ಬಿಗ್ ಬಾಸ್ ಸ್ಪರ್ಧಿಯ ಕಾರು ಅಪಘಾತ; ರಸ್ತೆ ಪಕ್ಕದ ಪ್ರಪಾತಕ್ಕೆ ಉರುಳಿ ಬಿದ್ದ ನಿಶಾಂತ್

By ಫಿಲ್ಮ್ ಡೆಸ್ಕ್

ಕಿರುತೆರೆ ನಟ ಮತ್ತು ಬಿಗ್ ಬಾಸ್ ಖ್ಯಾತಿಯ ನಿಶಾಂತ್ ಸಿಂಗ್ ಮಲ್ಖಾನಿ ಕಾರು ಅಪಘಾತಕ್ಕೀಡಾಗಿದೆ. ಅದೃಷ್ಟವಶಾತ್ ನಿಶಾಂತ್ ಮತ್ತು ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಾಜಸ್ಥಾನದಲ್ಲಿ ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕಾರನ್ನು ನಟ ನಿಶಾಂತ್ ಚಲಾಯಿಸುತ್ತಿದ್ದು, ಎದುರುಗಡೆಯಿಂದ ರಾಂಗ್ ಸೈಡ್ ನಲ್ಲಿ ಬಂದ ವಾಹನವನ್ನು ತಪ್ಪಿಸಲು ಹೋಗಿ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ರಸ್ತೆಯ ಪಕ್ಕದ ಪ್ರಪಾತಕ್ಕೆ ಬಿದ್ದ ಕಾರನ್ನು ಕ್ರೇನ್ ಬಳಸಿ ಮೇಲೆತ್ತಲಾಗಿದೆ ಎನ್ನುವ ಮಾಹಿತಿ ತಿಳಿದುಬಂದಿದೆ.

ಕಾರಿನಲ್ಲಿ ನಿಶಾಂತ್ ಮತ್ತು ಸ್ನೇಹಿತರು ರಾಜಸ್ಥಾನಕ್ಕೆ ತೆರಳುತ್ತಿದ್ದರು ಎನ್ನುವ ಮಾಹಿತಿ ತಿಳಿದುಬಂದಿದೆ. ಈ ಘಟನೆ ಬಳಿಕ ಮಾಧ್ಯಮದವರ ಜೊತೆ ಮಾತನಾಡಿರುವ ನಿಶಾಂತ, ಯಾರು ಭಯಪಡುವ ಅವಶ್ಯಕತೆ ಇಲ್ಲ. ಸಣ್ಣ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದೇನೆ. ನನ್ನ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ತಾಯಿಯ ಆಶೀರ್ವಾದ ಮತ್ತು ದೇವರ ದಯೆಯಿಂದ ಏನು ಆಗಿಲ್ಲ ಎಂದಿದ್ದಾರೆ.

ಕಾರು ನಾನೆ ಚಲಾಯಿಸುತ್ತಿದ್ದೆ. ಎದುರು ರಾಂಗ್ ಸೈಡ್ ನಿಂದ ವ್ಯಾನ್ ಬರ್ತಿರೊದನ್ನು ನೋಡಿ ಸೈಡ್ ತೆಗೆದುಕೊಳ್ಳಲು ಹೋಗಿ ಕೆಳಗೆ ಉರುಳಿದೆವು. ರಸ್ತೆ ತುಂಬಾ ಕಿರಿದಾಗಿತ್ತು. ನನ್ನ ಜೊತೆ ಇದ್ದ ಸ್ನೇಹಿತರು ಸುರಕ್ಷಿತರಾಗಿದ್ದಾರೆ. ಆದರೆ ನಮ್ಮ ಕಾರಿಗೆ ಹೊಡೆದ ಗಾಡಿ ತಕ್ಷಣ ಎಸ್ಕೇಪ್ ಆಗಿದೆ. ಕಾರಿನನಿಂದ ಹೊರಬಂದು ಬಳಿಕ ಪೊಲೀಸರಿಗೆ ಮಾಹಿತಿ ನೀಡಿದೆವು' ಎಂದು ನಿಶಾಂತ್ ಅಪಘಾತದ ಬಗ್ಗೆ ವಿವರಿಸಿದ್ದಾರೆ.

Bigg Boss fame Nishant Singh Malkani meet with an accident in Rajasthan

ನಿಶಾಂತ್ ಕಳೆದ ವರ್ಷ ಹಿಂದಿ ಬಿಗ್ ಬಾಸ್ ನಲ್ಲಿ ಕಾಣಿಸಿಕೊಂಡಿದ್ದರು. ಆದರೆ ಮನೆಯಿಂದ ಬೇಗ ಔಟ್ ಆಗಿ ಭಾರಿ ಬೇಸರ ಮಾಡಿಕೊಂಡಿದ್ದರು. ಬಿಗ್ ಮನೆಯಿಂದ ಹೊರಬಂದ ಬಳಿಕ ಬಿಗ್ ಬಾಸ್ ಸಹ ಸ್ಪರ್ಧಿಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಇದೀಗ ಅಪಘಾತದ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ.

More from Filmibeat

English summary
Bigg Boss fame Nishant Singh Malkani meet with an accident in Rajasthan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X