ಶ್ರೀಲಂಕಾದಲ್ಲಿ ಆನೆ ಮೈ ಉಜ್ಜಿದ ನಿವೇದಿತಾ ಗೌಡ ಅಂಡ್ ಮಮ್ಮಿ; ಕಾಮೆಂಟ್ಸ್ ಓದಿ ಮರ್ರೆ
ಬಿಗ್ ಬಾಸ್ ಮೂಲಕ ಸದ್ದು ಮಾಡಿದ್ದ ನಿವೇದಿತಾ ಗೌಡ ಮುಂದೆ ಬೆಳೆದು ಬಂದ ಹಾದಿಯನ್ನು ವಿಶೇಷವಾಗಿ ಹೇಳಬೇಕಿಲ್ಲ. ಬಿಗ್ ಬಾಸ್ ಮನೆಯಲ್ಲಿಯೇ ಲವ್ ಆಗಿದ್ದು, ಹೊರ ಬಂದ್ಮೇಲೆ ಚಂದನ್ ಶೆಟ್ಟಿಯನ್ನು ವಿವಾಹವಾಗಿದ್ದು, ಬಳಿಕ ವಿಚ್ಚೇದನ ಪಡೆದಿದ್ದೆಲ್ಲ ಒಂದು ಅಧ್ಯಾಯ. ಈಗ ವಿಚ್ಚೇದನದ ಬಳಿಕ ತಮ್ಮ ಬದುಕಿನ ಮತ್ತೊಂದು ಅಧ್ಯಾಯ ಶುರುವಾಗಿದೆ.
ಹೊಸ ವರ್ಷವನ್ನು ವಿದೇಶದಲ್ಲಿ ಕಳೆಯಬೇಕು ಎಂದು ನಿರ್ಧರಿಸಿದ್ದ ನಿವೇದಿತಾ ಗೌಡ ಥೈಲ್ಯಾಂಡ್‌ಗೆ ಹಾರಿದ್ದರು. ಅಲ್ಲಿ ಅವರು ಕಳೆದ ಕ್ಷಣಗಳನ್ನು ರೀಲ್ಸ್ ಮಾಡಿ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುತ್ತಿದ್ದರು. ಇವರು ಪೋಸ್ಟ್ ಮಾಡಿದ ವಿಡಿಯೋಗಳಿಗೆ ನೆಟ್ಟಿಗರು ಪಾಸಿವ್ ಆಗಿ ಕಾಮೆಂಟ್ ಮಾಡಿದ್ದಕ್ಕಿಂತ ನೆಗೆಟಿವ್ ಆಗಿ ಕಾವೆಂಟ್ ಮಾಡಿದ್ದೇ ಹೆಚ್ಚು.

ನಿವೇದಿತಾ ಗೌಡಗೆ ಬೈದು ನೆಟ್ಟಿಗರು ಅದೆಷ್ಟೇ ಕಾಮೆಂಟ್‌ಗಳನ್ನು ಮಾಡಿದ್ದರೂ ಅವರು ಹಾಕಿದ ಒಂದೊಂದು ವಿಡಿಯೋನೂ ಮಿಲಿಯನ್ ಲೆಕ್ಕದಲ್ಲಿ ವೀವ್ಸ್ ಪಡೆದುಕೊಂಡಿದೆ. ಇನ್ನೊಂದು ಕಡೆ ನಿವೇದಿತಾ ಗೌಡ ಕೂಡ ನೆಟ್ಟಿಗರ ಕಾಮೆಂಟ್‌ಗಳಿಗೆ ತಲೆ ಕೆಡಿಸಿಕೊಂಡಿರಲಿಲ್ಲ. ಈಗ ಥೈಲ್ಯಾಂಡ್‌ಗೆ ಗುಡ್ ಬೈ ಹೇಳಿ ಶ್ರೀಲಂಕಾ ಪ್ರವಾಸದಲ್ಲಿ ಇದ್ದಾರೆ. ಅದೂ ಈ ಬಾರಿ ಅವರ ತಾಯಿ ಹೇಮಾ ಕೂಡ ಜೊತೆಯಾಗಿದ್ದಾರೆ.
ನಿವೇದಿತಾ ಗೌಡ ಥೈಲ್ಯಾಂಡ್ ಪ್ರವಾಸದಲ್ಲಿ ಇದ್ದಾಗ ಮಾಡಿದ ರೀಲ್ಸ್ ಬಗ್ಗೆನೇ ಇನ್ನೂ ಚರ್ಚೆಯಾಗುತ್ತಿದೆ. ಇಷ್ಟರಲ್ಲೇ ಶ್ರೀಲಂಕಾದಲ್ಲಿ ಅಮ್ಮನೊಂದಿಗೆ ಸೇರಿಕೊಂಡು ಆನೆಗೆ ಸ್ನಾನ ಮಾಡಿಸುತ್ತಿರುವ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ನೆಟ್ಟಿಗರು ಕಾಮೆಂಟ್‌ಗಳ ಮೇಲೆ ಕಾಮೆಂಟ್‌ಗಳನ್ನು ಮಾಡುವುದಕ್ಕೆ ಶುರು ಮಾಡಿದ್ದಾರೆ.
ಅಮ್ಮ- ಮಗಳು ಇಬ್ಬರೂ ಶ್ರೀಲಂಕಾದಲ್ಲಿ ಪುಲ್ ಜಾಲಿ ಮೂಡ್‌ನಲ್ಲಿ ಇದ್ದಾರೆ. ಜಾಲಿ ಜಾಲಿಯಾಗಿ ಶ್ರೀಲಂಕಾದ ಸುಂದರ ತಾಣಗಳಲ್ಲಿ ಎಂಜಾಯ್ ಮಾಡುತ್ತಿದ್ದಾರೆ. ಇಲ್ಲಿವರೆಗೂ ಶೇರ್ ಮಾಡಿಕೊಂಡ ವಿಡಿಯೋದಲ್ಲಿ ಕೇವಲ ಅವರೊಬ್ಬರೇ ಇರುತ್ತಿದ್ದರು. ಆದರೆ, ಈ ಬಾರಿ ಅವರ ಅಮ್ಮ ಹೇಮಾ ಕೂಡ ಸೇರಿಕೊಂಡಿದ್ದರಿಂದ ನೆಟ್ಟಿಗರು ಕಾಮೆಂಟ್ ಮಾಡುವ ದಾಟಿ ಕೊಂಚ ಮಟ್ಟಿಗೆ ಬದಲಾಗಿದೆ. ಕಾಮೆಂಟ್‌ಗಳು ಮಾತ್ರ ಸಖತ್ ಮಜವಾಗಿವೆ.
ನೆಟ್ಟಿಗರೊಬ್ಬರು "ಆನೆ ಏನು ಪುಣ್ಯ ಮಾಡಿತ್ತು ಮರ್ರೆ" ಅಂತ ಕಾಮೆಂಟ್ ಮಾಡಿ ಹೊಟ್ಟೆ ಉರಿದುಕೊಂಡಿದ್ದಾರೆ. ಇನ್ನೊಬ್ಬರು "ಆನೆಯ inner voice: ಜೀವನ ಸಾರ್ಥಕ ಆಯ್ತು ಬೇಬಿ" ಎಂದು ಆನೆನೇ ಖುಷಿ ಪಟ್ಟಿದೆ ಅನ್ನೋ ರೀತಿ ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು "ಆಫ್ರಿಕದಲ್ಲಿ ಶೀಲಾ ಅಂಡ್ ಮಮ್ಮಿ" ಎಂದು ಕ್ರಿಯೇಟಿವ್ ಆಗಿ ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು "ತೊಳಿಯೋದು ತೊಳಿತೀರಾ.. ಸ್ವಲ್ಪ ಸೋಪು & ಶಾಂಪು ಹಾಕಿತೊಳಿರಿ" ಎಂದಿದ್ದಾರೆ. ಹಾಗೇ ಮತ್ತೊಬ್ಬರು "ಇವರು ಆನೆ ತೊಳೆಯೋಕೆ ಲಾಯಕ್" ಎಂದಿದ್ದಾರೆ.
ಏನೇ ಇದ್ದರೂ ನಿವೇದಿತಾ ಗೌಡ ವಿಚ್ಛೇದನದ ಬಳಿಕ ಕುಗ್ಗಿಲ್ಲ. ತಮ್ಮ ಬದುಕಿನಲ್ಲಿ ಖುಷಿಯಾಗಿ ಇರುವುದನ್ನು ಕಂಡುಕೊಂಡಿದ್ದಾರೆ. ಬಿಗ್ ಬಾಸ್ ಮನೆಯಿಂದ ಹೊರ ಬಂದ್ಮೇಲೆ ಸಿಕ್ಕಿದ ಜನಪ್ರಿಯತೆಯನ್ನು ಕಾಪಾಡಿಕೊಳ್ಳುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಇನ್ನೊಂದು ಕಡೆ ರಿಯಾಲಿಟಿ ಶೋ, ಸಿನಿಮಾ ಅಂತ ಗಮನ ಹರಿಸುತ್ತಿದ್ದಾರೆ. ವಿದೇಶ ಪ್ರವಾಸ ಮುಗಿಸಿ ಬಂದ ಬಳಿಕ ವೃತ್ತಿ ಬದುಕಿನ ಬಗ್ಗೆ ಅವರ ಮುಂದಿನ ಹೆಜ್ಜೆ ಏನು? ಅನ್ನೋದು ಗೊತ್ತಾಗಬಹುದು.


Click it and Unblock the Notifications











