Bigg Boss: ಬಿಗ್‌ಬಾಸ್ ಶಾಲೆಯಲ್ಲಿ ವಿದ್ಯಾರ್ಥಿಗಳ ತುಂಟತನ; ತುಕಾಲಿ ಸಂತೋಷ್ ಮೇಷ್ಟ್ರು ಸುಸ್ತೋ ಸುಸ್ತು!
ಬಿಗ್ ಬಾಸ್ ಕನ್ನಡ ಸೀಸನ್ 10 ಒಂದಲ್ಲ ಒಂದು ರೀತಿ ವೀಕ್ಷಕರನ್ನು ಸೆಳೆಯುತ್ತಿದೆ. ಮನೆಯ ಸದಸ್ಯರು ಕೂಡ ಬಿಗ್ ಬಾಸ್ ಕೊಡುವ ಟಾಸ್ಕ್‌ಗಳಲ್ಲಿ ಸಖತ್ ಆಕ್ಟಿವ್ ಆಗಿಯೇ ಭಾಗವಹಿಸುತ್ತಿದ್ದಾರೆ. ಬಿಗ್ ಬಾಸ್ ಶೋ ವೀಕ್ಷಕರಿಗೆ ಸಖತ್ ಎಂಟರ್‌ಟೈನ್ಮೆಂಟ್ ನೀಡುತ್ತಿದ್ದಾರೆ.
ಈ ವಾರ ಬಿಗ್ ಬಾಸ್ ಮನೆಯೊಳಗೆ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯನ್ನು ಆರಂಭ ಮಾಡಲಾಗಿತ್ತು. ಈ ಟಾಸ್ಕ್‌ನಲ್ಲಿ ವಿದ್ಯಾರ್ಥಿಗಳು ಅವರೇ.. ಶಿಕ್ಷಕರು ಕೂಡ ಅವರೇ.. ಹೀಗಾಗಿ ಪ್ರತಿ ಬಾರಿ ಪಾಠ ಮಾಡುವುದಕ್ಕೆ ಬಂದಾಗಲೂ ತುಂಟತನದ ವಿದ್ಯಾರ್ಥಿಗಳು ಟೀಚರ್ ಅನ್ನು ಗೋಳು ಹೊಯ್ದುಕೊಳ್ಳುತ್ತಿದ್ದಾರೆ.

ಶಾಲೆ ಆರಂಭ ಆದಲ್ಲಿಂದ ಜೋರಾಗೇನೋ ನಡೀತಿದೆ. ಈಗಾಗಲೇ ತನಿಷಾ, ಮೈಕಲ್, ಪ್ರತಾಪ್, ನಮ್ರತಾ ಬೋರ್ಡ್ ಮುಂದೆ ನಿಂತು ಪಾಠ ಮಾಡಿದ್ದಾರೆ. ಇಂದು (ಡಿಸೆಂಬರ್ 13) ಬೆಳಗ್ಗೆ ಜಿಯೋ ಸಿನಿಮಾ ರಿಲೀಸ್ ಮಾಡಿರುವ ಪ್ರೋಮೊದಲ್ಲಿ ತುಕಾಲಿ ಸಂತೋಷ್ ಮೇಷ್ಟ್ರು ಆಗಿದ್ದಾರೆ. ಆದರೆ, ಪಾಠ ಮಾಡೋಕೆ ಹೋಗಿ ಫುಲ್ ಸುಸ್ತಾಗಿದ್ದಾರೆ. ಈ ಮಜವಾದ ದೃಶ್ಯಗಳು ಪ್ರೋಮೊದಲ್ಲಿ ಸೆರೆಯಾಗಿದೆ.
ನಿನ್ನೆ (ಡಿಸೆಂಬರ್ 12) ತನಿಷಾ ಟೀಚರ್ ಬಿಗ್ ಬಾಸ್ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನದ ಪಾಠ ಹೇಳಿಕೊಟ್ಟಿದ್ದರು. ಮೈಕಲ್ ಮೇಷ್ಟು ಕನ್ನಡ ಪಾಠ ಮಾಡಿದ್ದರು. ಅವರೊಂದಿಗೆ ವಿದ್ಯಾರ್ಥಿಗಳು "ರೋಮಾಂಚನವೀ ಕನ್ನಡ.." ಎಂದು ರಾಗವಾಗಿ ಹಾಡಿದ್ದರು. ಇನ್ನು ಡ್ರೋನ್ ಪ್ರತಾಪ್ ಗಣಿತ ಹೇಳಿಕೊಟ್ಟಿದ್ದರು. ಇವರು ಕೇಳಿಕೊಟ್ಟ ಪಾಠದಿಂದ ಗಣಿತ ಕಲಿತು ಹುಡುಗರು ಚುರುಕಾಗಿದ್ದರು. ಇವತ್ತು (ಡಿಸೆಂಬರ್ 13) ನಮ್ರತಾ ಮೇಡಂ ಮಕ್ಕಳಿಗೆ ಡಾನ್ಸ್ ಹೇಳಿಕೊಟ್ಟಿದ್ದಾರೆ.
ಪಾಠಕ್ಕೆ ಬ್ರೇಕ್ ಕೊಟ್ಟು ನಮ್ರತಾ ಮೇಡಂ ಡ್ಯಾನ್ಸ್ ಹೇಳಿ ಕೊಡುವುದಕ್ಕೆ ಬಂದ್ರೆ ಯಾರು ಸುಮ್ಮನಿದ್ದಾರೆ ಹೇಳಿ? ವಿನಯ್, ವಿನಾಶ್ ಮತ್ತು ಕಾರ್ತಿಕ್ ಬ್ಲ್ಯಾಕ್ ಬೋರ್ಡ್ ಮುಂದೆ ಸಖತ್ ಆಗಿಯೇ ಹೆಜ್ಜೆ ಹಾಕಿದ್ದಾರೆ. ಸೀರೆ ಉಟ್ಟುಕೊಂಡ ನಮ್ರತಾ ಮೇಡಂ ಭರ್ಜರಿ ಸ್ಟೆಪ್ ಹಾಕುತ್ತಿರುವಾಗ ವಿನಯ್, ಕಾರ್ತಿಕ್ ಅಂತಹ ಹೈಪರ್ ಆಕ್ಟೀವ್ ವಿದ್ಯಾರ್ಥಿಗಳು ಸಿಕ್ಕಾಪಟ್ಟೆ ಜೋಷ್‌ನಲ್ಲಿ ಡಾನ್ಸ್‌ನಲ್ಲಿ ಹಾಕಿದ್ದಾರೆ.

ಬರೀ ಡ್ಯಾನ್ಸ್ ಅಷ್ಟೇ ಅಲ್ಲ. ಪಠ್ಯೇತರ ಚಟುವಟಿಗಳು ಹೆಚ್ಚಾಗಿ ನಡೆಯುತ್ತಿವೆ. ವಿದ್ಯಾರ್ಥಿಗಳು ನಾಟಕದಲ್ಲಿಯೂ ಆಕ್ಟಿವ್ ಆಗಿ ಭಾಗವಹಿಸಿದ್ದಾರೆ. ವರ್ತೂರು ಸಂತೋಷ್ ಬೆಂಕಿ ಮುಂದೆ ರೊಮ್ಯಾಂಟಿಕ್ ಡೈಲಾಗ್ ಬಿಟ್ಟಿದ್ದಾರೆ. ತನಿಷಾ ಕೆನ್ನೆಯ ಮೇಲೆ ಬೆರಳಾಡಿಸುತ್ತಾ, "ಪಟಾಕಿ ಯಾರದಾಗಿದ್ರೂ ಹಚ್ಚೋರು ಮಾತ್ರ ನಾವಾಗಿರಬೇಕು" ಅಂತ ಮಾಸ್ ಡೈಲಾಗ್ ಹೊಡೆದಿದ್ದಾರೆ.
ಇವರ ಸರದಿ ಮುಗಿಯುತ್ತಿದ್ದಂತೆ ತುಕಾಲಿ ಸಂತೋಷ್ ಮೇಷ್ಟ್ರಾಗಿ ಬಂದಿದ್ದಾರೆ. ಇವರು ಪದ್ಯ ಹೇಳಿಕೊಡುವುದಕ್ಕೆ ಬಂದರೆ ಹೇಗಿರಬೇಡ. ವಿದ್ಯಾರ್ಥಿಗಳು ತುಕಾಲಿ ಮಾತು ಹೇಳುತ್ತಿಲ್ಲ. ವಿದ್ಯಾರ್ಥಿಗಳು ಕೂಳೆ ಕೊಡುತ್ತಿದ್ದಂತೆ ಇತ್ತ ತುಕಾಲಿ ಸಂತೋಷ್ ಸುಸ್ತಾಗಿದ್ದಾರೆ. "ನಾನು ಹೇಳಿಹೊಟ್ಟಿದ್ದನ್ನು ಸರಿಯಾಗಿ ಹೇಳಬೇಕು.." ಎಂದಾಗ ತುಕಾಲಿ ಸಂತೋಷ್ ಮೇಷ್ಟು ಉಗಿದಂತೆ "ಥೂ" ಎಂದು ಉಗಿಯುತ್ತಿದ್ದಾರೆ. ಬಿಗ್‌ಬಾಸ್ ಶಾಲೆಯ ಸಣ್ಣದೊಂದು ಝಲಕ್ ಸಖತ್ ಮಜ ಕೊಟ್ಟಿದೆ.


Click it and Unblock the Notifications











