Namratha: ‘ಶಾಡೋ’, ‘ಚಮಚ’ ಪದಗಳನ್ನೇ ಕೇಳುತ್ತಿದ್ದ ನಮ್ರತಾ ಬಿಗ್‌ಬಾಸ್ ಜರ್ನಿ ಹೇಗಿತ್ತು?
ಬಿಗ್‌ಬಾಸ್ ಮುಗಿಯುವುದಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದೆ ಅನ್ನುವಾಗ ನಮ್ರತಾ ಎಲಿಮಿನೇಟ್ ಆಗಿದ್ದರು. ಬಿಗ್ ಬಾಸ್ ಫಿನಾಲೆಗೆ ತಲುಪುವ ಸರ್ಧಿಗಳ ಲಿಸ್ಟ್‌ನಲ್ಲಿ ತಾನೂ ಇರಬಹುದು ಅಂದುಕೊಂಡಿದ್ದ ನಮ್ರತಾಗೆ ನಿರಾಸೆ ಆಗಿದ್ದಂತೂ ನಿಜ. ಆದರೆ, 15 ವಾರಗಳ ಬಿಗ್ ಬಾಸ್ ಜರ್ನಿ ನಮ್ರತಾ ಸಾಮರ್ಥ್ಯವೇನು ಅನ್ನೋದನ್ನು ಹೇಳಿದೆ.
ಬಿಗ್‌ಬಾಸ್ ವೇದಿಕೆಗೆ "ಡೊಂಟ್ ಯು ನೋ... ಐ ಆಮ್ ವೆರಿ ಸೆಕ್ಸಿ" ಎಂದು ಹಾಡುತ್ತ ಎಂಟ್ರಿ ಕೊಟ್ಟಿದ್ದರು. ಅಲ್ಲಿಂದ ಎಲಿಮಿನೇಟ್ ಆಗೋವರೆಗೂ ತನ್ನ ಸೌಂದರ್ಯ, ಆತ್ಮವಿಶ್ವಾಸ ಮತ್ತು ಕೋಪದಿಂದಲೇ ತಮ್ಮ ಅಭಿಮಾನಿಗಳ ಮನಸ್ಸು ಗೆದ್ದಿದ್ದರು. ಬಿಗ್ ಬಾಸ್ ಎಂಟ್ರಿ ವೇಳೆ ಪ್ರೀಮಿಯರ್ ವೇದಿಕೆಯಲ್ಲಿ ಶೇ.80ರಷ್ಟು ಮತಗಳು ಬಂದಿದ್ದು, ಸೀಸನ್ 10ರ ಮೊದಲ ಸ್ಪರ್ಧಿಯಾಗಿ ಬಿಗ್‌ಬಾಸ್ ಮನೆಯೊಳಗೆ ಪ್ರವೇಶ ಮಾಡಿದ್ದರು.

ಬಿಗ್‌ಬಾಸ್ ಮನೆಯೊಳಗೆ 'ಶಾಡೋ', 'ಚಮಚ', 'ಇನ್‌ಪ್ಲ್ಯೂಯೆನ್ಸ್ ಆಗೋರು' ಅಂತ ಪದೇ ಪದೇ ಇಂಥ ಮಾತುಗಳನ್ನು ನಮ್ರತಾ ಕೇಳುತ್ತಲೇ ಬಂದಿದ್ದರು. ಈ ಸೀಸನ್‌ನಲ್ಲಿ ಹಲವು ಏಳುಬೀಳುಗಳನ್ನು ಕಂಡು ಅಂತಿಮ ಹಂತಕ್ಕೆ ಒಂದೇ ಹೆಜ್ಜೆ ಉಳಿದಿರುವಾಗ ಮನೆಯಿಂದ ಹೊರಬಿದ್ದಿದ್ದಾರೆ. ನಮ್ರತಾ ಅವರ 15 ವಾರಗಳ ಜರ್ನಿಯನ್ನು Jio Cinemaದಲ್ಲಿ ಸ್ಟ್ರೀಮಿಂಗ್ ಮಾಡಲಾಗುತ್ತಿದೆ. ಅದರ ಝಲಕ್ ಇಲ್ಲಿದೆ.
ಜಿಯೊ ಸಿನಿಮಾದಲ್ಲಿ ನಮ್ರತಾ ಹೆಜ್ಜೆ ಗುರುತು
ಜಿಯೊ ಸಿನಿಮಾ ಫನ್ ಫ್ರೈಡೆ ಟಾಸ್ಕ್‌ಗಳಲ್ಲಿ ನಮ್ರತಾ ಕೊಡುಗೆ ದೊಡ್ಡದಿದೆ. ಅದರಲ್ಲೂ 'ಹೂಂ ಅಂತಿಯಾ ಊಹೂಂ ಅಂತಿಯಾ' ಟಾಸ್ಕ್‌ನಲ್ಲಿ ಆನೆಗೆ ನಿಖರವಾಗಿ ಬಾಲ ಬಿಡಿಸಿ ಗಮನ ಸೆಳೆದಿದ್ದರು. ಗೇಮ್ ಆಡುವುದು, ಜೊತೆಗೆ ಆಡುವ ಆಟಗಾರರಿಗೆ ಪ್ರೋತ್ಸಾಹಿಸುವುದು ಈ ಎರಡರಲ್ಲಿಯೂ ನಮ್ರತಾ ಮುಂದು. 'ಹುಡುಕಿ ತಂದವರೇ ಮಹಾಶೂರ' ಟಾಸ್ಕ್‌ನಲ್ಲಿ ನಮ್ರತಾ ತೋರಿದ ಚಾಕಚಕ್ಯತೆ ಅವರ ತಂಡಕ್ಕೆ ದೊಡ್ಡ ಬಲ ಕೊಟ್ಟಿತ್ತು.
ತನಿಷಾ ಜೊತೆಗೆ ಮಾತಿನ ಚಕಮಕಿ
ಆರಂಭದ ದಿನಗಳಲ್ಲಿ ನಮ್ರತಾ, ವಿನಯ್ ಹಾಗೂ ಇಶಾನಿ ಜೊತೆ ಆತ್ಮೀಯರಾಗಿದ್ದರು. ಅದರಲ್ಲಿಯೂ ವಿನಯ್ ಜೊತೆ ಉತ್ತಮ ಬಾಂಧವ್ಯ ಕೊನೆಯ ದಿನದವರೆಗೂ ಇತ್ತು. ಕ್ರಿಕೆಟ್ ಟಾಸ್ಕ್‌ನಲ್ಲಿ ತನಿಷಾ ಜೊತೆಗೆ ಮಾತಿನ ಚಕಮಕಿ ನಡೆದಿತ್ತು. ಹಾಗೆಯೇ 'ಹಳ್ಳಿಮನೆ' ಟಾಸ್ಕ್‌ನಲ್ಲಿಯೂ ತನಿಷಾ ಜೊತೆಗೆ ನಮ್ರತಾ ಕ್ಲ್ಯಾಶ್ ಜೋರಾಗಿಯೇ ನಡೆದಿತ್ತು. ಈ ಚಕಮಕಿ ಬೆಂಕಿಯಾಗಿ ಹೊತ್ತಿಕೊಂಡು ಮನೆಯ ನೆಮ್ಮದಿಯನ್ನೇ ಕೆಡಿಸಿದ್ದಷ್ಟೇ ಅಲ್ಲದೆ, ಬಿಗ್‌ಬಾಸ್ ಮನೆಯ ಹೊರಗೂ ಚರ್ಚೆಯಾಗಿತ್ತು.

ಸ್ನೇಹಿತ್ ಜೊತೆ ಬಾಂಧವ್ಯ
ನಮ್ರತಾ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ನಂತರ ಹೋಗಿದ್ದು ಸ್ನೇಹಿತ್. ಎಲ್ಲರಿಗಿಂತ ಮೊದಲು ಮೀಟ್ ಆಗಿದ್ದರಿಂದ ಇಬ್ಬರ ನಡುವೆ ಉತ್ತಮ ಬಾಂಧವ್ಯ ಬೆಳೆದಿತ್ತು. ಅದರಲ್ಲಿಯೂ ಸ್ನೇಹಿತ್ "ನಿಮ್ಮ ಬಗ್ಗೆ ನನಗೆ ಸೀರಿಯಸ್ ಆಗಿ ಒಲವಿದೆ" ಎಂಬರ್ಥದಲ್ಲಿ ಹೇಳಿದ್ದರು. ಆದರೆ, ನಮ್ರತಾ ಮಾತ್ರ ಅವರನ್ನು ತಮಾಷೆಯಾಗಿಯೇ ನೋಡುತ್ತ, ಅವರ ಮಾತಿಗೆಲ್ಲ ನಗುನಗುತ್ತಲೇ ಹಾರಿಕೆಯ ಉತ್ತರ ನೀಡುತ್ತಿದ್ದದ್ದು ಎಂಟರ್‌ಟೈನಿಂಗ್ ಆಗಿತ್ತು. ಆದರೆ ಸ್ನೇಹಿತ್ ಎಲಿಮಿನೇಟ್ ಆಗುವ ಸುದ್ದಿ ಕೇಳುತ್ತಿದ್ದ ಹಾಗೆಯೇ ನಮ್ರತಾ ಬಿಕ್ಕಿ ಬಿಕ್ಕಿ ಅತ್ತಿದ್ದರು.
ಪ್ರತಾಪ್ ಜೊತೆಗಿನ ಬಾಂಧವ್ಯ
ಪ್ರತಾಪ್ ಹಾಗೂ ನಮ್ರತಾ ಬಾಂಧವ್ಯ ಗಮನಿಸಬೇಕಾದದ್ದು. ಆರಂಭದಲ್ಲಿ ಪ್ರತಾಪ್ ಮನೆಯ ಸದಸ್ಯರ ಮಾತಿಗೆ ಕುಗ್ಗಿ ಹೋಗಿದ್ದರು. ಬಾತ್‌ರೂಮಿಗೆ ಹೋಗಿ ಅಳುವಾಗ ಅವರ ಜೊತೆಗೆ ನಿಂತಿದ್ದು ನಮ್ರತಾ. ಕೆಲವು ಸಂದರ್ಭಗಳಲ್ಲಿ ಪ್ರತಾಪ್‌ಗೆ ಡಾನ್ಸ್ ಕಲಿಸಿ, ವೀಕೆಂಡ್‌ನಲ್ಲಿ ಸುದೀಪ್ ಎದುರು ಪ್ರತಾಪ್ ಡಾನ್ಸ್ ಮಾಡಿ ಮೆಚ್ಚುಗೆ ಗಳಿಸಿದಾಗ ಖುಷಿಪಟ್ಟಿದ್ದೂ ಇದೆ. ಆದರೆ, ಆಗಾಗ ಪ್ರತಾಪ್ ಮೇಲೆ ಮುನಿಸಿಕೊಂಡಿದ್ದೂ ಇದೆ.
ಕ್ಯಾಪ್ಟನ್ಸಿ ಟೆಸ್ಟ್!
ಮನೆಯ ಕ್ಯಾಪ್ಟನ್ ಆಗಬೇಕು ಎಂಬ ನಮ್ರತಾ ಅವರ ಆಸೆ ಹಲವು ಬಾರಿ ನನಸಾಗುವ ಹಂತಕ್ಕೆ ಬಂದು ಕನಸಾಗಿಯೇ ಉಳಿದುಕೊಂಡಿತ್ತು. ಆ ಸಂದರ್ಭಗಳಲ್ಲಿ ನಮ್ರತಾ ಕೂತು ಅತ್ತಿದ್ದೂ ಇದೆ. ಕೊನೆಗೂ ಕ್ಯಾಪ್ಟನ್ ಆಗಬೇಕು ಅನ್ನೋ ಆಸೆ ಈಡೇರಿತ್ತು. ಯಾರ ಮೇಲೆಯೂ ಅಧಿಕಾರ ಚಲಾಯಿಸದೆ, ಕೂಲ್ ಆಗಿ ಎಲ್ಲರನ್ನೂ ಸಂಭಾಳಿಸಿದ್ದು ವಿಶೇಷ.
ಕಾರ್ತಿಕ್ ಜೊತೆ ಸಿಹಿ-ಕಹಿ ಒಡನಾಟ
ಸ್ನೇಹಿತ್ ಹೊರ ಹೋದ್ಮೇಲೆ ಅವಿನಾಶ್ ಶೆಟ್ಟಿ ಎಂಟ್ರಿ ಆಗಿತ್ತು. ನಮ್ರತಾ ಜೊತೆಗೆ ಸಲಿಗೆಯಿಂದಿರಲು ಅವಿನಾಶ್ ಪ್ರಯತ್ನ ಪಟ್ಟಿದ್ದರು. ಆದರೆ, ನಮ್ರತಾ ಮಾತ್ರ ಅವಿನಾಶ್ ಕಡೆಗೆ ಗಮನ ಹರಿಸಿರಲಿಲ್ಲ. ಆದರೆ ಕೊನೆಯ ಕೆಲವು ವಾರಗಳಲ್ಲಿ ನಮ್ರತಾ ಮತ್ತು ಕಾರ್ತಿಕ್ ನಡುವಿನ ಸಂಬಂಧ ಸಾಕಷ್ಟು ಚರ್ಚೆಗೆ ಒಳಗಾಗಿತ್ತು.
ಕಾರ್ತಿಕ್, ನಮ್ರತಾ ಜೊತೆಗೆ ಫ್ಲರ್ಟ್ ಮಾಡುವಂತೆ ನಡೆದುಕೊಳ್ಳುತ್ತಿದ್ದದ್ದು, ನಮ್ರತಾ ಅದನ್ನು ಸೀರಿಯಸ್ ಆಗಿ ತೆಗೆದುಕೊಂಡಂತೆ ನಟಿಸುತ್ತಿದ್ದದ್ದು ಮನರಂಜನೆಯ ದೃಷ್ಟಿಯಿಂದ ಸಾಕಷ್ಟು ಮಜ ಕೊಟ್ಟಿದ್ದಂತೂ ನಿಜ. ಹದಿನೈದು ವಾರಗಳ ಕಾಲ ಮನೆಯೊಳಗೆ ನಮ್ರತಾ ಆಟಕ್ಕೆ, ನಡೆದುಕೊಂಡ ರೀತಿಗೆ ಮತ್ತಷ್ಟು ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಅವರ ಅದ್ಭುತ ಪಯಣವನ್ನು ಜಿಯೊ ಸಿನಿಮಾದಲ್ಲಿ ಉಚಿತವಾಗಿ ನೋಡಬಹುದು.


Click it and Unblock the Notifications











