ಲಾಯರ್ ಜಗದೀಶ್‌ಗೆ ಸೀರೆ ಉಟ್ಕೋ ಎಂದ ಮಾನಸ; ಅದಕ್ಕೂ ಯೋಗ್ಯತೆ ಇಲ್ಲ ಎಂದ ಹಂಸಾ
ಈ ಬಾರಿಯ ಕನ್ನಡದ ಬಿಗ್ ಬಾಸ್ ರಿಯಾಲಿಟಿ ಶೋ ಸಿಕ್ಕಾಪಟ್ಟೆ ಚರ್ಚೆಯಲ್ಲಿದೆ. ಕಳೆದ ಮೂರು ವಾರಗಳಿಂದ ಲಾಯರ್ ಜಗದೀಶ್ ಎಲ್ಲರಿಗೂ ಅವಾಜ್ ಹಾಕಿಕೊಂಡು ಮನೆಯಲ್ಲಿ ಆರ್ಭಟ ಮಾಡುತ್ತಿದ್ದಾರೆ. ಇನ್ನೊಂದು ಕಡೆ ಜಗದೀಶ್ ಹಾಗೂ ರಂಜಿತ್ ನಡುವೆ ಫೈಟ್ ನಡೆದಿದ್ದು, ಇಬ್ಬರನ್ನೂ ಬಿಗ್ ಬಾಸ್ ಮನೆಯಿಂದ ಹೊರಗೆ ದಬ್ಬಲಾಗಿದೆ ಅನ್ನೋ ಮಾತು ಕೇಳಿ ಬರುತ್ತಿದೆ.
ಈ ಮಧ್ಯೆ ನಿನ್ನೆಯ (ಅಕ್ಟೋಬರ್ 16) ಎಪಿಸೋಡ್‌ನಲ್ಲಿ ಲಾಯರ್ ಜಗದೀಶ್ ಹಾಗೂ ರಂಜಿತ್ ನಡುವಿನ ಕಿತ್ತಾಟವನ್ನು ತೋರಿಸಿಲ್ಲ. ನಿನ್ನೆಯ ಎಪಿಸೋಡ್‌ನಲ್ಲೂ ಲಾಯರ್ ಜಗದೀಶ್ ಒಂದು. ಮನೆ ಮಂದಿಯೆಲ್ಲ ಒಂದು ಅನ್ನುವ ಸ್ಥಿತಿ ನಿರ್ಮಾಣ ಆಗಿತ್ತು.

ಲಾಯರ್ ಜಗದೀಶ್ ಹಾಗೂ ಉಗ್ರಂ ಮಂಜು ಮಧ್ಯೆ ಮಾತಿನ ಚಕಮಕಿ ಶುರುವಾಗಿತ್ತು. ಒಂದು ಹಂತಕ್ಕೆ ಇದು ತಾರಕಕ್ಕೆ ಹೋಗುತ್ತೆ ಅನ್ನುವಂತೆ ಭಾಸವಾಗಿತ್ತು. ಅಷ್ಟರಲ್ಲೇ ತಿಳಿಕೊಂಡಿದೆ. ಇಂದಿನ ಎಪಿಸೋಡ್‌ನಲ್ಲಿ ಲಾಯರ್ ಜಗದೀಶ್ ಹಾಗೂ ರಂಜಿತ್ ನಡುವಿನ ಕಿತ್ತಾಟವನ್ನು ವೀಕ್ಷಕರಿಗೆ ತೋರಿಸಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಆ ಮಧ್ಯೆನೇ ಮಹಿಳಾ ಸ್ಪರ್ಧಿಗಳು ಲಾಯರ್ ಜಗದೀಶ್ ವಿರುದ್ಧ ತಿರುಗಿಬಿದ್ದಿದ್ದಾರೆ.
ಕಲರ್ಸ್ ಕನ್ನಡ ಬೆಳ್ಳಂಬೆಳಗ್ಗೆನೇ ಪ್ರೋಮೊವೊಂದನ್ನು ರಿಲೀಸ್ ಮಾಡಿದೆ. ಇದರಲ್ಲಿ ಲಾಯರ್ ಜಗದೀಶ್ ಅವರನ್ನೇ ಹೈಲೈಟ್ ಮಾಡಲಾಗಿದೆ. ಈ ಪೋಮೋದಲ್ಲಿ ಬಿಗ್‌ಬಾಸ್ ಕನ್ನಡ ಸೀಸನ್ 11ರ ಮಹಿಳಾ ಸ್ಪರ್ಧಿಗಳು ಲಾಯರ್ ಜಗದೀಶ್ ವಿರುದ್ಧ ತಿರುಗಿಬಿದ್ದಿದ್ದಾರೆ. ಜಗದೀಶ್ ಮತ್ತೆ ಮಹಿಳೆಯ ಬಗ್ಗೆ ಕೆಟ್ಟದಾಗಿ ಬೈದಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ. ಈ ವಿಚಾರಕ್ಕೆ ಮಹಿಳೆಯರು ರೊಚ್ಚಿಗೆದ್ದಿದ್ದಾರೆ.
ಮಹಿಳೆಯರ ಬಗ್ಗೆ ಕೆಟ್ಟ ಯಾವುದೋ ಪದವನ್ನು ಲಾಯರ್ ಜಗದೀಶ್ ಬಳಕೆ ಮಾಡಿದ್ದಾರೆ. ಅದರ ವಿರುದ್ಧ ಮೊದಲು ಗೋಲ್ಡ್ ಸುರೇಶ ಧ್ವನಿ ಎತ್ತಿದ್ದಾರೆ. ಅದು ಮಹಿಳಾ ಸ್ಪರ್ಧಿಗಳಿಗೂ ಮುಟ್ಟಿದೆ. ಅಲ್ಲಿಂದ ಮಹಿಳೆಯರೆಲ್ಲರೂ ಸೇರಿಕೊಂಡು ಲಾಯರ್ ಜಗದೀಶ್ ವಿರುದ್ಧ ತಿರುಗಿಬಿದ್ದಿದ್ದಾರೆ. ಅದರಲ್ಲೂ ಚೈತ್ರಾ ಕುಂದಾಪುರ, ಮಾನಸ ತುಕಾಲಿ ಹಾಗೂ ಹಂಸಾ ರೊಚ್ಚಿಗೆದ್ದಿದ್ದಾರೆ.
ಈ ಪ್ರೋಮೊದಲ್ಲಿ ಲಾಯರ್ ಜಗದೀಶ್ ಅವರಿಗೆ "ಸೀರೆ ಕೊಡುತ್ತೇನೆ ಉಟ್ಟುಕೋ" ಎಂದು ಮಾನಸಾ ಗರಂ ಆಗಿದ್ದಾರೆ. ಇದೇ ವೇಳೆ ನಟಿ ಹಂಸಾ ಕೂಡ ರೊಚ್ಚಿಗೆದ್ದಿದ್ದಾರೆ. ಲಾಯರ್ ಜಗದೀಶ್ ವಿರುದ್ಧ "ಅವರಿಗೆ ಹೆಂಗಸು ಆಗುವುದಕ್ಕೂ ಯೋಗ್ಯತೆಯಿಲ್ಲ" ಎಂದು ಹಂಸಾ ಗುಡುಗಿದ್ದಾರೆ. ಇಷ್ಟೇ ಅಲ್ಲದೆ, ಬಿಗ್‌ಬಾಸ್ ಮೊರೆ ಹೋಗಿದ್ದು, "ಲಾಯರ್ ಜಗದೀಶ್ ವಿಚಾರಕ್ಕೆ ಪರಿಹಾರ ಕೊಡಬೇಕು. ನೀವೇ ಕೊಡುತ್ತೀರ. ಇಲ್ಲ ನಾವೇ ಏನಾದರೂ ಮಾಡಬೇಕಾ?" ಎಂದು ಪ್ರಶ್ನೆ ಮಾಡಿದ್ದಾರೆ.
ಇನ್ನೊಂದು ಕಡೆ ಲಾಯರ್ ಜಗದೀಶ್ ಹಾಗೂ ರಂಜಿತ್ ಫೈಟ್ ಬಗ್ಗೆ ಇನ್ನೂ ಕ್ಲಾರಿಟಿ ಸಿಕ್ಕಿಲ್ಲ. ನಿನ್ನೆನೇ (ಅಕ್ಟೋಬರ್ 16) ಲಾಯರ್ ಜಗದೀಶ್ ಹಾಗೂ ರಂಜಿತ್ ಅವರನ್ನು ಬಿಗ್ ಬಾಸ್ ಮನೆಯಿಂದ ಹೊರ ಹಾಕುವುದನ್ನು ಅನೌನ್ಸ್ ಮಾಡುತ್ತಾರೆಂಬ ನಿರೀಕ್ಷೆಯಿತ್ತು. ಆದರೆ, ನಿನ್ನೆಯ ಎಪಿಸೋಡ್‌ನಲ್ಲಿ ಅದನ್ನು ತೋರಿಸಿಲ್ಲ. ಹೀಗಾಗಿ ಇಂದಿನ (ಅಕ್ಟೋಬರ್ 17) ಎಪಿಸೋಡ್‌ನಲ್ಲಿ ಆ ಪ್ರಕ್ರಿಯೆ ನಡೆಯಬಹುದೆಂದು ನಿರೀಕ್ಷೆ ಮಾಡಲಾಗಿದೆ. ಸದ್ಯ ಬಿಗ್ ಬಾಸ್ ಕನ್ನಡ ಸೀಸನ್ 11 ರಾಂಗ್ ರೀಸನ್‌ಗೆ ಚರ್ಚೆಯಲ್ಲಿದೆ. ಅದರಲ್ಲೂ ಲಾಯರ್ ಜಗದೀಶ್ ಹಾಗೂ ಬಿಗ್ ಬಾಸ್‌ನ ಉಳಿದ ಸದಸ್ಯರ ನಡುವಿನ ಕಿತ್ತಾಟವೇ ಹೆಚ್ಚು ಹೈಲೈಟ್ ಆಗುತ್ತಿದೆ ಅಂತ ವೀಕ್ಷಕರಿಗೆ ಅನಿಸಿದೆ. ಈ ಕಾರಣಕ್ಕೆ ಬಿಗ್ ಬಾಸ್ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ. ಏನಕ್ಕೂ ಇಂದಿನ ಎಪಿಸೋಡ್‌ನಲ್ಲಿ ಲಾಯರ್ ಜಗದೀಶ್ ಹಾಗೂ ರಂಜಿತ್ ನಡುವಿನ ಕಿತ್ತಾಟಕ್ಕೆ ಅಂತ್ಯ ಹಾಡುವ ಸಾಧ್ಯತೆಯಿದೆ.


Click it and Unblock the Notifications











