Bigg Boss Kannada 11: ಬಿಬಿಕೆ 11ರ ಈ ಸ್ಪರ್ಧಿಗಳು ಹಿಂದಿನ ಸೀಸನ್‌ನ ಯಾವ ಸ್ಪರ್ಧಿಗಳಿಗೆ ಹೋಲಿಕೆ ಆಗ್ತಾರೆ?
ಬಿಗ್‌ಬಾಸ್ ಕನ್ನಡ ಸೀಸನ್ 11 ಅದ್ಧೂರಿಯಾಗಿ ಆರಂಭ ಆಗಿದೆ. ಶುರುವಾದ ಮೊದಲ ದಿನವೇ ಅಸಮಧಾನ, ಕಿತ್ತಾಟ, ಜಗಳ ಶುರುವಾಗಿದೆ. ಕೆಲವರಂತೂ ಕಾಲು ಕರೆದುಕೊಂಡು ಜಗಳಕ್ಕೆ ಹೋಗುತ್ತಿದ್ದಾರೆ. ಮತ್ತೆ ಕೆಲವರು ತಾನೇ ಸ್ಟ್ರಾಂಗ್ ಅಂತ ತೋರಿಸಿಕೊಳ್ಳುವುದಕ್ಕೆ ಮುಂದಾಗಿದ್ದಾರೆ. ಸದ್ಯ ಬಿಗ್ ಬಾಸ್ ಮನೆ ಮೊದಲ ದಿನವೇ ಶಾಂತಿಯನ್ನು ಕಳೆದುಕೊಂಡು ಗೊಂದಲದ ಗೂಡಾಗಿದೆ.
17 ಮಂದಿಗೆ ಈಗಾಗಲೇ ಬಿಗ್ ಬಾಸ್ ಮನೆಯೊಳಗೆ ಹೋಗಿದ್ದಾರೆ. ಒಂದು ನರಕದಲ್ಲಿ ಇರೋರು. ಇನ್ನೊಂದು ಕಡೆ ಸ್ವರ್ಗದಲ್ಲಿ ಇರೋರು. ಇಬ್ಬರ ಮಧ್ಯೆ ಕಿತ್ತಾಟ ಶುರುವಾಗಿದೆ. ಅವರವರೇ ಕಿತ್ತಾಡಿಕೊಳ್ಳುವುದಕ್ಕೆ ಶುರುವಾಗಿದ್ದಾರೆ. ವಾರಾಂತ್ಯದಲ್ಲಿ ಕಿಚ್ಚ ಸುದೀಪ್ ಬಂದು ಬುದ್ದಿವಾದ ಹೇಳುವವರೆಗೂ ಕೆಲವು ಸ್ಪರ್ಧಿಗಳು ಮಾತು ಕೇಳೋದಿಲ್ಲ ಅಂತ ಅನಿಸುತ್ತಿದೆ.
ಈ ಬಾರಿಯ ಸ್ಪರ್ಧಿಗಳು ಸೀಸನ್ 10ರಲ್ಲಿ ಬಂದಂತೆ ಖಡಕ್ ಆಗಿಲ್ಲ ಅಂದ್ಕೊಂಡಿದ್ದ ಕಿರುತೆರೆ ವೀಕ್ಷಕರಿಗೆ ತಮ್ಮ ತಾಕತ್ತು ತೋರಿಸುವುದಕ್ಕೆ ಶುರು ಮಾಡಿದ್ದಾರೆ. ಇನ್ನೊಂದು ಕಡೆ ಸೋಶಿಯಲ್ ಮೀಡಿಯಾದಲ್ಲಿ ಈ ಹಿಂದೆ ಬಿಗ್ ಬಾಸ್ ಮನೆಗೆ ಬಂದು ಹೋಗಿರುವವರ ಜೊತೆ ಈ ಸೀಸನ್‌ನ ಸ್ಪರ್ಧಿಗಳನ್ನು ಹೋಲಿಕೆ ಮಾಡಲಾಗುತ್ತಿದೆ. ಅಷ್ಟಕ್ಕೂ ಯಾರನ್ನು ಯಾರೊಂದಿಗೆ ಹೋಲಿಕೆ ಮಾಡಲಾಗುತ್ತಿದೆ? ಯಾವ ವಿಚಾರಕ್ಕೆ ಈ ಹೋಲಿಕೆ? ತಿಳಿಯಲು ಮುಂದೆ ಓದಿ.

ವಿನಯ್ ಗೌಡ-ತ್ರಿವಿಕ್ರಮ್
ಬಿಗ್‌ಬಾಸ್ ಕನ್ನಡ ಸೀಸನ್ 10ರಲ್ಲಿ ಆನೆ ಅಂತಲೇ ಕರೆಸಿಕೊಂಡಿದ್ದವರು ವಿನಯ್ ಗೌಡ. ಬಿಗ್ ಬಾಸ್ ಫಿನಾಲೆವರೆಗೂ ಟಫ್ ಕಾಂಪಿಟೇಷನ್ ಕೊಟ್ಟಿದ್ದವರು ಇವರೇ. ಈ ಬಾರಿ ವಿನಯ್ ಗೌಡ ಜೊತೆ ಬಿಗ್‌ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿ ತ್ರಿವಿಕ್ರಮ್ ಅವರನ್ನು ಹೋಲಿಕೆ ಮಾಡಲಾಗುತ್ತಿದೆ. ಅಂದ್ಹಾಗೆ ಈ ಹೋಲಿಕೆ ಲುಕ್‌ನ ಆಧಾರದ ಮೇಲೆ ಮಾಡಲಾಗಿದೆಯೋ? ಇಲ್ಲ ಡಾಮಿನೇಟಿಂಗ್ ನೇಚರ್ ಮೇಲೆ ಮಾಡಲಾಗಿದೆಯೋ? ವಿನಯ್ ಗೌಡಗೆ ತ್ರಿವಿಕ್ರಮ್ ಒಂದೊಳ್ಳೆ ರೀಪ್ಲೆಸ್‌ಮೆಂಟ್ ಎಂದು ಹೇಳಲಾಗುತ್ತಿದೆ.

ಚೈತ್ರಾ ಕುಂದಾಪುರ-ಸಂಗೀತಾ ಶೃಂಗೇರಿ
11ನೇ ಸೀಸನ್‌ನಲ್ಲಿ ಬಿಗ್‌ಬಾಸ್ ಮನೆಯೊಳಗೆ ಎಂಟ್ರಿ ಕೊಟ್ಟಿರುವ ವಿವಾದಾತ್ಮಕ ಸ್ಪರ್ಧಿ ಚೈತ್ರಾ ಕುಂದಾಪುರ. ಸದ್ಯ ಬಿಗ್‌ಬಾಸ್ ಮನೆಯಲ್ಲಿ ಚರ್ಚೆಯಲ್ಲಿರುವ ವ್ಯಕ್ತಿ ಇವರೇ. ಇವರನ್ನು 10ನೇ ಸೀಸನ್‌ನ ಸ್ಪರ್ಧಿ ಸಂಗೀತಾ ಶೃಂಗೇರಿಯವರ ಜೊತೆ ಹೋಲಿಕೆ ಮಾಡಲಾಗುತ್ತಿದೆ. ಇಬ್ಬರೂ ಖಡಕ್ ನೇಚರ್ ಈ ಹೋಲಿಕೆ ಕಾರಣ.

ವರ್ತೂರು ಸಂತೋಷ್-ಗೋಲ್ಡ್ ಸುರೇಶ್
ಈ ಹೋಲಿಕೆ ನಿಜಕ್ಕೂ ಇಂಟ್ರೆಸ್ಟಿಂಗ್ ಅಂತ ಅನಿಸುತ್ತೆ. ಬಿಗ್‌ಬಾಸ್ ಕನ್ನಡ ಸೀಸನ್ 10ರಲ್ಲಿ ಎಂಟ್ರಿ ಕೊಡುವಾಗ ವರ್ತೂರು ಸಂತೋಷ್ ಮೈತುಂಬಾ ಬಂಗಾರ ಹಾಕೊಂಡು ಬಂದಿದ್ದರು. ಈ ಬಾರಿ ಅವರಿಗಿಂತಲೂ ನಾಲ್ಕು ಪಟ್ಟು ಹೆಚ್ಚು ಚಿನ್ನವನ್ನು ಮೈ ಮೇಲೆ ಹಾಕೊಂಡು ಗೋಲ್ಡ್ ಸುರೇಶ್ ಬಂದಿದ್ದಾರೆ. ಈ ಕಾರಣಕ್ಕೆ ಇಬ್ಬರನ್ನೂ ಒಟ್ಟಿಗೆ ಇಟ್ಟು ಹೋಲಿಕೆ ಮಾಡಲಾಗುತ್ತಿದೆ.

ನಮ್ರತಾ ಗೌಡ-ಐಶ್ವರ್ಯಾ ಸಿಂಧೋಗಿ
ಬಿಗ್‌ಬಾಸ್ ಕನ್ನಡ ಸೀಸನ್ 10ರಲ್ಲಿ ಗಮನ ಸೆಳೆದವರಲ್ಲಿ ನಮ್ರತಾ ಗೌಡ ಕೂಡ ಒಬ್ಬರು. ಗ್ಲಾಮರ್ ಗೊಂಬೆಯಾಗಷ್ಟೇ ಅಲ್ಲದೆ, ಕೊಟ್ಟ ಟಾಸ್ಕ್ ಅನ್ನು ಉತ್ತಮವಾಗಿ ಆಡಿದ್ದರು. ಅಷ್ಟೇ ಅಲ್ಲದೆ, ನಮ್ರತಾ ಗೌಡ ಆಗಾಗ ಎಮೋಷನಲ್ ಆಗುತ್ತಿದ್ದರು. ಇವರ ಸ್ಥಾನವನ್ನು ಐಶ್ವರ್ಯಾ ಸಿಂಧೋಗಿ ತುಂಬ ಬಹುದು ಎನ್ನುತ್ತಿದ್ದಾರೆ ನೆಟ್ಟಿಗರು. ಅಲ್ಲದೆ ನಮ್ರತಾ ಗೌಡ ಹಾಗೂ ಐಶ್ವರ್ಯಾ ಸಿಂಧೋಗಿ ಇಬ್ಬರೂ ಉತ್ತಮ ಗೆಳತಿಯರು.

ಕಾರ್ತಿಕ್ ಮಹೇಶ್-ಶಿಶಿರ್ ಶಾಸ್ತ್ರಿ
ಬಿಗ್‌ಬಾಸ್ ಕನ್ನಡ ಸೀಸನ್ 10ರ ವಿನ್ನರ್ ಕಾರ್ತಿಕ್ ಮಹೇಶ್ ಜೊತೆ ಶಿಶಿರ್ ಶಾಸ್ತ್ರಿಯನ್ನು ಹೋಲಿಕೆ ಮಾಡಲಾಗುತ್ತಿದೆ. ಶಿಶಿರ್ ಶಾಸ್ತ್ರಿ ಹಾಗೂ ಕಾರ್ತಿಕ್ ಮಹೇಶ್ ಇಬ್ಬರೂ ನೋಡುವುದಕ್ಕೆ ಅಣ್ಣ ತಮ್ಮಂದಿರಂತೆ ಕಾಣುತ್ತಾರೆ. ಇಬ್ಬರೂ ಒಟ್ಟಿಗೆ ನಿಂತಿರುವ ಫೋಟೊ ಇಟ್ಟು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡಲಾಗುತ್ತಿದೆ.


Click it and Unblock the Notifications











