BBK 11: ಫಿನಾಲೆ ಟಿಕೆಟ್ ರೇಸ್‌ನಿಂದ ಧನರಾಜ್ ಔಟ್; ಗೌತಮಿ ಹಂಗಿಸಿದ ರಜತ್.. ಉಗ್ರಂ ಮಂಜು ಜೊತೆ ಮಾತಿನ ಚಕಮಕಿ
ಬಿಗ್ ಬಾಸ್ ಫಿನಾಲೆ ಹತ್ತಿರ ಬರುತ್ತಿದ್ದಂತೆ ಮನೆ ರಣರಂಗವಾಗುತ್ತಿದೆ. ಒಗ್ಗಟ್ಟಾಗಿದ್ದವು ಈಗ ಬೇರೆ ಬೇರೆಯಾಗುತ್ತಿದ್ದಾರೆ. ನಂಬಿದವರು ಮೋಸ ಹೋಗಿದ್ದಾರೆ. ಕೆಲವರಿಗೆ ನೋವಾಗಿದೆ. ಮತ್ತೆ ಕೆಲವರು ಕಣ್ಣೀರು ಹಾಕಿದ್ದಾರೆ. ಇನ್ನು ಕೆಲವರಿಗೆ ಸದಸ್ಯರ ವರ್ತನೆ ಕಂಡು ಶಾಕ್ ಆಗಿದೆ. ಈ ಮಧ್ಯೆ ಬಿಗ್ ಬಾಸ್ ಫಿನಾಲೆಗೆ ಟಿಕೆಟ್ ಅಂತ ಟಾಸ್ಕ್ ಕೊಟ್ಟು ಮಜಾ ನೋಡುತ್ತಿದೆ.
ಹೌದು ಬಿಗ್ ಬಾಸ್ ಕನ್ನಡ 11 ಮುಗಿಯುವುದಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಅಷ್ಟರೊಳಗೆ ಮನೆಯಲ್ಲಿ ಯಾರಿರುತ್ತಾರೆ? ಯಾರು ಹೊರಗೆ ಹೋಗುತ್ತಾರೆ ಅನ್ನೋದು ವೀಕ್ಷಕರಿಗೆ ಕುತೂಹಲವೆನಿಸಿದೆ. ಈ ಗ್ಯಾಪ್‌ನಲ್ಲಿ ಕೊಟ್ಟ ಟಾಸ್ಕ್‌ಗಳು ಕೆಲವರ ಕೈ ಕೊಟ್ಟಿದೆ. ಮತ್ತೆ ಕೆಲವರ ಕೈ ಹಿಡಿದಿದೆ. ಫಿನಾಲೆ ಟಿಕೆಟ್ ಪಡೆಯಲೇಬೇಕು ಅಂತ ಪಟ್ಟು ಪೈಪೋಟಿಗೆ ಬಿದ್ದಿದ್ದ ಸ್ಪರ್ಧಿಗಳು ಒಬ್ಬೊಬ್ಬರಾಗೇ ಹೊರಗುಳಿಯುತ್ತಿದ್ದಾರೆ.

ಈಗಾಗಲೇ ಚೈತ್ರಾ ಕುಂದಾಪುರಗೆ ಫಿನಾಲೆ ಟಿಕೆಟ್ ಮಿಸ್ ಆಗಿದೆ. ಅವರು ಕಣ್ಣೀರು ಆರುವುದಕ್ಕೂ ಮುನ್ನವೇ ಧನರಾಜ್‌ಗೂ ಫಿನಾಲೆ ಟಿಕೆಟ್ ಸಿಕ್ಕಿಲ್ಲ. ಆದರೆ. ಚೈತ್ರಾಗೆ ಹೋಲಿಕೆ ಮಾಡಿದರೆ, ಧನರಾಜ್‌ಗೆ ಇಬ್ಬರನ್ನು ಹೊರತು ಪಡಿಸಿ ಉಳಿದ ಮನೆಯ ಸದಸ್ಯರ ಅನುಕಂಪ ಸಿಕ್ಕಿದೆ. ಅದರಲ್ಲೂ ಧನರಾಜ್ ಬೆಂಬಲಕ್ಕೆ ರಜತ್ ನಿಂತಿದ್ದು, ಗೌತಮಿ ಜಾದವ್ ಕೊಟ್ಟ ಕಾರಣಕ್ಕೆ ತಿರುಗೇಟು ಕೊಟ್ಟಿದ್ದಾರೆ. ಉಗ್ರಂ ಜೊತೆ ಮಾತಿನ ಚಕಮಕಿ ನಡೆದಿದೆ.
ಬಿಗ್‌ಬಾಸ್ ಮನೆಯಲ್ಲಿ ಸದಸ್ಯರ ನಡೆ ಕುತೂಹಲವಾಗಿದೆ. ಯಾರು ಯಾರನ್ನು ಕೈ ಹಿಡಿಯುತ್ತಾರೆ. ಯಾರು ಯಾರಿಗೆ ಕೈ ಕೊಡುತ್ತಾರೆ ಅನ್ನೋದೇ ತಿಳಿಯುತ್ತಿಲ್ಲ. ಎಲ್ಲರೊಂದಿಗೆ ಚೆನ್ನಾಗಿ ಹೊಂದಿಕೊಂಡಿದ್ದ ಧನರಾಜ್‌ಗೆ ಈ ಬಾರಿ ನಂಬಿಕೆಗೆ ದ್ರೋಹ ಆದಂತೆ ಕಾಣುತ್ತಿದೆ. ಬಿಗ್‌ಬಾಸ್ ಫಿನಾಲೆ ಟಿಕೆಟ್‌ನಿಂದ ಯಾರು ದೂರ ಉಳಿಯಬೇಕು ಎಂದು ಕೇಳಿದ್ದರು. ಆ ವೇಳೆ ಉಗ್ರಂ ಮಂಜು ಹಾಗೂ ಗೌತಮಿ ಜಾದವ್ ಇಬ್ಬರೂ ಧನರಾಜ್ ಹೆಸರನ್ನು ಸೂಚಿಸಿದ್ದರು. ಹೀಗಾಗಿ ಫಿನಾಲೆ ಟಿಕೆಟ್‌ನಿಂದ ವಂಚಿತರಾಗಿದ್ದಾರೆ. ಸದ್ಯ ಬಿಗ್ ಬಾಸ್ ಮನೆಯಲ್ಲಿ ಈ ಬಗ್ಗೆ ಚರ್ಚೆ ನಡೆದಿದೆ.

ಗೌತಮಿ ಜಾದವ್ ಹಾಗೂ ಉಗ್ರಂ ಮಂಜು ಕೊಟ್ಟಿರುವ ಕಾರಣಗಳು ಮನೆಯ ಸದಸ್ಯರಿಗ್ಯಾಕೋ ಹಿಡಿಸಿಲ್ಲ. ಅದರಲ್ಲೂ ರೆಬೆಲ್ ರಜತ್ ಇವರಿಬ್ಬರ ಮೇಲೂ ಮತ್ತೆ ಸಿಡಿದೆದ್ದಿದ್ದಾರೆ. ಉಗ್ರಂ ಮಂಜು ನಡೆ ಹಾಗೂ ಗೌತಮಿ ಜಾದವ್ ಕೊಟ್ಟ ಕಾರಣವನ್ನು ಟೀಕಿಸಿದ್ದಾರೆ. ಧನರಾಜ್ ಅವರನ್ನು ಮುಂದಿಟ್ಟುಕೊಂಡು ಗೌತಮಿ ಕೊಟ್ಟ ಕಾರಣವನ್ನು ಲೇವಡಿ ಮಾಡಿದ್ದಾರೆ. ಗೌತಮಿ ಮೊದಲ ಎರಡು ಮೂರು ವಾರ ಹಿಂಜರಿಯುತ್ತಿದ್ದರು ಎಂದು ಹೇಳಿದ್ದರು. ಅದಕ್ಕೆ ರಜತ್ ಚಪ್ಪಾಳೆ ತಟ್ಟಿ ಆಕ್ರೋಶ ಹೊರ ಹಾಕಿದ್ದಾರೆ.
ಹಾಗೇ ಶಿಳ್ಳೆ ಹಾಕಿ, ಧನರಾಜ್‌ಗೆ ಮೊದಲ ಮೂರು ವಾರ ಯಾಕೋ ನೀನು ಚೆನ್ನಾಗಿ ಆಡಿಲ್ಲ ಎಂದು ಧನರಾಜ್ ಕೇಳಿದ್ದಾರೆ. ಹಾಗೇ ಧನು ಗೌತಮಿಗಿಂತ ವೀಕಾ? ಅಂತ ಪ್ರಶ್ನೆ ಮಾಡಿದ್ದಾರೆ. ಕಲರ್ಸ್ ಕನ್ನಡ ಬಿಡುಗಡೆ ಮಾಡಿದ ಪ್ರೋಮೊದಲ್ಲಿ ಈ ಎಲ್ಲಾ ಅಂಶಗಳೂ ಇವೆ. ಹೀಗಾಗಿ ಇಂದಿನ ಎಪಿಸೋಡ್ ಸಿಕ್ಕಾಪಟ್ಟೆ ಜಟಪಟಿಯಿಂದ ಕೂಡಿರುತ್ತೆ ಎಂದು ಊಹೆ ಮಾಡಿಕೊಳ್ಳಬಹುದು.
ರಜತ್ ಆಕ್ರೋಶ ಇಲ್ಲಿಗೆ ಮುಗಿದಿಲ್ಲ. ಉಗ್ರಂ ಮಂಜು ವಿರುದ್ಧವೂ ಆಕ್ರೋಶ ಹೊರ ಹಾಕಿದ್ದಾರೆ. ಆ ವೇಳೆ ಉಗ್ರಂ ಮಂಜು ಇಲ್ಲಿ ಒಬ್ಬರೇ ಆಡುತ್ತಿರುವುದಂತೂ ನಿಜ. ಇಲ್ಲಿ ಯಾರನ್ನೂ ಕರ್ಕೊಂಡು ಆಟ ಆಡುತ್ತಿಲ್ಲ ಎಂದು ಹೇಳಿದ್ದಾರೆ. ಧನರಾಜ್ ಫಿನಾಲೆ ಟಿಕೆಟ್ ತಪ್ಪಿಸಿದ ಗೌತಮಿ ಹಾಗೂ ಉಗ್ರಂ ಮಂಜು ನಡೆಗೆ ಮನೆಗೆ ಸರ್ಪ್ರೈಸ್ ಆಗಿದೆ. ತ್ರಿವಿಕ್ರಮ್, ರಜತ್, ಭವ್ಯಾ, ಮೋಕ್ಷಿತಾ ಹಾಗೂ ಹನುಮಂತ "ಮಾರಮ್ಮನ ಜಾತ್ರೆಯಲ್ಲಿ ಕುರಿಯನ್ನು ಬಳಿ ಕೊಟ್ಟಂತೆ, ಧನರಾಜ್ ಅವರನ್ನು ಬಲಿಕೊಡಲಾಗಿದೆ ಎಂದು ಹೇಳಿಕೊಂಡು ನಕ್ಕಿದ್ದಾರೆ.


Click it and Unblock the Notifications











