"ಹಾಲು ಕುಡಿಯುವಾಗ ಹೇ** ಎತ್ತುವ ಮಾತು ಆಡಬಾರದು ಅಷ್ಟೇ"; ವಿರೋಧಿಗಳಿಗೆ ವರ್ತೂರು ಸಂತೋಷ್ ತಿರುಗೇಟು!
ಬಿಗ್‌ಬಾಸ್ ಕನ್ನಡ ಸೀಸನ್ 10ನಲ್ಲಿ ಹೆಚ್ಚು ಜನಪ್ರಿಯತೆ ಗಳಿಸಿದ ಸ್ಪರ್ಧಿಗಳಲ್ಲಿ ವರ್ತೂರು ಸಂತೋಷ್ ಕೂಡ ಒಬ್ಬರು. ಬಿಗ್‌ಬಾಸ್ ಮನೆಯಿಂದ ಹೊರಬಂದ್ಮೇಲೆ ವರ್ತೂರು ಸಂತೋಷ್ ಅವರ ಅಭಿಮಾನಿಗಳೊಂದಿಗೆ ಬೆರೆಯುತ್ತಿದ್ದಾರೆ. ಬೇರೆ ನಗರಗಳಿಗೆ ಹೋಗಿ ಅಲ್ಲಿ ತಮ್ಮ ಬೆಂಬಲಿಗರನ್ನು ಭೇಟಿ ಮಾಡುತ್ತಿದ್ದಾರೆ.
ಅದೇ ಇನ್ನೊಂದು ಕಡೆ ವರ್ತೂರು ಸಂತೋಷ್ ವಿರುದ್ಧ ಹಲವು ಮಂದಿ ತಿರುಗಿಬಿದ್ದಿದ್ದಾರೆ. 'ಹಳ್ಳಿಕಾರ್ ಒಡೆಯ' ಅನ್ನುವ ಬಿರುದು ಕೊಟ್ಟಿದ್ದಕ್ಕೆ ಕೆಲ ರೈತರು ಕಿಡಿಕಾರಿದ್ದಾರೆ. ಅದೇ ಇನ್ನೊಂದು ಕಡೆ ಯಲಹಂಕ ಮಂಜು ಕೂಡ ವರ್ತೂರು ಸಂತೋಷ್ ವಿರುದ್ಧ ತಿರುಗಿಬಿದ್ದಿದ್ದಾರೆ. ಇತ್ತೀಚೆಗಷ್ಟೇ ಯೂಟ್ಯೂಬ್ ಚಾನೆಲ್ ಸಂದರ್ಶನದಲ್ಲಿ ವರ್ತೂರು ಸಂತೋಷ್‌ಗೆ ಸವಾಲೆಸೆದಿದ್ದರು.

ಇತ್ತೀಚೆಗೆ ವರ್ತೂರು ಸಂತೋಷ್ ಶ್ರೀನಿವಾಸಪುರಕ್ಕೆ ಭೇಟಿ ಕೊಟ್ಟಿದ್ದರು. ಆ ವೇಳೆ ವಿರೋಧಿಗಳ ಬಗ್ಗೆ ಪ್ರಶ್ನೆ ಮಾಡಿದ್ದರು. ಆ ವೇಳೆ ವರ್ತೂರು ಸಂತೋಷ್ ಕಿಡಿಕಾರಿದ್ದಾರೆ. ತಮ್ಮ ವಿರೋಧಿಗಳಿಗೆ ತಿರುಗೇಟು ಕೊಟ್ಟಿದ್ದಾರೆ. ಹಾಗೇ ರಾಜಕೀಯ ಹಾಗೂ ಸಿನಿಮಾ ಕ್ಷೇತ್ರದಕ್ಕೆ ಎಂಟ್ರಿ ಕೊಡುವ ಬಗ್ಗೆನೂ ಮಾತಾಡಿದ್ದಾರೆ. ವರ್ತೂರು ಸಂತೋಷ್ ಮಾತಿನ ಝಲಕ್ ಇಲ್ಲಿದೆ.
"ಬಾಹುಬಲಿ ಸಿನಿಮಾ ನೋಡಿದ್ದೀರಾ?"
ಪದೇ ಪದೆ ವರ್ತೂರು ಸಂತೋಷ್ ವಿರುದ್ಧ ಮಾತಾಡುತ್ತಿರುವವರ ಬಗ್ಗೆ ಶ್ರೀನಿವಾಸಪುರದಲ್ಲಿ ಪ್ರಶ್ನೆ ಮಾಡಲಾಗಿತ್ತು. ಆ ವೇಳೆ 'ಬಾಹುಬಲಿ' ಸಿನಿಮಾವನ್ನು ಉದಾಹರಣೆಯಾಗಿ ಕೊಟ್ಟು ಪ್ರತಿಕ್ರಿಯೆ ನೀಡಿದ್ದಾರೆ. "ಬಾಹುಬಲಿ ಸಿನಿಮಾ ನೋಡಿದ್ದೀರಾ? ಏನು ಅರ್ಥ ಆಯ್ತು? ಬಾಹುಬಲಿ ಪಿಕ್ಚರ್‌ನಲ್ಲಿ ಒಂದು ಪ್ರತಿಮೆ ನಿಲ್ಲಿಸುತ್ತಾರೆ. ಚಿನ್ನದ ಪ್ರತಿಮೆ. ಆದರೆ, ಕೂಗು ಅಂತ ಬಂದಾಗ ಹಿಂದೆ ತಿರುಗಿ ನೋಡಿದಾಗ, ಆಗ ಆಕಾಶದೆತ್ತರಕ್ಕೆ ಹೀರೊ ಕೂಗು ಇರುತ್ತೆ. ನಾನು ಏನು ಹೇಳುತ್ತೇನೆ ಅಂದರೆ, ಮನಸ್ಸಿನಿಂದ ಗೆದ್ದಿರೋದು.. ನನಗೆ ಟ್ರೋಫಿಯಾಗಲಿ, ಅವರು ಕೊಡುವ ಹಣವಾಗಲಿ, ನನಗೆ ಅದೇನು ಬೇಕಾಗಿರಲಿಲ್ಲ. ಬಿಗ್‌ಬಾಸ್ ವೇದಿಕೆಗೆ ಗೌರವವಿದೆ. ಇವತ್ತು ಕೋಟ್ಯಾಂತರ ಜನರ ಬಾಯಲ್ಲಿ ಜೈ ಹಳ್ಳಿಕಾರ್ ಅನ್ನೋದು ಬರುತ್ತಿದೆ. ಅಲ್ವಾ? ಜನರು ತೋರಿಸಿರುವ ಪ್ರೀತಿಗೆ ನಾನು ಚಿರಋಣಿ." ಎಂದಿದ್ದಾರೆ.

"ಗಂಜಲಾ ಎಲ್ಲಿಂದ ತರೋದು?"
ಇದೇ ವೇಳೆ ಬಿಗ್‌ಬಾಸ್ ಮನೆಯಲ್ಲಿ ಸುದೀಪ್ ಹೇಳಿದ ಮಾತನ್ನು ವರ್ತೂರು ಸಂತೋಷ್ ನೆನಪಿಸಿಕೊಂಡಿದ್ದಾರೆ. "ಆನಂದದಿಂದ ಇರುವಾಗ ಈ ವಿಷಯಗಳೆಲ್ಲ ಬೇಡ. ನಾನು ಅವರ ಬಗ್ಗೆ ಎಲ್ಲಾ ಮಾತಾಡಿದ್ಮೇಲೆ ಬಾಯಿ ತೊಳೆದುಕೊಳ್ಳುವುದಕ್ಕೆ ಗಂಜಲನಾ ಎಲ್ಲಿಂದ ಹುಡುಕುವುದು. ಸುದೀಪಣ್ಣ ಒಂದು ಮಾತು ಹೇಳಿದ್ರು. ನನ್ನ ಹೆಸರನ್ನು ಹೇಳಿಕೊಂಡು ಅವರ ಜೀವನ ನಡೀತಿದೆ ಅಂದ್ರೆ ನಡೀಲಿ ಬಿಡ್ರಿ ಎಂದಿದ್ರು. ಯಾರನ್ನು ಬಿಟ್ಟಿದ್ದಾರೆ? ಜೀವನದಲ್ಲಿ ಸಾಧನೆ ಅನ್ನೋ ಪದದ ಹತ್ತಿರಕ್ಕೆ ಹೋಗುವುದಕ್ಕೆ ಆಗದೇ ಇರೋರಿಗೆ ಅದೇ ಕೆಲಸ. " ಎಂದಿದ್ದಾರೆ.
"ನಾನು ರಾಜಕೀಯಕ್ಕೆ ಬರೋದಿಲ್ಲ"
ಇದೇ ಸಂದರ್ಭದಲ್ಲಿ ರಾಜಕೀಯಕ್ಕೂ ಬರೋದಿಲ್ಲ. ಸಿನಿಮಾಗೂ ಬರೋದಿಲ್ಲ ಅನ್ನೋದನ್ನು ವರ್ತೂರು ಸಂತೋಷ್ ಸ್ಪಷ್ಟಪಡಿಸಿದ್ದಾರೆ. "ನಾನು ಯಾವ ರಾಜಕೀಯಕ್ಕೂ ಬರಲ್ಲ. ರೈತನ ಮಗನಾಗಿರುವುದಕ್ಕೆ ನನಗೆ ವೋಟ್ ಹಾಕಿದ್ದೀರ. ರೈತನ ಮಗನಾಗೇ ಇರುತ್ತೇನೆ. ರೈತನ ಮಗನಾಗಿಯೇ ಸಾಯುತ್ತೇನೆ. ದಯವಿಟ್ಟು ಇನ್ಮುಂದೆ ರಾಜಕೀಯದ ಬಗ್ಗೆ ಪ್ರಶ್ನೆಗಳನ್ನು ಕೇಳಬೇಡಿ. " ಎಂದು ವರ್ತೂರು ಸಂತೋಷ್ ಹೇಳಿದ್ದಾರೆ.
ಹಾಲು ಕುಡಿಯುವಾಗ ಹೇ... ಎತ್ತುವ ಮಾತ್ತೇಕೆ?
ಇಷ್ಟು ದಿನ ಯಾರೆಲ್ಲ ವರ್ತೂರು ಸಂತೋಷ್ ವಿರುದ್ಧ ಮಾತಾಡುತ್ತಿದ್ದಾರೋ ಅವರಿಗೆಲ್ಲ ತಮ್ಮದೇ ಸ್ಟೈಲ್‌ನಲ್ಲಿ ತಿರುಗೇಟು ಕೊಟ್ಟಿದ್ದಾರೆ. "ನಾನು ನಿಮಗೆಲ್ಲ ಹೇಳುವುದು ಒಂದೇ.. ಹಾಲು ಕುಡಿಯುವಾಗ ಹೇ... ಎತ್ತುವ ಮಾತು ಆಡಬಾರದು ಅಷ್ಟೇ.. ಸರಿ ತಾನೇ.. ಬೇಡ ಅಂದ್ಮೇಲೆ ಬಿಟ್ಟಾಕ್ರಿ. ಒಬ್ಬ ವ್ಯಕ್ತಿ ಬಗ್ಗೆ ಮಾತಾಡುತ್ತೇವೆ ಅಂದರೆ, ಅದಕ್ಕೆ ಘನತೆ ಗೌರವ ಇರಬೇಕು. ನಾನು ಬಸವಣ್ಣನ ಸೇವೆ ಮಾಡುವವನು ಆ ಮಾತು ನನ್ನ ಬಾಯಲ್ಲಿ ಹೇಳಬಾರದು. ಟಾರ್ಗೆಟ್ ಎಲ್ಲಾ ಬಿಟ್ಟು ಬಿಡಿ. ಮಾಡುವುದಕ್ಕೆ ಕೆಲಸ ಇರಲ್ವಲ್ಲ. ಅದಕ್ಕೆ ಒಂದು ರೂಮ್‌ನಲ್ಲಿ ಕೂರುವುದು. ಚೇರ್‌ನಲ್ಲಿ ಕೂರುವುದು, ಅವನು ಹಂಗಂತೆ ಹಿಂಗಂತೆ ಅಂತ ಮಾತಾಡುತ್ತಾರೆ. " ಎಂದಿದ್ದಾರೆ.


Click it and Unblock the Notifications











