Bigg Boss Kannada 11: ಒಂದು ದಿನ ಮುನ್ನವೇ ಹೊರಬೀಳುತ್ತೆ ಬಿಗ್‌ಬಾಸ್ ಸ್ಪರ್ಧಿಗಳ ಹೆಸರು; ಎಲ್ಲಿ? ಹೇಗೆ?

ಬಿಗ್‌ಬಾಸ್ ರಿಯಾಲಿಟಿ ಶೋ ಕಿರುತೆರೆಯ ವೀಕ್ಷಕರು ಕಾತುರದಿಂದ ಕಾಯುತ್ತಿರುವ ಶೋ. ಕನ್ನಡದಲ್ಲೂ ಈ ಶೋಗೆ ಸಾಕಷ್ಟು ಪ್ರೇಕ್ಷಕರು ಇದ್ದಾರೆ. ಸಹಜವಾಗಿ ಈ ಶೋ ಆರಂಭಕ್ಕೂ ಮುನ್ನವೇ ಸ್ಪರ್ಧಿಗಳ ಕುರುಹುಗಳನ್ನು ಬಿಟ್ಟುಕೊಡುವುದಿಲ್ಲ. ಆದರೆ, ಈ ಬಾರಿಗೆ ಬಿಗ್ ಬಾಸ್‌ ಶೋನಲ್ಲಿ ಚಿಕ್ಕದೊಂದು ಬದಲಾವಣೆ ಮಾಡಲಾಗಿದೆ.

ಬಿಗ್‌ ಬಾಸ್ ಕನ್ನಡ ಸೀಸನ್ 11 ಆರಂಭ ಆಗುವುದಕ್ಕೂ ಮುನ್ನವೇ ಸ್ಪರ್ಧಿಗಳ ಹೆಸರನ್ನು ಬಿಟ್ಟು ಕೊಡುವುದಕ್ಕೆ ಕಲರ್ಸ್ ಕನ್ನಡ ನಿರ್ಧರಿಸಿದೆ. ಆದರೆ, ಅದಕ್ಕೂ ಒಂದು ವೇದಿಕೆಯನ್ನು ನಿರ್ಮಾಣ ಮಾಡಿರುವುದು ಮತ್ತೊಂದು ವಿಶೇಷ. ಈ ಮೂಲಕ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಯನ್ನು ಹೊಡೆದಂತೆ ಆಗಿದೆ.

Bigg Boss Kannada 11 Contestant will be revealed in Raja Rani Grand finale

ಅಷ್ಟಕ್ಕೂ ಕಳೆದ 10 ಸೀಸನ್‌ಗಳಿಂದ ಸ್ಪರ್ಧಿಗಳ ಹೆಸರನ್ನು ರಿವೀಲ್ ಮಾಡದೆ ರಹಸ್ಯವಾಗಿಯೇ ಉಳಿಸಿಕೊಂಡು ಬರಲಾಗಿತ್ತು. ಆದರೆ, ಈ ಬಾರಿ ಎಲ್ಲವೂ ಉಲ್ಟಾ. ಸ್ವತ: ಕಲರ್ಸ್ ಕನ್ನಡದ ಬಿಸಿನೆಸ್ ಹೆಡ್ ಪ್ರಶಾಂತ್ ನಾಯಕ್ಈ ವಿಷಯವನ್ನು ಬಹಿರಂಗ ಪಡಿಸಿದ್ದಾಗಿದೆ. ಅಸಲಿಗೆ ಈ ನಿರ್ಧಾರದ ಹಿಂದಿನ ಲೆಕ್ಕಾಚಾರವೇನು? ಬಿಗ್ ಬಾಸ್ ಕನ್ನಡದಲ್ಲಿ ಇಂತಹ ಬದಲಾವಣೆ ಯಾಕೆ?

11ನೇ ಸೀಸನ್‌ನಲ್ಲಿ ಸ್ವರ್ಗ ಮತ್ತು ನರಕದ ಥೀಮ್ ಅನ್ನು ಬಳಸಿಕೊಂಡು ಸ್ಪರ್ಧಿಗಳ ಆಯ್ಕೆ ನಡೆಯಲಿದೆ. ಕಳೆದ ಬಾರಿ ಸಮರ್ಥರು ಹಾಗೂ ಅಸಮರ್ಥರು ಅನ್ನೋ ಕಲ್ಪನೆಯಲ್ಲಿ ಸ್ಪರ್ಧಿಗಳನ್ನು ಬಿಗ್‌ಬಾಸ್ ಮನೆಯೊಳಗೆ ಕಳುಹಿಸಿಕೊಡಲಾಗಿತ್ತು. ಆದರೆ, ಈ ಬಾರಿ ಸ್ಪರ್ಧಿಗಳನ್ನು ಸ್ವರ್ಗಕ್ಕೆ ಹಾಗೂ ನರಕಕ್ಕೆ ಕಳುಹಿಸುವ ಆಯ್ಕೆಯನ್ನು ವೀಕ್ಷಕರಿಗೆ ಕೊಡಲಾಗಿದೆ.

ಈ ಕಾರಣಕ್ಕೆ ಒಂದು ದಿನ ಮುನ್ನವೇ ಸ್ಪರ್ಧಿಗಳ ಹೆಸರನ್ನು ರಿವೀಲ್ ಮಾಡಲಾಗುತ್ತೆ. ಇವರಲ್ಲಿ ಯಾರು ಸ್ವರ್ಗಕ್ಕೆ ಹೋಗಬೇಕು. ಯಾರು ನರಕಕ್ಕೆ ಹೋಗಬೇಕು ಅನ್ನುವುದನ್ನ ವೀಕ್ಷಕರು ವೋಟ್ ಮಾಡುವುದರ ಮೂಲಕ ನಿರ್ಧರಿಸಬಹುದು. ಇದು ಮಾರನೇ ದಿನ ಸೆಪ್ಟೆಂಬರ್ 29ರಂದು ಕಾರ್ಯಕ್ರಮ ಆರಂಭ ಆಗುವ ವೇಳೆ ನಿರ್ಧಾರ ಮಾಡಲಾಗುತ್ತೆ. ಈ ಕಾರಣಕ್ಕೆ ಒಂದು ದಿನ ಮುನ್ನವೇ ಸ್ಪರ್ಧಿಗಳ ಹೆಸರು ರಿವೀಲ್ ಆಗುತ್ತಿದೆ.

Bigg Boss Kannada 11 Contestant will be revealed in Raja Rani Grand finale

ಇನ್ನೊಂದು ಕಡೆ ಸ್ಪರ್ಧಿಗಳನ್ನು ರಿವೀಲ್ ಮಾಡಲು ಬಳಸಿಕೊಂಡಿರುವ ವೇದಿಕೆಯಲ್ಲೂ ಒಂದು ಲೆಕ್ಕಾಚಾರವಿದೆ. ಬಿಗ್‌ಬಾಸ್ ಕನ್ನಡ 11 ಆರಂಭಕ್ಕೆ ಒಂದು ದಿನ ಮುನ್ನ ಅಂದರೆ, ಸೆಪ್ಟೆಂಬರ್ 28ರಂದು 'ರಾಜಾ ರಾಣಿ' ಶೋ ಗ್ರ್ಯಾಂಡ್ ಫಿನಾಲೆ ಇದೆ. ಈ ವೇದಿಕೆಯಲ್ಲಿ ಸ್ಪರ್ಧಿಗಳ ಹೆಸರು ರಿವೀಲ್ ಆಗುತ್ತೆ. ಈ ಮೂಲಕ 'ರಾಜಾ ರಾಣಿ' ಗ್ರ್ಯಾಂಡ್‌ ಫಿನಾಲೆಗೆ ಮತ್ತೊಂದು ಮಂದಿ ವೀಕ್ಷಕರ ಸಂಖ್ಯೆ ಹೆಚ್ಚಾಗಲಿದೆ. ಈ ಲೆಕ್ಕಾಚಾರವಿಟ್ಟುಕೊಂಡು ಸ್ಪರ್ಧಿಗಳ ಹೆಸರನ್ನು ರಿವೀಲ್ ಮಾಡುವುದಕ್ಕೆ ನಿರ್ಧರಿಸಿದೆ.

ಈ ಬಾರಿ ಬಿಗ್‌ಬಾಸ್ ಶೋ ಮಾಡುವುದು ಬೇಡ ಅಂತ ಕಿಚ್ಚ ಸುದೀಪ್ ಅಂದುಕೊಂಡಿದ್ದರು. ವಾರದಲ್ಲಿ ಎರಡು ದಿನ ಬಿಗ್‌ಬಾಸ್‌ಗೆ ಮೀಸಲಿಡಬೇಕು. ಹೀಗಾಗಿ ಸಿನಿಮಾ ಶೂಟಿಂಗ್ ತಡವಾಗುತ್ತಿತ್ತು. ಆದರೂ, 11ನೇ ಸೀಸನ್ ಕೂಡ ಇವರನ್ನೇ ನಿರೂಪಣೆ ಮಾಡುವಂತೆ ಆಗಿದೆ. ಬೇರೆ ಭಾಷೆಯ ಬಿಗ್‌ಬಾಸ್‌ಗೆ ಹೋಲಿಸಿದರೆ, ಕಳೆದ 11 ಸೀಸನ್ ಅನ್ನೂ ನಿರಂತರವಾಗಿ ನಿರೂಪಣೆ ಮಾಡುತ್ತಿರುವ ಏಕೈಕ ನಿರೂಪಕ ಎಂಬ ದಾಖಲೆ ಕೂಡ ಇವರ ಹೆಸರಲ್ಲಿದೆ.

More from Filmibeat

English summary
Bigg Boss Kannada 11 Contestant will be revealed in Raja Rani Grand finale. People can decide who can go heaven and hell
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X