವರು ಇದ್ದರು. ಆದರೆ, ಶೋ ಮುಗಿದ ಬಳಿಕವು ಅಷ್ಟೇ ಕ್ಲೋಸ್ ಓಡಾಡಿಕೊಂಡಿದ್ದರು. ಹಲವು ಬಾರಿ ಇವೆಂಟ್‌ಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಇದೀಗ ಈ ಜೋಡಿ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ನೀಡುವುದಕ್ಕೆ ಸಜ್ಜಾಗಿದೆ ಎಂದು ಹೇಳಲಾಗುತ್ತಿದೆ.

divya-uruduga-and-aravind-kp-movie

ಈ ಸುದ್ದಿ ಹರಿದಾಡುತ್ತಿರುವ ಬೆನ್ನಲ್ಲೇ ದಿವ್ಯಾ ಉರುಡುಗ ವಿಡಿಯೋ ಒಂದನ್ನು ಹೊರಬಿಟ್ಟಿದ್ದಾರೆ. ಈ ವಿಡಿಯೋ ನೋಡಿದವರಿಗೆ ಇಬ್ಬರೂ ಮದುವೆಗೆ ರೆಡಿಯಾಗಿದ್ದು, ಶೀಘ್ರದಲ್ಲೇ ಮ್ಯಾರೇಜ್ ಡೇಟ್ ಬಹಿರಂಗ ಪಡಿಸಲಿದ್ದಾರೆ ಅನ್ನೋ ಅನುಮಾನ ಮೂಡಿದೆ. ಈ ವಿಡಿಯೋದಲ್ಲಿ ದಿವ್ಯಾ ಉರುಡುಗ ಫೋಟೋಶೂಟ್‌ಗೆ ರೆಡಿಯಾಗುತ್ತಿದ್ದಾರೆ. ಈ ವೇಳೆ ಮಹಿಳೆಯ ಧ್ವನಿಯೊಂದು ಏನ್ ಸಮಾಚಾರ ಅಂತ ಕೇಳಿದಾಗ ಬಹಿರಂಗ ಪಡಿಸುವುದಿಲ್ಲ.

"ಎಷ್ಟೋ ದಿನದ ಕನಸು ನನಸಾಗುವ ಸಮಯ ಬಂದಿದೆ, ನನ್ನಷ್ಟೇ ಕಾತರ ನಿಮಗೂ ಇದೆ ಎಂದು ಗೊತ್ತು" ಎನ್ನುವ ಬ್ಯಾಕ್‌ಗ್ರೌಂಡ್ ವಾಯ್ಸ್ ಮದುವೆ ಇರಬಹುದಾ? ಅನ್ನೋ ಅನುಮಾನವನ್ನು ಹುಟ್ಟಾಕಿದೆ. ಸಾಲದ್ದಕ್ಕೆ ದಿವ್ಯಾ ವ್ಯಕ್ತಿಯೊಬ್ಬರಿಗೆ ಫೋನ್ ಮಾಡಿ "ಇನ್ನು ಬಂದಿಲ್ವಾ, ಶಾಪಿಂಗ್ ಇನ್ನೂ ಮುಗಿದಿಲ್ವಾ, ನೀವು ಬಂದಿಲ್ಲ ಎಂದರೆ ನಾನು ಒಬ್ಬಳೇ ಅನೌನ್ಸ್ ಮಾಡುತ್ತೀನಿ" ಅನ್ನೋದು ಮದುವೆ ಅನ್ನೋದು ಕನ್ಫರ್ಮ್ ಆಗುತ್ತೆ.

ಅಸಲಿಗೆ ಈ ವಿಡಿಯೋ ಮಾಡಿದ್ದು ಮದುವೆ ವಿಷಯ ಹೇಳುವುದಕ್ಕಲ್ಲ. ದಿವ್ಯಾ ಉರುಡುಗ ಹಾಗೂ ಅರವಿಂದ್ ಕೆಪಿ ಇಬ್ಬರೂ ಇದೇ ಮೊದಲ ಬಾರಿಗೆ 'ಅರ್ದಂಬರ್ಧ ಪ್ರೇಮ ಕಥೆ' ಅನ್ನೋ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಮೊದಲ ಬಾರಿಗೆ ಅರವಿಂದ್ ಕೆಪಿ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದು, ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಡುವುದಕ್ಕೆ ಈ ಜೋಡಿ ಸಜ್ಜಾಗಿದೆ.

More from Filmibeat

English summary
Bigg Boss fame Divya Uruduga and Aravind KP marriage announcement video viral
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X