BBK 11: ಒಂದು ವಾರಕ್ಕೆ ಉಗ್ರಂ ಮಂಜು ಪಡೆಯುವ ಸಂಭಾವನೆ ಎಷ್ಟು? ಲಕ್ಷನಾ ? ಸಾವಿರನಾ?
ಬಿಗ್ ಬಾಸ್ ಕನ್ನಡ 11 ರಿಯಾಲಿಟಿ ಶೋ ಗ್ರ್ಯಾಂಡ್ ಫಿನಾಲೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಇದೇ ವೀಕೆಂಡ್‌ನಲ್ಲಿ ಬಿಗ್ ಬಾಸ್ ಕನ್ನಡ 11 ವಿನ್ನರ್ ಯಾರು? ಅನ್ನೋದು ರಿವೀಲ್ ಆಗುತ್ತೆ. ಉಗ್ರಂ ಮಂಜು, ತ್ರಿವಿಕ್ರಮ್, ರಜತ್, ಭವ್ಯಾ ಗೌಡ, ಹನುಮಂತ ಹಾಗೂ ಮೋಕ್ಷಿತಾ ಪೈ ಪ್ರಶಸ್ತಿ ಗೆಲ್ಲಲು ಭರ್ಜರಿ ಪೈಪೋಟಿ ನಡೆಸುತ್ತಿದ್ದಾರೆ. ಆರು ಮಂದಿಯಲ್ಲಿ ಯಾರು ಟ್ರೋಫಿ ಗೆಲ್ಲುತ್ತಾರೋ ಅನ್ನೋದು ಇನ್ನು ಕೆಲವೇ ದಿನಗಳಲ್ಲಿ ರಿವೀಲ್ ಆಗಲಿದೆ.
ಈ ರಿಯಾಲಿಟಿ ಶೋ ಆರಂಭ ಆದ ದಿನಗಳಿಂದ ಉಗ್ರಂ ಮಂಜು ವೀಕ್ಷಕರಿಗೆ ಮನರಂಜನೆ ನೀಡುತ್ತಿದ್ದಾರೆ. ಉಗ್ರಂ ಮಂಜು ಹಾಗೂ ಲಾಯರ್ ಜಗದೀಶ್ ನಡುವಿನ ವಾಕ್‌ಸಮರ ಬಿಗ್ ಬಾಸ್ ಅಭಿಮಾನಿಗಳಿಗೆ ಸಖತ್ ಮನರಂಜನೆ ನೀಡಿತ್ತು. ಮೊದಲ ನಾಲ್ಕೈದು ವಾರ ಉಗ್ರಂ ಮಂಜು ಬಿಗ್ ಬಾಸ್ ಮನೆಯ ಫೇವರಿಟ್ ಸದಸ್ಯರಾಗಿದ್ದರು. ಮಂಜು ಕಾಮಿಡಿಗೆ, ತೀಕ್ಷಣ ಮಾತುಗಳಿಗೆ ಮೆಚ್ಚುಗೆಯನ್ನು ಗಳಿಸಿದ್ದರು.

ಬರ ಬರುತ್ತಾ ಉಗ್ರಂ ಮಂಜು ಸೈಲೆಂಟ್ ಆದರು ಅನ್ನೋ ಮಾತು ಕೂಡ ಕೇಳಿ ಬಂದಿತ್ತು. ಆದರೆ, ಮಂಜು ಈ ಮಾತನ್ನು ಒಪ್ಪಿಕೊಳ್ಳುವುದಕ್ಕೆ ರೆಡಿಯಿಲ್ಲ. ಮಂಜು ಅಭಿಮಾನಿಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ಈ ಮಾತನ್ನು ಖಂಡಿಸುತ್ತಲೇ ಬಂದಿದ್ದಾರೆ. ಆರಂಭದ ದಿನದಿಂದ ಫಿನಾಲೆವರೆಗೂ ಉಗ್ರಂ ಮಂಜು ಉಳಿದ ಸ್ಪರ್ಧಿಗಳಿಗೂ ಪೈಪೋಟಿ ಕೊಡುತ್ತಲೇ ಬಂದಿದ್ದಾರೆ. ಇನ್ನು ಗ್ರ್ಯಾಂಡ್ ಫಿನಾಲೆ ಹೊಸ್ತಿಲಲ್ಲಿಯೇ ಉಗ್ರಂ ಮಂಜು ಸಂಭಾವನೆ ಬಗ್ಗೆ ಚರ್ಚೆಯಾಗುತ್ತಿದೆ. ಉಗ್ರಂ ಮಂಜುಗೆ ಒಂದು ವಾರಕ್ಕೆ ದೊಡ್ಡ ಮೊತ್ತದ ಹಣವನ್ನು ಪಡೆಯುತ್ತಿದ್ದಾರೆ ಅಂತ ಚರ್ಚೆಯಾಗುತ್ತಿದೆ.
ಬಿಗ್ ಬಾಸ್ ಕನ್ನಡ ಸೀಸನ್ 11 ಗೆಲ್ಲುವ ಸ್ಪರ್ಧಿಗಳ ಪೈಕಿ ಉಗ್ರಂ ಮಂಜು ಕೂಡ ಇದ್ದಾರೆ. ರಜತ್ ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ದಿನದಿಂದ ಇವರಿಬ್ಬರ ಮಧ್ಯೆ ಜಟಾಪಟಿ ನಡೆಯುತ್ತಲೇ ಇದೆ. ಬಿಗ್ ಬಾಸ್ ವೀಕ್ಷಕರಿಗೆ ಇವರಿಬ್ಬರ ನಡುವಿನ ಜಟಾಪಟಿ ಮಜಾ ಕೊಡುತ್ತಿದೆ. ಆರಂಭದ ಮೊದಲ ಮೂರು ವಾರಗಳಲ್ಲಿ ಲಾಯರ್ ಜಗದೀಶ್ ಹಾಗೂ ಉಗ್ರಂ ಮಂಜು ಕಾಂಬಿನೇಷನ್ ಕಿಕ್ ಕೊಟ್ಟಿದ್ದರೆ, 50 ದಿನಗಳ ಬಳಿಕ ರಜತ್ ಹಾಗೂ ಉಗ್ರಂ ಮಂಜು ಕಾಂಬಿನೇಷನ್ ವೀಕ್ಷಕರನ್ನು ರಂಜಿಸುತ್ತಿದೆ.
ಉಗ್ರಂ ಮಂಜು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುವುದಕ್ಕೂ ಮುನ್ನ ಸಿನಿಮಾಗಳಲ್ಲಿ ನಟಿಸಿದ್ದರು. ಅದಾಗಲೇ ತಮ್ಮ ನಟನೆಯ ಮೂಲಕ ಪ್ರೇಕ್ಷಕರನ್ನು ರಂಜಿಸಿ ಅವರ ಮನಗಳಲ್ಲಿ ಮನೆ ಮಾಡಿದ್ದರು. ಬಿಗ್ ಬಾಸ್ ಕನ್ನಡ ಸೀಸನ್ 11ಕ್ಕೆ ಆಯ್ಕೆ ಮಾಡುವಾಗ ಉಗ್ರಂ ಮಂಜು ಹಾಗೂ ಕಲರ್ ಕನ್ನಡ ಜೊತೆ ಸಂಭಾವನೆ ಬಗ್ಗೆ ಚರ್ಚೆಯಾಗಿತ್ತು. ಒಂದು ವಾರಕ್ಕೆ ಒಳ್ಳೆಯ ಸಂಭಾವನೆಯನ್ನೇ ನೀಡುತ್ತಿದ್ದಾರೆ ಎಂದು ಹೇಳಲಾಗಿದೆ.

ಈಗಾಗಲೇ ಉಗ್ರಂ ಮಂಜುಗೆ ಒಂದು ವಾರಕ್ಕೆ 70 ಸಾವಿರ ರೂಪಾಯಿ ಮೊತ್ತವನ್ನು ಸಂಭಾವನೆ ರೂಪದಲ್ಲಿ ನೀಡಲಾಗುತ್ತಿದೆ ಎನ್ನಲಾಗಿದೆ. ಜೀ ನ್ಯೂಸ್ ಕನ್ನಡ ಉಗ್ರಂ ಮಂಜು ಸಂಭಾವನೆ ಬಗ್ಗೆ ವರದಿ ಮಾಡಲಾಗಿದೆ. ಸದ್ಯ 70 ಸಾವಿರ ಸಂಭಾವನೆ ಬಗ್ಗೆ ಸುದ್ದಿಯಾಗುತ್ತಿದೆ. ಒಂದು ವೇಳೆ ಇದೇ ಮೊತ್ತವನ್ನು ಸಂಭಾವನೆಯಾಗಿ ಪಡೆಯುತ್ತಿದ್ದರೆ, 70 ಸಾವಿರದಂತೆ 16 ವಾರಕ್ಕೆ 11 ಲಕ್ಷದ 20 ಸಾವಿರ ರೂಪಾಯಿಯನ್ನು ಬಿಗ್ ಬಾಸ್‌ನಿಂದ ಉಗ್ರಂ ಮಂಜು ಪಡೆದಂತಾಗುತ್ತೆ. ಆದರೆ, ಒಂದು ವಾರಕ್ಕೆ ಉಗ್ರಂ ಮಂಜುಗೆ ಎಷ್ಟು ಸಂಭಾವನೆ ಸಿಗುತ್ತಿದೆ ಅನ್ನೋದು ಇನ್ನಷ್ಟೇ ತಿಳಿಯಬೇಕಿದೆ. ಉಗ್ರಂ ಮಂಜು ಇಲ್ಲವೇ ಕಲರ್ಸ್ ಕನ್ನಡ ಅಧಿಕೃತವಾಗಿ ಇನ್ನೂ ಸಂಭಾವನೆಯನ್ನು ರಿವೀಲ್ ಮಾಡಿಲ್ಲ.
ಇನ್ನು ಉಗ್ರಂ ಮಂಜು ಹಾಗೂ ಗೌತಮಿ ಜಾದವ್ ನಡುವಿನ ಸ್ನೇಹದ ಬಗ್ಗೆನೂ ಸಿಕ್ಕಾಪಟ್ಟೆ ಚರ್ಚೆಯಾಗಿತ್ತು. ಗೌತಮಿ ಜಾದವ್ ಅವರಿಂದ ಉಗ್ರಂ ಮಂಜು ಕೆಲವು ದಿನಗಳು ಸೈಲೆಂಟ್ ಆಗಿದ್ದರು ಎಂಬ ಮಾತುಗಳು ಕೇಳಿ ಬಂದಿದ್ದವು. ಗೌತಮಿ ಜಾದವ್ ಎಲಿಮಿನೇಟ್ ಆದ ಬಳಿಕ ಉಗ್ರಂ ಮಂಜು ಉಗ್ರಾವತಾರ ತಾಳಿದ್ದಾರೆ. ಕೊನೆಯ ವಾರದಲ್ಲಿ ಮತ್ತೆ ಸ್ಪರ್ಧಿಗಳಿಗೆ ತಿರುಗೇಟು ಕೊಡುತ್ತಿದ್ದಾರೆ. ಟ್ರೋಪಿ ಗೆಲ್ಲುವ ಸಂಭಾವ್ಯ ಪಟ್ಟಿಯಲ್ಲಿ ಮತ್ತೆ ಕಮ್ ಬ್ಯಾಕ್ ಮಾಡಿದ್ದಾರೆ.


Click it and Unblock the Notifications











