BBK 11:ಮಧ್ಯರಾತ್ರಿ ಎಲಿಮಿನೇಷನ್ ಗ್ಯಾರಂಟಿ; ಹೊರಬರೋದು ಒಬ್ಬರಾ? ಇಬ್ಬರಾ?

ಬಿಗ್‌ಬಾಸ್ ಕನ್ನಡ 11 ಫಿನಾಲೆ ಹತ್ತಿರ ಬರುತ್ತಿದ್ದಂತೆ ವೀಕ್ಷಕರಿಗೆ ಈ ರಿಯಾಲಿಟಿ ಶೋ ರೋಚಕ ಎನಿಸುತ್ತಿದೆ. ಅದರಲ್ಲೂ ಕಲರ್ಸ್ ಕನ್ನಡ ಇತ್ತೀಚೆಗಷ್ಟೇ ಒಂದು ಪ್ರೋಮೊ ರಿಲೀಸ್ ಮಾಡಿದೆ. ಇದರಲ್ಲಿ ಮಧ್ಯರಾತ್ರಿ ಎಲಿಮಿನೇಷನ್ ಆಗುತ್ತಾರೆ ಎಂದು ಹೇಳಲಾಗಿದೆ. ಬಿಗ್‌ಬಾಸ್ ಈ ವಿಷಯವನ್ನು ಅನೌನ್ಸ್ ಮಾಡುತ್ತಿದ್ದಂತೆ ಸ್ಪರ್ಧಿಗಳು ಮುಖದಲ್ಲಿ ಟೆನ್ಷನ್ ಎದ್ದು ಕಾಣುತ್ತಿದೆ.

ಬಿಗ್‌ಬಾಸ್ ಫಿನಾಲೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದೆ. ಮನೆಯೊಳಗೂ ಕೆಲವೇ ಮಂದಿ ಉಳಿದುಕೊಂಡಿದ್ದಾರೆ. ಅವರಲ್ಲಿ ಯಾರು ಬಿಗ್ ಬಾಸ್ ಕನ್ನಡ 11ರ ಕಿರೀಟ ಗೆಲ್ಲುತ್ತಾರೆ ಅನ್ನೋದು ಮತ್ತಷ್ಟು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ. ಈ ಮಧ್ಯೆ ಈಗಷ್ಟೇ ರಿಲೀಸ್ ಆಗಿರುವ ಪ್ರೋಮೋದಲ್ಲಿ ಮಧ್ಯರಾತ್ರಿ ಎಲಿಮಿನೇಷನ್ ಇರುತ್ತೆ ಅನ್ನೋದನ್ನು ಬಿಗ್ ಬಾಸ್ ತಿಳಿಸಿದೆ.

Bigg Boss Kannada 11 Bhavya Rajat Mokshitha Ugram Manju Trivikram who will be eliminated in mid night

ಈಗಾಗಲೇ ಎಲಿಮಿನೇಟ್ ಆಗಿರುವ ಸ್ಪರ್ಧಿಗಳಿಂದ ಯಾರು ಬಿಗ್‌ಬಾಸ್ ಮನೆಯಿಂದ ಹೊರ ಹೋಗಬೇಕು ಎನ್ನುವ ಅಭಿಪ್ರಾಯವನ್ನೂ ಸಂಗ್ರಹಿಸಲಾಗಿದೆ. ಅದರಂತೆ ಭವ್ಯಾ ಗೌಡ, ಗೌತಮಿ ಜಾದವ್, ಉಗ್ರಂ ಮಂಜು ತಮ್ಮ ಅಭಿಪ್ರಾಯಗಳನ್ನು ಹೇಳಿದ್ದಾರೆ. ಇದರ ಆಧಾರದ ಮೇಲೆ ಮಧ್ಯರಾತ್ರಿ ಯಾರು ಮನೆಯಿಂದ ಹೊರ ಬರಬಹುದೆಂಬ ಲೆಕ್ಕಾಚಾರನೂ ಶುರುವಾಗಿದೆ. ಹಾಗಿದ್ದರೆ, ಕಲರ್ಸ್ ಕನ್ನಡ ರಿಲೀಸ್ ಮಾಡಿರುವ ಪ್ರೋಮೋದಲ್ಲಿ ಸ್ಪರ್ಧಿಗಳ ಅಭಿಪ್ರಾಯ ಏನಿದೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.

ಕಿಚ್ಚ ಪಂಚಾಯ್ತಿಯಲ್ಲಿಯೇ ಸುದೀಪ್ ಈ ವಾರ ಮಧ್ಯರಾತ್ರಿ ಮಿಡ್ ನೈಟ್ ಎಲಿಮಿನೇಷನ್ ಇರುತ್ತೆ ಎಂದು ಹೇಳಿದ್ದರು. ಅದರಂತೆಯೇ ಮನೆಯೊಳಗೆ ಒಬ್ಬರು ಅಥವಾ ಇಬ್ಬರು ಸದಸ್ಯರಿಗೆ ಕೊನೆಯ ರಾತ್ರಿ ಆಗಬಹುದು ಎಂಬ ನಿರೀಕ್ಷೆ ಮಾಡಲಾಗುತ್ತಿದೆ. ಭವ್ಯಾ ಗೌಡ, ಗೌತಮಿ, ಉಗ್ರಂ ಮಂಜು, ರಜತ್ ಹಾಗೂ ತ್ರಿವಿಕ್ರಮ್ ಮನೆಯಿಂದ ಹೊರ ಬರುವವರ ಸಂಭಾವ್ಯ ಪಟ್ಟಿಯಲ್ಲಿ ಇದ್ದಾರೆ. ಹೀಗಾಗಿ ಒಬ್ಬರ ಮೇಲೆ ಇನ್ನೊಬ್ಬರು ಆರೋಪ ಮಾಡಿ ಬಚಾವ್ ಆಗುವ ಪ್ರಯತ್ನಕ್ಕೆ ಮುಂದಾಗಿರುವುದು ಕಂಡು ಬರುತ್ತಿದೆ.

Bigg Boss Kannada 11 Bhavya Rajat Mokshitha Ugram Manju Trivikram who will be eliminated in mid night

ಬಿಗ್‌ ಬಾಸ್ ಕನ್ನಡ 11ರ ಮಧ್ಯಾಹ್ನ ಬಿಡುಗಡೆ ಮಾಡಿದ ಪ್ರೋಮೋದ ಆರಂಭದಲ್ಲಿಯೇ ಶಾಕ್ ಕೊಟ್ಟಿದೆ. "ಇಂದು ಮಧ್ಯರಾತ್ರಿ ಬಿಗ್ ಬಾಸ್ ಮನೆಯ ಬಾಗಿಲು ಯಾರಿಗಾಗಿ ತೆರೆದಿದೆ ಅನ್ನೋದನ್ನು ತಿಳಿದುಕೊಳ್ಳುವ ಸಮಯ" ಎಂದು ಹೇಳುವ ಮೂಲಕ ಬೆಚ್ಚಿಬೀಳಿಸಿತ್ತು. ಮನೆಯವರೆಲ್ಲರೂ ತಮ್ಮ ಬ್ಯಾಗ್ ಅನ್ನು ಪ್ಯಾಕ್ ಮಾಡಿಕೊಂಡು ಮನೆಯ ಆವರಣಕ್ಕೆ ಬಂದಿ ನಿಂತಿದ್ದಾರೆ. ಅಲ್ಲಿ ಒಬ್ಬರ ಮೇಲೊಬ್ಬರು ಆರೋಪ ಪ್ರತ್ಯಾರೋಪ ಮಾಡುತ್ತಿದ್ದಾರೆ.

ಆರಂಭದಲ್ಲಿ ಗೌತಮಿ ಜಾದವ್ ಮನೆಯ ಸ್ಟ್ರಾಂಗ್ ಕಂಟೆಸ್ಟೆಂಟ್ ತ್ರಿವಿಕ್ರಮ್ ಅವರನ್ನು ಟಾರ್ಗೆಟ್ ಮಾಡಿದ್ದಾರೆ. "ತ್ರಿವಿಕ್ರಮ್ ಅವರು ಬಿಗ್ ಬಾಸ್‌ನಲ್ಲಿ ಟಾಸ್ಕ್ ಬಿಟ್ಟು ಬೇರೆ ಯಾವುದರಲ್ಲಾರೂ ಕಾಣಿಸಿಕೊಳ್ಳುತ್ತಾರಾ? ಅಂದರೆ ಎಲ್ಲೂ ಇಲ್ಲ" ಎಂದು ಹೇಳುವ ಮೂಲಕ ತ್ರಿವಿಕ್ರಮ್ ಮಿಡ್‌ ನೈಟ್ ಎಲಿಮಿನೇಷನ್ ಆಗಬೇಕು ಎಂದು ಹೇಳಿದ್ದಾರೆ. ಗೌತಮಿಯ ಈ ಹೇಳಿಕೆಯಿಂದ ತ್ರಿವಿಕ್ರಮ್ ಉರ್ಕೊಂಡಿದ್ದಾರೆ ಅನ್ನೋದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ.

ಇನ್ನು ಉಗ್ರಂ ಮಂಜು ವಿರುದ್ಧ ಭವ್ಯಾ ಗೌಡ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. "ಉಗ್ರಂ ಮಂಜು ಮನೆಯವರು ಬಂದು ಹೋದ್ಮೇಲೆ ಅವರು ಬದಲಾಗುತ್ತೇವೋ ಏನೋ ಅಂದುಕೊಂಡಿದ್ವಿ. ಆದರೆ, ಅವರು ಬದಲಾಗಲಿಲ್ಲ. ಎಲ್ಲಾ ಉಲ್ಟಂ ಪಲ್ಟಂ ಆಗಿತ್ತು." ಎಂದು ಉಗ್ರಂ ಮಂಜು ಫೋಟೋವನ್ನು ಸ್ವಿಮ್ಮಿಂಗ್ ಪೂಲ್‌ಗೆ ಎಸೆದಿದ್ದಾರೆ. ಬಹುಶ: ಭವ್ಯಾ ಗೌಡ ಕೊಟ್ಟ ಕಾರಣ ಉಗ್ರಂ ಮಂಜುಗೆ ಇಷ್ಟ ಆದಂತೆ ಇಲ್ಲ.

ಹಾಗೇ ಉಗ್ರಂ ಮಂಜು ಕೂಡ ಭವ್ಯಾ ನಡವಳಿಕೆ ಇಷ್ಟ ಆಗುತ್ತಿಲ್ಲ ಎಂದು ಹೇಳಿದ್ದಾರೆ. ಈಗ ಇವರಲ್ಲಿ ಯಾರು ಮನೆಯಿಂದ ಆಚೆ ಹೋಗುತ್ತಾರೆ? ಹೊರ ಹೋಗುವವರು ಒಬ್ಬರಾ? ಇಲ್ಲ ಇಬ್ಬರಾ? ಅನ್ನೋದು ಕುತೂಹಲ ಕೆರಳಿಸಿದೆ. ಇಂದಿನ ಎಪಿಸೋಡ್‌ನಲ್ಲಿ ಯಾರು ಹೊರ ಹೋಗುತ್ತಾರೆ ಅನ್ನೋದು ಗೊತ್ತಾಗಲಿದೆ. ರಜತ್, ಭವ್ಯಾ ಗೌಡ, ಗೌತಮಿ, ಉಗ್ರಂ ಮಂಜು, ತ್ರಿವಿಕ್ರಮ್, ಮೋಕ್ಷಿತಾ ಇವರಲ್ಲಿ ಯಾರು ಎಲಿಮಿನೇಟ್ ಆಗುತ್ತಾರೆ? ಭವ್ಯಾ ಯಾಕೆ ಕಣ್ಣೀರು ಹಾಕಿದರು? ಅನ್ನೋದು ರಾತ್ರಿ ಸಂಚಿಕೆಯಲ್ಲಿ ತಿಳಿಯಲಿದೆ.

More from Filmibeat

English summary
Bigg Boss Kannada 11 Bhavya Gowda, Rajat, Mokshitha, Ugram Manju, Trivikram who will be eliminated in mid night;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X