ಲಾಯರ್ ಜಗದೀಶ್ ಇಲ್ಲದೆ ಬಿಗ್‌ಬಾಸ್ ನೋಡಲ್ಲ ಅಂದವ್ರಿಗೆ ಮಾಸ್ಟರ್ ಸ್ಟ್ರೋಕ್; ಹನುಮಂತು ಬಂದ್ಮೇಲೂ ನೋಡಲ್ವಾ?

ಬಿಗ್‌ ಬಾಸ್ ಕನ್ನಡ 11 ರಿಯಾಲಿಟಿ ಶೋ ಆರಂಭ ಆಗಿ ನಾಲ್ಕನೇ ವಾರಕ್ಕೆ ಕಾಲಿಟ್ಟಿದೆ. ಈ ಮೂರು ವಾರ ಲಾಯರ್ ಜಗದೀಶ್ ಮನೆಯೊಳಗೆ ಹವಾ ಇಟ್ಟಿದ್ದರು. ಸಿಂಗಲ್ ಸಿಂಹ ಅಂತ ಸ್ವರ್ಗ ಹಾಗೂ ನರಕದೊಳಗೆ ರಾಜ್ಯಬಾರ ಮಾಡಿಕೊಂಡು ಇದ್ದರು. ಮನೆಯಲ್ಲಿ ಒಂಟಿಯಾಗಿದ್ದರೂ ಜಗ್ಗದೆ ಬಗ್ಗದೆ ಎಲ್ಲವನ್ನೂ ಎದುರಿಸಿಕೊಂಡಿದ್ದರು.

ಮೂರು ವಾರ ಲಾಯರ್ ಜಗದೀಶ್ ಒಬ್ಬರೇ ಒಂದು. 16 ಮಂದಿ ಸದಸ್ಯರೇ ಒಂದು ಅನ್ನುವಂತೆ ಇದ್ದರು. ಯಾವಾಗಲೂ ಜಗದೀಶ್ ಜೊತೆ ಈ 16 ಮಂದಿ ಮುಗಿಬೀಳುತ್ತಿದ್ದರು. ಮನೆಯೊಳಗೆ ಲಾಯರ್ ಜಗದೀಶ್ ವಿಲನ್ ಆಗಿ ಇದ್ದಿದ್ದೇನೋ ನಿಜ. ಆದರೆ, ಮನೆಯ ಹೊರಗಡೆ ಲಾಯರ್ ಜಗದೀಶ್ ಹೀರೋ ಆಗಿದ್ದರು.

Bigg Boss gave a master stroke to the viewers after Lawyer Jagdish elimination

ಮೂರು ವಾರಗಳಲ್ಲಿ ಕಿರುತೆರೆ ವೀಕ್ಷಕರ ಮನಗೆದ್ದಿದ್ದರು. 16 ಮಂದಿಗಿಂತ ಹೆಚ್ಚಾಗಿ ಲಾಯರ್ ಜಗದೀಶ್ ಮೇಲೆ ವೀಕ್ಷಕರ ಒಲವು ಹೆಚ್ಚಾಗ ತೊಡಗಿತ್ತು. ಅಷ್ಟರಲ್ಲೇ ಹೆಣ್ಣು ಮಕ್ಕಳಿಗೆ ಕೆಟ್ಟದಾಗಿ ಬೈಯ್ತಾರೆ ಅನ್ನೋ ಕಾರಣಕ್ಕೆ ಲಾಯರ್ ಜಗದೀಶ್ ಅವರನ್ನು ಬಿಗ್‌ ಬಾಸ್ ಮನೆಯಿಂದ ಹೊರ ಹಾಕಲಾಗಿದೆ. ಈ ಬೆಳವಣಿಗೆಯಿಂದ ವೀಕ್ಷಕರು ಸೋಶಿಯಲ್ ಮೀಡಿಯಾದಲ್ಲಿ ರೊಚ್ಚಿಗೆದ್ದಿದ್ದರು.

ಲಾಯರ್ ಜಗದೀಶ್ ಇಲ್ಲದ ಬಿಗ್‌ಬಾಸ್ ಶೋವನ್ನು ನೋಡುವುದಿಲ್ಲ ಅಂತ ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್‌ಗಳು ಬರುತ್ತಿದೆ. ಕಳೆದ ಎರಡು ಮೂರು ದಿನಗಳಿಂದ ಜಗದೀಶ್ ಅವರನ್ನು ಮನೆಯೊಳಗೆ ಮತ್ತೆ ಕಳುಹಿಸಿ ಅಂತ ವೀಕ್ಷಕರು ಕಲರ್ಸ್‌ ಕನ್ನಡಕ್ಕೆ ದುಂಬಾಲು ಬಿದ್ದಿದ್ದಾರೆ. ಲಾಯರ್ ಜಗದೀಶ್ ಇಲ್ಲದ ಬಿಗ್‌ಬಾಸ್ ರಿಯಾಲಿಟಿ ಶೋನೇ ಅಲ್ಲ ಅಂತಿದ್ದಾರೆ.

Bigg Boss gave a master stroke to the viewers after Lawyer Jagdish elimination

ಇನ್ನೊಂದು ಕಡೆ ಜಗದೀಶ್ ತಬ್ಬಿದ ಆರೋಪದ ಮೇಲೆ ರಂಜಿತ್ ಕೂಡ ಮನೆಯಿಂದ ಹೊರಬಿದ್ದಿದ್ದಾರೆ. ಆದರೂ ವೀಕ್ಷಕರು ಮನಸ್ಸು ಜಗದೀಶ್ ಕಡೆಗೆ ಇದೆ. ಇನ್ನು ಕೆಲವರು ಮಾನಸ, ಭವ್ಯಾ, ಹಂಸ ಹಾಗೂ ಚೈತ್ರಾ ಕುಂದಾಪುರ ವಿರುದ್ಧ ತಿರುಗಿಬಿದ್ದಿದ್ದಾರೆ. ಸೋಶಿಯಲ್ ಮೀಡಿಯಾಗಳಲ್ಲಿ ಇವರ ವಿರುದ್ಧ ತಿರುಗಿಬಿದ್ದಿದ್ದಾರೆ. ಈ ಬೆಳವಣಿಗೆ ಕಲರ್ಸ್ ಕನ್ನಡಕ್ಕೆ ದೊಡ್ಡ ತಲೆನೋವಾಗಿತ್ತು.

ಒಂದು ಕಡೆ ನಿಯಮ ಮೀರಿದವರನ್ನು ಬಿಗ್ ಬಾಸ್ ಮನೆಯಿಂದ ಹೊರಗೆ ಕಳುಹಿಸಲೇಬೇಕಾಗಿದೆ. ಅದೇ ಇನ್ನೊಂದು ಕಡೆ ವೀಕ್ಷಕರನ್ನೂ ಸಮಾಧಾನ ಮಾಡಬೇಕಿದೆ. ಕಳೆದ ಎರಡು ದಿನಗಳಿಂದ ಹೀಗೆ ಜಗ್ಗಾಡಿದ ಕಲರ್ಸ್ ಕನ್ನಡ ಬದಲಿ ವ್ಯವಸ್ಥೆಯನ್ನು ಮಾಡಿಕೊಂಡು ಲಾಯರ್ ಜಗದೀಶ್ ಹಾಗೂ ರಂಜಿತ್ ಅವರನ್ನು ಮನೆಯಿಂದ ಹೊರಗೆ ಕಳುಹಿಸಿದೆ. ಇದು ವೀಕ್ಷಕರಿಗೆ ಕೊಟ್ಟಿರೋ ಸಖತ್ ಮಾಸ್ಟರ್ ಸ್ಟ್ರೋಕ್.

ಅಪ್ಪಟ ಹಳ್ಳಿ ಪ್ರತಿಭೆ ಹನುಮಂತನನ್ನು ಬಿಗ್ ಬಾಸ್ ಮನೆಯೊಳಗೆ ಕಳುಹಿಸಿದೆ. ಲಾಯರ್ ಜಗದೀಶ್‌ಗೆ ಬದಲಿಯಾಗಿ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಗಾಯಕ ಹನುಮಂತು ಮನೆಯೊಳಗೆ ಪ್ರವೇಶ ಪಡೆದಿದ್ದು ಆಗಿದೆ. ಈಗಲೂ ವೀಕ್ಷಕರು ಬಿಗ್ ಬಾಸ್ ನೋಡಲ್ಲ ಅನ್ನುತ್ತಾರಾ? ಅನ್ನೋ ಕುತೂಹಲ ಮೂಡಿದೆ. ಹನುಮಂತು ಮನೆಯೊಳಗೆ ಕಾಲಿಟ್ಟ ಕ್ಷಣದಿಂದ ಹೊಸ ಆಟ ಶುರುವಾಗಿದೆ. 15 ಮಂದಿಗೆ ಮತ್ತೊಬ್ಬ ಸ್ಟ್ರಾಂಗ್ ಪ್ರತಿಸ್ಪರ್ಧಿ ಎಂಟ್ರಿ ಆದಂತೆ ಆಗಿದೆ. ಈಗಾಗಲೇ ವೀಕ್ಷಕರ ಮನಗೆದ್ದಿರುವ ಹನುಮಂತು ಬಿಗ್‌ಬಾಸ್‌ ವೀಕ್ಷಕರಿಗೂ ಇಷ್ಟ ಆಗುವ ಎಲ್ಲಾ ಸಾಧ್ಯತೆಗಳೂ ಇವೆ.

ಹನುಮಂತು ಅಪ್ಪಟ ಹಳ್ಳಿ ಪ್ರತಿಭೆ. ವೀಕ್ಷಕರನ್ನು ತನ್ನ ಹಾಡುಗಳ ಮೂಲಕ ಸೆಳೆಯಬಹುದು. ಹಳ್ಳಿ ಹೈದನಾಗಿ ಹನುಮಂತು ಮುಗ್ಧತೆ ವೀಕ್ಷಕರ ಮನಸ್ಸು ಗೆಲ್ಲಬಹುದು. ಲಾಯರ್ ಜಗದೀಶ್ ಅಂತೆ ಸ್ಪರ್ಧಿಗಳು ಹನುಮಂತು ಅನ್ನು ವಿರೋಧಿಸಿದರೆ, ಅವರಿಗೆ ನೆಗೆಟಿವ್ ಆಗಬಹುದು. ಹೀಗಾಗಿ ಮೂರು ವಾರ ಒಂದು ಆಟ ಆದರೆ, ಇನ್ಮುಂದೆ ಹೊಸ ಆಟ ಶುರುವಾಗಿದೆ. ಸದ್ಯ ಎದ್ದಿರೋ ಪ್ರಶ್ನೆ ಏನಂದ್ರೆ, ಹನುಮಂತು ಬಂದ್ಮೇಲೂ ಜಗದೀಶ್ ಫ್ಯಾನ್ಸ್ ಬಿಗ್ ಬಾಸ್‌ ನೋಡ್ತಾರಾ? ಇಲ್ವಾ?

More from Filmibeat

English summary
Bigg Boss gave a master stroke to the viewers after Lawyer Jagadish elimination:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X