BBK 10: ನಮ್ರತಾ ಕೋಪ ಆರಿಲ್ಲ.. ವಿನಯ್ ಆಟ ನಿಂತಿಲ್ಲ.. ಪ್ರತಾಪ್ ಜೈಲು ಸೇರಿದ್ದಾಯ್ತು ಮುಂದೇನು?

ಬಿಗ್‌ಬಾಸ್ ಮನೆಯೊಳಗೆ ಸದಸ್ಯರು 50 ದಿನಗಳನ್ನು ಪೂರೈಸಿ ಮುನ್ನುಗ್ಗುತ್ತಿದ್ದಾರೆ. ಅದೆಂತಹದ್ದೇ ಟಾಸ್ಕ್ ಕೊಟ್ಟರೂ ಸ್ಪರ್ಧಿಗಳು ಕಾಂಪಿಟೇಷನ್‌ಗೆ ಬಿದ್ದು ಭಾಗವಹಿಸುತ್ತಿದ್ದಾರೆ. ತಮ್ಮ ತಂಡ ಗೆಲ್ಲಲೇ ಬೇಕು ಅಂತ ಪಣ ತೊಟ್ಟು ನಿಂತಿದ್ದಾರೆ.

ಎಲ್ಲಕ್ಕಿಂತ ಹೆಚ್ಚಾಗಿ ವಾರದ ಕೊನೆಯಲ್ಲಿ ನಡೆಯುವ ಎಲಿಮಿನೇಷನ್‌ನಿಂದ ತಪ್ಪಿಸಿಕೊಳ್ಳಲು ತಮ್ಮದೇ ರೀತಿಯಲ್ಲಿ ರಣತಂತ್ರ ಹೂಡುತ್ತಿದ್ದಾರೆ. ಬಿಗ್ ಬಾಸ್ ಸದಸ್ಯರ ಪೈಕಿ ಡ್ರೋನ್ ಪ್ರತಾಪ್ ಕೂಡ ಬಿಗ್ ಬಾಸ್ ಗೆಲ್ಲುವ ಸ್ಪರ್ಧಿಗಳಲ್ಲಿ ಪ್ರಮುಖರು ಎನಿಸಿದ್ದಾರೆ.

ಆದರೆ, ಈ ವಾರ ಡ್ರೋನ್ ಪ್ರತಾಪ್ ತೆಗೆದುಕೊಂಡ ಕೆಲವು ನಿರ್ಧಾರಗಳು ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಂತೂ ನಿಜ. ಅದಕ್ಕೆ ಬಿಗ್ ಬಾಸ್ ಮನೆ ಮಂದಿಯೆಲ್ಲ ಡ್ರೋನ್ ಪ್ರತಾಪ್‌ಗೆ ಕಳಪೆ ಅನ್ನೋ ಪಟ್ಟ ಕೊಟ್ಟಿದ್ದಾರೆ. ಡ್ರೋನ್ ಬಗ್ಗೆ ಸದ್ಯ ಮನೆಯವರ ಪರಿಸ್ಥಿತಿ ಏನೇನಿದೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.

Bigg Boss Kannada 10 Namratha, Vinay, Varthur Santhosh named Drone Prathap Kalape

ಡ್ರೋನ್ ಪ್ರತಾಪ್‌ಗೆ ಕಳಪೆ ಪಟ್ಟ!

'ಮಣ್ಣಿನ ಮಕ್ಕಳು' ತಂಡದ ನಾಯಕತ್ವವನ್ನು ಡ್ರೋನ್ ಪ್ರತಾಪ್ ವಹಿಸಿಕೊಂಡಿದ್ದರು. ಈ ವಾರ ಬಿಗ್ ಬಾಸ್ ನೀಡಿದ ಎಲ್ಲಾ ಟಾಸ್ಕ್‌ಗಳಲ್ಲಿಯೂ 'ಮಣ್ಣಿನ ಮಕ್ಕಳು' ತಂಡ ಸೋತಿದೆ. ಹೀಗಾಗಿ ಡ್ರೋನ್ ಪ್ರತಾಪ್ ವಿರುದ್ಧ ಅವರ ತಂಡದ ಸದಸ್ಯರೇ ಆಕ್ರೋಶ ಹೊರ ಹಾಕಿದ್ದರು.

ಡ್ರೋನ್ ಪ್ರತಾಪ್‌ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಎಡವಿದ್ದಾರೆ. ಅವರ ಕೆಲವು ನಿರ್ಧಾರಗಳಿಂದಲೇ 'ಮಣ್ಣಿನ ಮಕ್ಕಳು' ತಂಡ ಸೋತಿದೆ ಎಂದು ಸದಸ್ಯರು ಆರೋಪಿಸಿ, ಡ್ರೋನ್ ಪ್ರತಾಪ್‌ಗೆ ಕಳಪೆ ಪಟ್ಟ ಕೊಟ್ಟಿದ್ದಾರೆ.

ಪ್ರತಾಪ್ ಜೈಲು ಪಾಲು

ಕಳಪೆ ನಾಯಕತ್ವದ ಪರಿಣಾಮ ಡ್ರೋನ್ ಪ್ರತಾಪ್ ಜೈಲು ಸೇರಬೇಕಾಗಿ ಬಂದಿದೆ. ಇಂದು (ಡಿಸೆಂಬರ್ 1) ಬೆಳಗ್ಗೆ ಜಿಯೋ ಸಿನಿಮಾ ರಿಲೀಸ್ ಮಾಡಿರೋ ಪ್ರೋಮೊದಲ್ಲಿ ಡ್ರೋನ್ ಪ್ರತಾಪ್‌ ಜೈಲು ಡ್ರೆಸ್‌ನಲ್ಲಿ ಸೆರೆಮನೆ ಸೇರುತ್ತಿರುವ ದೃಶ್ಯ ರಿವೀಲ್ ಆಗಿದೆ. ವಾರದ ಕೊನೆಗೆ ಕಳಪೆ ಯಾರು? ಉತ್ತಮ ಯಾರು? ಎಂಬುದನ್ನು ಆಯ್ಕೆ ಮಾಡಿಕೊಳ್ಳುವ ಸಂದರ್ಭದಲ್ಲಿ ಎರಡೂ ತಂಡದ ಸದಸ್ಯರು ಕೂಡ ಡ್ರೋನ್ ಪ್ರತಾಪ್ ಹೆಸರನ್ನು ಸೂಚಿಸಿದ್ದಾರೆ. ನಮ್ರತಾ, ವಿನಯ್, ತನಿಷಾ ಒಬ್ಬೊಬ್ಬ ಸದಸ್ಯರು ಯಾಕೆ ಅನ್ನೋದನ್ನು ಬಿಡಿಸಿ ಹೇಳಿದ್ದಾರೆ.

Bigg Boss Kannada 10 Namratha, Vinay, Varthur Santhosh named Drone Prathap Kalape

"ನನ್ನನ್ನು ಕ್ಯಾಪ್ಟನ್ಸಿ ಟಾಸ್ಕ್‌ನಿಂದ ಹೊರಗಿಟ್ಟಿದ್ದು ಬೇಜಾರಾಯ್ತು" ಎಂದು ನಮ್ರತಾ ಕಾರಣ ಕೊಟ್ಟಿದ್ದಾರೆ. ಅದೇ "ಕಾರ್ತಿಕ್ ಅವರಂಥ ಆಟಗಾರನನ್ನು ಹೊರಗಿಟ್ಟಿದ್ದರಿಂದ ತಂಡ ವಾರದ ಎಲ್ಲ ಟಾಸ್ಕ್‌ಗಳಲ್ಲಿಯೂ ಸೋಲುವಂತಾಯ್ತು" ಎಂದು ವಿನಯ್ ಕಾರಣ ನೀಡಿದ್ದಾರೆ. "ಎಲ್ಲೋ ಒಂದು ಕಡೆ ಕೋಪದಿಂದ ಮಾತಾಡ್ತಾರೆ ಎಂದು ಈ ವಾರನೂ ಅಗ್ರೆಶನ್‌ನಲ್ಲಿಯೇ ಆಡ್ತಾರೆ ಅಂದುಕೊಳ್ಳುವುದು ಸರಿಯಲ್ಲ" ಎಂದು ಕಾರ್ತಿಕ್ ಪರ ತನಿಷಾ ನಿಂತಿದ್ದಾರೆ.

ವರ್ತೂರು, ಸ್ನೇಹಿತ್‌ ಬಾಯಲ್ಲೂ ಪ್ರತಾಪ್ ಹೆಸರು

ಬಿಗ್ ಬಾಸ್ ಮನೆಯ ಸದಸ್ಯರ ನಿರ್ಧಾರಕ್ಕೆ ಗೌರವ ಕೊಟ್ಟು ಡ್ರೋನ್ ಪ್ರತಾಪ್ ಜೈಲಿನ ಉಡುಗೆ ತೊಟ್ಟಿದ್ದಾರೆ. ಆದರೆ, ಬಿಗ್ ಬಾಸ್ ಮನೆಯವರ ನಿರ್ಧಾರ ತನ ಸಮ್ಮತಿ ಇಲ್ಲವೆಂದು ಕಾನ್ಫಿಡೆಂಟ್ ಆಗಿ ಹೇಳಿದ್ದಾರೆ. "ನನ್ನ ಪ್ರಕಾರ ನಾನು ತೆಗೆದುಕೊಂಡ ನಿರ್ಧಾರಗಳು ಸರಿ ಇತ್ತು. ಎಲ್ಲರೂ ಸೇರಿ ನನಗೆ ಕಳಪೆ ಕೊಟ್ಟಿದ್ದು ಬೇಜಾರಾಗಿದೆ. ಇದಕ್ಕೆ ನನಗೆ ಸಮ್ಮತಿ ಇಲ್ಲ" ಎಂದು ಡ್ರೋನ್ ಪ್ರತಾಪ್ ಜೈಲಿನೊಳಗೆ ಹೋಗಿದ್ದಾರೆ.

ಡ್ರೋನ್ ಪ್ರತಾಪ್‌ಗೇನು ಈ ವಾರ ಕಳಪೆ ಪಟ್ಟ ಸಿಕ್ಕಿದೆ. ಹಾಗಿದ್ಮೇಲೆ ಉತ್ತಮ ಅನ್ನೋ ಪಟ್ಟ ಯಾರಿಗೆ ಬಂದಿದೆ? ಕ್ಯಾಪ್ಟನ್ಸಿ ರೇಸ್‌ನಲ್ಲಿ ಗೆದವರು ಯಾರು? ಈ ವಾರ ಎಲಿಮಿನೇಷನ್‌ ಯಾರಾಗಬಹುದು ಅನ್ನೋದು ಸದ್ಯಕ್ಕೆ ಕುತೂಹಲ ಕೆರಳಿಸಿದೆ.

More from Filmibeat

English summary
Bigg Boss Kannada 10: Drone Prathap sent to Jail|
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X