BBK 11:ಫಿನಾಲೆ ಟಿಕೆಟ್ ಮಿಸ್ ಆಯ್ತು; ಎರಡು ವಾರ ಎಲಿಮಿನೇಟ್ ಆಗದೇ ಉಳಿಯಬಹುದಾ ಚೈತ್ರಾ?

ಬಿಗ್ ಬಾಸ್ ಕನ್ನಡ 11 ಕೊನೆಯ ಹಂತಕ್ಕೆ ಬಂದು ನಿಂತಿದೆ. ಇನ್ನೇನು ಎರಡು ಕಳೆದರೆ ಫಿನಾಲೆ. ಇದೇ ತಿಂಗಳು ಅಂದರೆ, ಜನವರಿ 26ಕ್ಕೆ ಬಿಗ್‌ಬಾಸ್ ಫಿನಾಲೆ ನಡೆಯಲಿದೆ ಎನ್ನಲಾಗಿದೆ. ಹೀಗಾಗಿ ಈಗಿನಿಂದಲೇ ಬಿಗ್‌ಬಾಸ್ ಗೆಲ್ಲುವ ಕನಸು ಕಾಣುತ್ತಿದ್ದಾರೆ. ಅದಕ್ಕೂ ಮುನ್ನ ಬಿಗ್ ಬಾಸ್ ಕೂಡ ಸ್ಪರ್ಧಿಗಳು ಫಿನಾಲೆ ತಲುವುದಕ್ಕೆ ಟಾಸ್ಕ್ ಅನ್ನೂ ನೀಡಿತ್ತು.

ಈ ವಾರ ನೀಡಿದ ಟಾಸ್ಕ್‌ನಲ್ಲಿ ಗೆದ್ದವರು ನೇರವಾಗಿ ಫಿನಾಲೆಗೆ ಟಿಕೆಟ್ ಪಡೆಯುತ್ತಾರೆ. ಹೀಗಾಗಿ ಸ್ಪರ್ಧಿಗಳು ಫಿನಾಲೆಗೆ ಟಿಕೆಟ್ ಪಡೆಯುವ ಆತುರದಲ್ಲಿ ಕಠೋರವಾಗಿ ವರ್ತಿಸಿದ್ದು ಕೂಡ ಇತ್ತು. ಅದನ್ನು ಕಂಡು ನೆಟ್ಟಿಗರು ಆಕ್ರೋಶ ಕೂಡ ಹೊರ ಹಾಕಿದ್ದರು. ಆದರೆ, ಈ ವಾರ ಟಾಸ್ಕ್‌ನಲ್ಲಿ ಚೈತ್ರಾ ಕುಂದಾಪುರ ಅವರ ತಂಡ ಸೋತ ಕಾರಣ ಎಲ್ಲರೂ ಸೇರಿ ಅವರನ್ನು ನಾಮಿನೇಟ್ ಮಾಡಿದ್ದರು.

Bigg Boss Kannada 11 Chaithra Kundapura blamed contestants after lost finale ticket

ಎಲ್ಲಾ ಸ್ಪರ್ಧಿಗಳು ಚೈತ್ರಾ ಕುಂದಾಪುರ ಅವರ ಹೆಸರನ್ನು ತೆಗೆದುಕೊಂಡಿದ್ದರಿಂದ ಅವರಿಗೆ ಫಿನಾಲೆ ಟಿಕೆಟ್ ಮಿಸ್ ಆಗಿದೆ. ಹೀಗಾಗಿ ಚೈತ್ರಾ ಕುಂದಾಪುರ ಸಿಕ್ಕಾಪಟ್ಟೆ ಅಪ್‌ಸೆಟ್ ಆಗಿದ್ದಾರೆ. ನಿರಂತರವಾಗಿ ಕಣ್ಣೀರು ಹಾಕಿದ್ದಾರೆ. ಮನೆಯಲ್ಲಿರುವ ಸದಸ್ಯರ ಬಗ್ಗೆ ಬೇಸರ ಹೊರ ಹಾಕಿದ್ದಾರೆ. ಇನ್ನು ಫಿನಾಲೆ ಟಿಕೆಟ್ ಕೈ ತಪ್ಪಿದೆ. ಹೀಗಾಗಿ ಮುಂದಿನ ಎರಡು ವಾರ ಅವರು ಎಲಿಮಿನೇಟ್ ಆಗದೆ ಉಳಿದುಕೊಳ್ಳಬೇಕಿದೆ.

ಬಿಗ್‌ಬಾಸ್ ಫಿನಾಲೆ ಟಿಕೆಟ್ ಪಡೆಯಬೇಕೆಂದರೆ, ಮನೆಯ ಸದಸ್ಯರು ಟಾಸ್ಕ್‌ಗಳಲ್ಲಿ ಭಾಗವಹಿಸಬೇಕಿತ್ತು. ಆದರೆ, ಈ ವಾರದ ಟಾಸ್ಕ್‌ನಲ್ಲಿ ಚೈತ್ರಾ ಕುಂದಾಪುರ ಸೋಲುಂಡಿದ್ದರು. ಆದ್ದರಿಂದ ಮನೆಯ ಸದಸ್ಯರು ಚೈತ್ರಾ ಹೆಸರನ್ನು ತೆಗೆದುಕೊಂಡಿದ್ದರಿಂದ ಅವರಿಗೆ ಬಿಗ್‌ಬಾಸ್ ಮನೆಯ ಫಿನಾಲೆ ಟಿಕೆಟ್ ಮಿಸ್ ಆಗಿದೆ. ಇದು ಅವರಿಗೆ ಸಿಕ್ಕಾಪಟ್ಟೆ ಬೇಸರ ತರಿಸಿದೆ.

ಸದ್ಯಕ್ಕೀಗ ತ್ರಿವಿಕ್ರಂ ಟಾಸ್ಕ್ ಗೆದ್ದು ಬಿಗ್‌ ಬಾಸ್ ಫಿನಾಲೆಗೆ ಎಂಟ್ರಿ ಕೊಟ್ಟಿದ್ದಾರೆ. ಇನ್ನು ಎರಡು ವಾರಗಳಲ್ಲಿ ಯಾರಿಗೆ ಫಿನಾಲೆ ಟಿಕೆಟ್ ಸಿಗುತ್ತೆ ಅನ್ನೋದು ಕುತೂಹಲ ಹುಟ್ಟಿಕೊಂಡಿದೆ. ಆದರೆ, ಫಿನಾಲೆ ಟಿಕೆಟ್ ಸಿಗದೇ ಇದ್ದಿದ್ದಕ್ಕೆ ಚೈತ್ರಾ ಕಣ್ಣೀರು ಹಾಕುತ್ತಿದ್ದಾರೆ. ಮನೆಯ ಸದಸ್ಯರ ವಿರುದ್ಧ ಬೇಸರ ಹೊರ ಹಾಕುತ್ತಿದ್ದಾರೆ. ವೀಕ್ಷಕರಿಗೆ ಚೈತ್ರಾ ಕುಂದಾಪುರ ಕಣ್ಣೀರು ಹಾಕುವುದನ್ನು ನೋಡುವುದಕ್ಕೆ ಆಗುತ್ತಿಲ್ಲ.

ಟಾಸ್ಕ್ ಸೋತ ಬಳಿಕ ಚೈತ್ರಾ ಕುಂದಾಪುರ ಮನೆ ಮಂದಿಯ ಬಳಿ ನೋವು ತೋಡಿಕೊಂಡಿದ್ದಾರೆ. ಫಿನಾಲೆ ಟಿಕೆಟ್‌ ಪಡೆಯಲು ಆಗಿಲ್ಲ ಅನ್ನೋದಕ್ಕೆ ಬೇಸರ ಆಗುತ್ತಿಲ್ಲ. ಆದರೆ, ಈ ವಾರ ಟಾಸ್ಕ್‌ನಲ್ಲಿ ಭಾಗವಹಿಸುವುದಕ್ಕೆ ಅವಕಾಶವಿಲ್ಲ ಎನ್ನುವ ಬೇಸರವಿದೆ ಎಂದು ಮನೆ ಸದಸ್ಯರ ಮುಂದೆ ಹೇಳಿಕೊಂಡು ಕಣ್ಣೀರು ಹಾಕಿದ್ದಾರೆ. ಹೀಗಾಗಿ ಸದ್ಯ ಮನೆಯಲ್ಲಿ ಹೈ ಡ್ರಾಮಾ ನಡೆಯುತ್ತಿದೆ. ಇನ್ನು ಎರಡು ವಾರ ಚೈತ್ರಾ ಮನೆಯಲ್ಲಿ ಉಳಿದುಕೊಂಡರೆ, ಫಿನಾಲೆ ತಲುಪಲಿದ್ದಾರೆ.

ಚೈತ್ರಾ ಕುಂದಾಪುರ ಬಿಗ್ ಬಾಸ್ ಮನೆ ಪ್ರವೇಶ ಮಾಡಿದ ದಿನದಿಂದ ವೀಕ್ಷಕರ ಗಮನವನ್ನು ಸೆಳೆದಿದ್ದಾರೆ. ತಮ್ಮ ಮಾತಿನಿಂದಲೇ ಮನೆಯಲ್ಲಿ ಸದ್ದು ಮಾಡಿದ್ದೂ ಇದೆ. ಟಾಸ್ಕ್ ವಿಷಯ ಬಂದಾಗ ಚೈತ್ರಾ ಉತ್ಸಾಹದಿಂದ ಭಾಗವಹಿಸಿದ್ದರು. ಆದರೆ, ಬಹುತೇಕ ಬಾರಿ ಅವರು ಸೋತಿದ್ದಾರೆ. ಇನ್ನು ಕೆಲವೊಮ್ಮೆ ಸದಸ್ಯರೊಂದಿಗೆ ವಾದ ವಿವಾದಕ್ಕೆ ಇಳಿದಿದ್ದೂ ಇದೆ. ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವುದಕ್ಕೆ ಹೋರಾಡಿದ್ದೂ ಇದೆ.

More from Filmibeat

English summary
Bigg Boss Kannada 11 Chaithra Kundapura blamed contestants after she lost finale ticket;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X