'ಬಿಗ್ ಬಾಸ್' ಮನೆ ಬೆಂಗಳೂರಿಗೆ ಶಿಫ್ಟ್ ಆಗಿದ್ದೇ 'ಕಿಚ್ಚ'ನಿಂದ: ಈಗದೇ ಮನೆಗೆ ಕಿಚ್ಚು ಬಿತ್ತಲ್ಲ.!

By Harshitha

Recommended Video

'ಬಿಗ್ ಬಾಸ್' ಮನೆ ಬೆಂಗಳೂರಿಗೆ ಶಿಫ್ಟ್ ಆಗಿದ್ದೇ 'ಕಿಚ್ಚ'ನಿಂದ: ಈಗದೇ ಮನೆಗೆ ಕಿಚ್ಚು ಬಿತ್ತಲ್ಲ |Filmibeat Kannada

''ಈ ಮನೆಯಲ್ಲಿ ಕಿಚ್ಚಿದೆ... ಹುಚ್ಚಿದೆ... ಮನಸಲ್ಲೇ ಮಡಗಿರುವ ಮಚ್ಚಿದೆ... ಕಾಡ್ಗಿಚ್ಚಿದೆ'' - ಇದು 'ಬಿಗ್ ಬಾಸ್' ರಿಯಾಲಿಟಿ ಶೋ ನಿರೂಪಣೆ ಮಾಡುವಾಗ ಕಿಚ್ಚ ಸುದೀಪ್ ಬಾಯಲ್ಲಿ ಬರುವ ಮಾತು. ಹೇಳಿ ಕೇಳಿ 'ಬಿಗ್ ಬಾಸ್' ಒಂದು ರಿಯಾಲಿಟಿ ಶೋ. ಹೀಗಾಗಿ ಸ್ಪರ್ಧಿಗಳ ನಡುವೆ ಕಿಚ್ಚು, ಹುಚ್ಚು, ಮಚ್ಚು, ಕಾಡ್ಗಿಚ್ಚು.. ಎಲ್ಲವೂ ಕಾಮನ್. ಆದ್ರೀಗ, ರಿಯಾಲಿಟಿ ಶೋ ಮುಗಿದು 'ಬಿಗ್ ಬಾಸ್' ಮನೆಗೆ ಬೀಗ ಹಾಕಿದ್ಮೇಲೆ ನಿಜವಾದ 'ಕಿಚ್ಚು' ಹತ್ಕೊಂಡ್ಬಿಟ್ಟಿದೆ.

ನಿಮಗೆಲ್ಲ ಗೊತ್ತಿರುವ ಹಾಗೆ, 'ಬಿಗ್ ಬಾಸ್ ಕನ್ನಡ' ಕಾರ್ಯಕ್ರಮದ ಮೊದಲೆರಡು ಸೀಸನ್ ಗಳು ನಡೆದಿದ್ದು ಪೂಣೆಯ ಲೋನಾವಾಲದಲ್ಲಿ. ಸಿನಿಮಾ ಶೂಟಿಂಗ್, ಸಿಸಿಎಲ್ ನಡುವೆ 'ಬಿಗ್ ಬಾಸ್' ಕೂಡ ನಡೆಸಿಕೊಡುತ್ತಿದ್ದ ಕಿಚ್ಚ ಸುದೀಪ್ ಗೆ ವೀಕೆಂಡ್ ಬಂತೂಂದ್ರೆ ನಿದ್ದೆಯೇ ಇರ್ತಿರ್ಲಿಲ್ಲ. ಕಾರಣ ಇದೇ 'ಬಿಗ್ ಬಾಸ್'. ಪ್ರತಿ ವಾರ ಸುದೀಪ್ ಪೂಣೆಗೆ ಹೋಗಿ ಎರಡು ಎಪಿಸೋಡ್ ಮುಗಿಸಿಕೊಟ್ಟು ಬರಬೇಕಿತ್ತು.

ನಿದ್ದೆ ಇಲ್ಲದೆ ಕಷ್ಟ ಪಟ್ಟು ಸುದೀಪ್ ಎರಡು ಸೀಸನ್ ಗಳನ್ನ ನಡೆಸಿಕೊಟ್ಟ ಮೇಲೆ ಕಲರ್ಸ್ ವಾಹಿನಿ ಮತ್ತು ಎಂಡೆಮಾಲ್ ಒಂದು ನಿರ್ಣಯಕ್ಕೆ ಬಂತು. ಅದೇ 'ಬಿಗ್ ಬಾಸ್' ಮನೆಯನ್ನ ಬೆಂಗಳೂರಿಗೆ ಶಿಫ್ಟ್ ಮಾಡುವುದು.

'ಬಿಗ್ ಬಾಸ್' ಇತಿಹಾಸದಲ್ಲಿ ಇಲ್ಲಿಯವರೆಗೆ ಯಾವುದೇ ಭಾಷೆಯಲ್ಲಿ ಬಿಗ್ ಬಾಸ್ ಮನೆ ಶಿಫ್ಟ್ ಆಗಿಲ್ಲ. ಆದ್ರೆ, 'ಬಿಗ್ ಬಾಸ್ ಕನ್ನಡ' ಕಾರ್ಯಕ್ರಮಕ್ಕೆ ಸಿಕ್ಕ ಜನಪ್ರಿಯತೆ ಹಾಗೂ ಕಿಚ್ಚನಿಗಾಗಿ 'ಬಿಗ್' ಮನೆಯನ್ನ ಬೆಂಗಳೂರಿಗೆ ಶಿಫ್ಟ್ ಮಾಡಲಾಯಿತು. ಈಗ ಅದೇ ಮನೆಗೆ ಕಿಚ್ಚು ಬಿದ್ದಿರುವುದು ದುರಂತವೇ ಸರಿ. ಮುಂದೆ ಓದಿರಿ...

ಬಿಡದಿಯಲ್ಲಿ ಇತ್ತು ಭವ್ಯವಾದ 'ಬಿಗ್ ಬಾಸ್' ಮನೆ

ಬಿಡದಿಯಲ್ಲಿ ಇತ್ತು ಭವ್ಯವಾದ 'ಬಿಗ್ ಬಾಸ್' ಮನೆ

'ಬಿಗ್ ಬಾಸ್' ಮನೆ ಭವ್ಯವಾಗಿ ತಲೆಯೆತ್ತಿದ್ದು ಬೆಂಗಳೂರಿನ ಬಿಡದಿ ಬಳಿಯ ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ. 14,000 ಚದರ ಅಡಿಗಳಲ್ಲಿ ಕನ್ನಡ ಬಿಗ್ ಬಾಸ್ ಮನೆ ನಿರ್ಮಿಸಲಾಗಿತ್ತು. ಇದು ಹಿಂದಿನ 'ಬಿಗ್ ಬಾಸ್' ಮನೆಗಿಂತಲೂ ವಿಶಾಲವಾದದ್ದು.

ಎರಡು ಬಾರಿ ನವೀಕರಣಗೊಂಡಿದೆ

ಎರಡು ಬಾರಿ ನವೀಕರಣಗೊಂಡಿದೆ

ಇನ್ನೋವೇಟಿವ್ ಫಿಲ್ಮ್ ಸಿಟಿಯ ಬಿಗ್ ಬಾಸ್ ಕನ್ನಡ ಮನೆಯಲ್ಲಿ ಮೊಟ್ಟ ಮೊದಲ ಬಾರಿಗೆ ನಡೆದಿದ್ದು 'ಬಿಗ್ ಬಾಸ್ ಕನ್ನಡ-3' ಕಾರ್ಯಕ್ರಮ. 'ಬಿಗ್ ಬಾಸ್ ಕನ್ನಡ-4' ಹಾಗೂ 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮಕ್ಕಾಗಿ ಇದೇ ಮನೆ ಎರಡು ಬಾರಿ ನವೀಕರಣಗೊಂಡಿತ್ತು.

ಕೋಟ್ಯಾಂತರ ರೂಪಾಯಿ ಖರ್ಚು

ಕೋಟ್ಯಾಂತರ ರೂಪಾಯಿ ಖರ್ಚು

ಕನ್ನಡದ 'ಬಿಗ್ ಬಾಸ್' ಮನೆಗಾಗಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡಲಾಗಿತ್ತು. ಸ್ವಿಮ್ಮಿಂಗ್ ಪೂಲ್, ಜಿಮ್, ಆಧುನಿಕ ಉಪಕರಣ, ಪೀಠೋಪಕರಣ ಹೊಂದಿದ್ದ 'ಬಿಗ್ ಬಾಸ್' ಮನೆ ಇಂದು ಸಂಪೂರ್ಣವಾಗಿ ಬೆಂಕಿಗೆ ಆಹುತಿ ಆಗಿದೆ.

ಬಿಗ್ ಬಾಸ್ ಟೂರ್ ನಡೆಯುತ್ತಿತ್ತು

ಬಿಗ್ ಬಾಸ್ ಟೂರ್ ನಡೆಯುತ್ತಿತ್ತು

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮ ಮುಗಿದ್ಮೇಲೆ, ಇದೇ ಮನೆಯಲ್ಲಿ ಇಡೀ 'ಬಿಗ್ ಬಾಸ್' ತಂಡ ಪಾರ್ಟಿ ಮಾಡಿತ್ತು. ಅದಾದ ಬಳಿಕ ಸಾರ್ವಜನಿಕರಿಗೆ 'ಬಿಗ್ ಬಾಸ್ ಟೂರ್' ಮೂಲಕ 'ಬಿಗ್ ಬಾಸ್' ಮನೆಯೊಳಗೆ ಪ್ರವೇಶ ಕಲ್ಪಿಸಲಾಗಿತ್ತು. ಹೀಗಿರುವಾಗಲೇ, 'ಬಿಗ್ ಬಾಸ್' ಮನೆಗೆ ಬೆಂಕಿ ಬಿದ್ದಿದೆ.

'ಬಿಗ್ ಬಾಸ್' ಮನೆಯಲ್ಲಿ ಕಿಚ್ಚು

'ಬಿಗ್ ಬಾಸ್' ಮನೆಯಲ್ಲಿ ಕಿಚ್ಚು

ಮಧ್ಯರಾತ್ರಿ ಮೂರು ಗಂಟೆ ಸುಮಾರಿಗೆ ಶಾರ್ಟ್ ಸರ್ಕ್ಯೂಟ್ ನಿಂದಾಗಿ 'ಬಿಗ್ ಬಾಸ್' ಮನೆಯಲ್ಲಿ ಅಗ್ನಿ ದುರಂತ ನಡೆದಿದೆ.

More from Filmibeat

English summary
Major fire broke out at Bigg Boss house, Innovative Film City near Bidadi Bengaluru on Thursday (Feb 22nd). 3 years ago Bigg Boss house was shifted to Bengaluru because of Kiccha Sudeep.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X