ಎರಡೇ ದಿನಕ್ಕೆ ಚಿಗುರಿತೇ ಪ್ರೀತಿ? ನರಕದಲ್ಲಿ ಅರಳಿದ ಪ್ರೀತಿಗೆ 'ಐಶ್ವರ್ಯಾ' ಎನ್ನಬಹುದೇ?
ಬಿಗ್‌ಬಾಸ್‌ನಲ್ಲಿ ಲವ್ ಸ್ಟೋರಿ ಹುಟ್ಟೋದು ಸರ್ವೆ ಸಾಮಾನ್ಯ. ಈ ಹಿಂದೆ ಬಂದ ಹತ್ತೂ ಸೀಸನ್‌ನಲ್ಲಿ ಒಂದಲ್ಲ ಒಂದು ಜೋಡಿ ಆತ್ಮೀಯವಾಗಿದ್ದು ಇದೆ. ಶೋ ಮುಗಿಯುವವರೆಗೂ ಪ್ರೀತಿಯ ನಾಟಕವಾಡಿದ್ದೂ ಖಂಡಿದ್ದೇವೆ. ಶೋ ಮುಗಿದ ಮೇಲೆ ನಿನ್ಯಾರೋ? ನಾನ್ಯಾರೋ ಅಂತ ಹೋಗಿದ್ದೂ ನೋಡಿದ್ದೇವೆ. ಮತ್ತೆ ಕೆಲವರ ಪ್ರೀತಿ ಮದುವೆ ಹಂತಕ್ಕೂ ಹೋಗಿದ್ದು ಗೊತ್ತಿದೆ.
ಬಿಗ್‌ಬಾಸ್ ಮನೆಗೆ ಬಂದವರು ಸ್ವಲ್ಪ ಸುಧಾರಿಸಿಕೊಂಡು, ಜೊತೆಯಲ್ಲಿರುವವರನ್ನು ಅರ್ಥ ಮಾಡಿಕೊಂಡು ಆ ಬಳಿಕ ಸಲುಗೆ ಬೆಳೆಸಿಕೊಳ್ಳುವುದನ್ನು ನೋಡಿದ್ದೇವೆ. ಆದರೆ, ಬಿಗ್‌ಬಾಸ್ ಕನ್ನಡ ಸೀಸನ್ 11 ಯಾಕೋ ಸಿಕ್ಕಾಪಟ್ಟೆ ಫಾಸ್ಟ್ ಆಗಿರುವಂತೆ ತೋರುತ್ತಿದೆ. ಈ ರಿಯಾಲಿಟಿ ಶೋ ಶುರುವಾದ ಎರಡೇ ದಿನಕ್ಕೆ ಸ್ಪರ್ಧಿಗಳ ನಡುವೆ ಲವ್ ಸ್ಟೋರಿ ಹುಟ್ಟಿಕೊಂಡಂತಿದೆ.

ಹೌದು, ನಿನ್ನೆ (ಅಕ್ಟೋಬರ್ 1) ಬಿಗ್‌ಬಾಸ್ ಕನ್ನಡ ಸೀಸನ್ 11 ಎರಡನೇ ದಿನದ ಸಂಚಿಕೆ ಪ್ರಸಾರ ಆಗಿತ್ತು. ಇದರಲ್ಲಿ ಕೆಲವು ಇಂಟ್ರೆಸ್ಟಿಂಗ ಸನ್ನಿವೇಶಗಳು ಕಿರುತೆರೆ ವೀಕ್ಷಕರಿಗೆ ನೋಡುವುದಕ್ಕೆ ಸಿಕ್ಕಿದೆ. ಕಿತ್ತಾಟ, ಗಾಸಿಪ್, ಅಸಮಧಾನ, ಎಲಿಮಿನೇಷನ್ ಪ್ರಕ್ರಿಯೆ, ಕಾಮಿಡಿ ಎಲ್ಲವೂ ನೋಡುವುದಕ್ಕೆ ಸಿಕ್ಕಿದೆ. ಇದರ ಜೊತೆಗೆ ಲವ್ ಸ್ಟೋರಿ ಶುರುವಾಗಿದ್ದೂ ಸೂಕ್ಷ್ಮವಾಗಿ ಗಮನಿಸಿದ್ದಾರೆ. ಪ್ರೀತಿ ಹುಟ್ಟಿದ್ದು ಯಾರ ಮಧ್ಯೆ? ತಿಳಿಯಲು ಮುಂದೆ ಓದಿ.
ಬಿಗ್‌ಬಾಸ್ ಸೀಸನ್ ಕನ್ನಡ 11ರಲ್ಲಿ ಸ್ವರ್ಗ ಹಾಗೂ ನರಕ ಎರಡು ಪರಿಕಲ್ಪನೆಯಲ್ಲಿ ಶೋ ಆರಂಭ ಆಗಿದೆ. ಆದರೆ, ಯಾಕೋ ಸ್ವರ್ಗದಲ್ಲಿ ಇರೋರು ತಾಳ್ಮೆ ಕಳೆದುಕೊಳ್ಳುತ್ತಿದ್ದಾರೆ. ಗಾಸಿಪ್‌ಗಳನ್ನು ಹಬ್ಬಿಸುತ್ತಿದ್ದಾರೆ. ಅಸೂಯೆ ಪಡುತ್ತಿದ್ದಾರೆ. ಸ್ವರ್ಗದಲ್ಲಿ ಇರಬೇಕಾದ ಹಾಗೆ ಇರುತ್ತಿಲ್ಲ. ಸ್ವರ್ಗದಲ್ಲಿರುವ 10 ಮಂದಿನೂ ಒಂದೊಂದು ರೀತಿ ನಡೆದುಕೊಳ್ಳುತ್ತಿದ್ದಾರೆ.
ಈ ಮಧ್ಯೆ ಸ್ವರ್ಗಕ್ಕೂ ನರಕಕ್ಕೂ ಒಂದೊಳ್ಳೆ ಬಾಂಧವ್ಯ ಬೆಳೆಯುತ್ತಿದೆ. ಸ್ವರ್ಗ ಹಾಗೂ ನರಕದ ಮಧ್ಯೆ ಸೆಲ್ ಇದ್ದರೂ ಲೆಕ್ಕಕ್ಕೆ ಬರುತ್ತಿಲ್ಲ. ನರಕದಲ್ಲಿರುವ ರಂಜಿತ್ ಕುಮಾರ್‌ಗೂ ಸ್ವರ್ಗದಲ್ಲಿರುವ ಐಶ್ವರ್ಯಾ ಸಿಂಧೋಗಿ ನಡುವೆ ಪ್ರೇಮಾಂಕುರವಾದಂತೆ ಇದೆ. ಬರೀ ಎರಡೇ ದಿನಗಳಲ್ಲಿ ಇಷ್ಟೊಂದು ಬದಲಾವಣೆ ಆಗಿದೆಯಾ? ಅಂತ ಕಿರುತೆರೆ ವೀಕ್ಷಕರೇ ಅಚ್ಚರಿ ಪಡುವಷ್ಟು ಸಂಭಾಷಣೆ ಇಬ್ಬರ ಮಧ್ಯೆ ನಡೆದಿದೆ. ಅಂತಹ ಮಾತುಕಥೆ ಏನು ನಡೀತು ಅಂತೀರಾ?
ಐಶ್ವರ್ಯಾ ಸಿಂಧೋಗಿ ಬೆಳ್ಳಗ್ಗೆ ತಿಂಡಿ ತಿನ್ನುತ್ತಾ ನರಕ ವಾಸಿಗಳ ಬಳಿ ಬಂದಿದ್ದರು. ವೈಟ್ ಅಂಡ್ ವೈಟ್‌ನಲ್ಲಿ ಬಂದಿದ್ದ ಐಶ್ವರ್ಯಾ ಸಿಂಧೋಗಿಯನ್ನು ಕಂಡು ರಂಜಿತ್ ನೀಡಿದ ಪ್ರತಿಕ್ರಿಯೆ ನೀಡಿದ್ದರು. ಆ ವೇಳೆ ಐಶ್ವರ್ಯಾ "ನೀವು ನನ್ನ ತಟ್ಟೆಯನ್ನು ನೋಡಿ ಪ್ರತಿಕ್ರಿಯೆ ಕೊಟ್ಟರೋ ಇಲ್ಲ ನನ್ನನ್ನೇ ನೋಡಿ ರಿಯಾಕ್ಷನ್ ಕೊಟ್ಟರೋ?" ಅಂತ ಪ್ರಶ್ನೆ ಮಾಡಿದರು. ರಂಜಿತ್ ಪ್ಲೇಟ್‌ಗಿಂತ ನೀವೇ ಅದ್ಭುತ ಎಂದು ಉತ್ತರ ಕೊಟ್ಟಿದ್ದಾರೆ.
ಇಲ್ಲಿಗೆ ಇಬ್ಬರ ಸಂಭಾಷಣೆ ನಿಲ್ಲಲಿಲ್ಲ. ರಂಜಿತ್‌ಗೆ "ನಿಮಗೆ ನಾನು ಬೇಕಾ? ತಿಂಡಿ ಬೇಕಾ? ಅಂತ ಐಶ್ವರ್ಯಾ ನೇರವಾಗಿ ಪ್ರಶ್ನೆ ಮಾಡಿದ್ದಾರೆ. ರಂಜಿತ್ "ನೀನೇ ಬೇಕು" ಅಂತ ಪ್ರತಿಕ್ರಿಯೆ ನೀಡುತ್ತಿದ್ದಂತೆ ನರಕ ವಾಸಿಗಳು ರಂಜಿತ್ ಅನ್ನು ರೇಗಿಸುವುದಕ್ಕೆ ಶುರು ಮಾಡಿದ್ದರು. ರಂಜಿತ್ ಮುಖ ಕೆಂಪಾಗಿದೆ ಅಂತ ರೇಗಿಸುವುದಕ್ಕೆ ಶುರು ಮಾಡಿದ್ದರು. ರಾತ್ರಿ ವೇಳೆ ಐಶ್ವರ್ಯಾ ಮತ್ತೆ ನರಕ ವಾಸಿ ಕಡೆ ಬಂದಾಗ ಇದೇ ಚರ್ಚೆ ನಡೆದಿತ್ತು.
ಇವರಿಬ್ಬರ ಮಧ್ಯೆ ಉಗ್ರಂ ಮಂಜು ಎಂಟ್ರಿ ಕೊಟ್ಟಿದ್ದರು. "ಧಮ್ ಇದ್ದರೆ ಇವಳನ್ನು ಮುಟ್ಟಿ ನೋಡು" ಎಂದು ರಂಜಿತ್ ಕಾಲೆಳೆದಿದ್ದರು. ಆಗ ರಂಜಿತ್ "ಮನಸ್ಸು ಮಾಡಿದರೆ ಎತ್ತಾಕೊಂಡು ಹೋಗ್ತೀನಿ" ಎಂದು ಪ್ರತಿಕ್ರಿಯೆ ಕೊಟ್ಟಿದ್ದರು. ಆ ವೇಳೆ ಐಶ್ವರ್ಯಾ ಸ್ವೀಟ್ ಆಗಿ ಮುಗಿಸಿಕೊಂಡು ಸ್ವರ್ಗವಾಸಿಗಳು ಇರುವ ಕಡೆ ಹೋದರು. ಇಷ್ಟೆಲ್ಲ ಡ್ರಾಮ ನೋಡಿದ ಬಿಗ್ ಬಾಸ್ ಪ್ರೇಮಿಗಳು ಇದು ಅದೇಯಾ ಅಂತ ಕಾಮೆಂಟ್ ಮಾಡುವುದಕ್ಕೆ ಶುರು ಮಾಡಿದ್ದಾರೆ.


Click it and Unblock the Notifications











