Bigg Boss Kannada 11: ಗೋಲ್ಡ್ ಸುರೇಶ್‌ಗೆ ಗೋಲ್ಡನ್ ಶರ್ಟ್ ಧರಿಸೋ ಆಸೆ: ಮೈಮೇಲಿರುವ ಚಿನ್ನದ ಬೆಲೆ ಎಷ್ಟು?
ಬಿಗ್‌ಬಾಸ್ ವೇದಿಕೆ ಹೀರೋನಾ ಜೀಯೋ ಮಾಡಿದ್ದಿದೆ. ಜೀರೋನಾ ಹೀರೋ ಮಾಡಿದ್ದೂ ಇದೆ. ಇಲ್ಲಿ ಕೆಲವರ ಸೆಲೆಬ್ರಿಟಿಗಳಷ್ಟೇ ಇರೋದಿಲ್ಲ. ಇಲ್ಲಿಗೆ ಸಮಾಜದ ಇನ್ನೊಂದು ಮಜಲಿನಲ್ಲಿ ಹೆಸರು ಮಾಡಿರುವ ವ್ಯಕ್ತಿಗಳು ಕೂಡ ಇದ್ದಾರೆ. ಪ್ರತಿ ಸೀಸನ್‌ನಲ್ಲೂ ಇಂತಹ ವ್ಯಕ್ತಿಯೊಬ್ಬರು ಇದ್ದೇ ಇರುತ್ತಾರೆ. ಅವರು ಸೆಲೆಬ್ರಿಟಿಗಳಾಗಿ ಬಿಗ್‌ಬಾಸ್ ಮನೆಯಿಂದ ಹೊರ ಬರುತ್ತಾರೆ.
ಈ ಬಾರಿ ಕೂಡ ಸಿನಿಮಾ, ಕಿರುತೆರೆಗೆ ಸಂಬಂಧ ಪಡೆದೇ ಇರುವ ವ್ಯಕ್ತಿಯೊಬ್ಬರು ಬಿಗ್‌ಬಾಸ್ ಮನೆಯೊಳಗೆ ಎಂಟ್ರಿ ಕೊಟ್ಟಿದ್ದಾರೆ. ಅವರೇ ಗೋಲ್ಡ್ ಸುರೇಶ್. ಮೈ ತುಂಬಾ ಬಂಗಾರ ಹಾಕಿಕೊಂಡು ಸದ್ದು ಮಾಡಿದ ಅಷ್ಟೇ ಮಂದಿ ಭಾರತದಲ್ಲಿ ಸಿಗುತ್ತಾರೆ. ಆದರೆ, ಸದ್ಯ ಉತ್ತರ ಕರ್ನಾಟಕ ಮೂಲದ ಗೋಲ್ಡ್ ಸುರೇಶ್ ಸದ್ದು ಮಾಡುತ್ತಿದ್ದಾರೆ.

ಬೆಳಗಾವಿಯ ಚಿಕ್ಕ ಹಳ್ಳಿಯೊಂದರ ಯುವಕ ಇಂದು ಶ್ರೀಮಂತನಾಗಿ ಬೆಳೆದು ನಿಂತಿದ್ದಾರೆ. ಸಿವಿಲ್ ಕಾಂಟ್ರಕ್ಟರ್ ಆಗಿ ಗುರುತಿಸಿಕೊಂಡಿರುವ ಗೋಲ್ಡ್ ಸುರೇಶ್ ರೈತರು ಕೂಡ ಹೌದು. ಯಾರೋ ಹಾಕಿದ ಸವಾಲನ್ನೇ ಸ್ವೀಕರಿಸಿ ಮೈತುಂಬಾ ಬಂಗಾರವನ್ನು ಹಾಕಿಕೊಂಡು ಪ್ರತಿ ಸವಾಲು ಹಾಕಿರುವ ಇವರ ಜರ್ನಿ ಅಷ್ಟೇ ಚಾಲೆಂಜಿಂಗ್. ಹಾಗಿದ್ದರೆ, ಇವರ ಮೈ ಮೇಲೆ ಇರುವ ಬಂಗಾರ ಎಷ್ಟು? ಅವರ ಮುಂದಿನ ಗುರಿ ಏನು?
ಅದೆಷ್ಟೇ ಹಣ ಗಳಿಸಿದ್ದರೂ, ಮೈ ತುಂಬಾ ಬಂಗಾರ ತೊಟ್ಟಿದ್ದರೂ, ಗೋಲ್ಡ್ ಸುರೇಶ್‌ಗೆ ಒಂದು ಕನಸು ಇದ್ದೇ ಇತ್ತು. ಬಿಗ್‌ಬಾಸ್ ಮನೆಗೆ ಹೋಗಬೇಕು ಅಂತ ಹಲವು ವರ್ಷಗಳಿಂದ ಕನಸು ಕಂಡಿದ್ದರು. ಅದನ್ನು ಈಗ ಈಡೇರಿಸಿಕೊಂಡಿದ್ದಾರೆ. ಬಿಗ್ ಬಾಸ್ ವೇದಿಕೆಯಲ್ಲಿ ಗೋಲ್ಡ್ ಸುರೇಶ್ ಅವರ ಅಮ್ಮನೇ ಈ ವಿಷಯವನ್ನು ಬಹಿರಂಗ ಪಡಿಸಿದ್ದರು. ಹೀಗಾಗಿ ಈ ಬಾರಿ ಗೋಲ್ಡ್ ಸುರೇಶ್ ಒಂದೊಳ್ಳೆ ಸ್ಪರ್ಧಿಯಾಗಬಹುದು ಅನ್ನೋ ನಿರೀಕ್ಷೆ ಹೆಚ್ಚಿದೆ.
ಗೋಲ್ಡ್ ಸುರೇಶ್ ಮೈ ಮೇಲೆ ಎಷ್ಟು ಬಂಗಾರ ಇರಬಹುದು ಅನ್ನೋ ಕುತೂಹಲ ವೀಕ್ಷಕರಲ್ಲಿ ಇತ್ತು. ಅದಕ್ಕೆ ಕಿಚ್ಚ ಸುದೀಪ್ ಮುಂದೆ ಗೋಲ್ಡ್ ಸುರೇಶ್ ಉತ್ತರ ಕೊಟ್ಟಿದ್ದಾರೆ. ಯಾವುದಾದರೂ ಕಾರ್ಯಕ್ರಮಕ್ಕೆ ಹೋಗುವುದಿದ್ದರೆ, ಅವರ ಮೈ ಮೇಲೆ ಸುಮಾರು ಎರಡೂವರೆಯಿಂದ ಮೂರು ಕೆಜಿ ಚಿನ್ನ ಇರುತ್ತೆ. ಇದರ ಬೆಲೆ ಸುಮಾರು ಎರಡೂವರೆಯಿಂದ ಮೂರು ಕೋಟಿ ರೂಪಾಯಿ ಎಂದು ಹೇಳಿಕೊಂಡಿದ್ದಾರೆ.
ಮೈ ಮೇಲೆ ಇಷ್ಟೊಂದು ಬಂಗಾರವನ್ನು ಹಾಕಿಕೊಂಡು ಹೇಗೆ ಓಡಾಡುತ್ತಾರೆ? ಬಂಗಾರದ ರಕ್ಷಣೆಯನ್ನು ಹೇಗೆ ಮಾಡುತ್ತಾರೆ? ಅನ್ನೋದನ್ನು ಗೋಲ್ಡ್ ಸುರೇಶ್ ರಿವೀಲ್ ಮಾಡಿದ್ದಾರೆ. ಅವರನ್ನು ಹಾಗೂ ಬಂಗಾರವನ್ನು ರಕ್ಷಣೆ ಮಾಡುವುದಕ್ಕೆ ಗೋಲ್ಡ್ ಸುರೇಶ್ ಜೊತೆ ಸುಮಾರು ಆರು ಮಂದಿ ಇದ್ದಾರೆ. ಇವರಲ್ಲಿ ಇಬ್ಬರು ಗನ್ ಮ್ಯಾನ್ ಕೂಡ ಇದ್ದಾರೆ. ಒಟ್ಟು ನಾಲ್ಕು ಮಂದಿ ಇವರ ಜೊತೆಗೆ ಇರುತ್ತಾರೆ.
ಕಡು ಬಡತನದಿಂದಲೇ ಶ್ರೀಮಂತ ಬದುಕು ಕಂಡು ಕೊಂಡಿರುವ ಗೋಲ್ಡ್ ಸುರೇಶ್ ಸ್ವರ್ಗಕ್ಕೆ ಹೋಗಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಬಿಗ್‌ಬಾಸ್ ಇವರ ಹೆಸರನ್ನು ರಿವೀಲ್ ಮಾಡಿದ ಕ್ಷಣದಲ್ಲೇ ಇವರಿಗೆ ಸುಮಾರು 1 ಲಕ್ಷದ 30 ಸಾವಿರಕ್ಕೂ ಅಧಿಕ ವೋಟ್ ಬಂದಿದ್ದರು. ಅಲ್ಲದೇ ಬಿಗ್ ಬಾಸ್ ವಿಶೇಷ ಅಧಿಕಾರ ಕೊಟ್ಟಿದ್ದ ಗೌತಮಿ ಜಾದವ್ ಹಾಗೂ ಲಾಯರ್ ಜಗದೀಶ್ ಇಬ್ಬರೂ ನರಕಕ್ಕೆ ಹೋಗಬೇಕು ಅಂತ ಹೇಳಿದ್ದರು. ಹೀಗಾಗಿ ನರಕಕ್ಕೆ ಎಂಟ್ರಿ ಕೊಟ್ಟಿದ್ದಾರೆ.


Click it and Unblock the Notifications











