ಮದುವೆಯಾದ 2 ತಿಂಗಳಿಗೇ ಬಿಗ್ ಬಾಸ್ ರಂಜಿತ್ ಮನೆಯಲ್ಲಿ ರಂಪಾಟ; ಏನಂತಾರೆ ಮಾಜಿ ಸ್ಪರ್ಧಿ?
ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿ ರಂಜಿತ್ ಇತ್ತೀಚೆಗಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಬಿಗ್ ಬಾಸ್ ಬಳಿಕ ಮತ್ತೆ ಜನಪ್ರಿಯತೆ ಹೆಚ್ಚಿಕೊಂಡಿದ್ದ ನಟ ವೈವಾಹಿಕ ಜೀವನವನ್ನು ಎಂಜಾಯ್ ಮಾಡುತ್ತಿದ್ದಾರೆ. ಇದೇ ವೇಳೆ ಅವರ ಸುತ್ತ ವಿವಾದ ಕೂಡ ಹುಟ್ಟಿಕೊಂಡಿದೆ. ಅಕ್ಕಂದಿರ ಜೊತೆ ಕಿತ್ತಾಡಿಕೊಂಡು ಸುದ್ದಿಯಾಗಿದ್ದಾರೆ. ಮನೆಯಲ್ಲಿ ಕಿತ್ತಾಡಿರೋ ವಿಡಿಯೋದ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆ.
ಬಿಗ್ ಬಾಸ್ ಮನೆಯಿಂದಲೂ ಕಿತ್ತಾಡಿಕೊಂಡು ಹೊರ ಬಂದಿದ್ದ ರಂಜಿತ್ ಮೇಲೆ ಅನುಮಾನ ಮಾಡುವಂತಿದೆ. ಅಲ್ಲದೆ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವಿಡಿಯೋ ಕೂಡ ಅದೇ ಭಾವನೆಯನ್ನೇ ಮೂಡಿಸುತ್ತಿದೆ. ಅಕ್ಕಂದಿರ ಮೇಲೆ ರಂಜಿತ್ ಹಾಗೂ ಅವರ ಪತ್ನಿಯೇ ಗಲಾಟೆ ಮಾಡಿರಬಹುದೆಂದು ಚರ್ಚೆಯಾಗುತ್ತಿದೆ. ಈ ಕಾರಣಕ್ಕೆ ಖುದ್ದಾಗಿ ರಂಜಿತ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ರಂಜಿತ್ ಮಾಧ್ಯಮಗಳಿಗೆ ನೀಡಿದ ಪ್ರತಿಕ್ರಿಯೆಯಲ್ಲಿ ವ್ಯತಿರಿಕ್ತ ಹೇಳಿಕೆಗಳನ್ನು ಕೊಟ್ಟಿದ್ದಾರೆ. ಅಕ್ಕಂದಿರೇ ತನ್ನ ಮೇಲೆ ಹಾಗೂ ಪತ್ನಿಯ ಮೇಲೆ ಹಲ್ಲೆ ಮಾಡುವುದಕ್ಕೆ ಮುಂದಾಗಿದ್ದರೆಂದು ರಂಜಿತ್ ಹೇಳಿಕೊಂಡಿದ್ದಾರೆ. ಮದುವೆ ಆಗಿ ಎರಡೇ ತಿಂಗಳಿಗೆ ಮನೆಯಲಲ್ಲಿ ಅಕ್ಕ-ತಮ್ಮನ ನಡುವೆ ಕಿತ್ತಾಟ ಏಕೆ? ಅನ್ನೋ ಪ್ರಶ್ನೆಗಳಿಗೆ ರಂಜಿತ್ ಕೊಟ್ಟಿರುವ ಉತ್ತರ ಹೀಗಿದೆ.
ಫ್ಲ್ಯಾಟ್ ಬೇಕು ಅಂತ ಗಲಾಟೆ
"ನಮ್ಮ ಅಕ್ಕಂದಿರು ಮೂರನೇ ಮಹಡಿಯಲ್ಲಿ ಇದ್ದಾರೆ. ನಾನು ಮೊದಲನೇ ಮಹಡಿಯಲ್ಲಿ ಇದ್ದೇನೆ. ಇವತ್ತು ಗಲಾಟೆ ಆಗಿರೋದು ಅವರು ನಮ್ಮ ಮನೆಯೊಳಗೆ ಬಂದು ಗಲಾಟೆ ಮಾಡಿರೋದು. ನಾನು ಅವರ ಮನೆಗೆ ಹೋಗಿ ಗಲಾಟೆ ಮಾಡಿಲ್ಲ. ಈ ಅಪಾರ್ಟ್‌ಮೆಂಟ್ ಅವರಿಗೆ ವಾಪಸ್ ಬೇಕು ಅಂತ ತುಂಬಾನೇ ಗಲಾಟೆ ಮಾಡುತ್ತಿದ್ದಾರೆ. ಯಾಕಂದ್ರೆ, ಇದು ಅವರ ಹೆಸರಿನಲ್ಲಿ ಇದೆ. ನಾನು ನನ್ನ ಹೆಸರಿನಲ್ಲಿ ಮಾಡಿಕೊಂಡಿಲ್ಲ. ಅವರ ಹೆಸರಿನಲ್ಲಿ ಮಾಡಿಕೊಂಡಿದ್ದು. 2017-2018ನಲ್ಲಿ ಈ ಫ್ಲ್ಯಾಟ್ ಅನ್ನು ಖರೀದಿ ಮಾಡಿದ್ದೆ. ಹಾಗಾಗಿ ಅವರು ಈಗ ಗಲಾಟೆ ಮಾಡುತ್ತಿದ್ದಾರೆ." ಎಂದು ರಂಜಿತ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

ಅಕ್ಕನ ಹೆಸರು ಫ್ಲ್ಯಾಟ್ ಖರೀದಿ
"ನಾನು 2017ನಲ್ಲಿ ಮುಂಬೈನಲ್ಲಿ ಇರುತ್ತಿದ್ದೆ. ಶನಿ ಸೀರಿಯಲ್ ಮಾಡುವಾಗ ಅಲ್ಲಿ ಇರುತ್ತಿದೆ. ಆ ಟೈಮ್‌ನಲ್ಲಿ ಲೋನ್ ಆಗುವುದಿಲ್ಲ ಅನ್ನೋ ಒಂದೇ ಒಂದು ಕಾರಣಕ್ಕೆ ನಾನು ಅಕ್ಕನ ಹೆಸರಿನಲ್ಲಿ ಮಾಡಿದ್ದೆ. ಯಾಕಂದ್ರೆ ಅವರಿಗೆ ಸ್ಯಾಲರಿ ಬರುತ್ತಿತ್ತು. ಲೋನ್ ಸುಲಭವಾಗಿ ಸಿಗುತ್ತಿತ್ತು. ನಾನು ಮುಂಬೈನಿಂದ ಅವರಿಗೆ ಆನ್‌ಲೈನ್ ಮೂಲಕ ಹಣ ಕಳುಹಿಸಿದ್ದೆ. ಆ ಫ್ರೂಫ್ ಅನ್ನು ನಾನು ಅವರಿಗೆ ಕೊಟ್ಟಿದ್ದೇನೆ." ಎಂದು ಹೇಳಿದ್ದಾರೆ.
ಮದುವೆಯಾದ 25 ದಿನಕ್ಕೆ ನೋಟೀಸ್
"ಮದುವೆಯಾದ 25 ದಿನಗಳಲ್ಲಿ ನನಗೆ ಲೀಗಲ್ ನೋಟೀಸ್ ಕಳುಹಿಸಿದರು. ಅದಕ್ಕೆ ವಕೀಲರ ಮೂಲಕ ರಿಪ್ಲೈ ಕೂಡ ಮಾಡಿದ್ದೇನೆ. ಇದು ಸಿವಿಲ್ ಮ್ಯಾಟರ್ ಆಗಿರುವುದರಿಂದ ಸ್ಟೇಷನ್ ಮೂಲಕ ಕ್ಲಿಯರ್ ಆಗಬೇಕು ಅಂತ ಪೊಲೀಸರೇ ಹೇಳಿದ್ದಾರೆ. ಹೀಗೆ ಹೇಳಿದ ಮೇಲೂ ನನಗೆ ನನ್ನ ಹೆಂಡ್ತಿಗೆ ಹೊಡೆದಿದ್ದಾರೆ. ಮಂಗಳವಾರ ಮತ್ತೆ ಬಂದು ನನ್ನ ಹೆಂಡ್ತಿಗೆ ಹೊಡೆದಿದ್ದಾರೆ. ಇದು ಎರಡನೇ ಬಾರಿ ನನ್ನ ಹೆಂಡ್ತಿ ಮೇಲೆ ಹಲ್ಲೆ ಆಗುತ್ತಿರೋದು. ಹೀಗಾಗಿ ಫ್ಯಾಮಿಲಿ ಮ್ಯಾಟರ್, ಫ್ಯಾಮಿಲಿ ಮೂಲಕವೇ ಕ್ಲಿಯರ್ ಆಗಬೇಕು ಅಂದುಕೊಂಡು ಪೊಲೀಸರ ಮೊರೆ ಹೋಗಿದ್ದೆ. ಪೊಲೀಸರು ಅವರಿಗೆ ಉಗಿದು ಕಳಿಸಿದ್ದಾರೆ." ಎಂದು ಹೇಳಿದ್ದಾರೆ.
ತಂದೆಯಿಂದಲೇ ಸಪೂರ್ಟ್
"ತಂದೆನೇ ಅಕ್ಕಂದಿರಿಗೆ ಸಪೋರ್ಟ್ ಮಾಡುತ್ತಿದ್ದಾರೆ ನಾನು ಏನು ಮಾಡೋಕೆ ಆಗುತ್ತೆ. ಅಕ್ಕಂದಿರು ತಂದೆಗೆ ನನ್ನ ಬಗ್ಗೆ ಇಲ್ಲ ಸಲ್ಲದ ಆರೋಪಗಳನ್ನು ಮಾಡಿದಾಗ ಹರ್ಟ್ ಆಗಿರುತ್ತೆ. ನಮ್ಮ ಅಪ್ಪ ನನಗೆ ಹಾಗೂ ನನ್ನ ಹೆಂಡತಿಗೆ ಹೊಡೆದಿದ್ದಾರೆ. ಅದು ಮೆಡಿಕಲ್ ಕೂಡ ಆಗಿದೆ. ಇದು ಅಕ್ಕಂದಿರು ಮಾಡಿರುವಂತಹ ಕೆಲಸ. ಇದು ಸಿವಿಲ್ ಮ್ಯಾಟರ್ ಆಗಿದ್ದರಿಂದ ಕೋರ್ಟ್‌ಗೆ ಹೋಗಬೇಕಿತ್ತು. ಆದರೆ, ಮೀಡಿಯಾನಲ್ಲಿ ಬಂದು ಕೂತಿದ್ದಾರೆ ಅಂದರೆ, ಅವರು ನನ್ನ ಹೆಸರನ್ನು ಹಾಳು ಮಾಡಲು ಸ್ಕೆಚ್ ಹಾಕಿದ್ದಾರೆ ಅಂತ ಹೇಳಬಹುದು."


Click it and Unblock the Notifications











