ಬಿಗ್‌ ಬಾಸ್‌ಗೆ ಸವಾಲು ಹಾಕಿದ್ದ ಲಾಯರ್ ಜಗದೀಶ್ ದಿಢೀರನೇ ಬದಲಾಗಿಬಿಟ್ರು; ವಕೀಲ್ ಸಾಬ್ ಫುಲ್ ಸಾಫ್ಟ್

ಬಿಗ್‌ಬಾಸ್ ಕನ್ನಡ ಸೀಸನ್ 11 ಶುರುವಾಗಿ ನಾಲ್ಕು ದಿನ ಆಗಿದೆ. 17 ಸ್ಪರ್ಧಿಗಳು ಬಿಗ್ ಬಾಸ್ ಮನೆಯಲ್ಲಿ ಉಳಿದು ಕೊಳ್ಳುವುದಕ್ಕೆ ಶತ ಪ್ರಯತ್ನ ನಡೆಸಿದ್ದಾರೆ. ಇಷ್ಟೂ ದಿನ 16 ಸ್ಪರ್ಧಿಗಳನ್ನು ಕಾಡಿದ್ದು ಮಾತ್ರ ಲಾಯರ್ ಜಗದೀಶ್. ಸಿಂಗಲ್ ಸಿಂಹ ಅಂತ ಎಲ್ಲರ ಮೇಲೂ ಎಗರಾಡುತ್ತಿದ್ದ ವಕೀಲ್ ಸಾಬ್ ಈಗ ಫುಲ್ ಸಾಫ್ಟ್ ಆಗಿದ್ದಾರೆ. ಸಿಂಗಲ್ ಸಿಂಹ ಈಗ ಫುಲ್ ಮಿಂಗಲ್.

ಕಳೆದ ಮೂರು ದಿನಗಳಿಂದ ಲಾಯರ್ ಜಗದೀಶ್ ಸ್ವರ್ಗವಾಸಿಗಳು ಹಾಗೂ ನರಕವಾಸಿಗಳು ಅಂತ ಭೇದ ಭಾವ ಮಾಡದೇ ಗೋಳಾಡಿಸಿದ್ದರು. ಮಾತಾಡಿದವರ ಮೇಲೆ ಹಿಗ್ಗಾಮುಗ್ಗ ಬೈದಿದ್ದರು. ಸಿಕ್ಕ ಸಿಕ್ಕವರ ಮೇಲೆ ಎಲೆ ಎಗರಾಡಿದ್ದರು. ಅದರಲ್ಲೂ ಧನರಾಜ್ ಆಚಾರ್, ಶಿಶಿರ್ ಶಾಸ್ತ್ರಿ, ರಂಜಿತ್, ಮಾನಸ ತುಕಾಲಿ ಜೊತೆ ವಾಗ್ವಾದಕ್ಕೆ ಇಳಿಸಿದ್ದರು. ಇವರೆಲ್ಲ ನಡುವೆ ಮಾತಿಗೆ ಮಾತು ಬೆಳೆದು ಎಪಿಸೋಡ್ ಜಗಳಮಯವಾಗಿತ್ತು.

Bigg Boss Kannada 11 candidate Lawyer Jagadish suddenly changed his attitude

ಎಲ್ಲಕ್ಕಿಂತ ಹೆಚ್ಚಾಗಿ ಲಾಯರ್ ಜಗದೀಶ್ ಬಿಗ್‌ಬಾಸ್‌ಗೆ ಅವಾಜ್ ಹಾಕಿದ್ದು ಗಮನ ಸೆಳೆದಿತ್ತು. ಬಿಗ್‌ ಬಾಸ್‌ ನನ್ನ ಹೊರಗೆ ಕಳಿಸಿ. ಹೊರಗೆ ಹೋದ ಮೇಲೆ ಬಿಗ್‌ ಬಾಸ್ ಅನ್ನು ಎಕ್ಸ್‌ಪೋಸ್ ಮಾಡುತ್ತೇನೆ. ಶೋ ಅನ್ನೇ ಬಂದ್ ಮಾಡಿಸುತ್ತೇನೆ. ಹೆಲಿಕಾಪ್ಟರ್ ತರಿಸುತ್ತೇನೆ ಅಂತೆಲ್ಲ ಎಗರಾಡಿದ್ದರು. ಇಂದಿನ (ಅಕ್ಟೋಬರ್ 3) ಎಪಿಸೋಡ್ ಹೇಗಿರುತ್ತೋ ಅಂತ ತಲೆ ಕೆಡಿಸಿಕೊಂಡು ಕೂತಿದ್ದ ವೀಕ್ಷಕರು ದಿಢೀರ್ ಸರ್ಪ್ರೈಸ್ ಸಿಕ್ಕಿದೆ. ರಾತ್ರಿ ಆಗಿ ಬೆಳಗಾಗುವಷ್ಟರಲ್ಲಿ ವಕೀಲ್ ಸಾಭ್ ಬದಲಾಗಿಬಿಟ್ಟಿದ್ದಾರೆ.

ಕರ್ನಾಟಕದಲ್ಲಿ ನೀನೇ ಹೀರೊ

ಬಿಗ್‌ ಬಾಸ್ ಕನ್ನಡ ಸೀಸನ್ 11ರಲ್ಲಿ ಧನರಾಜ್ ಆಚಾರ್ ಹಾಗೂ ಲಾಯರ್ ಜಗದೀಶ್ ನಡುವೆ ಯುದ್ಧವೇ ಶುರುವಾಗಿತ್ತು. ಟಾಸ್ಕ್ ವೇಳೆ ಇಬ್ಬರ ನಡುವೆ ವಾರ್ ಶುರುವಾಗಿತ್ತು. ಇದು ಇನ್ಯಾವ ಮಟ್ಟಕ್ಕೆ ಹೋಗುತ್ತೋ ಅನ್ನೋ ಮಟ್ಟಿಗೆ ಬೆಳೆದಿತ್ತು. ಈ ಮಟ್ಟಿಗೆ ದ್ವೇಷ ಸಾಧಿಸಿದ್ದವರು ಈಗ ಒಂದಾಗಿದ್ದಾರೆ. ಧನರಾಜ್ ಆಚಾರ್ ಅವರನ್ನು ನಿನ್ನೆ (ಅಕ್ಟೋಬರ್ 2) ಕರ್ನಾಟಕದ ಪಾಲಿಗೆ ಹೀರೋ ಆಗಿದ್ದೆ ಎಂದು ಹೇಳಿ ಹೊಗಳಿದ್ದಾರೆ.

ಬಿಗ್‌ ಬಾಸ್ ಫೇಮಸ್ ಆಗ್ಬೇಕು

ಬಿಗ್‌ ಬಾಸ್ ಶೋ ನಿಲ್ಲಿಸುತ್ತೇನೆ. ಇಲ್ಲಿ ನನಗೆ ನಾನೇ ಬಿಗ್ ಬಾಸ್ ಅಂತ ಲಾಯರ್ ಜಗದೀಶ್ ಎಗರಾಡಿದ್ದರು. ಸ್ವರ್ಗದಂತಹ ಮನೆಯನ್ನೂ ನರಕದಂತೆ ಮಾಡಿದ್ದ ಲಾಯರ್ ಈಗ ಬದಲಾಗಿದ್ದಾರೆ. ಸಿಂಗಲ್ ಸಿಂಹ ಮಿಂಗಲ್ ಆಗುತ್ತಿದೆ. ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಏನಾಯ್ತು? ವಕೀಲ್ ಸಾಬ್ ದಿಢೀರನೇ ಹೇಗೆ ಬದಲಾದರು? ಅಂತಹದ್ದೇನು ನಡೀತು ಗೊತ್ತಿಲ್ಲ. ಇಂದಿನ ಎಪಿಸೋಡ್‌ನಲ್ಲಿ ಧನರಾಜ್ ಆಚಾರ್ ಬಳಿ ಜಗದೀಶ್ ಕಲರ್ಸ್ ಫೇಮಸ್ ಆಗಬೇಕು. ಬಿಗ್‌ ಬಾಸ್ ಫೇಮಸ್ ಆಗಬೇಕು. ಅಲ್ಟಿಮೆಟ್ ಆಗಿ ಟಿಆರ್‌ಪಿ ಬರಬೇಕು ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ.

Bigg Boss Kannada 11 candidate Lawyer Jagadish suddenly changed his attitude

ಪತ್ನಿ ನೆನೆದು ಕಣ್ಣೀರಿಟ್ಟ ಜಗದೀಶ್

ಹೊರಗಡೆ ಅವಾಜ್ ಹಾಕಿಕೊಂಡು ಓಡಾಡುತ್ತಿದ್ದ ಜಗದೀಶ್ ಕುಟುಂಬವನ್ನು ನೆನಪಿಸಿಕೊಂಡಿದ್ದಾರೆ. ಐಶ್ವರ್ಯಾ ಸಿಂಧೋಗಿ ಜೊತೆ ಮಾತಾಡುತ್ತಿದ್ದ ಲಾಯರ್ ಜಗದೀಶ್ ಪತ್ನಿಯನ್ನು ನೆನೆದಿದ್ದಾರೆ. ತನ್ನ ಹೋರಾಟದಿಂದ ಪತ್ನಿಗೆಲ್ಲ ಎಷ್ಟು ತೊಂದರೆ ಆಗಿದೆ ಎಂದು ಭಾವುಕರಾಗಿದ್ದಾರೆ. ಐಶ್ವರ್ಯಾ ಜೊತೆ ತಮ್ಮ ತಪ್ಪುನ್ನು ಒಪ್ಪಿಕೊಂಡಿದ್ದಾರೆ. ಕೊನೆಯಲ್ಲಿ ಸ್ವಲ್ಪ ಟ್ರಿಗರ್ ಆದರೂ ಮತ್ತೆ ಕಾಮ್ ಆಗಿದ್ದಾರೆ.

ಹೊರಗಡೆ ಏನಾಗುತ್ತಿದೆ?

ಇತ್ತ ಹೊರಗಡೆ ಲಾಯರ್ ಜಗದೀಶ್ ಪಿಯುಸಿ ಫೇಕ್ ಸರ್ಟಿಫಿಕೇಟ್ ಕೊಟ್ಟಿದ್ದಾರೆ ಅನ್ನೋ ಸುದ್ದಿ ಹಬ್ಬಿದೆ. ಬಿಗ್ ಬಾಸ್ ಮಾಜಿ ಸ್ಪರ್ಧಿ ಪ್ರಶಾಂತ್ ಸಂಬರ್ಗಿ ತನ್ನ ಫೇಸ್‌ಬುಕ್ ಖಾತೆಯಲ್ಲಿ ಈ ವಿಷಯವನ್ನು ರಿವೀಲ್ ಮಾಡಿದ್ದು, ಅದು ಕೂಡ ಟಾಕ್ ಆಫ್ ದಿ ಟೌನ್ ಆಗಿದೆ. ಸದ್ಯ ಲಾಯರ್ ಜಗದೀಶ್ ಈಗ ಬಿಗ್‌ಬಾಸ್ ಮನೆಯೊಳಗೂ, ಮನೆಯ ಹೊರಗೂ ಚರ್ಚೆಯ ವಿಷಯವಾಗಿದ್ದಾರೆ.

More from Filmibeat

English summary
Bigg Boss Kannada 11 candidate Lawyer Jagadish suddenly changed his attitude:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X