BBK 11: ಬಿಗ್‌ಬಾಸ್ ಮನೆಯಿಂದ ಲಾಯರ್ ಜಗದೀಶ್, ರಂಜಿತ್ ಔಟ್? ಲಾಯರ್‌ಗೆ ಬಿತ್ತಾ ಗೂಸಾ?
ಕನ್ನಡದ ದುಬಾರಿ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ 11 ಆರಂಭ ಆಗಿ ಮೂರನೇ ವಾರಕ್ಕೆ ಕಾಲಿಟ್ಟಿದೆ. 17 ಮಂದಿ ಸ್ಪರ್ಧಿಗಳಲ್ಲಿ ಇದೀಗ ಒಬ್ಬರ ಬಿಗ್ ಬಾಸ್ ಮನೆಯಿಂದ ಹೊರಬಿದ್ದಿದ್ದೂ ಆಗಿದೆ. ಆದರೆ, ಮನೆಯೊಳಗೆ ಲಾಯರ್ ಜಗದೀಶ್ ಹಾಗೂ ಉಳಿದ ಸ್ಪರ್ಧಿಗಳ ನಡುವೆ ಪ್ರತಿ ದಿನ ಕಿತ್ತಾಟ ನಡೆಯುತ್ತಲೇ ಇದೆ. ಲಾಯರ್ ಜಗದೀಶ್ ಮಾತುಗಳಿಗೆ, ವರ್ತನೆಗಳಿಗೆ ಸ್ಪರ್ಧಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ನಿರೂಪಕ ಕಿಚ್ಚ ಸುದೀಪ್ ಕೂಡ ಬಿಗ್ ಬಾಸ್ ಸ್ಪರ್ಧಿಗಳಿಗೆ ಈ ವಾರ ಖಡಕ್ ಎಚ್ಚರಿಕೆಯನ್ನು ಕೊಟ್ಟಿದ್ದರು. ಯಾರೂ ಯಾವಾಗ ಬೇಕಾದರೂ ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗಬಹುದೆಂದು ಹೇಳಿದ್ದರು. ಸದ್ಯ ಬಿಗ್‌ಬಾಸ್ ಕನ್ನಡ ಸೀಸನ್ 11 ಸ್ಪರ್ಧಿಯಾಗಿರುವ ಲಾಯರ್ ಜಗದೀಶ್ ಹಾಗೂ ನಟ ರಂಜಿತ್ ಇಬ್ಬರನ್ನು ಬಿಗ್ ಬಾಸ್ ಮನೆಯಿಂದ ಹೊರ ದಬ್ಬಲಾಗಿದೆ ಅನ್ನೋ ಸುದ್ದಿ ಹರಿದಾಡುತ್ತಿದೆ.

ಅಲ್ಲದೆ ಕಲರ್ಸ್ ಕನ್ನಡ ರಿಲೀಸ್ ಮಾಡಿರುವ ಪ್ರೋಮೊದಲ್ಲಿ ಇಡೀ ಬಿಗ್ ಬಾಸ್ ಮನೆ ರಣರಂಗವಾಗಿದೆ. ಲಾಯರ್ ಜಗದೀಶ್, ತ್ರಿವಿಕ್ರಮ್, ಮಾನಸ ರಂಜಿತ್ ನಡುವೆ ಕಿತ್ತಾಟ ಶುರುವಾಗಿದ್ದು, ಬಳಿಕ ಇಡೀ ಮನೆ ಮಂದಿ ಕೂಗಾಡಿ, ಕಿರುಚಾಡಿಕೊಂಡಿದ್ದಾರೆ. ಈ ಘಟನೆ ಬಳಿಕ ಲಾಯರ್ ಜಗದೀಶ್ ಹಾಗೂ ನಟ ರಂಜಿತ್ ಇಬ್ಬರನ್ನು ಬಿಗ್ ಬಾಸ್ ಮನೆಯಿಂದ ಹೊರಗೆ ಕಳುಹಿಸಲಾಗಿದೆ ಎನ್ನಲಾಗಿದೆ.
ಬಿಗ್‌ಬಾಸ್ ಮನೆಯೊಳಗೆ ಪ್ರವೇಶ ಪಡೆದಿರೋ ಸ್ಪರ್ಧಿಗಳು ಆರಂಭದಲ್ಲೇ ಕಿತ್ತಾಡಿಕೊಳ್ಳುತ್ತಿದ್ದಾರೆ. ಮೊದಲ ವಾರವೇ ಕಿಚ್ಚ ಸುದೀಪ್ ಸ್ಪರ್ಧಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಕಳೆದ ಸೀಸನ್ (ಬಿಗ್ ಬಾಸ್ ಕನ್ನಡ 10) ಬೆಸ್ಟ್ ಅಂತ ಎಲ್ಲರೂ ಅಂತಾರೆ. ಅವರು ಕಿತ್ತಾಡಿಕೊಳ್ಳುವುದಕ್ಕೆ ಆರೇಳು ವಾರ ತೆಗೆದುಕೊಂಡಿದ್ದರು. ಆದರೆ, ಈ ಸೀಸನ್‌ನಲ್ಲಿ ಮೊದಲ ವಾರವೇ ಮನೆಯೊಳಗೆ ಸದಸ್ಯರು ಕಿತ್ತಾಡುವುದಕ್ಕೆ ಶುರು ಮಾಡಿದ್ದಾರೆಂದು ಬೇಸರ ಹೊರ ಹಾಕಿದ್ದರು.
ಬಿಗ್ ಬಾಸ್ ಆರಂಭ ಆದಲ್ಲಿಂದ ಬಿಗ್ ಬಾಸ್ ಮನೆಯೊಳಗೆ ಲಾಯರ್ ಜಗದೀಶ್ ಆರ್ಭಟ ಜೋರಾಗಿತ್ತು. ಎಲ್ಲಾ ಸ್ಪರ್ಧಿಗಳೊಂದಿಗೂ ಕಿತ್ತಾಡಿಕೊಳ್ಳುತ್ತಿದ್ದರು. ಅತ್ತ ಉಳಿದ ಸ್ಪರ್ಧಿಗಳು ಕೂಡ ಲಾಯರ್ ಜಗದೀಶ್ ಜೊತೆ ಫೈಟ್‌ಗೆ ಇಳಿದಿದ್ದರು. ಈಗ ಕೂಡ ಜಗದೀಶ್ ಹಾಗೂ ಮನೆ ಸದಸ್ಯರ ನಡುವೆ ಯಾವುದೋ ವಿಚಾರಕ್ಕೆ ಕಿತ್ತಾಟ ನಡೆದಿದೆ. ಈ ವೇಳೆ ಮನೆ ಮಂದಿ ಹಾಗೂ ಜಗದೀಶ್ ನಡುವೆ ಮಾತಿಗೆ ಮಾತು ಬೆಳೆದಿದೆ. ಬಳಿಕ ಕೈ ಕೈ ಮಿಲಾಯಿಸಿಕೊಳ್ಳುವವರೆಗೂ ಹೋಗಿದೆ ಎಂದು ಹೇಳಲಾಗಿದೆ.

ಈ ವೇಳೆ ಲಾಯರ್ ಜಗದೀಶ್ ಹಾಗೂ ನಟ ರಂಜಿತ್ ನಡುವೆ ವಾಗ್ವಾದ ತಾರಕ್ಕೇರಿತ್ತು. ಈ ಬಿಸಿ ವಾತಾವರಣದಲ್ಲಿ ಲಾಯರ್ ಜಗದೀಶ್ ವಿರುದ್ಧ ಕೋಪಗೊಂಡಿದ್ದ ರಂಜಿತ್ ಮುಖಕ್ಕೆ ಪಂಚ್ ಕೊಟ್ಟಿದ್ದಾರೆ ಎನ್ನಲಾಗಿದೆ. ಹೀಗಾಗಿ ಲಾಯರ್ ಜಗದೀಶ್ ಹಾಗೂ ರಂಜಿತ್ ಇಬ್ಬರನ್ನೂ ಬಿಗ್ ಬಾಸ್ ಮನೆಯಿಂದ ಹೊರಗೆ ಕಳುಹಿಸಲಾಗಿದೆ ಎಂಬ ಸುದ್ದಿ ಓಡಾಡುತ್ತಿದೆ. ಆದರೆ, ಈ ಬಗ್ಗೆ ಕಲರ್ಸ್ ಕನ್ನಡದಿಂದ ಅಧಿಕೃತ ಮಾಹಿತಿ ಇನ್ನೂ ಹೊರಬರಬೇಕಿದೆ.
ಸದ್ಯ ಲಾಯರ್ ಜಗದೀಶ್ ಹಾಗೂ ಮನೆ ಮಂದಿ ಕಿತ್ತಾಡಿಕೊಂಡಿರುವ ಪ್ರೋಮೊವನ್ನು ಕಲರ್ಸ್ ಕನ್ನಡ ರಿಲೀಸ್ ಮಾಡಿದೆ. ಇದರಲ್ಲಿ ಸ್ವತ: ಬಿಗ್‌ಬಾಸ್ ತಾಳ್ಮೆ ಕಳೆದುಕೊಂಡು ಸ್ಪರ್ಧಿಗಳ ವಿರುದ್ಧ ಗರಂ ಆಗಿದ್ದು ಕಂಡು ಬಂದಿದೆ. ಈ ಹಿಂದೆ ಕೂಡ ಹುಚ್ಚಾ ವೆಂಕಟ್ ಹಲ್ಲೆ ಮಾಡಿದ್ದರು. ಅವರನ್ನು ತಕ್ಷಣವೇ ಬಿಗ್ ಬಾಸ್ ಮನೆಯಿಂದ ಹೊರಗೆ ಹಾಕಲಾಗಿತ್ತು. ಈ ಮಧ್ಯೆ ಲಾಯರ್ ಜಗದೀಶ್ ಹೊರಬಿದ್ದಿರುವ ಫೋಟೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.


Click it and Unblock the Notifications











