BBK 11: ಸರ್ಪ್ರೈಸ್ ಎಂಟ್ರಿ.. ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ 6 ಮಂದಿ; ಲಾಯರ್ ಜಗದೀಶ್ ಯಾಕೆ ಬರ್ಲಿಲ್ಲ?
ಬಿಗ್ ಬಾಸ್ ಕನ್ನಡ 11 ಗ್ರ್ಯಾಂಡ್ ಫಿನಾಲೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಮನೆಯೊಳಗೆ ಇರುವ ಸ್ಪರ್ಧಿಗಳು ಕಾಂಪಿಟೇಷನ್‌ಗೆ ಬಿದ್ದು ಆಟ ಆಗುತ್ತಿದ್ದಾರೆ. ಬಿಗ್ ಬಾಸ್ ಸೀಸನ್ 11 ಟೈಟಲ್ ಗೆಲ್ಲುವುದಕ್ಕೆ ಆರೋಪ ಹಾಗೂ ಪ್ರತ್ಯಾರೋಪ ಮಾಡುತ್ತಲೇ ಇದ್ದಾರೆ. ಇನ್ನು ಮಿಡ್ ನೈಟ್ ಎಲಿಮಿನೇಷನ್ ಪ್ರಕ್ರಿಯೆ ಕೂಡ ರೋಚಕ ತಿರುವು ಪಡೆದುಕೊಂಡಿತ್ತು.
ಕಳೆದೆರಡು ದಿನಗಳಿಂದ ಎಲಿಮಿನೇಷನ್ ಪ್ರಕ್ರಿಯೆ ನಡೆಯುತ್ತಿತ್ತು. ಮಿಡ್ ನೈಟ್ ಎಲಿಮಿನೇಷನ್ ಮಾಡಲೇಬೇಕು ಅಂತ ಬಿಗ್ ಬಾಸ್ ಕೂಡ ಹೇಳಿದ್ದರು. ಮೊದಲ ದಿನ ಗೌತಮಿ ಜಾದವ್, ಭವ್ಯಾ ಗೌಡ ಇಬ್ಬರಲ್ಲಿ ಯಾರಾದರೂ ಒಬ್ಬರು ಎಲಿಮಿನೇಟ್ ಆಗುತ್ತಾರೆ ಅನ್ನೋ ಸುದ್ದಿ ಬಲವಾಗಿ ಹಬ್ಬಿತ್ತು. ಆದರೆ, ಅದಕ್ಕೂ ಟ್ವಿಸ್ಟ್ ಸಿಕ್ಕಿತ್ತು. ಎರಡನೇ ದಿನ ಮೋಸದಾಟ ಅಂತ ಧನರಾಜ್ ಮೇಲೆ ತೂಗುಗತ್ತಿ ನೇತಾಡುತ್ತಿತ್ತು.

ಎರಡನೇ ದಿನವೂ ಮಿಡ್ ವೀಕ್ ಎಲಿಮಿನೇಷನ್ ಪ್ರಕ್ರಿಯೆ ನಡೆಯಲೇ ಇಲ್ಲ. ಈ ವಾರದ ಉದ್ದಕ್ಕೂ ಕಿರುತೆರೆ ವೀಕ್ಷಕರಿಗೆ ಎಲಿಮಿನೇಷನ್ ಪ್ರತಿಕ್ರಿಯೆಯಲ್ಲಿ ಟ್ವಿಸ್ಟ್ ಅಂಡ್ ಟರ್ನ್ ನೋಡುವುದಕ್ಕೆ ಸಿಗುತ್ತಲೇ ಇದೆ. ಈಗ ಬಿಗ್ ಬಾಸ್ ಮನೆಯೊಳಗೆ ಎಲಿಮಿನೇಟ್ ಆದ ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದಾರೆ. ಶಿಶಿರ್, ರಜತ್, ಯಮುನಾ, ಗೋಲ್ಡ್ ಸುರೇಶ್, ಅನುಷಾ ರೈ, ಹಂಸ, ಮಾನಸ ಅವರಲ್ಲಿ ಕೆಲವರು ಮಿಸ್ ಆಗಿದ್ದಾರೆ. ಅದರಲ್ಲೂ ಲಾಯರ್ ಜಗದೀಶ್ ಯಾಕೆ ಬಂದಿಲ್ಲ? ರಜತ್ ಹಾಗೂ ಜಗದೀಶ್ ಮುಖಾ ಮುಖಿಯಾಗಿದ್ದರೆ ಹೇಗಿರುತ್ತಿತ್ತು?
ಕಳೆದೆರಡು ದಿನಗಳಿಂದ ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ಆರು ಮಂದಿ ಸದಸ್ಯರು ಇದ್ದಾರೆ. ತ್ರಿವಿಕ್ರಮ್, ರಜತ್, ಭವ್ಯಾ ಗೌಡ, ಗೌತಮಿ ಜಾದವ್, ಉಗ್ರಂ ಮಂಜು ಹಾಗೂ ಮೋಕ್ಷಿತಾ ಇದ್ದರು. ಈಗ ಅವರೊಂದಿಗೆ ಧನರಾಜ್ ಕೂಡ ಸೇರಿಕೊಂಡಿದ್ದಾರೆ. ನಿನ್ನೆಯ (ಜನವರಿ 16) ಸಂಚಿಕೆಯಲ್ಲಿ ಯಾರು ಮನೆಯಿಂದ ಆಚೆ ಹೋಗಬೇಕು ಅನ್ನೋದನ್ನು ಸದಸ್ಯರ ಬಳಿ ಕೇಳಲಾಗಿತ್ತು. ಈ ವೇಳೆ ರಜತ್ ಸೇರಿದಂತೆ ಬಹುತೇಕ ಎಲ್ಲಾ ಮಂದಿನೂ ಉಗ್ರಂ ಮಂಜುನಾ ರೋಸ್ಟ್ ಮಾಡಿದ್ದರು.
ಉಗ್ರಂ ಮಂಜು ಅವರನ್ನು ರೋಸ್ಟ್ ಮಾಡಿದವರಲ್ಲಿ ರಜತ್ ಹಾಗೂ ಭವ್ಯಾ ಗೌಡ ಮೊದಲಿಗರಾಗಿದ್ದರು. ಉಗ್ರಂ ಮಂಜು ಮೇಲೆ ಆರೋಪಗಳ ಸುರಿಮಳೆಯನ್ನೇ ಸುರಿಸಿದ್ದರು. ಈಗ ಬಿಗ್ ಬಾಸ್ ಮನೆಯೊಳಗೆ ಎಲಿಮಿನೆಟ್ ಆದ ಆರು ಮಂದಿ ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದಾರೆ. ಅವರಲ್ಲಿ ಶಶಿರ್, ಹಂಸ, ಮಾನಸ ಮೂವರೂ ಕೂಡ ಉಗ್ರಂ ಮಂಜು ವಿರುದ್ಧ ಅಸಮಧಾನವನ್ನು ಹೊರ ಹಾಕಿದ್ದಾರೆ.

ರೋಸ್ಟ್ ಮಾಡಿದ್ದ ರಜತ್‌ಗೆ ಉಗ್ರಂ ಮಂಜು ತಿರುಗೇಟು ಕೊಟ್ಟಿದ್ದಾರೆ. ಮೂರು ವಾರ ಮಂಜು ಆಕ್ಟಿವ್ ಆಗಿದ್ದ ಆಮೇಲೆ ಆ ಜೋಷ್ ಕಾಣಿಸಲೇ ಇಲ್ಲ. ನೀನು ಜೀರೋ ಅಂತ ರಜತ್ ಹಂಗಿಸಿದ್ದರು. ಅದಕ್ಕೆ ಎಲಿಮಿನೇಟ್ ಆದವರು ಮತ್ತೆ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟು ಉಗ್ರಂ ಮಂಜು ಬಗ್ಗೆನೇ ಮಾತಾಡಿದ್ದಾರೆ. ಅದನ್ನೇ ಇಟ್ಟುಕೊಂಡು ರಜತ್, ತ್ರಿವಿಕ್ರಮ್ ಹಾಗೂ ಭವ್ಯಾಗೆ ತಿರುಗೇಟು ಕೊಟ್ಟಿರೋದು ಪ್ರೋಮೋದಲ್ಲಿ ರಿವೀಲ್ ಆಗಿದೆ.
ಇನ್ನು ಎಲಿಮಿನೇಟ್ ಆದವರಲ್ಲಿ ವಿವಾದಾತ್ಮಕ ಸ್ಪರ್ಧಿ ಲಾಯರ್ ಜಗದೀಶ್ ಬಿಗ್ ಬಾಸ್ ಮನೆಗೆ ರೀ-ಎಂಟ್ರಿ ಕೊಟ್ಟಿಲ್ಲ. ಕೊನೆಯ ವಾರ ಲಾಯರ್ ಜಗದೀಶ್ ಹಾಗೂ ರಜತ್ ಇಬ್ಬರೂ ಮುಖಾ ಮುಖಿಯಾಗಬೇಕಿತ್ತು ಅಂತ ವೀಕ್ಷಕರು ಬಯಸುತ್ತಿದ್ದಾರೆ. ಇಬ್ಬರೂ ಅಗ್ರೆಸಿವ್ ಆಗಿ ಆಟ ಆಡುವವರು. ಈ ಕಾರಣಕ್ಕೆ ಲಾಯರ್ ಜಗದೀಶ್ ಅವರನ್ನು ಮುಖ್ಯ ಅತಿಥಿಯಾಗಿ ಎಂಟ್ರಿ ಕೊಡಿಸಬೇಕಿತ್ತು ಅನ್ನೋ ಅಭಿಪ್ರಾಯವೂ ಸೋಶಿಯಲ್ ಮೀಡಿಯಾದಲ್ಲಿ ವ್ಯಕ್ತವಾಗುತ್ತಿದೆ.


Click it and Unblock the Notifications











