BBK 11: ಇಂದು-ನಾಳೆ ಡಬಲ್ ಎಲಿಮಿನೇಷನ್ ಗ್ಯಾರಂಟಿ; ಮೋಕ್ಷಿತಾ ಸೇಫ್.. ಧನರಾಜ್‌ಗೆ ಕೈ ಕೊಟ್ಟ ಹನುಮಂತ
ಬಿಗ್ ಬಾಸ್ ಕನ್ನಡ 11 ಗ್ರ್ಯಾಂಡ್ ಫಿನಾಲೆಗೆ ಇನ್ನು ಎಂಟು ದಿನಗಳು ಮಾತ್ರ ಬಾಕಿ ಉಳಿದಿದೆ. ಆಗಲೇ ಮನೆಯೊಳಗೆ ಸದಸ್ಯರ ನಡುವೆ ಕಾಂಪಿಟೇಷನ್ ಜೋರಾಗಿದೆ. ಈಗಾಗಲೇ ಮಿಡ್ ವೀಕ್ ಎಲಿಮಿನೇಷನ್‌ನಲ್ಲಿ ಒಬ್ಬರು ಸ್ಪರ್ಧಿ ಹೊರ ಬರಬೇಕಿತ್ತು. ಆದರೆ, ಬಿಗ್ ಬಾಸ್ ಅದನ್ನು ರದ್ದುಗೊಳಿಸಿತ್ತು. ಧನರಾಜ್ ಮಾಡಿದ ಎಡವಟ್ಟು ಮಿಡ್ ವೀಕ್ ಎಲಿಮಿನೇಷನ್‌ನನಿಂದ ಗೌತಮಿ ಹಾಗೂ ಭವ್ಯಾ ಗೌಡ ಅವರನ್ನು ಬಚಾವ್ ಮಾಡಿತ್ತು.
ಇಂದು ಬಿಗ್ ಬಾಸ್ ವೇದಿಕೆ ಮೇಲೆ ಕಿಚ್ಚ ಸುದೀಪ್ ಮಿಡ್ ವೀಕ್ ಎಲಿಮಿನೇಷನ್ ರದ್ದಾಗಿದ್ದಕ್ಕೆ ಸೂಕ್ತ ಕಾರಣಗಳನ್ನು ನೀಡುವ ಸಾಧ್ಯತೆಯಿದೆ. ಸ್ಪರ್ಧಿಗಳನ್ನು ತರಾಟೆಗೆ ತೆಗೆದುಕೊಳ್ಳಬಹುದು ಎಂದು ನಿರೀಕ್ಷೆ ಮಾಡಲಾಗಿದೆ. ಇನ್ನು ಮಿಡ್ ವೀಕ್‌ನಲ್ಲಿ ಎಲಿಮಿನೇಷನ್‌ನಲ್ಲಿ ಮೂವರು ಹೆಸರು ಓಡಾಡಿತ್ತು. ಧನರಾಜ್ ಆಚಾರ್, ಗೌತಮಿ ಜಾದವ್ ಹಾಗೂ ಭವ್ಯಾ ಗೌಡ ಆ ಮೂರು ಹೆಸರುಗಳು.

ಮಿಡ್ ವೀಕ್ ಎಲಿಮಿನೇಷನ್‌ನಲ್ಲಿ ಬಂದಿರುವ ಆ ಮೂರು ಹೆಸರುಗಳಲ್ಲಿ ಇಬ್ಬರು ಹೊರ ಬರಬಹುದು ಅನ್ನೋದು ವೀಕ್ಷಕರ ಲೆಕ್ಕಾಚಾರ. ಆದರೆ, ಕಿಚ್ಚ ಪಂಚಾಯ್ತಿಯಲ್ಲಿ ಏನು ಬೇಕಾದರೂ ತಲೆಕೆಳಗಾಗಬಹುದು. ಧನರಾಜ್, ಗೌತಮಿ ಜಾದವ್, ಭವ್ಯಾ ಗೌಡ ಮೂವರ ಹೊರತಾಗಿಯೂ ಬೇರೆಯವರು ಹೊರ ಬಂದರೂ ಅಚ್ಚರಿ ಪಡಬೇಕಿಲ್ಲ. ಎಲಿಮಿನೇಷನ್ ಲಿಸ್ಟ್‌ನಲ್ಲಿ ಮೋಕ್ಷಿತಾ ಅಂತೂ ಸೇವ್ ಆಗಿದ್ದಾರೆ.
ವಾರದ ಮಧ್ಯದ ಎಲಿಮಿನೇಷನ್ ರದ್ದು ಮಾಡಿ ವೀಕೆಂಡ್‌ನಲ್ಲಿ ಡಬಲ್ ಎಲಿಮಿನೇಷನ್ ಅಂತ ಹೇಳಿದ್ದರಿಂದ ವೀಕ್ಷಕರಿಗೆ ಕುತೂಹಲ ಹೆಚ್ಚಾಗಿದೆ. ಶನಿವಾರ ಹಾಗೂ ಭಾನುವಾರ ಈ ಎರಡು ದಿನ ಇಬ್ಬರು ಸ್ಪರ್ಧಿಗಳು ಬಿಗ್ ಬಾಸ್ ಮನೆಯಿಂದ ಇಬ್ಬರು ಸ್ಪರ್ಧಿಗಳು ಹೊರ ಬರುತ್ತಾರೆ. ಮನೆಯೊಳಗೆ ಇರುವ ಎಂಟು ಮಂದಿ ಸ್ಪರ್ಧಿಗಳಲ್ಲಿ ಹೊರ ಬರುವ ಆ ಇಬ್ಬರು ಯಾರು? ಗೌತಮಿ, ಭವ್ಯಾ ಗೌಡ ಹಾಗೂ ಧನರಾಜ್ ಆಚಾರ್ ಈ ಮೂವರಲ್ಲಿ ಇಬ್ಬರು ಬರೋದು ಗ್ಯಾರಂಟಿ ಅಂತಿದ್ದಾರೆ ನೆಟ್ಟಿಗರು.

ಆದರೆ, ಕಳೆದೆರಡು ವಾರಗಳಿಂದ ಬಿಗ್ ಬಾಸ್ ಟ್ವಿಸ್ಟ್‌ಗಳ ಮೇಲೆ ಟ್ವಿಸ್ಟ್ ಕೊಡುತ್ತಿದೆ. ಅಂತಿಮ ಘಟ್ಟದಲ್ಲಿ ವೀಕ್ಷಕರ ಊಹೆಗೂ ಮೀರಿದ ತಿರುವುಗಳನ್ನು ನೀಡಬಹುದು. ಯಾಕಂದ್ರೆ ಈಗಾಗಲೇ ಫಿನಾಲೆ ವಾರಕ್ಕೆ ಮೂವರು ಮಂದಿ ಎಂಟ್ರಿ ಕೊಟ್ಟಿದ್ದಾರೆ. ಫಿನಾಲೆ ಟಿಕೆಟ್ ಪಡೆದುಕೊಂಡಿರುವ ಹನುಮಂತ, ತ್ರಿವಿಕ್ರಮ್, ಮೋಕ್ಷಿತಾ ಫಿನಾಲೆ ವೀಕ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಹೀಗಾಗಿ ಇನ್ನು ಉಳಿದ ಐದು ಮಂದಿಗಳಲ್ಲಿ ಧನರಾಜ್ ಆಚಾರ್, ಗೌತಮಿ ಜಾದವ್, ಭವ್ಯಾ ಗೌಡ ಬಿಟ್ಟರೆ ಉಗ್ರಂ ಮಂಜು ಹಾಗೂ ರಜತ್ ಉಳಿದುಕೊಂಡಿದ್ದಾರೆ.
ಲೆಕ್ಕಾಚಾರದ ಪ್ರಕಾರ, ಉಗ್ರಂ ಮಂಜು ಹಾಗೂ ರಜತ್ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆಯುತ್ತಿದೆ. ಇವರಿಬ್ಬರೂ ಸದ್ಯ ವೀಕ್ಷಕರಿಗೆ ರಂಜಿಸುತ್ತಿರುವ ಸ್ಪರ್ಧಿಗಳು. ಇಬ್ಬರ ನಡುವಿನ ವಾಗ್ಯುದ್ಧವನ್ನು ವೀಕ್ಷಕರು ಗಮನವಿಟ್ಟು ವೀಕ್ಷಿಸುತ್ತಿದ್ದಾರೆ. ಹೀಗಾಗಿ ಇವರಿಬ್ಬರು ಈ ವಾರ ಮನೆಯಿಂದ ಹೊರ ಬರೋದು ಬಹುತೇಕ ಅನುಮಾನ. ಇವರೂ ಫಿನಾಲೆಗೆ ಎಂಟ್ರಿ ಕೊಡುವವರ ಲಿಸ್ಟ್‌ನಲ್ಲಿ ಇದ್ದಾರೆ ಅನ್ನೋದನ್ನು ಗೆಸ್ ಮಾಡಬಹುದು.
ಮಿಡ್ ವೀಕ್ ಎಲಿಮಿನೇಷನ್ ರದ್ದಾಗಿದ್ದರಿಂದ ಮತ್ತೆ ನಾಮಿನೇಷನ್ ಪ್ರಕ್ರಿಯೆಯನ್ನು ಬಿಗ್ ಬಾಸ್ ನಡೆಸಿತ್ತು. ಒಬ್ಬ ಸ್ಪರ್ಧಿ ಮೂವರನ್ನು ನಾಮಿನೇಟ್ ಮಾಡುವ ಟಾಸ್ಕ್ ನೀಡಿತ್ತು. ಈ ಪ್ರಕ್ರಿಯೆಯಲ್ಲಿ ಮೋಕ್ಷಿತಾ ಪೈ, ಧನರಾಜ್ ಆಚಾರ್, ಗೌತಮಿ ಜಾದವ್, ಉಗ್ರಂ ಮಂಜು, ಭವ್ಯಾ ಗೌಡ ಹಾಗೂ ರಜತ್ ಈ ವಾರ ನಾಮಿನೇಟ್ ಆಗಿದ್ದಾರೆ. ಈ ವೇಳೆ ಬಿಗ್‌ಬಾಸ್ ಹನುಮಂತನಿಗೆ ಒಬ್ಬ ಸ್ಪರ್ಧಿಯನ್ನು ನಾಮಿನೇಷನ್‌ನಿಂದ ಪಾರು ಮಾಡುವ ವಿಶೇಷ ಅಧಿಕಾರವನ್ನು ನೀಡಿತ್ತು. ಆ ವೇಳೆ ಹನುಮಂತ ಗೆಳೆಯ ಧನರಾಜ್ ಹೆಸರನ್ನು ತೆಗೆದುಕೊಳ್ಳಬಹುದು ಎಂದುಕೊಂಡಿದ್ದರು. ಆದರೆ, ಮೋಕ್ಷಿತಾ ಅವರ ಹೆಸರನ್ನು ತೆಗೆದುಕೊಂಡು ಅಚ್ಚರಿ ಮೂಡಿಸಿದ್ದಾರೆ. ಹೀಗಾಗಿ ವೀಕೆಂಡ್‌ನಲ್ಲಿ ಧನರಾಜ್, ಗೌತಮಿ ಹಾಗೂ ಭವ್ಯಾ ಗೌಡ ಮೂವರಲ್ಲಿ ಇಬ್ಬರು ಹೊರ ಬರಬಹುದು.


Click it and Unblock the Notifications











