BBK 11: ಕಿಚ್ಚ ಸುದೀಪ್‌ಗೂ ತಲೆ ನೋವಾಗುತ್ತಾರಾ ಲಾಯರ್ ಜಗದೀಶ್? ಡೋಂಟ್ ಕೇರ್ ಅಂದ್ರೆ ಮುಂದೇನು?

ಬಿಗ್‌ ಬಾಸ್ ಕನ್ನಡ ಸೀಸನ್ 11 ಶುರುವಾಗಿ ಇನ್ನೇನು ಒಂದು ವಾರ ಆಯ್ತು. ಈ ಸೀಸನ್‌ನ ಮೊದಲ ವೀಕೆಂಡ್‌ನಲ್ಲಿ ಕಿಚ್ಚ ಸುದೀಪ್ ಎಂಟ್ರಿ ಕೊಡುವ ಕಾಲನೂ ಬಂದಿದೆ. ಶನಿವಾರ ಹಾಗೂ ಭಾನುವಾರ ಎರಡು ದಿನ ಕಿಚ್ಚ ಸುದೀಪ್ ಬಿಗ್‌ ಬಾಸ್ ಮನೆಯೊಳಗಿರುವ ಸ್ಪರ್ಧಿಗಳ ಮುಂದೆ ಪ್ರತ್ಯಕ್ಷ ಆಗುತ್ತಾರೆ. ತಪ್ಪು ಮಾಡಿದವರಿಗೆ ಬುದ್ದಿ ಹೇಳ್ತಾರೆ. ಎಗರಾಡುತ್ತಿರುವವರನ್ನು ಕೂಲ್ ಮಾಡ್ತಾರೆ. ಒಂದು ವಾರದ ರಿವ್ಯೂ ಕೊಡುತ್ತಾರೆ.

ಈ ಸೀಸನ್‌ನ ಮೊದಲ ವಾರ ಲಾಯರ್ ಜಗದೀಶ್ ಹೈಲೈಟ್ ಆಗಿದ್ದಾರೆ. ಸ್ವರ್ಗದವರನ್ನೂ ಬಿಟ್ಟಿಲ್ಲ ನರಕದವರನ್ನೂ ಬಿಟ್ಟಿಲ್ಲ. ಒಬ್ಬೊಬ್ಬರನ್ನು ಹುಡುಕಿಕೊಂಡು ಹೋಗಿ ಕಾಡಿದ್ದಾರೆ. ಮೇಲ್ನೋಟಕ್ಕೆ ಬಿಗ್‌ಬಾಸ್ ಮನೆಯಲ್ಲಿ 16 ಸ್ಪರ್ಧಿಗಳೇ ಒಂದು. ಲಾಯರ್ ಜಗದೀಶ್ ಅವರೇ ಒಂದು ಅನ್ನುವಂತಾಗಿದೆ. ಎದುರಿಗೆ ಬಂದಾಗ ಮಾತಾಡಿಸೋದು ಬಿಟ್ಟರೆ, ಉಳಿದ ಸಮಯದಲ್ಲಿ ಲಾಯರ್ ಜಗದೀಶ್ ಸಿಂಗಲ್.

Bigg Boss Kannada 11 contestant lawyer Jagadish headache for Kichcha Sudeep at the weekend

ಅದಕ್ಕೆ ಏನೋ ಸಿಂಗಲ್ ಸಿಂಹ ಅಂತ ಹೇಳಿಕೊಂಡು ಮನೆಯೊಳಗೆ ಓಡಾಡುತ್ತಿದ್ದಾರೆ. ಹಾಗೂ, ಹೀಗೂ ಒಂದು ವಾರ ಕಳೆದು ಹೋಗಿದೆ. ವೀಕೆಂಡ್‌ನಲ್ಲಿ ಕಿಚ್ಚ ಸುದೀಪ್ ಎಂಟ್ರಿ ಕೊಡುತ್ತಿದ್ದಾರೆ. ಕಿಚ್ಚ ಸುದೀಪ್ ಒಬ್ಬೊಬ್ಬರೇ ಸ್ಪರ್ಧಿಯನ್ನು ಮಾತಾಡಿಸಿಕೊಂಡು ಬರುತ್ತಾರೆ. ಲಾಯರ್ ಜಗದೀಶ್ ಬಳಿ ಬಂದಾಗ ಕಿಚ್ಚ ಸುದೀಪ್ ರಿಯಾಕ್ಷನ್ ಹೇಗಿರುತ್ತೆ? ಕಿಚ್ಚನಿಗೆ ಅವಾಜ್ ಹಾಕಿದೆ ಏನಾಗಬಹುದು? ಕಿಚ್ಚನ ಎದುರು ಲಾಯರ್ ಜಗದೀಶ್ ಹೇಗೆ ಮಾತಾಡಬಹುದು? ಅನ್ನೋ ಕುತೂಹಲವಿದೆ.

ಇದೂವರೆಗೂ ಲಾಯರ್ ಜಗದೀಶ್ ಎಲ್ಲರೊಂದಿಗೂ ಕಿತ್ತಾಡಿಕೊಂಡಿದ್ದಾರೆ. ಸ್ವರ್ಗದಲ್ಲಿ ಇರುವ 10 ಮಂದಿಯೊಂದಿಗೂ ಸಂಬಂಧ ಸರಿಯಿಲ್ಲ. ಇತ್ತ ನರಕವಾಸಿಗಳಿಗೂ ಲಾಯರ್ ಜಗದೀಶ್ ಅಷ್ಟಕ್ಕಷ್ಟೇ. ಅಷ್ಟಕ್ಕೂ ಲಾಯರ್ ಜಗದೀಶ್ ಸ್ಟ್ರಾಟಜಿ ಏನು ಅಂತಾನೇ ಗೊತ್ತಾಗುತ್ತಿಲ್ಲ? ಮೈಂಡ್ ಗೇಮ್ ಆಡುತ್ತಿದ್ದಾರಾ? ಇಲ್ಲ ಸ್ಪರ್ಧಿಗಳ ಮಾತಿಗೆ ಟ್ರಿಗರ್ ಆಗುತ್ತಿದ್ದಾರಾ? ಗೊತ್ತಿಲ್ಲ. ಕಿಚ್ಚ ಸುದೀಪ್ ಬಾಯಿ ಬಿಡಿಸಬೇಕಿದೆ.

Bigg Boss Kannada 11 contestant lawyer Jagadish headache for Kichcha Sudeep at the weekend

ನಾಲ್ಕೈದು ದಿನ ಎಲ್ಲರ ಮೇಲೂ ಎಗರಾಡಿದ್ದ ಜಗದೀಶ್ ಬಿಗ್‌ ಬಾಸ್ ಕಾರ್ಯಕ್ರಮವನ್ನೇ ಮುಚ್ಚಿಸುತ್ತೇನೆ. ಬಿಗ್‌ ಬಾಸ್ ಅನ್ನು ಎಕ್ಸ್‌ಪೋಸ್ ಮಾಡುತ್ತೇನೆ ಅಂತ ಕಿರುಚಾಡಿದ್ದಾರೆ. ಧನರಾಜ್ ಆಚಾರ್ ಮೇಲೆ ಎಗರಾಡಿದ್ದ ಲಾಯರ್ ಜಗದೀಶ್ ತಮ್ಮ ವರಸೆಯನ್ನೇ ಬದಲಿಸಿದ್ದಾರೆ. ಬಿಗ್‌ ಬಾಸ್ ಮುಂದೆ ಕ್ಷಮೆ ಕೇಳಿದ್ದಾರೆ. ಒಂದಿಷ್ಟು ಹೊತ್ತು ಸೈಲೆಂಟ್ ಆಗಿದ್ದವರು ಮತ್ತೆ ಎಗರಾಡಿದ್ದಾರೆ.

ಧನರಾಜ್ ಬಳಿಕ ಈಗ ಉಗ್ರಂ ಮಂಜು ವಿರುದ್ಧ ತಿರುಗಿ ಬಿದ್ದಿದ್ದಾರೆ. ಕ್ಯಾಪ್ಟನ್ಸಿ ವಿಚಾರಕ್ಕೆ ಉಗ್ರಂ ಮಂಜು ವಿರುದ್ಧ ಕಿಡಿಕಾರಿದ್ದಾರೆ. ಸಿಂಡಿಕೇಟ್ ಮಾಡಿಕೊಂಡು ಗೇಮ್ ಆಡುತ್ತಿದ್ದಾರೆ ಅಂತ ಉಗ್ರಂ ಮಂಜು ವಿರುದ್ಧ ತಿರುಗಿಬಿದ್ದಿದ್ದರು. ಮತ್ತೆ ಕೆಲವೇ ಕ್ಷಣದಲ್ಲಿ ಎಲ್ಲರಿಗೂ ಕ್ಷಮೆ ಹೇಳಿದ್ದಾರೆ. ಒಂದು ಹಂತದಲ್ಲಿ ಬಿಗ್ ಬಾಸ್ ಮನೆಯಿಂದ ಹೊರ ಹೋಗುತ್ತೇನೆ ಅಂತಾನೂ ಹೊರಟು ನಿಂತಿದ್ದರು. ಈಗ ಇರುವ ಪ್ರಶ್ನೆ ವೀಕೆಂಡ್‌ನಲ್ಲಿ ಲಾಯರ್ ಜಗದೀಶ್ ಅವರನ್ನು ಕಿಚ್ಚ ಸುದೀಪ್ ಹೇಗೆ ಹ್ಯಾಂಡಲ್ ಮಾಡುತ್ತಾರೆ?

ಕಿಚ್ಚ ಸುದೀಪ್ ಮುಂದೆ ಲಾಯರ್ ಜಗದೀಶ್ ತಮ್ಮ ವರ್ತನೆಯನ್ನು ಮುಂದುವರೆಸಿದರೆ ಏನಾಗುತ್ತೆ? ಈ ಪ್ರಶ್ನೆಗೆ ಹಲವು ಸಾಧ್ಯತೆಗಳಿಗೆ. ಕಿಚ್ಚ ಸುದೀಪ್ ವೀಕೆಂಡ್‌ ಎಪಿಸೋಡ್‌ನಲ್ಲಿ ಲಾಯರ್ ಜಗದೀಶ್‌ಗೆ ಅವರ ವರ್ತನೆ ಬಗ್ಗೆ ಮನವರಿಕೆ ಮಾಡಿಕೊಡಬಹುದು. ಅದನ್ನು ಲಾಯರ್ ಜಗದೀಶ್ ಕೂಡ ಕೇಳಬಹುದು. ಮುಂದೆ ಸುಧಾರಿಸಿಕೊಳ್ಳಬಹುದು. ಇಲ್ಲ ಮನೆಯವರೆಲ್ಲರ ವಿರುದ್ಧ ದೂರು ಕೊಡಬಹುದು. ಅದನ್ನು ಕಿಚ್ಚ ಸುದೀಪ್ ಸರಿಪಡಿಸಿ ಒಂದೊಳ್ಳೆ ವಾತಾವರಣ ಮಾಡಬಹುದು. ಇಲ್ಲವೇ ಕಿಚ್ಚ ಸುದೀಪ್ ವಿರುದ್ಧವೇ ವಕೀಲ್ ಸಾಬ್ ಸಿಡಿದೇಳಬಹುದು. ಆಗ ಏನಾಗುತ್ತೆ? ಅನ್ನೋದು ವೀಕೆಂಡ್‌ನಲ್ಲೇ ಉತ್ತರ ಸಿಗುತ್ತೆ.

More from Filmibeat

English summary
Will Bigg Boss Kannada 11 contestant lawyer Jagadish headache for Kichcha Sudeep at the weekend?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X