ವರ್ತೂರು ಸಂತೋಷ್ ಬಳಿ ಇರೋ ಆಸ್ತಿ ಎಷ್ಟು? ತಂದೆ ಮಾಡಿದ ಪ್ರಾಪರ್ಟಿ ಬಗ್ಗೆ ಹಳ್ಳಿಕಾರ್ ಹೇಳಿದ್ದೇನು?

ಬಿಗ್‌ಬಾಸ್ ಕನ್ನಡ ಸೀಸನ್ 10 ಕೆಲವು ಸ್ಪರ್ಧಿಗಳನ್ನು ಜನಪ್ರಿಯಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಸಿನಿಮಾ, ಕಿರುತೆರೆ ಹಿನ್ನೆಲೆಯಿಂದ ಬಂದವರನ್ನು ಬಿಟ್ಟು ಬೇರೆ ಕ್ಷೇತ್ರದ ಸ್ಪರ್ಧಿಗಳನ್ನು ಫೇಮಸ್ ಮಾಡಿದೆ. ಅದರಲ್ಲಿ ಒಬ್ಬರು 'ಹಳ್ಳಿಕಾರ್ ಒಡೆಯ' ವರ್ತೂರು ಸಂತೋಷ್.

ಬಿಗ್‌ಬಾಸ್‌ ಸೀಸನ್ 10ರ ನಾಲ್ಕನೇ ರನ್ನರ್‌ ಅಪ್ ಆಗಿರೋ ವರ್ತೂರ್ ಸಂತೋಷ್‌ಗೆ ಜನ ಬೆಂಬಲ ಹೆಚ್ಚಾಗಿದೆ. ಬಿಗ್‌ಬಾಸ್ ಮನೆಯಿಂದ ಹಿಂತಿರುಗುತ್ತಿದ್ದಂತೆ ಅಪಾರ ಪ್ರಮಾಣದಲ್ಲಿ ಅಭಿಮಾನಿಗಳು ಹುಟ್ಟುಕೊಂಡಿದ್ದಾರೆ. ವರ್ತೂರು ಸಂತೋಷ್ ಮುಗ್ಧ ಮನಸ್ಸಿಗೆ ಕಿರುತೆರೆ ವೀಕ್ಷಕರು ಮನಸೋತಿದ್ದಾರೆ. ಹೀಗಾಗಿ ಬಿಗ್‌ಬಾಸ್‌ನಿಂದ ಹೊರಬರುತ್ತಿದ್ದಂತೆ ಅದ್ಧೂರಿ ಸ್ವಾಗತ ಸಿಗುತ್ತಿದೆ.

Bigg Boss Kannada 10 Varthur Santhosh revealed his fathers property details

ಈ ಮಧ್ಯೆ ಕೆಲವರು ವರ್ತೂರು ಸಂತೋಷ್ ಬಗ್ಗೆ ನೆಗೆಟಿವ್ ಆಗಿಯೂ ಮಾತಾಡುತ್ತಿದ್ದಾರೆ. ತಂದೆ ಮಾಡಿದ ಆಸ್ತಿಯ ಹಣದಲ್ಲಿ ಶೋಕಿ ಮಾಡುತ್ತಿದ್ದಾರೆ ಅನ್ನೋ ಕಮೆಂಟ್ ಹೊರಬರುತ್ತಿದೆ. ಈ ಬಗ್ಗೆ ವರ್ತೂರು ಸಂತೋಷ್ ಕೆಲವು ಯೂಟ್ಯೂಬ್ ಸಂದರ್ಶನಗಳಲ್ಲಿ ಖಾರವಾಗಿಯೇ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಈ ಬೆಳವಣಿಗೆ ಬೆನ್ನಲ್ಲೇ ವರ್ತೂರ್ ಸಂತೋಷ್ ಬಳಿ ಇರುವ ಆಸ್ತಿ ಎಷ್ಟು? ಅನ್ನೋ ಕುತೂಹಲನೂ ಮೂಡಿತ್ತು. ಅದಕ್ಕೆ ಬಿಗ್‌ಬಾಸ್‌ ಸ್ಪರ್ಧಿಯೇ ಪ್ರತಿಕ್ರಿಯೆ ಕೊಟ್ಟಿದ್ದಾರೆ.

ವರ್ತೂರು ಸಂತೋಷ್ ಬಳಿ ಇರುವ ಆಸ್ತಿಯ ಬಗ್ಗೆ ಹಲವು ಸಂದರ್ಶನಗಳಲ್ಲಿ ಪ್ರಶ್ನೆ ಮಾಡಲಾಗಿದೆ. ಈ ಬಗ್ಗೆ ವರ್ತೂರು ಸಂತೋಷ್ ಕೂಡ ನೇರವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ. ಇಷ್ಟೇ ಅಲ್ಲದೆ ಹಿಂದೊಮ್ಮೆ ಯೂಟ್ಯೂಬ್ ಚಾನೆಲ್‌ನಲ್ಲಿ "ನಾನು ನನ್ನ ಅಪ್ಪನಿಗೆ ಹುಟ್ಟಿರೋದು. ಅದಕ್ಕೆ ಅವರ ಸಂಪಾಧಿಸಿದ ಹಣದಿಂದ ಶೋಕಿ ಮಾಡ್ತೀನಿ" ಎಂದು ಪ್ರತಿಕ್ರಿಯೆ ನೀಡಿದ್ದರು. ಇಲ್ಲಿಂದ ವರ್ತೂರು ಸಂತೋಷ್ ಬಳಿ ಇರುವ ಆಸ್ತಿಯ ಬಗ್ಗೆ ವೀಕ್ಷಕರಿಗೆ ಕುತೂಹಲವಿತ್ತು. ಅದಕ್ಕೆ ತಕ್ಕಂತೆ ಕೆಲ ಮಾಧ್ಯಮಗಳು ಹಳ್ಳಿಕಾರ್ ಒಡೆಯನ ಬಳಿ ಇರುವ ಆಸ್ತಿ ಬಗ್ಗೆ ಪ್ರಶ್ನೆ ಮಾಡಿದ್ದವು. ಅದಕ್ಕೆ ವರ್ತೂರು ಸಂತೋಷ್ ಕೊಟ್ಟ ಉತ್ತರ ಅಷ್ಟೇ ಮಜವಾಗಿದೆ.

"ನಮ್ಮ ತಾತನ ಕಾಲದಿಂದಲೂ ಕಷ್ಟ ಪಟ್ಟು ಮೇಲೆ ಬಂದಿರೋರು. ಯಾರನ್ನು ಬೇಕಾದರೂ ಕೇಳಿಕೊಳ್ಳಿ. ಅಷ್ಟು ಕೋಟಿ, ಇಷ್ಟು ಕೋಟಿ.. ಎಷ್ಟು ಕೋಟಿ ಬೇಕಾದರೂ ಹಾಕಿಕೊಳ್ಳಿ. ನಾನು ಒಬ್ಬ ಮನುಷ್ಯ ಒಂದಿಷ್ಟು ಜನರನ್ನು ಸಂಪಾದನೆ ಮಾಡಿದ್ದೇನೆ. ಈಗಂತೂ ಕೋಟ್ಯಾಂತರ ಜನರು ಬೆನ್ನೆಲುಬಾಗಿ ನಿಂತಿದ್ದಾರೆ." ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

Bigg Boss Kannada 10 Varthur Santhosh revealed his fathers property details

"ನಮ್ಮ ಅಪ್ಪ ಮಾಡಿದ ಆಸ್ತಿ ಎಷ್ಟು ಅಂತ ಹೇಳಲ್ಲ. ನಮ್ಮ ಅಪ್ಪ ಒಂದಷ್ಟು ಆಸ್ತಿ ಮಾಡಿದ್ದರು. ಅದರ ಮೇಲೆ ನನ್ನ ತಲೆ ಉಪಯೋಗಿಸಿ ನಾನೊಂದಿಷ್ಟು ಆಸ್ತಿ ಮಾಡಿದ್ದೀನಿ. ನನ್ನ ಮಕ್ಕಳ ಕಾಲಕ್ಕೂ ಅದು ಮಾಡಲಿ ಅನ್ನೋದೇ ನನ್ನ ಆಸೆ. ಜಮೀನಿಗಳನ್ನು ಉಳಿಸಿ ಇಟ್ಟಿದ್ದೀವಿ. ಜಮೀನನ್ನು ನಾನೂ ಸಂಪಾದನೆ ಮಾಡಿದ್ದೀನಿ. ನನ್ನ ಮಕ್ಕಳಿಗೂ ಆಗಲಿ ಅಂತ ಬೇರೆ ಏನೂ ಇಲ್ಲ." ಎಂದು ಇನ್ನೊಂದು ಯೂಟ್ಯೂಬ್ ಚಾನೆಲ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ.

More from Filmibeat

English summary
Varthur Santhosh about his property
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X