BBK 11: ನಾನು ಹೋಗೋದ್ರೊಳಗೆ ಯಾರನ್ನಾದ್ರು ಸಾಯಿಸಿಯೇ ಹೋಗೋದು : ಭವ್ಯಾ ಹಿಂಗ್ಯಾಕಾದ್ರು?
ಬಿಗ್ ಬಾಸ್ ಕನ್ನಡ 11 ಶುರುವಾಗಿ ಆರು ವಾರಗಳಾಗುತ್ತಿದೆ. ಈಗ ಮನೆಯೊಳಗೆ ಇರುವ ಸ್ಪರ್ಧಿಗಳು ಒಬ್ಬೊಬ್ಬರಾಗಿಯೇ ತಮ್ಮ ತಾಕತ್ತು ತೋರಿಸುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ. ಕೆಲವರು ಅಗ್ರೆಸಿವ್ ಆಗಿ ಆಟ ಆಡುವುದಕ್ಕೆ ಶುರು ಮಾಡಿದ್ದಾರೆ. ಮತ್ತೆ ಕೆಲವರು ಮೈಂಡ್ ಗೇಮ್ ಆಡುತ್ತಿದ್ದಾರೆ. ಹೀಗಾಗಿ ಇವತ್ತು ಗೆಳೆಯರಾಗಿದ್ದವರು ನಾಳೆ ವಿಲನ್‌ಗಳಂತೆ ಕಿತ್ತಾಡುವುದಕ್ಕೆ ಶುರು ಮಾಡಿದ್ದಾರೆ.
ಹನುಮಂತ ಬಿಗ್ ಬಾಸ್ ಮನೆಯೊಳಗೆ ಕಾಲಿಡುತ್ತಿದ್ದಂತೆ ಬಿಗ್ ಬಾಸ್ ಮನೆಯಲ್ಲಿ ಮತ್ತೆ ಕಳೆ ಬಂದಂತೆ ಆಗಿದೆ. ಮನೆಯೊಳಗೆ ಸ್ಪರ್ಧಿಗಳು ಆಕ್ಟಿವ್ ಆಗಿದ್ದಾರೆ. ಅದರಲ್ಲೂ ಕಳೆದ ಎರಡು ಮೂರು ದಿನಗಳಿಂದ ಭವ್ಯಾ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿಬಿಟ್ಟಿದ್ದಾರೆ. ಹೀಗಿರುವಾಗ ಸದ್ಯ ಶೋ ಆರಂಭಕ್ಕೂ ಮುನ್ನ ಕಲರ್ಸ್ ಕನ್ನಡ ಪ್ರೋಮೊ ಒಂದನ್ನು ರಿಲೀಸ್ ಮಾಡಿದೆ. ಇದರಲ್ಲಿ ಭವ್ಯಾ ಆಡಿದ ಮಾತು ಚರ್ಚೆಗೆ ಎಡೆ ಮಾಡಿಕೊಟ್ಟಿದೆ.

ಭವ್ಯಾ, ಉಗ್ರಂ ಮಂಜು, ತ್ರಿವಿಕ್ರಮ್, ಗೋಲ್ಡ್ ಸುರೇಶ್ ಹಾಗೂ ಚೈತ್ರಾ ಕುಂದಾಪುರ ಅಗ್ರೆಸಿವ್ ಆಗಿ ಆಟ ಆಡುತ್ತಿದ್ದಾರೆ. ಸದ್ಯ ಪ್ರೋಮೊದಲ್ಲಿ ಭವ್ಯಾ, ಅನುಷಾ, ತ್ರಿವಿಕ್ರಮ್, ಧರ್ಮ ಕೀರ್ತಿರಾಜ್ ಹಾಗೂ ಚೈತ್ರಾ ಕುಂದಾಪುರ ಒಟ್ಟಿಗೆ ಕೂತು ಮಾತಾಡುವಾಗ " ನಾನು ಇಲ್ಲಿಂದ ಹೋಗುವುದರೊಳಗೆ ಯಾರನ್ನಾದರೂ ಸಾಯಿಸಿಯೇ ಹೋಗುವುದು" ಎಂದು ಹೇಳಿದ್ದಾರೆ. ಅಷ್ಟಕ್ಕೂ ಯಾಕೆ ಹೀಗೆ ಹೇಳಿದರು ಅನ್ನೋದನ್ನು ತಿಳಿಯಲು ಮುಂದೆ ಓದಿ.
ಈ ವಾರ ಕ್ಯಾಪ್ಟನ್ಸಿ ರೇಸ್‌ನಲ್ಲಿ ಭವ್ಯಾ ಹಾಗೂ ತ್ರಿವಿಕ್ರಮ್ ಇಬ್ಬರು ಇದ್ದರು. ಭವ್ಯಾ ಈ ವಾರ ಆಕ್ಟಿವ್ ಆಗಿ ಆಟ ಆಡಿದ್ದರು. ಹೀಗಾಗಿ ಅವರಿಗೆ ಕ್ಯಾಪ್ಟನ್ಸಿ ಸಿಗುತ್ತೆ ಅಂತ ನಂಬಲಾಗಿತ್ತು. ಆದರೆ, ಉಗ್ರಂ ಮಂಜು ಕ್ರಾಸ್ ವೋಟಿಂಗ್ ಮಾಡಿದ್ದು ತ್ರಿವಿಕ್ರಂಗೆ ವರವಾಯ್ತು. ಹೀಗಾಗಿ ಭವ್ಯಾಗೆ ಕ್ಯಾಪ್ಟನ್ಸಿ ಮಿಸ್ ಆಗಿದೆ. ಉಗ್ರಂ ಮಂಜು ಹಾಗೂ ತ್ರಿವಿಕ್ರಂ ಅವರ ಒಡಂಬಡಿಕೆ ಭವ್ಯಾ ಈ ವಾರದ ಕ್ಯಾಪ್ಟನ್ ಆಗುವುದನ್ನು ತಪ್ಪಿಸಿದೆ.

ಅದೇ ವೇಳೆ ಭವ್ಯಾ, ತ್ರಿವಿಕ್ರಮ್, ಅನುಷಾ ಹಾಗೂ ಧರ್ಮ ಕೀರ್ತಿರಾಜ್ ನಡುವೆ ಸಂಭಾಷಣೆ ನಡೆಯುತ್ತೆ. ಈ ವೇಳೆ ನಡೆದ ಸಂಭಾಷಣೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಹೀಗಿದೆ. "ಪಾಸಿಟಿವ್ ಆಗಿಲ್ಲ ಅಂತ ಹೇಳಬೇಡಿ. ಓವರ್ ಪಾಸಿಟಿವ್ ಆಗಿ ಸುಮ್ಮನೆ ಮುಖವಾಡ ಹಾಕಿಕೊಂಡು ಇರುವುದಕ್ಕೆಲ್ಲ ಬರುವುದಿಲ್ಲ. ನನಗೆ ಎಷ್ಟು ಬೇಕೋ ಅಷ್ಟು ಇದೆ. ಸುಮ್ಮನೆ ಹೇಳ್ಕೊಂಡು ಇಲ್ಲ ನಾನು." ಎನ್ನುತ್ತಾರೆ.
ಆ ವೇಳೆ ಅಲ್ಲಿಗೆ ಬಂದ ತ್ರಿವಿಕ್ರಮ್ ನೀವು ಆಕ್ಟಿವ್ ಆಗಿದ್ದೀರ ಎನ್ನುತ್ತಾರೆ. ಆಗ ಭವ್ಯಾ "ಈ ವಾರ ಆಕ್ಟಿವ್ ಆಗಿರುವುದಕ್ಕೆ ಹಿಂಗೆ ಇಕ್ಕಿಸಿಕೊಳ್ಳುತ್ತಿರುವುದು" ಎಂದಾಗ ತ್ರಿವಿಕ್ರಮ್ ಹಾಗೂ ಧರ್ಮ ಕೀರ್ತಿರಾಜ್ ಅದನ್ನು ಪಾಸಿಟವ್ ಆಗಿಯೇ ತೆಗೆದುಕೊಳ್ಳಿ ಎಂದು ಜೋರಾಗಿ ನಗುತ್ತಾರೆ.
ಹಾಗೇ ಮನೆಯೊಳಗೆ ನೀವು ಇನ್ನೂ 75 ದಿನ ಇರಬೇಕು ಎನ್ನುತ್ತಾರೆ. ಆಗ ಭವ್ಯಾ "ಅಷ್ಟರೊಳಗೆ ಎಷ್ಟು ಜನ ಸಾಯುತ್ತಾರೋ" ಎಂದು ಹೇಳುತ್ತಾರೆ. "ನಾನು ಹೋಗುವುದರೊಳಗೆ ಯಾರನ್ನಾದರೂ ಸಾಯಿಸಿಯೇ ಹೋಗುವುದು. ಅಂದರೆ ಮಾನಸಿಕವಾಗಿ" ಎಂದು ಹೇಳುತ್ತಾರೆ. ಭವ್ಯಾ ಹೀಗೆ ಹೇಳಿದ್ದಕ್ಕೂ, ಕ್ಯಾಪ್ಟನ್ಸಿ ರೇಸ್‌ನಲ್ಲಿ ಸೋತಿದ್ದಕ್ಕೂ ನೆಟ್ಟಿಗರು ಸಪೋರ್ಟ್ ಮಾಡಿ ಕಾಮೆಂಟ್ ಮಾಡುತ್ತಿದ್ದಾರೆ.
"ಪಾಪ ನಮ್ ಹುಡ್ಗಿಗೆ ಈ ವಾರ ಅಷ್ಟೂ ಆ್ಯಕ್ಟಿವ್ ಇರೋದಕ್ಕೆ ಎಷ್ಟು ಜನ ಅಭಿಮಾನಿಗಳು ಅದ್ರೂ ಅಂಥ ಗೊತ್ತಿಲ್ಲ, ಈ ಊರ್ಕೊಂಡಿರೋ ಮನೆವ್ರನ್ನ ನೋಡಿ ಬೇಜಾರಾಗಿದ್ದಾಳೆ. ಈ ವಾರ ಕಿಚ್ಚನ ಚಪ್ಪಾಳೆ ನಿಂಗೆ ಹೆಣ್ ಹುಲಿ" ಅಂತ ಒಬ್ಬರು ಅಂದರೆ, "ಇನ್ನೂ ಇದೆ ಪಿಚ್ಚರ್ ಬಿಗ್ ಬಾಸ್ ನೋಡುಗರಿಗೆ, ಜಸ್ಟ್ ಎಂಜಾಯ್" ಅಂತ ಇನ್ನೊಬ್ಬರು ಹೇಳಿದ್ದಾರೆ. "ಮನೆ ಅವರಿಗೆ ನೀವು ಇಷ್ಟ ಆಗಿಲ್ಲ ಅಂತ ಯೋಚ್ನೆ ಮಾಡ್ಬೇಡಿ .ಆಚೆ ಕಡೆ ನಿಮ್ನ ಪ್ರೀತಿಸೋರು ಜಾಸ್ತಿ ಆಗಿದ್ದರೆ ಭವ್ಯಾ" ಎಂದು ಇನ್ನೊಬ್ಬರು ಹೇಳಿದ್ದಾರೆ.


Click it and Unblock the Notifications











