ಚಿನ್ನಾರಿಮುತ್ತನ 'ರುದ್ರಾಭಿಷೇಕಂ'ಗೆ ನಾಯಕಿಯಾದ ಬಿಗ್ ಬಾಸ್ ಸ್ಪರ್ಧಿ ಪ್ರಿಯಾಂಕ ತಿಮ್ಮೇಶ್!

ಕಿರುತೆರೆಯ ಮೂಲಕ ನಟನೆಯ ನಂಟು ಬೆಳೆಸಿಕೊಂಡ ಅನೇಕರು ಮುಂದೆ ಹಿರಿತೆರೆಯಲ್ಲಿ ಕಾಣಿಸಿಕೊಳ್ಳುತ್ತಿರುವುದು ತೀರಾ ಮಾಮೂಲಿ ಸಂಗತಿ. ನಟಿ ಪ್ರಿಯಾಂಕಾ ತಿಮ್ಮೇಶ್ ಕೂಡಾ ಇದಕ್ಕೆ ಹೊರತಾಗಿಲ್ಲ. ವಿಜಯ್ ರಾಘವೇಂದ್ರ ಅವರ ಅಭಿನಯಿದ ಹೊಚ್ಚ ಹೊಸ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಸುವರ್ಣಾವಕಾಶ ಪಡೆದುಕೊಂಡಿದ್ದಾರೆ ಪ್ರಿಯಾಂಕಾ ತಿಮ್ಮೇಶ್.

ವಸಂತಕುಮಾರ್ ನಿರ್ದೇಶನದ 'ರುದ್ರಾಭಿಷೇಕಂ' ಸಿನಿಮಾದಲ್ಲಿ ಪ್ರಿಯಾಂಕಾ ಅವರು ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದು, ಸ್ಯಾಂಡಲ್‌ವುಡ್‌ನ ಚಿನ್ನಾರಿಮುತ್ತ ವಿಜಯ್ ರಾಘವೇಂದ್ರ ಅವರೊಂದಿಗೆ ತೆರೆ ಹಂಚಿಕೊಳ್ಳಲಿದ್ದಾರೆ ಪ್ರಿಯಾಂಕಾ ತಿಮ್ಮೇಶ್. ಇನ್ನು ಈ ಸಿನಿಮಾದಲ್ಲಿ ವಿಜಯ್ ರಾಘವೇಂದ್ರ ಅವರು ನಾಯಕನಾಗಿ ಕಾಣಿಸಿಕೊಳ್ಳುವುದಲ್ಲದೇ ದ್ವಿಪಾತ್ರದಲ್ಲಿ ಮೋಡಿ ಮಾಡಲಿದ್ದಾರೆ.

Bigg Boss fame Priyanka Thimmesh become female lead in Vijay Raghavendra film Rudrabhishekam

ಈ ಸಿನಿಮಾದಲ್ಲಿ ನಮ್ಮ ನಾಡಿನ ಸಾಂಸ್ಕೃತಿಕ ಹಿನ್ನಲೆ, ಇತಿಹಾಸ ಮತ್ತು ವೈಭವವನ್ನು ಕಮರ್ಷಿಯಲ್ ಆಗಿ ವೀಕ್ಷಕರ ಮುಂದೆ ಚಿತ್ರತಂಡ ಪ್ರಸ್ತುತ ಪಡಿಸಲಿದೆಯಂತೆ. ಮೊದಲ ಹಂತದ ಚಿತ್ರೀಕರಣವನ್ನು ದೇವನಹಳ್ಳಿಯ ಸುತ್ತಮುತ್ತ ಮಾಡಲಾಗಿದೆ. ಈ ಚಿತ್ರೀಕರಣ ಸುಮಾರು ಇಪ್ಪತ್ತು ದಿನಗಳ ಕಾಲ ನಡೆದಿದೆ. ಇನ್ನು ಉಳಿದ ಚಿತ್ರೀಕರಣವನ್ನು ಆಗುಂಬೆ, ಮಂಗಳೂರು ಮತ್ತು ಮಲ್ಪೆಯ ಸುತ್ತಮುತ್ತ ಅತೀ ಶೀಘ್ರದಲ್ಲಿ ಮಾಡಲಿದೆ.

ಅಂದ ಹಾಗೇ ಪ್ರಿಯಾಂಕಾ ತಿಮ್ಮೇಶ್ ಅವರ ನಟನಾ ನಂಟಿಗೆ ಮುನ್ನುಡಿ ಬರೆದಿದ್ದು ಕಿರುತೆರೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಪ್ರೀತಿಯಿಂದ' ಧಾರಾವಾಹಿಯಲ್ಲಿ ಕಾಶ್ಮೀರಿ ಹುಡುಗಿ ಗುಲಾಬಿಯಾಗಿ ನಟಿಸುವ ಮೂಲಕ ಕಿರುತೆರೆಗೆ ಕಾಲಿಟ್ಟರು ಪ್ರಿಯಾಂಕಾ ತಿಮ್ಮೇಶ್. ಮುಂದೆ ಎರಡು ವರ್ಷಗಳ ಕಾಲ ಈಕೆ ಗುಲಾಬಿ ಪಾತ್ರದ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದಿದ್ದರು. 'ಪ್ರೀತಿಯಿಂದ' ಧಾರಾವಾಹಿಯ ನಂತರ ಕಿರುತೆರೆಯಲ್ಲಿ ಕಾಣಿಸಿಕೊಂಡಿರದ ಪ್ರಿಯಾಂಕಾ ಮುಖ ಮಾಡಿದ್ದು ಹಿರಿತೆರೆಯತ್ತ.

'ಗಣಪ' ಸಿನಿಮಾದಲ್ಲಿ ಬೃಂದಾಳಾಗಿ ಬಣ್ಣ ಹಚ್ಚುವ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದರು ಪ್ರಿಯಾಂಕಾ.ನಂತರ 'ಅಕಿರ' ಹಾಗೂ 'ಪಟಾಕಿ' ಸಿನಿಮಾದಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದ ಪ್ರಿಯಾಂಕಾ ತಿಮ್ಮೇಶ್ ನಂತರ ಹಾರಿದ್ದು ಪರಭಾಷೆಯ ಸಿನಿರಂಗಕ್ಕೆ‌. ಹೌದು, ತಮಿಳು ಮತ್ತು ಮಲಯಾಳಂ ಸಿನಿಮಾಗಳಲ್ಲಿ ನಟಿಸಿರುವ ಈಕೆ ಮತ್ತೆ ಕನ್ನಡ ಸಿನಿರಂಗಕ್ಕೆ ಮರಳಿದ್ದು 'ಭೀಮಸೇನ ನಳಮಹಾರಾಜ' ಸಿನಿಮಾ ಮೂಲಕ.

Bigg Boss fame Priyanka Thimmesh become female lead in Vijay Raghavendra film Rudrabhishekam

ಮುಂದೆ 'ಅರ್ಜುನ್ ಗೌಡ', 'ಮೇಡ್ ಇನ್ ಚೈನಾ' ಸಿನಿಮಾದಲ್ಲಿ ನಟಿಸಿರುವ ಈಕೆ ಕೊನೆಯ ಬಾರಿ ಬಣ್ಣ ಹಚ್ಚಿದ್ದು 'ಶುಗರ್ ಲೆಸ್' ಸಿನಿಮಾದಲ್ಲಿ. ತದ ನಂತರ ಯಾವೊಂದು ಸಿನಿಮಾದಲ್ಲಿಯೂ ನಟಿಸದ ಈಕೆ ಬರೋಬ್ಬರಿ ಎರಡು ವರ್ಷಗಳ ಕಾಲ ಸ್ಯಾಂಡಲ್‌ವುಡ್‌ನಿಂದ ದೂರವಿದ್ದರು. ಇದೀಗ 'ರುದ್ರಾಭಿಷೇಕಂ' ಸಿನಿಮಾದಲ್ಲಿ ನಟಿಸುವ ಮೂಲಕ ಮತ್ತೆ ಹಿರಿತೆರೆಯಲ್ಲಿ ಮೋಡಿ ಮಾಡಲಿದ್ದಾರೆ. ಆ ಮೂಲಕ ಮತ್ತೆ ಚಂದನವನದಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದರು ಎಂದರೆ ತಪ್ಪಾಗಲಾರದು.

ನಟನೆಯ ಹೊರತಾಗಿ ರಿಯಾಲಿಟಿ ಶೋಗಳಲ್ಲಿ ಗುರುತಿಸಿಕೊಂಡಿರುವ ಬೆಡಗಿ ಈಕೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ರಿಯಾಲಿಟಿ ಶೋ 'ಸಿಕ್ಸ್ತ್ ಸೆನ್ಸ್' ಸ್ಪರ್ಧಿಯಾಗಿ ಭಾಗವಹಿಸಿದ್ದ ಪ್ರಿಯಾಂಕಾ ತಿಮ್ಮೇಶ್ ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 8 ರ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದಾರೆ. ಹೌದು, ಬಿಗ್ ಬಾಸ್ ಸೀಸನ್ 8 ರಲ್ಲಿ ವೈಲ್ಡ್ ಕಾರ್ಡ್ ಎಂಟ್ರಿಯಾಗಿ ದೊಡ್ಮನೆಗೆ ಪ್ರವೇಶ ಪಡೆದಿದ್ದರು ಪ್ರಿಯಾಂಕಾ.

ಸದ್ಯ ಹಿರಿತೆರೆಯಲ್ಲಿ ನಟನಾ ಕಂಪನ್ನು ಪಸರಿಸುತ್ತಿರುವ ಈಕೆ ಮತ್ತೆ ಕಿರುತೆರೆಗೆ ಮರಳುತ್ತಾರಾ ಎಂದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X