Bigg Boss Kannada 11: ಫಸ್ಟ್ ಎಪಿಸೋಡ್‌ನಲ್ಲಿ ಸರ್ಪ್ರೈಸ್ ಕೊಡ್ತಾರಾ ಪ್ರಥಮ್? ಒಳ್ಳೆಯ ಹುಡುಗ ಬಿಟ್ಟು ಕೊಟ್ಟ ಸುಳಿವು ಏನು?

ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್‌ ಬಾಸ್ ಇದೇ ಸೆಪ್ಟೆಂಬರ್ 29ರಿಂದ ಆರಂಭ ಆಗುತ್ತಿದೆ. ಈಗಾಗಲೇ ಇಂತಹದ್ದೇ ಸ್ಪರ್ಧಿಗಳು ಬಿಗ್‌ಬಾಸ್ ಮನೆಯೊಳಗೆ ಪ್ರವೇಶ ಪಡೆಯಬಹುದೆಂಬ ಲೆಕ್ಕಾಚಾರಗಳು ಶುರುವಾಗಿದೆ. ಒಂದಷ್ಟು ಹೆಸರುಗಳು ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಬಿಗ್‌ ಬಾಸ್ ಕನ್ನಡ ಸೀಸನ್ 11 ಈಗಾಗಲೇ ಸಾಕಷ್ಟು ಕುತೂಹಲವನ್ನು ಹುಟ್ಟಾಕಿದೆ.

ಬಿಗ್‌ಬಾಸ್ ಕನ್ನಡ ಸೀಸನ್ 11 ಕುತೂಹಲವನ್ನು ದಪ್ಪಟ್ಟು ಮಾಡುವುದಕ್ಕೆ ಕಾರಣ ಪ್ರೋಮೊ. ಈಗಾಗಲೇ ಹೊರಬಿದ್ದಿರೋ ಪ್ರೋಮೊದಲ್ಲಿ ಸ್ವರ್ಗ ಹಾಗೂ ನರಕದ ಕಾನ್ಸೆಪ್ಟ್ ಇರುತ್ತೆ ಅನ್ನೋದನ್ನು ಕಲರ್ಸ್ ಕನ್ನಡ ರಿವೀಲ್ ಮಾಡಿದೆ. ಈ ಮೂಲಕ ಸ್ವರ್ಗಕ್ಕೆ ಹೋಗುವವರು ಯಾರು? ನರಕಕ್ಕೆ ಹೋಗುವವರು ಅನ್ನುವ ಕಾತುರ ವೀಕ್ಷಕರ ಕಾಡುವುದಕ್ಕೆ ಶುರು ಮಾಡಿದೆ.

Bigg Boss former winner Pratham may enter in season 11 news in Kannada

ಈ ಮಧ್ಯೆ ಒಳ್ಳೆಯ ಹುಡುಗ ಪ್ರಥಮ್ ಕೂಡ ಸರ್ಪ್ರೈಸ್ ಕೊಡುತ್ತೇನೆ ಅಂತ ಹೇಳುವ ಮೂಲಕ ಮತ್ತಷ್ಟು ಕುತೂಹಲವನ್ನು ಹುಟ್ಟಾಕಿದ್ದಾರೆ. ಇತ್ತೀಚೆಗೆ ಹೊಸ ಕಾರು ಖರೀದಿ ಮಾಡಿರುವ ಪ್ರಥಮ್ ಫುಲ್ ಖುಷಿಯಲ್ಲಿ ಇದ್ದರು. ಅಲ್ಲದೆ ಶಿವಣ್ಣ ಕಾರಲ್ಲಿ ಕೂತು ಒಂದು ರೌಂಡ್ ಹಾಕಿ ಬಂದಿದ್ದು, ಪ್ರಥಮ್ ಖುಷಿಯ ಅಲೆಯಲ್ಲಿ ತೇಲಾಡುವಂತೆ ಮಾಡಿತ್ತು. ಈ ವೇಳೆ ಬಿಗ್‌ಬಾಸ್ ಸೀಸನ್ 11ಗೆ ಹೋಗುತ್ತೀರಾ? ಎಂದು ಕೇಳಿದಾಗ ಫಸ್ಟ್ ಎಪಿಸೋಡ್‌ನಲ್ಲಿ ಸರ್ಪ್ರೈಸ್ ಕೊಡುತ್ತೇನೆ ಎಂದು ಹೇಳಿದ್ದಾರೆ.

ಬಿಗ್‌ಬಾಸ್ ಕನ್ನಡ ಸೀಸನ್ 4ರ ವಿನ್ನರ್ ಪ್ರಥಮ್ ಸೀಸನ್‌ 11ರಲ್ಲೂ ಕಾಣಿಸಿಕೊಳ್ಳುತ್ತಾರಾ? ಈ ಪ್ರಶ್ನೆಗೆ ಪ್ರಥಮ್ ಕೊಟ್ಟ ಉತ್ತರ ಹೀಗಿದೆ. "ನನ್ನ ಕಡೆಯಿಂದ ಏನೋ ಸರ್ಪ್ರೈಸ್ ಇರುತ್ತೆ ಅನ್ನೋದನ್ನು ನೀವು ನೋಡಿ. ಫಸ್ಟ್ ಎಪಿಸೋಡ್‌ನಲ್ಲೋ ಏನೋ ಒಂದು ಇರುತ್ತೆ. ನಾವು ಹೇಳುವುದಕ್ಕೆ ಆಗುವುದಿಲ್ಲ. ನನ್ನನ್ನು ಏನೂ ಕೇಳಬೇಡಿ. ಇದರ ಬಗ್ಗೆ ನಾನು ಏನನ್ನೂ ಹೇಳುವುದಕ್ಕೆ ಇಷ್ಟ ಪಡುವುದಿಲ್ಲ. ಬಿಗ್‌ಬಾಸ್ ಬಗ್ಗೆ ಪ್ರತಿ ದಿನದ ಗೌಪ್ಯತೆಯನ್ನು ಕಾಪಾಡಿಕೊಳ್ಳಬೇಕು." ಎಂದು ಪ್ರಥಮ್ ಹೇಳಿದ್ದಾರೆ.

Bigg Boss former winner Pratham may enter in season 11 news in Kannada

ಇದೇ ವೇಳೆ 11ನೇ ಸೀಸನ್ ಅನ್ನೂ ನಿರೂಪಣೆ ಮಾಡುತ್ತಿರುವ ಕಿಚ್ಚ ಸುದೀಪ್ ಬಗ್ಗೆನೂ ಒಳ್ಳೆಯ ಹುಡುಗ ಪ್ರಥಮ್ ಇಂಟ್ರೆಸ್ಟಿಂಗ್ ವಿಷಯ ಹೊರ ಹಾಕಿದ್ದಾರೆ. "ಕರ್ನಾಟಕದಲ್ಲಿ ಎಲ್ಲರನ್ನೂ ಗೌರವಿಸುತ್ತೇನೆ. ಬಿಗ್‌ಬಾಸ್ ನನ್ನದು. ಸುದೀಪ್ ಅವರು ಅದಕ್ಕೆ ರಾಜ. ನಾವೂ ಕೂಡ ಆಸ್ಥಾನವನ್ನು ಅಲಂಕರಿಸಿದ ಸಾಮಂತರು. ನಾನು ಪ್ರಾಮಾಣಿಕವಾಗಿ ಹೇಳುತ್ತೇನೆ. ಆ ವ್ಯಕ್ತಿ ಸೋಮವಾರದಿಂದ ಶುಕ್ರವಾರದವರೆಗೆ ಏನು ಎಪಿಸೋಡ್ ನೋಡುತ್ತಾರೆ. ಆ 24 ಗಂಟೆನೂ ನೋಡಿ ಮಾತಾಡಿಬಿಟ್ರೆ ಯಾರೂ ಗೆಲ್ಲಲ್ಲ. ಪ್ರಥಮ್ ಕೂಡ ಗೆಲ್ಲಲ್ಲ ಅರ್ಥ ಆಯ್ತಾ? ಎಲ್ಲವನ್ನೂ ತಡೆದು ಯಾರಿಗೆ ಎನರ್ಜಿ ಕೊಡಬೇಕೋ ಅಷ್ಟು ಕೊಡುತ್ತಾರೆ" ಎಂದು ಕಿಚ್ಚ ಸುದೀಪ್ ಅನ್ನು ಹೊಗಳಿದಿದ್ದಾರೆ.

ಈಗ ಪ್ರಥಮ್ ಜೀ ಕನ್ನಡದ ಡ್ಯಾನ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದಾರೆ. ಹೀಗಾಗಿ ಜೀ ಕನ್ನಡ ಹಾಗೂ ಕಲರ್ಸ್ ಕನ್ನಡ ಅಪ್ಪ ಅಮ್ಮ ಇದ್ದಂತೆ ಎಂದಿದ್ದಾರೆ. "ಜೀ ಕನ್ನಡ ಹಾಗೂ ಕಲರ್ಸ್ ಕನ್ನಡ ನನಗೆ ಎರಡೂ ಮುಖ್ಯ. ಅಪ್ಪ ಅಮ್ಮ ಇಬ್ಬರಲ್ಲಿ ಯಾರು ಇಷ್ಟ ಅಂದರೆ ಏನಂತೀರಾ. ಕಲರ್ಸ್ ಕನ್ನಡ ಹೆಸರು ಕೊಟ್ಟಿದೆ. ಜೀ ಕನ್ನಡ ಕೈ ತುಂಬಾ ಹಣ ಕೊಟ್ಟಿದೆ. ಡ್ಯಾನ್ಸ್ ಕಲಿಸಿಕೊಟ್ಟಿದೆ. ಹೀಗಾಗಿ ಎರಡೂ ಮುಖ್ಯ." ಎಂದಿದ್ದಾರೆ.

ಇನ್ನು ರಮ್ಮಿ ಗೇಮ್ ಪ್ರಾಯೋಜಕರಾಗಿದ್ದಕ್ಕೂ ಪ್ರಥಮ್ ಕೊಟ್ಟ ಪ್ರತಿಕ್ರಿಯೆ ಹೀಗಿದೆ. "ಜೂಜಾಡಿ ಧರ್ಮರಾಯನೇ ಕೆಟ್ಟ ಸಾರ್. ಜೀವನ ಪೂರ್ತಿ ಧರ್ಮವನ್ನೇ ಮಾಡಿಕೊಂಡು ಬಂದವನು ಹೆಂಡತಿಯನ್ನೇ ಅಡವಿಟ್ಟುಬಿಟ್ಟ. ಇದೆಲ್ಲವೂ ಜೂಜಿನಿಂದಲೇ ಆಗುತ್ತೆ. ಇದನ್ನು ಯಾರೂ ಆಡಬೇಡಿ. ಕುಡಿಬೇಡಿ ಅಂತ ಸರ್ಕಾರ ಹಾಕಿರುತ್ತಾರೆ. ಹಾಗಂತ ಹೆಂಡಕ್ಕೆ ಸರ್ಕಾರ ಪರ್ಮಿಷನ್ ಕೊಟ್ಟಿಲ್ವಾ? ಸರ್ಕಾರಕ್ಕೆ ಕೇಳುವುದಕ್ಕೆ ಬಿಟ್ಟು ಸುದೀಪ್ ಅವರು ಬಂದಾಗ ಕೇಳಿದರೆ ಅವರು ಏನಂತಾರೆ?" ಎಂದು ಕಿಚ್ಚನ ಪರವಾಗಿ ನಿಂತಿದ್ದಾರೆ.

More from Filmibeat

English summary
Olle Huduga Pratham may seen in Bigg Boss Kannada 11. Here is the details
Read more about: pratham bigg boss filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X