ಪ್ರೀತಿಸಿದ ಹುಡುಗಿ ಜೊತೆ ಬಿಗ್ ಬಾಸ್ ರಂಜಿತ್ ನಿಶ್ಚಿತಾರ್ಥ: ರಂಜಿತ್ ಮನಗೆದ್ದ ಈ ಚೆಲುವೆ ಯಾರು?

ಬಿಗ್‌ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿ ರಂಜಿತ್ ಮನೆಯಲ್ಲಿ ಕೆಲವೇ ದಿನ ಇದ್ದರೂ ಕನ್ನಡಿಗರಿಗೆ ತುಂಬಾನೇ ಚಿರಪರಿಚಿತರಾಗಿದ್ದಾರೆ. ಕೊನೆಯ ಅಭ್ಯರ್ಥಿಯಾಗಿ ಬಿಗ್ ಬಾಸ್ ಮನೆಯೊಳಗೆ ಎಂಟ್ರಿ ಕೊಟ್ಟಿದ್ದ ರಂಜಿತ್ ಅನಿರೀಕ್ಷಿತವಾಗಿ ಕೆಲವೇ ದಿನಗಳಲ್ಲಿ ಅನಿರೀಕ್ಷಿತವಾಗಿ ಮನೆಯಿಂದ ಹೊರ ಬಂದಿದ್ದರು. ಇದೇ ರಂಜಿತ್ ಈಗ ಸದ್ದಿಲ್ಲದೆ ತಾನು ಪ್ರೀತಿಸಿದ ಹುಡುಗಿಯೊಂದಿಗೆ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ.

ರಂಜಿತ್ ಕುಮಾರ್ ಬಿಗ್‌ ಬಾಸ್ ರಿಯಾಲಿಟಿ ಶೋ ಮೂಲಕ ಜನಪ್ರಿಯರಾಗಿದ್ದಾರೆ. ಮನೆಯಲ್ಲಿದ್ದ ಮೊದಲ ಎರಡು ವಾರಗಳಲ್ಲಿಯೇ ರಂಜಿತ್ ವೀಕ್ಷಕರಿಗೆ ಇಷ್ಟ ಆಗಿದ್ದರು. ರಂಜಿತ್ ಆಟ, ನೇರ ನುಡಿಗಳು ವೀಕ್ಷಕರು ಇಷ್ಟ ಪಡುವಂತೆ ಮಾಡಿದ್ದವು. ಆದರೆ, ರಂಜಿತ್ ಹಾಗೂ ಲಾಯರ್ ಜಗದೀಶ್ ನಡುವಿನ ಕಿತ್ತಾಟ ಆಗಾಗ ತಾರಕ್ಕೇರಿತ್ತಿತ್ತು. ಈ ವೇಳೆ ರಂಜಿತ್ ತಾಳ್ಮೆ ಕಳೆದುಕೊಂಡಿದ್ದರು.

Bigg Boss Kannada 11 contestant Ranjith got engaged to Manasa See Photos

ಲಾಯರ್ ಜಗದೀಶ್ ಜೊತೆಗೆ ಸನ್ನಿವೇಶವೊಂದರಲ್ಲಿ ಕಿತ್ತಾಡಿಕೊಂಡಿದ್ದ ರಂಜಿತ್ ಕೈ ಕೈ ಮಿಲಾಯಿಸಿಕೊಂಡಿದ್ದರು. ಹೀಗಾಗಿ ನಿಯಮದ ಪ್ರಕಾರ, ರಂಜಿತ್ ಹಾಗೂ ಲಾಯರ್ ಜಗದೀಶ್ ಇಬ್ಬರೂ ಬಿಗ್ ಬಾಸ್ ಮನೆಯಿಂದ ಹೊರಗೆ ಬರಬೇಕಾಯ್ತು. ಅಲ್ಲಿಂದ ಮಾಧ್ಯಮಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದ ರಂಜಿತ್ ಈಗ ಸೈಲೆಂಟ್ ಆಗಿ ವೈವಾಹಿಕ ಜೀವನಕ್ಕೆ ಕಾಲಿಡುವುದಕ್ಕೆ ಸಜ್ಜಾಗಿದ್ದಾರೆ. ಅಷ್ಟಕ್ಕೂ ರಂಜಿತ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಹುಡುಗಿ ಯಾರು? ಅನ್ನೋದನ್ನು ತಿಳಿಯಲು ಮುಂದೆ ಓದಿ.

ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಹುಡುಗಿಯೊಂದಿಗೆ ರಂಜಿತ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆಂದು ವರದಿಯಾಗಿದೆ. ಅಂದ್ಹಾಗೆ ರಂಜಿತ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಆ ಹುಡುಗಿಯ ಹೆಸರು ಮಾನಸಾ ಗೌಡ ಎನ್ನಲಾಗಿದೆ. ಇಬ್ಬರೂ ಕೆಲವು ವರ್ಷಗಳಿಂದ ಪ್ರೀತಿಯಲ್ಲಿ ಬಿದ್ದಿದ್ದರು. ಈಗ ಮನೆಯವರನ್ನು ಒಪ್ಪಿಸಿ ವೈವಾಹಿಕ ಜೀವನಕ್ಕೆ ಕಾಲಿಡುವುದಕ್ಕೆ ಸಜ್ಜಾಗಿದ್ದಾರೆ.

ಬಿಗ್‌ ಬಾಸ್ ರಂಜಿತ್ ತಮ್ಮ ಎಂಗೇಜ್‌ಮೆಂಟ್ ಫೋಟೊಗಳನ್ನು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ರಂಜಿತ್ ಹಾಗೂ ಮಾನಸಾ ಗೌಡ ಇಬ್ಬರೂ ಟ್ರೆಡಿಷನಲ್ ಲುಕ್‌ನಲ್ಲಿ ಮಿಂಚಿದ್ದಾರೆ. ಬಿಳಿ ಬಣ್ಣದ ಟ್ರೆಡಿಷನಲ್ ಡ್ರೆಸ್‌ನಲ್ಲಿ ರಂಜಿತ್ ಮಿಂಚಿದ್ದರೆ, ಅತ್ತ ಭಾವಿ ಪತ್ನಿ ಮನಸಾ ಗೌಡ ಗೋಲ್ಡನ್ ಕಲರ್ ಸೀರೆಯುಟ್ಟು ಮಿಂಚಿದ್ದರು. ಇಬ್ಬರೂ ಜೊತೆಯಾಗಿ ನಿಂತ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ.

ಇನ್ನು ರಂಜಿತ್ ನಿಶ್ವಿತಾರ್ಥ ಮಾಡಿಕೊಂಡಿರುವ ಹುಡುಗು ಮಾನಸಾ ಗೌಡ ಸಿನಿಮಾರಂಗಕ್ಕೆ ಸಂಬಂಧ ಪಟ್ಟವರಲ್ಲ. ಫ್ಯಾಷನ್ ಕ್ಷೇತ್ರದಲ್ಲಿ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅಂದರೆ, ವೃತ್ತಿಯಲ್ಲಿ ಇವರು ಫ್ಯಾಷನ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದಾರೆ. ಫ್ಯಾಷನ್ ಸ್ಟೇಟ್ಮೆಂಟ್ ಅನ್ನುವ ಬ್ರ್ಯಾಂಡ್‌ನ ಫೌಂಡರ್ ಆಗಿದ್ದಾರೆ. ಬಿಗ್ ಬಾಸ್ ರಂಜಿತ್ ಹಾಗೂ ಮಾನಸಾ ಗೌಡ ನಿಶ್ಚಿತಾರ್ಥದ ಫೋಟೊಗಳಿಗೆ ಅಭಿಮಾನಿಗಳು ಇಬ್ಬರೂ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.

ಬಿಗ್‌ ಬಾಸ್ ಕನ್ನಡ ಸೀಸನ್ 11ರಿಂದ ಹೊರ ಬಂದ ಬಳಿಕ ರಂಜಿತ್ ಹೊಸ ಪ್ರಾಜೆಕ್ಟ್‌ಗಳನ್ನು ಅನೌನ್ಸ್ ಮಾಡಿಲ್ಲ. 'ಶನಿ' ಧಾರಾವಾಹಿಯಲ್ಲಿ ಸೂರ್ಯದೇವನಾಗಿ ನಟಿಸಿದ್ದ ರಂಜಿತ್ ಬಳಿಕ ಹಲವು ಪ್ರಾಜೆಕ್ಟ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಬಿಗ್ ಬಾಸ್ ಬಳಿಕ ಬಿಗ್ ಪ್ರಾಜೆಕ್ಟ್‌ ಅನೌನ್ಸ್ ಆಗಬಹುದೆಂಬ ನಿರೀಕ್ಷೆಯಿತ್ತು. ಇನ್ನೂ ಹೊಸ ಸಿನಿಮಾಗಳನ್ನು ಅನೌನ್ಸ್ ಮಾಡಿಲ್ಲ. ಈ ಗ್ಯಾಪ್‌ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ.

More from Filmibeat

English summary
Bigg Boss Kannada 11 contestant Ranjith got engaged to Manasa. See Photos
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X