Divya Uruduga: ಮತ್ತೆ ಕಿರುತೆರೆಗೆ ಎಂಟ್ರಿ ಕೊಟ್ಟ ಬಿಗ್‌ಬಾಸ್ ದಿವ್ಯಾ ಉರುಡುಗ; 'ನಿನಗಾಗಿ' ಅಂತ ಕಲರ್‌ಫುಲ್ ಜರ್ನಿ ಶುರು!

ನಟಿ ದಿವ್ಯಾ ಉರುಡುಗ ರಿಯಾಲಿಟಿ ಶೋ ಬಿಗ್‌ಬಾಸ್‌ಗೆ ಎಂಟ್ರಿ ಕೊಡುತ್ತಿದ್ದಂತೆ ಮತ್ತಷ್ಟು ಜನಪ್ರಿಯತೆಯನ್ನು ಪಡೆದಿದ್ದರು. ಬಿಗ್ ಬಾಸ್ ಸೀಸನ್ 8 ಹಾಗೂ ಸೀಸನ್ 9ರ ಭಾಗವಾಗಿದ್ದ ದಿವ್ಯಾ ರಿಯಾಲಿಟಿ ಶೋ ಮುಗಿಸುತ್ತಿದ್ದಂತೆ ಹೊಸ ಪ್ರಾಜೆಕ್ಟ್‌ಗಳಲ್ಲಿ ಕಾಣಿಸಿಕೊಳ್ಳುತ್ತಾರೆ ಅನ್ನೋ ನಿರೀಕ್ಷೆಯಿತ್ತು.

ಆದರೆ, ದಿವ್ಯಾ ಉರುಡುಗ ಕಿರುತೆರೆಗೆ ಕಾಲಿಡುವುದಕ್ಕಿಂತ ಹೆಚ್ಚಾಗಿ ಸಿನಿಮಾ ಕಡೆ ಮುಖ ಮಾಡಿದ್ದರು. ಕೆಲವು ದಿನಗಳ ಹಿಂದಷ್ಟೇ ಇವರ 'ಅರ್ಧಂಬರ್ದ ಪ್ರೇಮಕಥೆ' ಸಿನಿಮಾ ರಿಲೀಸ್ ಆಗಿದ್ದರೂ ಅದು ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಕಾಣಲಿಲ್ಲ. ಈಗ ಮತ್ತೊಂದು ಕಿರುತೆರೆಗೆ ಕಮ್ ಬ್ಯಾಕ್ ಮಾಡಿದ್ದಾರೆ. ಅದೂ ಸೂಪರ್‌ಸ್ಟಾರ್ ಪಾತ್ರದ ಮೂಲಕವೇ..

Divya Uruduga comeback serial Ninagagi

ಹೌದು, ದಿವ್ಯಾ ಉರುಡುಗ ಕಲರ್ಸ್ ಕನ್ನಡದ ಹೊಸ ಹೊಚ್ಚ ಹೊಸ ಧಾರಾವಾಗಿ 'ನಿನಗಾಗಿ' ಮೂಲಕ ಕಿರುತೆರೆಗೆ ಪ್ರವೇಶ ಮಾಡಿದ್ದಾರೆ. ಇಲ್ಲಿ ಇವರು ಸೂಪರ್‌ಸ್ಟಾರ್ ರಚ್ಚು ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಕಲರ್ಸ್ ಕನ್ನಡ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ 'ನಿನಗಾಗಿ' ಧಾರಾವಾಹಿಯ ಪ್ರೋಮೊವನ್ನು ರಿಲೀಸ್ ಮಾಡಿದೆ.

'ನಿನಗಾಗಿ' ಪ್ರೋಮೊ ಇಂಟ್ರೆಸ್ಟಿಂಗ್ ಆಗಿದೆ. ಸೂಪರ್‌ಸ್ಟಾರ್ ರಚ್ಚು ನೋಡಲು ಮುಗಿಬೀಳುವ ಜನ. ಬ್ಯಾರಿಕೇಡ್ ಅನ್ನು ಮುರಿದು ಓಡಿ ಬರುವ ಅಭಿಮಾನಿಗಳು. ಇನ್ನೊಂದು ಕಡೆ ಆಕಾಶದೆತ್ತರಕ್ಕೆ ಎದ್ದು ನಿಂತಿರುವ ಕಟೌಟ್. ಅದಕ್ಕೆ ಅಭಿಮಾನಿಗಳು ಹಾಲಿನ ಅಭಿಷೇಕ ಮಾಡುತ್ತಿರುವ ದೃಶ್ಯ ಬ್ಯಾಕ್‌ಗ್ರೌಂಡ್‌ನಲ್ಲಿ ಕಾಣಿಸುತ್ತೆ. ಆರೇಂಜ್ ಸೀರೆಯುಟ್ಟು ಬರುವ ಸೂಪರ್‌ಸ್ಟಾರ್ ರಚ್ಚು ಕೈ ಎತ್ತಿದ ಕೂಡಲೇ ಅಭಿಮಾನಿ ಹರ್ಷೋದ್ಘಾರ ಎದ್ದು ಕಾಣಿಸುತ್ತೆ.

ಇನ್ನೊಂದು ಕಡೆ ಸೂಪರ್‌ಸ್ಟಾರ್ ರಚ್ಚು ಪಕ್ಕನೇ ನಿಂತ ತಾಯಿ. ಅಭಿಮಾನಿಗಳ ಎದುರು ತಾಯಿಯ ಪ್ರೀತಿ ಎದ್ದು ಕಾಣುತ್ತೆ. ಅದೇ ಹಿಂದೆ ತಾಯಿಯ ಇನ್ನೊಂದು ಮುಖ ಅನಾವರಣ ಆಗುತ್ತೆ. ಹೀಗೆ ಪ್ರೋಮೊದಲ್ಲಿ ಅಮ್ಮ- ಮಗಳ ಸಂಬಂಧದ ಝಲಕ್ ಕೂಡ ಬಂದು ಹೋಗಿದೆ. ಪ್ರೋಮೊ ರಿಲೀಸ್ ಆಗುತ್ತಿದ್ದಂತೆ ಸೂಪರ್‌ಸ್ಟಾರ್ ರಚ್ಚು 'ನಿನಗಾಗಿ' ಅಂತಿರೋದು ಯಾರಿಗೆ? ಅನ್ನೋ ಪ್ರಶ್ನೆ ಅಂತೂ ಮೂಡಿದೆ.

Divya Uruduga comeback serial Ninagagi

ಇದು ಕೇವಲ ಪ್ರೋಮೊ ಅಷ್ಟೇ.. ಸೀರಿಯಲ್ ಬರೋದು ಇನ್ನೂ ಬಾಕಿಯಿದೆ. 'ನಿನಗಾಗಿ' ಸೀರಿಯಲ್ ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗಲಿದೆ. ಸದ್ಯ ಪ್ರೋಮೊ ಅಷ್ಟೇ ರಿಲೀಸ್ ಮಾಡಿದ್ದು, ಯಾವ ದಿನದಿಂದ ಪ್ರಸಾರ ಆಗುತ್ತಿದೆ ಅನ್ನೋದು ಮಾತ್ರ ಇನ್ನೂ ರಿವೀಲ್ ಆಗಿಲ್ಲ. ಆದರೆ, ದಿವ್ಯಾ ಉರುಡುಗ ಕಮ್ ಬ್ಯಾಕ್‌ ಮಾಡುತ್ತಿರೋದು ಅವರ ಫ್ಯಾನ್ಸ್‌ಗಂತೂ ಖುಷಿ ಕೊಟ್ಟಿದೆ.

ಬಿಗ್‌ಬಾಸ್‌ ಜೋಡಿ ಅಂತಲೇ ಫೇಮಸ್ ಆಗಿರೋ ದಿವ್ಯಾ ಉರುಡುಗ ಹಾಗೂ ಅರವಿಂದ್ ಕೆಪಿಯ 'ಅರ್ಧಂಬರ್ದ ಪ್ರೇಮಕಥೆ' ಕುತೂಹಲ ಹುಟ್ಟಿಸಿದರೂ, ಥಿಯೇಟರ್‌ನಲ್ಲಿ ಹೆಚ್ಚು ದಿನ ಪ್ರದರ್ಶನ ಕಾಣಲಿಲ್ಲ. ಈಗ ದಿವ್ಯಾ ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟಿದ್ದರು. 'ನಿನಗಾಗಿ' ಸಿನಿಮಾದಷ್ಟೇ ಸೀರಿಯಲ್ ಕೂಡ ಫೇಮಸ್ ಆಗುತ್ತಾ? ಅನ್ನೋದು ನೋಡಬೇಕಿದೆ.

More from Filmibeat

English summary
Bigg Boss Fame Divya Uruduga comeback serial Ninagagi promo getting good response
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X