BBK 10: ಕಾರ್ತಿಕ್‌ಗೆ ತಲೆಬೋಳಿಸಿಕೊಳ್ಳಲು ಹೇಳಿ ಸೇಡು ತೀರಿಸಿಕೊಂಡ್ರಾ ಸಂಗೀತಾ? ಅತಿರೇಕಕ್ಕೆ ಹೋಗುತ್ತಾ ಈ ದ್ವೇಷ?
ಬಿಗ್ ಬಾಸ್ ಮನೆಯಲ್ಲಿ ಸ್ನೇಹಿತರ ಕೋಪ ತಾರಕ್ಕೇರಿದೆ. ಕಾರ್ತಿಕ್, ಸಂಗೀತಾ, ತನಿಷಾ ಬಿಟ್ಟಿರಲಾರದಂತೆ ಇದ್ದ ಸ್ನೇಹಿತರಾಗಿದ್ದರು. ಆದರೆ, ತನಿಷಾ ಹಾಗೂ ಕಾರ್ತಿಕ್ ನಡೆದುಕೊಂಡ ಒಂದೇ ಒಂದು ಸನ್ನಿವೇಶದಿಂದ ಸಂಗೀತಾ ಕೊತ ಕೊತೆ ಕುದಿಯುತ್ತಿದ್ದಾರೆ. ಈಗ ಎದುರಾಳಿ ತಂಡವನ್ನು ಸೇರಿಕೊಂಡಿದ್ದಾರೆ.
ಬಿಗ್ ಬಾಸ್ ಆರಂಭ ಆಗಿ ಏಳನೇ ವಾರಕ್ಕೆ ಕಾಲಿಟ್ಟಿದೆ. ಒಂದೇ ವಾರದಲ್ಲಿ ಇಬ್ಬರು ಎಲಿಮಿನೇಷನ್ ಆಗಿದ್ದರು ಸ್ಪರ್ಧಿಗಳಲ್ಲಿ ಆತಂಕ ಹುಟ್ಟಿಸಿರೋದು ಎದ್ದು ಕಾಣುತ್ತಿದೆ. ಇತ್ತ ಬ್ರಹ್ಮಾಂಡ ಗುರೂಜಿ ಬಿಗ್ ಬಾಸ್ ಮನೆಯೊಳಗೆ ಎಂಟ್ರಿ ಕೊಟ್ಮೇಲೆ ಸದಸ್ಯರಿಗೆ ಮತ್ತಷ್ಟು ಕಠಿಣ ಅಂತ ಅನಿಸುವುದಕ್ಕೆ ಶುರುವಾಗಿದೆ.

ಈ ಮಧ್ಯೆ ಸಂಗೀತಾ, ಕಾರ್ತಿಕ್ ಹಾಗೂ ತನಿಷಾ ನಡುವೆ ಸ್ನೇಹ ಮುರಿದು ಬಿದ್ದು ಒಬ್ಬರಿಗೊಬ್ಬರು ದ್ವೇಷ ಕಾರುತ್ತಿದ್ದಾರೆ. ದಿನದಿಂದ ದಿನಕ್ಕೆ 'ಕಾಂಪಿಟೇಷನ್ ಹೀಟ್' ಹೀಟ್ ಹೆಚ್ಚಾಗುತ್ತಿದ್ದಂತೆ ಸಂಗೀತಾ, ಕಾರ್ತಿಕ್, ತನಿಷಾ ನಡುವೆ ದ್ವೇಷ ಹೆಚ್ಚಾಗುತ್ತಿರುವಂತೆ ಕಾಣುತ್ತಿದೆ. ಸದ್ಯಕ್ಕೀಗ ಅದು ತಲೆ ಬೋಳಿಸಿಕೊಳ್ಳುವವರೆಗೂ ಬಂದು ಮುಟ್ಟಿದೆ.
ಜಿಯೋ ಸಿನಿಮಾದಲ್ಲಿ ರಿಲೀಸ್ ಆಗಿರೋ ಪ್ರೋಮೊದಲ್ಲಿ ಕಾರ್ತಿಕ್ ಹಾಗೂ ತುಕಾಲಿ ಸಂತೋಷ್ ತಲೆ ಬೋಳಿಸಿಕೊಳ್ಳುತ್ತಿರುವ ದೃಶ್ಯ ರಿವೀಲ್ ಆಗಿದೆ. ಅಸಲಿಗೆ ಹೀಗೆ ತಲೆ ಬೋಳಿಸಿಕೊಳ್ಳುವಂತೆ ಹೇಳಿದ್ದೇ ಸಂಗೀತಾ. ಮೊದಲಿಂದಲೂ ಟಾಸ್ಕ್‌ಗಾಗಿ ಏನು ಬೇಕಾದರೂ ಮಾಡುತ್ತೇನೆ ಎಂದು ಹೇಳಿಕೊಂಡು ಬರುತ್ತಿರೋ ಕಾರ್ತಿಕ್ ಕೂಡ ಒಪ್ಪಿಕೊಂಡಿದ್ದಾರೆ.

ಮನೆಯಲ್ಲಿ ತಲೆಬೋಳಿಸಿಕೊಳ್ಳುವ ವಿಚಾರಕ್ಕೆ ತೀವ್ರ ವಿರೋಧ ವ್ಯಕ್ತವಾಗಿದ್ದರೂ, ಕಾರ್ತಿಕ್ ಹಾಗೂ ತುಕಾಲಿ ಸಂತೋಷ್ ತಲೆ ಬೋಳಿಸಿಕೊಳ್ಳಲು ಮುಂದೆ ಬಂದಾಗಿದ್ದಾರೆ. ಇದು ಮೇಲ್ನೋಟಕ್ಕೆ ಸಂಗೀತಾ ಕೋಪ, ದ್ವೇಷವೇ ಕಾರಣ ಎಂದು ಮನವರಿಕೆಯಾಗುತ್ತಿದೆ. ಇಂದು ಸಂಗೀತಾ ಟರ್ನ್ ಆಗಿದ್ದರೆ, ನಾಳೆ ತಮ್ಮ ಟರ್ನ್ ಬಂದಾಗ ಕಾರ್ತಿಕ್ ಹಾಗೂ ತುಕಾಲಿ ಸಂತೋಷ್ ಕೂಡ ಸಂಗೀತಾ ಮೇಲೆ ದ್ವೇಷ ಸಾಧಿಸಬಹುದು.
ಇನ್ನೊಂದು ಕಡೆ ಇದೆಲ್ಲವನ್ನೂ ಬ್ರಹ್ಮಾಂಡ ಗುರೂಜಿ ನೋಡುತ್ತಾ ಕೂತಿದ್ದಾರೆ. ಹೀಗಾಗಿ ಬಿಗ್ ಬಾಸ್ ಮನೆಯೊಳಗೆ ದ್ವೇಷ, ದ್ವೇಷಕ್ಕೆ ಪ್ರತಿಕಾರ ಇವೆಲ್ಲವೂ ಮುಂದುವರೆಯುತ್ತಾ? ಮುಂದುವರೆದರೆ ಏನಾಗುತ್ತಾ? ಬ್ರಹ್ಮಾಂಡ ಗುರೂಜಿ ಇದನ್ನೆಲ್ಲ ಹತೋಟಿಗೆ ತರುತ್ತಾರಾ? ಅನ್ನೋ ಕುತೂಹಲವಂತೂ ವೀಕ್ಷಕರಲ್ಲಿದೆ.
ಸದ್ಯ ಬಿಗ್ ಬಾಸ್ ಮನೆಯಲ್ಲಿ 'ಗಜಕೇಸರಿ' ಮತ್ತು 'ಸಂಪತ್ತಿಗೆ ಸವಾಲ್' ಎಂದು ಎರಡು ತಂಡಗಳನ್ನಾಗಿ ವಿಂಗಡಿಸಲಾಗಿದೆ. 'ಗಜಕೇಸರಿ' ಟೀಮ್‌ನಲ್ಲಿ ವಿನಯ್, ನಮ್ರತಾ, ಸಂಗೀತಾ, ಸ್ನೇಹಿತ್, ಸಿರಿ, ಡ್ರೋನ್ ಪ್ರತಾಪ್ ಇದ್ದಾರೆ. 'ಸಂಪತ್ತಿಗೆ ಸವಾಲ್' ಟೀಮ್‌ನಲ್ಲಿ ಮೈಕಲ್, ನೀತು, ತನಿಷಾ, ವರ್ತೂರು, ಕಾರ್ತಿಕ್ ಮತ್ತು ತುಕಾಲಿ ಸಂತೋಷ್ ಇದ್ದಾರೆ. ಇವರಿಬ್ಬರ ಬಗ್ಗೆ ಸರಿಯಾಗಿಯೇ ಜಟಾಪಟಿ ನಡೆಯುತ್ತಿದೆ.
ಇತ್ತೀಚೆಗೆ ನಾಮಿನೇಷನ್ ಪ್ರಕ್ರಿಯೆ ಬಂದಾಗ ಸಂಗೀತಾ ಹಾಗೂ ನಮ್ರತಾ ಇಬ್ಬರೂ ತನಿಷಾರನ್ನು ನಾಮಿನೇಟ್ ಮಾಡಿದ್ದರು. ಅದಕ್ಕೆ ವಿರುದ್ಧವಾಗಿ ತನಿಷಾ ಕೂಡ ಸಂಗೀತಾರನ್ನು ನಾಮಿನೇಟ್ ಮಾಡಿದ್ದರು. ಇತ್ತ ನಾಮಿನೇಷನ್ ಟಾಸ್ಕ್‌ನಲ್ಲಿ ಸಂಗೀತಾ, ಕಾರ್ತಿಕ್‌ಗೇ ನಾಮಿನೇಷನ್ ಮಾಡಲು ಅಧಿಕಾರ ಕೊಟ್ಟಿದ್ರು. ಹಾಗೆಯೇ ಕಾರ್ತಿಕ್ ಕೂಡ ಸಂಗೀತಾಗೆ ನಾಮಿನೇಷನ್ ಅಧಿಕಾರ ಕೊಟ್ಟಿದ್ರು. ಈ ಸ್ನೇಹಿತರ ದ್ವೇಷ ಇನ್ನೆಷ್ಟು ದಿನ ಮುಂದುವರೆಯುತ್ತೋ? ಕಾದು ನೋಡಬೇಕು.


Click it and Unblock the Notifications











