ಈ ಬಾರಿ ಬಿಗ್ ಬಾಸ್ 19ರ ಮನೆ ಹೇಗಿದೆ ನೋಡಿದ್ದೀರಾ? ಯಾವಾಗ ಆರಂಭ? ಈ ಬಾರಿಯ ಥೀಮ್ ಏನು?
ಭಾರತದಾದ್ಯಂತ ಮತ್ತೆ ಬಿಗ್ ಬಾಸ್ ರಿಯಾಲಿಟಿ ಶೋ ಶುರುವಾಗುತ್ತಿದೆ. ಹಿಂದಿ ಭಾಷೆಯಿಂದ ಆರಂಭ ಆಗಿ ದಕ್ಷಿಣ ಭಾರತದ ಎಲ್ಲಾ ಭಾಷೆಗಳವರೆಗೂ ಮುಂದುವರೆದಿದೆ. ಪ್ರತಿ ವರ್ಷದಂತೆ ಈ ವರ್ಷ ಕೂಡ ಹಿಂದಿಯಲ್ಲಿ ಅದ್ಧೂರಿಯಾಗಿ ಶೋ ಆರಂಭ ಮಾಡುವುದಕ್ಕೆ ವೇದಿಕೆಯಾಗಿದೆ. ಸಲ್ಮಾನ್ ಖಾನ್ ಮತ್ತೆ ಬಿಗ್ ಬಾಸ್ ಶೋನ ನಿರೂಪಕರಾಗಿ ವೇದಿಕೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಪ್ರತಿ ಬಾರಿ ತನ್ನ ವಿಭಿನ್ನ ಕಾನ್ಸೆಪ್ಟ್ ಮೂಲ ಅಚ್ವರಿ ಮೂಡಿಸುತ್ತಲೇ ಇರುತ್ತೆ. ಈ ಬಾರಿ ಕೂಡ ಹಾಗೇ ಇದ್ದು, ಮನೆಯೊಳಗಿನ ಫೋಟೊಗಳು ರಿವೀಲ್ ಆಗಿವೆ.
ಬಿಗ್ ಬಾಸ್ 19ರ ಅದ್ದೂರಿ ಪ್ರೀಮಿಯರ್‌ಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಹೀಗಾಗಿ ಕಿರುತೆರೆ ವೀಕ್ಷಕರಲ್ಲಿ ಸಹಜವಾಗಿ ಉತ್ಸಾಹ ದುಪ್ಪಟ್ಟಾಗಿದೆ. ಸಲ್ಮಾನ್ ಖಾನ್ ಮತ್ತೆ ನಿರೂಪಕರಾಗಿ ಕಾಣಿಸಿಕೊಳ್ಳುತ್ತಿರುವುದು ವೀಕ್ಷಕರಿಗೆ ಕಿಕ್ ಕೊಟ್ಟಿದ್ದರೆ, ಇನ್ನೊಂದು ಕಡೆ ಈ ಬಾರಿಯ ಥೀಮ್ ಕುತೂಹಲವನ್ನು ಕೆರಳಿಸಿದೆ. ಈ ಬಾರಿ 'ಡೆಮಾಕ್ರಸಿ' ಥೀಮ್‌ನಲ್ಲಿ ಬಿಗ್ ಬಾಸ್ ಸೀಸನ್ 19 ಆರಂಭ ಆಗುತ್ತಿದೆ.

ಈಗಾಗಲೇ ಹೊರಬಿದ್ದಿರುವ ಪಾರ್ಲಿಮೆಂಟ್ ಥೀಮ್ ಕಿರುತೆರೆ ವೀಕ್ಷಕರ ಕಾತುರವನ್ನು ದುಪ್ಪಟ್ಟು ಮಾಡಿದೆ. ಇದೇ ಆಗಸ್ಟ್ 24 ರಿಂದ ಬಿಗ್ ಬಾಸ್ 19ರ ಅದ್ಧೂರಿ ಪ್ರೀಮಿಯರ್ ನಡೆಯಲಿದೆ. ಇನ್ನೇನು ಈ ದುಬಾರಿ ರಿಯಾಲಿಟಿ ಶೋ ಆರಂಭ ಆಗುವುದಕ್ಕೆ ಎರಡು ದಿನ ಬಾಕಿ ಉಳಿದಿರುವಾಗಲೇ ಬಿಗ್ ಬಾಸ್ ಮನೆಯೊಳಗಿನ ಫೋಟೋಗಳು ಹೊರಬಿದ್ದಿವೆ. ಈ ಬಾರಿ ಮನೆಯೊಳಗೆ ಪ್ರವೇಶ ಮಾಡುವ ಹಲವು ಸೆಲೆಬ್ರಿಟಿಗಳಿಗೆ ಇದು ನೆಲೆಯಾಗಿದೆ.

ಡೆಮಾಕ್ರಸಿ ಥೀಮ್ ತಕ್ಕಂತೆ ಈ ಬಾರಿಯ ಮನೆಯನ್ನು ವಿನ್ಯಾಸಗೊಳಿಸಲಾಗಿದೆ. ಈ ಮನೆಯೊಳಗೆ ಇರುವ ಪ್ರತಿಯೊಂದು ಕಲ್ಲು ಕೂಡ ಇದೇ ಥೀಮ್ ಅನ್ನು ನೆನಪಿಸುತ್ತದೆ. ಈಗಾಗಲೇ ಬಿಗ್ ಬಾಸ್ ಮನೆಯೊಳಗೆ ತುಣುಕುಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಅದರ ಪ್ರಕಾರ ಬಿಗ್ ಬಾಸ್ 19 ಪಾರ್ಲಿಮೆಂಟ್ ಶೈಲಿಯಲ್ಲಿ ಇರುತ್ತೆ. ಹಾಗೇ ಅಲ್ಲಿರುವ ಆಸನಗಳು ಕೂಡ ಇದೇ ಶೈಲಿಯಲ್ಲಿ ಇರುತ್ತವೆ.

ಬಿಗ್ ಬಾಸ್ 19ರ ಮನೆಯೊಳಗೆ ಒಂದು ಸ್ಪೀಕರ್ ಕೋಣೆ ಇರುತ್ತೆ. ಹಾಗೇ ಈ ರಿಯಾಲಿಟಿ ಶೋನಲ್ಲಿ ಭಾಗವಹಿಸುವ ಸ್ಪರ್ಧಿಗಳು 'ವಿ' ಆಕಾರದ ಕೊಠಡಿಯೊಳಗೆ ಕುಳಿತುಕೊಳ್ಳುತ್ತಾರೆ. ಈ ಸೀಸನ್‌ನಲ್ಲಿ ಮತದಾನ ಮಾಡುವುದಕ್ಕೆ ವಿಶೇಷ ಕೊಠಡಿ ಇರುತ್ತೆ. ಹಾಗೇ ಸ್ಪರ್ಧಿಗಳು ಚರ್ಚೆ ಮಾಡುವುದಕ್ಕೂ ವಿಶೇಷವಾದ ಕೊಠಡಿಗಳನ್ನು ನೋಡಬಹುದಾಗಿದೆ. ಹಾಗೇ ಈ ಮನೆಯಲ್ಲಿ ಪಕ್ಷಿಗಳು ಮತ್ತು ಪ್ರಾಣಿಗಳ ಚಿತ್ರಗಳಿವೆ. ಕೃತಕ ಮರಗಳನ್ನು ಸೃಷ್ಟಿಸಿ ಸುಂದರವಾದ ಉದ್ಯಾನವನವನ್ನು ಸೃಷ್ಠಿಸಲಾಗಿದೆ. ಜೊತೆಗೆ ಈಜುಕೊಳ ಇರಲಿದೆ. ಬಿಗ್ ಬಾಸ್ ಸೀಸನ್ 19 ಮನೆಯನ್ನು ಈ ಬಾರಿ ಕೂಡ ಕಲಾ ನಿರ್ದೇಶಕ ಓಮಂಗ್ ಕುಮಾರ್ ಮತ್ತು ವಿನ್ಯಾಸಕಿ ವನಿತಾ ಗರುಡ್ ಪರಿಕಲ್ಪನೆಯಲ್ಲಿ ಮೂಡಿ ಬಂದಿದೆ.
ಮರದ ವಿನ್ಯಾಸಗಳು, ಬಣ್ಣ ಬಣ್ಣದ ಸ್ಕೆಚ್‌ಗಳು ಗಮನ ಸೆಳೆಯುತ್ತಿವೆ. ಬಿಗ್ ಬಾಸ್ ಸೀಸನ್ 19ಕ್ಕಾಗಿ ಕಾಡಿನಲ್ಲಿರುವ ಕ್ಯಾಬಿನ್ ವಿನ್ಯಾಸ ಮಾಡಲಾಗಿದೆ. ಇದು ಮೇಲ್ನೋಟಕ್ಕೆ ಆಕರ್ಷಕವಾಗಿ ಕಾಣುತ್ತಿದೆ. ಈ ಥೀಮ್‌ಗೆ 'ಘರ್ವಾಲೋಂಕಿ ಸರ್ಕಾರ್' ಎಂದು ಕಲಾ ನಿರ್ದೇಶಕ ಓಮಂಗ್ ಕುಮಾರ್ ಕರೆದಿದ್ದಾರೆ. ಈ ಥೀಮ್ ಸ್ಪರ್ಧಿಗಳು ಸಂಪೂರ್ಣವಾಗಿ ಹೊಂದಿಕೊಳ್ಳಬಹುದು. ಸ್ಪರ್ಧಿಗಳು ಕೂತು ಮಾತನಾಡಲು, ಸವಾಲು ಹಾಕಲು ಮತ್ತು ತಮ್ಮನ್ನು ಸಮರ್ಥಿಸಿಕೊಳ್ಳಲು ಪ್ರೇರೇಪಿಸುತ್ತದೆ. ಅನೇಕ ಸನ್ನಿವೇಶಗಳಲ್ಲಿ ಈ ಮನೆಯನ್ನು ವಿರಾಮಗೊಳ್ಳುವುದಕ್ಕೆ ಹಾಗೂ ಪೈಪೋಟಿ ನೀಡುವುದಕ್ಕೆ ಎರಡೂ ರೀತಿಯಲ್ಲಿಯೂ ವಿನ್ಯಾಸಗೊಳಿಸಲಾಗಿದೆ ಎಂದು ಹೇಳಿಕೊಂಡಿದ್ದಾರೆ.
ಬಿಗ್ ಬಾಸ್ 19ರಲ್ಲಿ ಯಾರೆಲ್ಲಾ ಸೆಲೆಬ್ರಿಟಿಗಳು ಭಾಗವಹಿಸುತ್ತಾರೆ ಎಂಬ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಈಗಾಗಲೇ ಆಗಿರುವ ವರದಿ ಪ್ರಕಾರ, ಆವೇಜ್ ದರ್ಬಾರ್, ನಾಗ್ಮಾ ಮಿರಾಜ್‌ಕರ್, ಅಶ್ನೂರ್ ಕೌರ್, ಗೌರವ್ ಖನ್ನಾ, ಬಸೀರ್ ಅಲಿ, ಹುನಾರ್ ಹೇಲ್, ಅತುಲ್ ಕಿಶನ್, ಪಾಯಲ್ ಧಾರೆ ಸೇರಿದಂತೆ ಹಲವು ಜನಪ್ರಿಯ ವ್ಯಕ್ತಿಗಳು ಈ ಹೊಸ ಸೀಸನ್‌ನಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗಿದೆ.


Click it and Unblock the Notifications











