BBK 11: 9ನೇ ವಾರ ನಾಮಿನೇಟ್ ಆದವರು 7 ಮಂದಿ; ರಜತ್ ಶಪಥ.. ಚೈತ್ರಾ ಕುಂದಾಪುರ ಕಣ್ಣೀರು!
ಬಿಗ್‌ಬಾಸ್ ಕನ್ನಡ 11 ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ 9 ವಾರಗಳನ್ನು ಪೂರೈಸಿದೆ. ಇಂದು (ನವೆಂಬರ್ 30) ಕಿಚ್ಚ ಸುದೀಪ್ ಕಳೆದ ಒಂದು ವಾರದ ಕಥೆಯನ್ನು ಹೇಳುವುದಕ್ಕೆ ಬರುತ್ತಿದ್ದಾರೆ. 'ವಾರದ ಕಥೆ ಕಿಚ್ಚ ಜೊತೆ' ಈ ವಾರ ಹೇಗಿರುತ್ತೆ ಅಂತ ನೋಡುವುದಕ್ಕೆ ಕಿರುತೆರೆ ವೀಕ್ಷಕರು ಕೂಡ ಕಾದು ಕೂತ್ತಿದ್ದಾರೆ. ಈ ಬೆನ್ನಲ್ಲೇ ಈ ವಾರದ ಮನೆಯಿಂದ ಯಾರು ಹೊರಗೆ ಹೋಗಬಹುದು ಅನ್ನೋದು ಕೂಡ ಅಷ್ಟೇ ಕುತೂಹಲ ಮೂಡಿಸಿದೆ.
9ನೇ ವಾರದಲ್ಲಿ ಒಟ್ಟು 7 ಮಂದಿ ನಾಮಿನೇಟ್ ಆಗಿದ್ದಾರೆ. ಈ ವಾರ ನಾಮಿನೇಟ್ ಆಗಿರುವವರೆಲ್ಲರೂ ಕಳೆದ 9 ವಾರಗಳು ಅದ್ಭುತವಾಗಿ ಆಟ ಆಡಿದವರೇ. ಹೀಗಾಗಿ ಮನೆಯಿಂದ ಹೊರ ಹೋಗುವವರು ಯಾರು? ಅನ್ನೋದನ್ನು ಊಹೆ ಮಾಡುವುದಕ್ಕೂ ಕಷ್ಟ ಆಗುತ್ತಿದೆ. ಅದೆಲ್ಲದಕ್ಕೂ ಇವತ್ತು ಅಥವಾ ನಾಳೆ ತೆರೆ ಕಿಚ್ಚ ಸುದೀಪ್ ತೆರೆ ಎಳೆಯುತ್ತಾರೆ.

ಇತ್ತ ಬಿಗ್ ಬಾಸ್ ಮನೆಯಲ್ಲಿ ಆಟ-ಕಿತ್ತಾಟ ಕಮ್ಮಿಯೇನು ಆಗಿಲ್ಲ. ರಜತ್ ಕಿಶನ್ ಆರ್ಭಟ ಮುಂದುವರೆದಿದೆ. ಶೋಭಾ ಶೆಟ್ಟಿ ಹಾಗೂ ಚೈತ್ರಾ ಕುಂದಾಪುರ ನಡುವೆ ಬಾಂಧವ್ಯ ಬೆಳೆದಂತೆ ಕಾಣುತ್ತಿದೆ. ಈ ಮಧ್ಯೆ ಮನೆಯಲ್ಲಿ ಸ್ಪರ್ಧಿಗಳು ಗತ್ತು ಗಮ್ಮತ್ತು ಜೋರಾಗಿಯೇ ಇದೆ. ಆದರೆ, ಈ ವಾರ ಮನೆಯಲ್ಲಿ ಯಾರು ಉಳಿದುಕೊಳ್ಳುತ್ತಾರೆ? ಅನ್ನೋದು ಮಾತ್ರ ಸಿಕ್ಕಾಪಟ್ಟೆ ಕುತೂಹಲ ಸೃಷ್ಟಿಸಿದೆ.
ಕಲರ್ಸ್ ಕನ್ನಡ ಬೆಳಗ್ಗೆ ಪ್ರೋಮೊ ಒಂದನ್ನು ರಿಲೀಸ್ ಮಾಡಿದೆ. ಇದು ಬಿಗ್‌ಬಾಸ್ ವೀಕ್ಷಕರಿಗೆ ಸಖತ್ ಕಿಕ್ ಕೊಟ್ಟಿದೆ. ಈ ಪ್ರೋಮೊದಲ್ಲಿ ಚೈತ್ರಾ ಕುಂದಾಪುರ ಹಾಗೂ ರಜತ್ ಕಿಶನ್ ಪ್ರಮುಖವಾಗಿ ಗಮನ ಸೆಳೆದಿದ್ದಾರೆ. ಚೈತ್ರಾ ಕುಂದಾಪುರ ಮಾರ್ಮಿಕವಾಗಿ ಬಿಟ್ಟ ಡೈಲಾಗ್ ಏನೋ ಹೇಳುತ್ತಿದೆ. ಜೊತೆಗೆ ಶೋಭಾ ಶೆಟ್ಟಿ ಪಕ್ಕದಲ್ಲಿ ಕೂತು ಕಣ್ಣೀರನ್ನೂ ಹಾಕಿದ್ದಾರೆ. ಹೀಗಾಗಿ ಬಿಗ್ ಬಾಸ್ ಮನೆಯಲ್ಲಿ ಮತ್ತೇನೋ ನಡೆದಿದೆ ಅಂತ ಊಹೆ ಮಾಡುತ್ತಿದ್ದಾರೆ.

ಇತ್ತ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟು ಬಿಗ್ ಬಾಸ್ ಮನೆಗೆ ಪ್ರವೇಶ ಮಾಡಿರುವ ರಜತ್ ಕಿಶನ್ ಅಬ್ಬರ ಮುಂದುವರೆದಿದ್ದೆ. ಮನೆ ಮಂದಿಯನ್ನು ರಜತ್ ಕಿಶನ್ ಮತ್ತೆ ಎದುರಾಕಿಕೊಂಡಿದ್ದಾರೆ. ಬೆಳ್ಳಂಬೆಳಗ್ಗೆನೇ ರಿಲೀಸ್ ಆಗಿರುವ ಪ್ರೋಮೊದಲ್ಲಿ ಚೈತ್ರಾ ಕುಂದಾಪುರ ಮನೆಯಿಂದ ಹೊರ ಹೋಗುವ ಬಗ್ಗೆ ಮಾತಾಡಿದ್ದಾರೆ. "ಈ ವಾರ ಇರುತ್ತೇನೋ ಇಲ್ಲವೋ ಗೊತ್ತಿಲ್ಲ" ಎಂದು ಡೈಲಾಗ್ ಬಿಟ್ಟರೆ, ರಜತ್ " ನಿಮ್ಮನ್ನ ಮನೆಯಿಂದ ಕಳಿಸಿಯೇ ಆಚೆ ಹೋಗೋದು" ಎಂದು ಹೇಳಿದ್ದಾರೆ. ಆದರೆ, ರಜತ್ ಈ ಮಾತನ್ನು ಯಾರಿಗೆ ಹೇಳಿದ್ದು ಅನ್ನೋದು ಮಾತ್ರ ರಿವೀಲ್ ಆಗಿಲ್ಲ.
ಈ ವಾರ ಏಳು ಮಂದಿ ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ. ಅವರಲ್ಲಿ ವೈಲ್ಡ್ ಕಾರ್ಡ್ ಮೂಲಕ ಬಿಗ್‌ಬಾಸ್ ಮನೆಗೆ ಪ್ರವೇಶ ಮಾಡಿರುವ ಶೋಭಾ ಶೆಟ್ಟಿ, ಭವ್ಯಾ ಗೌಡ, ಶಿಶಿರ್, ಐಶ್ವರ್ಯಾ ಸಿಂಧೋಗಿ, ಚೈತ್ರಾ ಕುಂದಾಪುರ, ತ್ರಿವಿಕ್ರಮ್ ಹಾಗೂ ಗೋಲ್ಡ್ ಸುರೇಶ್ ನಾಮಿನೇಟ್ ಆಗಿದ್ದಾರೆ. ಇವರಲ್ಲಿ ಮನೆಯಿಂದ ಹೊರ ಹೋಗುವವರು ಯಾರು ಅನ್ನೋದು ಈಗ ಕೂತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.
ಯಾಕಂದ್ರೆ, ಈ ವಾರ ನಾಮಿನೇಟ್ ಆಗಿರುವ ಏಳು ಮಂದಿಯೂ ಕಳೆದ 9 ವಾರಗಳೂ ಕೂಡ ವೀಕ್ಷಕರನ್ನು ಸೆಳೆದಿದ್ದಾರೆ. ಶೋಭಾ ಶೆಟ್ಟಿ ಎಂಟ್ರಿ ಕೊಟ್ಟ ವಾರದಲ್ಲೇ ತಾನು ಪ್ರಬಲ ಸ್ಪರ್ಧಿ ಅನ್ನೋದನ್ನು ತೋರಿಸಿದ್ದಾರೆ. ಭವ್ಯಾ ಗೌಡ ಕೂಡ ಸ್ಟಾಂಗ್ ಆಗಿದ್ದಾರೆ. ಶಿಶಿರ್, ಚೈತ್ರಾ ಕುಂದಾಪುರ, ತ್ರಿವಿಕ್ರಮ್ ಕೂಡ ಅಷ್ಟೇ ಚೆನ್ನಾಗಿ ಪರ್ಫಾಮ್ ಮಾಡಿದ್ದಾರೆ. ಇದ್ದಿದ್ದರಲ್ಲಿ ಐಶ್ವರ್ಯಾ ಸಿಂಧೋಗಿ ಹಾಗೂ ಗೋಲ್ಡ್ ಸುರೇಶ್ ಮೇಲೆ ನೆಟ್ಟಿಗರು ಅನುಮಾನ ಮೂಡಿಸುತ್ತಿದ್ದಾರೆ.


Click it and Unblock the Notifications











