Bigg Boss: ಸುಶಾಂತ್ ಸಿಂಗ್ ಮಾಜಿ ಪ್ರೇಯಸಿ ವೈವಾಹಿಕ ಬದುಕಲ್ಲಿ ಬಿರುಕು? ಬಿಗ್ ಬಾಸ್ ಮನೆಯಲ್ಲಿ ಹೊಸಾ ಬಾಂಬ್!
ನಿಮಗೆ ಅಕಿಂತಾ ಲೋಖಂಡೆ ನೆನಪಿರಬಹುದು. ಥಟ್ಟನೆ ನೆನಪಾಗೋದು ಈಕೆ ನಟ ಸುಶಾಂತ್ ಸಿಂಗ್ ರಜಪೂತ್ ಮಾಜಿ ಪ್ರೇಯಸಿ ಅಂತಲೇ. ಆದರೆ, ನಟ ಸುಶಾಂತ್ ಸಿಂಗ್ ರಜಪೂತ್ ಬದುಕಿದ್ದಾಗಲೇ ಇವರಿಬ್ಬರೂ ಬೇರೆಯಾಗಿದ್ದರು. ಅಂಕಿತಾ ಎರಡು ವರ್ಷಗಳ ಹಿಂದೆ 2021ರಲ್ಲಿ ಉದ್ಯಮಿ ವಿಕ್ಕಿ ಜೈನ್ ಮದುವೆಯಾದರು. ನಂತರ ಈ ಇಬ್ಬರೂ ಜೊತೆಯಲ್ಲಿಯೇ ಪಾರ್ಟಿಗಳಲ್ಲಿ, ಇವೆಂಟ್‌ಗಳಲ್ಲಿ ಕಾಣಿಸಿಕೊಂಡಿದ್ದು ಮಾತ್ರವಲ್ಲ ಬಿಗ್ ಬಾಸ್ 17ನೇ ಸೀಸನ್‌ನ ಸ್ಪರ್ಧಿಗಳೂ ಆಗಿದ್ದಾರೆ.
ಸಲ್ಮಾನ್ ಖಾನ್ ನಡೆಸಿಕೊಡೋ ಹಿಂದಿಯ ಬಿಗ್ ಬಾಸ್ ಮನೆಯಿಂದ ಒಂದಾದ ಮೇಲೊಂದು ಬ್ರೇಕಿಂಗ್ ಸುದ್ದಿಗಳು ಬರುತ್ತಲೇ ಇವೆ. ಮೊದಲಿಗೆ ಅಂಕಿತಾ ಲೋಖಂಡೆ ಬಿಗ್ ಬಾಸ್ ಮನೆಯೊಳಗಿದ್ದಾಗಲೇ ಗರ್ಭಿಣಿ ಎನ್ನುವ ಸುದ್ದಿ ಹೊರಗೆ ಬಂತು. ಆಕೆಯೇ ಪತಿ ವಿಕ್ಕಿಗೆ ತನ್ನ ಬ್ಲಡ್ ಮತ್ತು ಯೂರಿನ್ ಸ್ಯಾಂಪಲ್, ಪ್ರೆಗ್ನೆನ್ಸಿ ಟೆಸ್ಟ್‌ಗಾಗಿ ಕೊಟ್ಟಿದ್ದಾಗಿ ಹೇಳಿದ್ದರು. ಆ ವಿಡಿಯೊ ಸಾಕಷ್ಟು ವೈರಲ್ ಆಗಿತ್ತು.

ಆದರೆ, "ಅಂಕಿತಾ ಗರ್ಭಿಣಿಯಲ್ಲ ಎನ್ನುವುದು ದೃಢಪಟ್ಟಿದೆ. ಇದನ್ನು ಖುದ್ದು ಅಂಕಿತಾ ತನಗೆ ಹೇಳಿದ್ದರು." ಎಂದು ಇತ್ತೀಚೆಗೆ ಬಿಗ್ ಬಾಸ್ ಮನೆಯಿಂದ ಹೊರಬಂದ ಮತ್ತೊಬ್ಬ ಸ್ಪರ್ಧಿ ಜಿಗ್ನಾ ವೋರಾ ತಿಳಿಸಿದ್ದಾರೆ. ದೈನಿಕ್ ಭಾಸ್ಕರ್‌ಗೆ ಕೊಟ್ಟ ಸಂದರ್ಶನವೊಂದರಲ್ಲಿ ಜಿಗ್ನಾ ವೋರಾ ಈ ವಿಚಾರ ತಿಳಿಸಿದ್ದಾರೆ. "ಇದು ಅವರಿಬ್ಬರ ಖಾಸಗಿ ವಿಚಾರ. ಆದರೆ, ನನಗೆ ತಿಳಿದಿರುವ ಮಟ್ಟಿಗೆ ಅಂಕಿತಾ ಪ್ರೆಗ್ನೆನ್ಸಿ ರಿಪೋರ್ಟ್ ನೆಗೆಟಿವ್ ಎಂದು ಬಂದಿದೆ. ಆಕೆ ಗರ್ಭಿಣಿಯಲ್ಲ" ಎಂದಿದ್ದಾರೆ.
ಇನ್ನು ಅಂಕಿತಾ ಮತ್ತು ಅವರ ಪತಿ ವಿಕ್ಕಿ ಜೈನ್ ನಡುವೆ ವಿರಸ ಏರ್ಪಟ್ಟಿರುವ ಬಗ್ಗೆಯೂ ಜಿಗ್ನಾ ಕೆಲವು ವಿಚಾರ ಹಂಚಿಕೊಂಡಿದ್ದಾರೆ. "ಒಬ್ಬ ಪತ್ನಿಯಾಗಿ ವಿಕ್ಕಿ ತನಗೆ ಭಾವನಾತ್ಮಕ ಬೆಂಬಲ ನೀಡಲಿ ಎಂದು ಅಂಕಿತಾ ಬಯಸುತ್ತಾಳೆ. ಆದರೆ, ಆಕೆಯ ಪತಿ ವಿಕ್ಕಿ ಬೇರೆ ವಿಚಾರಗಳಲ್ಲಿ, ಬೇರೆ ವ್ಯಕ್ತಿಗಳಲ್ಲಿ ಅದೆಷ್ಟು ಬ್ಯುಸಿಯಾಗಿದ್ದಾನೆ ಎಂದರೆ ಅಂಕಿತಾಳ ಜೊತೆ ಸಮಯವನ್ನೇ ಕಳೆಯುತ್ತಿಲ್ಲ. ಇದರಿಂದ ಅಂಕಿತಾಗೆ ಬಹಳ ಬೇಸರವಾಗಿದೆ." ಎಂದು ಜಿಗ್ನಾ ವೋರಾ ಹೇಳಿದ್ದಾರೆ.

ಸುಶಾಂತ್ ಸಿಂಗ್ ರಜಪೂತ್ ಮತ್ತು ಅಂಕಿತಾ ಲೋಖಂಡೆ ದೀರ್ಘಕಾಲದವರಗೆ ಜೊತೆಯಾಗಿದ್ದವರು. ಕ್ರಮೇಣ ನಾನಾ ಕಾರಣಗಳಿಂದ ದೂರವಾದರು. ಆನಂತರ ಅಂಕಿತಾ ಹೆಸರು ಯಾರ ಜೊತೆಯೂ ಕೇಳಿಬಂದಿರ್ಲಿಲ್ಲ. ಆದ್ರೀಗ ಉದ್ಯಮಿ ವಿಕ್ಕಿ ಜೈನ್ ಜೊತೆ ಅಂಕಿತಾ ಮದುವೆಯಾಗಿದ್ದು ಗೊತ್ತೇ ಇದೆ. ಮದುವೆ ನಂತರ ಈ ಜೋಡಿ ಸ್ಟಾರ್ ಪಾರ್ಟಿಗಳಲ್ಲಿ, ಅವಾರ್ಡ್ ಫಂಕ್ಷನ್ಗಳಲ್ಲಿ ಈ ಜೋಡಿ ಜೊತೆಯಾಗಿ ಕಾಣಿಸಿಕೊಂಡಾಗೆಲ್ಲಾ ಸುಶಾಂತ್-ಅಂಕಿತಾ ಜೋಡಿಯಲ್ಲಿ ಕನಿಷ್ಠ ಅಂಕಿತಾ ಬದುಕಾದ್ರೂ ಹಸನಾಯ್ತಲ್ಲಾ ಅಂತ ಅಭಿಮಾನಿಗಳು ಖುಷಿಪಟ್ಟಿದ್ರು.
ಬಿಗ್ ಬಾಸ್ ಸೀಸನ್ 17ರಲ್ಲಿ ಇವ್ರಿಬ್ರೂ ಜೊತೆಯಾಗಿ ಎಂಟ್ರಿ ಕೊಡ್ತಿರೋದು ಗೊತ್ತಾದ್ಮೇಲೆ ನಿಜಕ್ಕೂ ಫ್ಯಾನ್ಸ್ ಬಹಳ ನಿರೀಕ್ಷೆಯಿಂದ ಇವರ ನಡವಳಿಕೆ ನೋಡೋಕೆ ಕಾದಿದ್ದಂತೂ ನಿಜ. ಕೆಲವು ದಿನಗಳ ಹಿಂದಷ್ಟೇ ತಾನು ಪ್ರೆಗ್ನೆಂಟ್ ಇರ್ಬಹುದು ಅನ್ನೋ ಅಂಕಿತಾ ಮಾತಿಗೆ ಕಂಗ್ರಾಜುಲೇಟ್ ಮಾಡಿದವರ ಸಂಖ್ಯೆಯೂ ದೊಡ್ಡದೇ. ಆದರೆ, ಬಿಗ್ ಬಾಸ್ ಮನೆಯಲ್ಲಿ ಪ್ರತೀ ಸ್ಪರ್ಧಿಯ ವಿಚಾರದಲ್ಲೂ ಮೊದಲ ಕೆಲವು ವಾರಗಳ ನಂತರ ಟ್ವಿಸ್ಟ್ ಅಂಡ್ ಟರ್ನ್ ಪಡೆಯುವಂತೆ ಈ ಜೋಡಿಯ ವಿಚಾರದಲ್ಲೂ ಆಗುತ್ತಿದೆಯಾ ಅನ್ನೋ ಅನುಮಾನ ವೀಕ್ಷಕರನ್ನು ಕಾಡಿತ್ತು.
ಈಗ ಮನೆಯಿಂದ ಹೊರಬಂದಿರೋ ಜಿಗ್ನಾ ಅಂಕಿತಾ ಮತ್ತು ವಿಕ್ಕಿ ನಡುವೆ ಹೀಗೆಲ್ಲಾ ಸಮಸ್ಯೆಯಾಗುತ್ತಿದೆ. ಅಂಕಿತಾ ಒಂಟಿತನ ಅನುಭವಿಸ್ತಿದ್ದಾಳೆ ಎಂದೆಲ್ಲಾ ಹೇಳಿರೋದು ಉರಿಯೋ ಬೆಂಕಿಗೆ ತುಪ್ಪ ಸುರಿದಂತಾಗಿದೆ. ಒಟ್ನಲ್ಲಿ ಎಲ್ಲಾ ಸರಿ ಹೋಗಿ ಈ ಜೋಡಿ ಹಕ್ಕಿ ಜೊತೆಯಾಗಿ ಖುಷಿಯಾಗಿರಲಿ ಅನ್ನೋ ಹಾರೈಕೆ ಮಾತ್ರ ಅಭಿಮಾನಿಗಳದ್ದು.


Click it and Unblock the Notifications











