"ಪ್ರತಾಪ್ ಇನ್ನು ಚಿಕ್ಕ ಹುಡುಗ.. ಏನೇ ಮಾಡಿದ್ರೂ ಹಾಗೆ ಅನಿಸುತ್ತಿತ್ತು."; ಇನ್ನೂ ಮುಗಿದಿಲ್ಲ ವಿನಯ್-ಪ್ರತಾಪ್ ಸಮರ

ಬಿಗ್‌ಬಾಸ್ ಕನ್ನಡ ಸೀಸನ್ 10ಕ್ಕೆ ಅದ್ಧೂರಿ ತೆರೆಬಿದ್ದಿದೆ. ಇದೇ ಮೊದಲ ಬಾರಿಗೆ ಫಿನಾಲೆಯಲ್ಲಿ ಆರು ಮಂದಿ ಸ್ಪರ್ಧಿಗಳಿದ್ದರು. ಅವರಲ್ಲಿ ವಿನಯ್ ಗೌಡ ಕೂಡ ಒಬ್ಬರು. ಸೀಸನ್ 10ರಲ್ಲಿ ಗೆಲ್ಲುವ ಸ್ಪರ್ಧಿಗಳ ಪಟ್ಟಿಯಲ್ಲಿ ಇವರ ಹೆಸರು ಕೂಡ ಇತ್ತು. ವಿನಯ್ ಬಿಗ್‌ಬಾಸ್ ಟೈಟಲ್ ವಿನ್ ಆಗಬಹುದು. ಇಲ್ಲವೇ ರನ್ನರ್‌ ಅಪ್ ಆಗಬಹುದು ಅಂತ ಗೆಸ್ ಮಾಡಲಾಗಿತ್ತು. ಅದೆಲ್ಲವೂ ಈಗ ಉಲ್ಟಾ ಆಗಿತ್ತು.

ವಿನಯ್ ಗೌಡ ಮೂರನೇ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಯ್ತು. ವೋಟಿಂಗ್ ಆಧಾರದ ಮೇಲೆ ಬಿಗ್ ಬಾಸ್ ಫಿನಾಲೆಯಲ್ಲಿ ವಿನಯ್ ಗೌಡ ಎವಿಕ್ಟ್ ಆಗಿದ್ದರು. ಇದು ಅವರ ಅಭಿಮಾನಿಗಳಿಗೆ ದೊಡ್ಡ ಮಟ್ಟಕ್ಕೆ ಶಾಕ್ ಆಗಿದ್ದಂತೂ ನಿಜ. ಇದರ ಜೊತೆನೇ ವಿನಯ್ ಹಾಗೂ ಪ್ರತಾಪ್ ವೈರತ್ವ ಕೂಡ ಅಷ್ಟೇ ಗಮನ ಸೆಳೆದಿತ್ತು.

Bigg Boss Kannada 10 Prathap is still a small kid said Vinay Gowda

ಬಿಗ್‌ಬಾಸ್ ಮುಗಿದು ಮನೆಯಿಂದ ಹೊರಬಂದಿದ್ದರೂ ಪ್ರತಾಪ್ ಮೇಲೆ ವಿನಯ್ ಗೌಡ ಕೋಪ ಕಮ್ಮಿ ಆದಂತೆ ಇಲ್ಲ. ಫಿಲ್ಮಿಬೀಟ್ ಕನ್ನಡ ಜೊತೆಗಿನ ಸಂದರ್ಶನದಲ್ಲಿ ವಿನಯ್ ಗೌಡ ಲೈಟ್ ಆಗಿ ಪ್ರತಾಪ್‌ಗೆ ಟಾಂಗ್ ಕೊಟ್ಟಿದ್ದಾರೆ. ಅದೇನು ಅಂತ ತಿಳಿಯುವುದಕ್ಕೆ ಮುಂದೆ ಓದಿ.

ಸೀಸನ್ 10 ವಿನಯ್ ಅನ್ನಬೇಕು

ಬಿಗ್‌ಬಾಸ್ ಮನೆಗೆ ಟ್ರೋಫಿ ಗೆಲ್ಲಲೇ ಬೇಕು ಅಂತ ಹೋಗಿರಲಿಲ್ಲ. ಬಿಗ್‌ಬಾಸ್ ಸೀಸನ್ 10 ಅಂದರೆ, ಅದು ವಿನಯ್ ಅಂತಾಗಬೇಕು. ಅದಕ್ಕೆ ಹೋಗಿದ್ದೆ,ಬಿಗ್‌ಬಾಸ್‌ ಗೆಲ್ಲದೇ ಇದ್ದರೂ, ನನ್ನ ಗುರಿಯನ್ನು ಸಾಧಿಸಿದ್ದೇನೆ ಎಂದು ಹೇಳಿದ್ದಾರೆ. "ಬಿಗ್‌ಬಾಸ್ ಗೆಲ್ಲಲೇ ಬೇಕು ಅಂತ ಹೋದವನಲ್ಲ. ಪ್ರತಿಯೊಂದು ಸೀಸನ್ ಅಂತ ಬಂದಾಗ ಒಂದಿಷ್ಟು ಮುಖಗಳು ನೆನಪಿಗೆ ಬರುತ್ತವೆ. ಈ ಸೀಸನ್ ಅವರದ್ದು ಇವರದ್ದು ಅಂತ ನೆನಪಿಸಿಕೊಳ್ಳುತ್ತಾರೆ. ಸೀಸನ್ 10 ಅಂದರೆ, ವಿನಯ್ ಸೀಸನ್ ಅಂತಾಗಬೇಕು. ಅಷ್ಟೇ ನನಗೆ ಬೇಕಾಗಿರೋದು ಅನ್ನೋ ಮೈಂಡ್‌ ಸೆಟ್ ಇತ್ತು." ಎಂದಿದ್ದಾರೆ.

Bigg Boss Kannada 10 Prathap is still a small kid said Vinay Gowda

ಪ್ರತಾಪ್ ಟಾಪ್ 2ನಲ್ಲಿ ಇರ್ತಾರೆ ಅಂದ್ಕೊಂಡಿರಲಿಲ್ಲ

ಡ್ರೋನ್ ಪ್ರತಾಪ್ ಟಾಪ್ 2ಗೆ ಬಂದಿದ್ದು ವಿನಯ್‌ಗೆ ಅಚ್ಚರಿ ಹುಟ್ಟಿಸಿದೆ. ಇನ್ನೂ ಪ್ರತಾಪ್ ಟಾಪ್ 2 ಅನ್ನೋದನ್ನು ಊಹಿಸಿಕೊಳ್ಳುವುದಕ್ಕೆ ಪ್ರತಾಪ್‌ಗೆ ಆಗುತ್ತಿಲ್ಲ. "ಡ್ರೋನ್ ಪ್ರತಾಪ್ ಟಾಪ್ 2ನಲ್ಲಿ ಇರುತ್ತಾರೆ ಅಂತ ಅಂದ್ಕೊಂಡಿರಲಿಲ್ಲ. ಆದರೆ, ವೋಟ್ ಮಾಡಿರೋರು ನಮ್ಮ ಜನರೇ.. ನನ್ನ ಫ್ಯಾನ್ ಫಾಲೋವರ್ಸ್ ಅಥವಾ ಅಭಿಮಾನಿಗಳು ಅಂತೇನಿದ್ದಾರೆ, ಅವರು ನನ್ನ ಕ್ಯಾರೆಕ್ಟರ್‌ಗೆ ಕನೆಕ್ಟ್ ಅಗುವವರು. ಆತರ ಕ್ಯಾರೆಕ್ಟರಿಸ್ಟಿಕ್ ಇರೋದು ತುಂಬಾ ಕಡಿಮೆ ಜನ ಇದ್ದಾರೆ. ನನಗೆ ಅಷ್ಟೇ ಜನ ಸಾಕು." ಎಂದು ವಿನಯ್ ಹೇಳಿದ್ದಾರೆ.

ಪ್ರತಾಪ್ ಇನ್ನೂ ಚಿಕ್ಕ ಹುಡುಗ

ಡ್ರೋನ್ ಪ್ರತಾಪ್ ಬಗ್ಗೆ ವಿನಯ್ ಫಿಲ್ಮಿಬೀಟ್ ಜೊತೆ ಓಪನ್ ಆಗಿ ಮಾತಾಡಿದ್ದಾರೆ. ಪ್ರತಾಪ್ ಒಳ್ಳೆಯ ಹುಡುಗ. ಅವರಿಗೆ ತುಂಬಾನೇ ಫ್ಯಾನ್ಸ್ ಇದ್ದಾರೆ ಅಂತ ಹೇಳಿದ್ದಾರೆ.
"ಪ್ರತಾಪ್ ತುಂಬಾ ಒಳ್ಳೆಯ ಹುಡುಗ. ಕರ್ನಾಟಕದಲ್ಲಿ ತುಂಬಾ ಜನರು ಫ್ಯಾನ್ಸ್ ಇದ್ದಾರೆ. ಅಲ್ಲಿವರೆಗೂ ಕರೆದುಕೊಂಡು ಬಂದಿದ್ದಾರೆ ಅಂದ್ರೆ ಜೆನ್ಯೂನ್ ಆಗಿರಬೇಕು." ಅನ್ನೋದನ್ನು ಒಪ್ಪಿಕೊಂಡಿದ್ದಾರೆ.

"ಪ್ರತಾಪ್ ಏನೇ ಮಾಡಿದ್ರೂ ಹಾಗೆ ಅನಿಸುತ್ತಿತ್ತು"

ಬಿಗ್‌ಬಾಸ್ ಮನೆಯೊಳಗೆ ಡ್ರೋನ್ ಪ್ರತಾಪ್ ಹಾಗೂ ವಿನಯ್ ನಡುವೆ ಸಾಕಷ್ಟು ವಾದ ವಿವಾದಗಳು ನಡೆದಿವೆ. ಆದರೆ, ಬಿಗ್‌ಬಾಸ್ ಮನೆಯಿಂದ ಹೊರಬಂದ್ಮೇಲೂ ಆ ವೈರತ್ವ ಮುಂದುವರೆದಿದೆ ಅನಿಸುತ್ತಿದೆ. "ಈ ಆನೆಗಳು ಓಡಾಡುವಾಗ ನೀವು ಗಾಡಿಗಳನ್ನು ನಿಲ್ಲಿಸಿ ನೋಡುತ್ತೀರ. ಇನ್ನೊಂದು ಕಡೆ ಚಿಕ್ಕ ಮಕ್ಕಳು ಬಂದು ಆನೆ ಆನೆ ಅಂತಾರೆ. ಆಗ ಅದು ಏನೂ ಪ್ರತಿಕ್ರಿಯೆ ನೀಡುವುದಿಲ್ಲ. ಅದರ ಪಾಡಿಗೆ ಅದು ಹೋಗುತ್ತೆ. ಪ್ರತಾಪ್ ಏನೇ ಮಾಡಿದ್ರೂ ನನಗೆ ಹಾಗೆ ಅನಿಸುತ್ತಿತ್ತು." ಎಂದು ಲೈಟ್ ಆಗಿ ಟಾಂಗ್ ಕೊಟ್ಟಿದ್ದಾರೆ.

More from Filmibeat

English summary
BBK 10: Vinay and Drone Prathap rivalry not over.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X