BBK 11: ಫಿನಾಲೆ ಮಿಸ್ ಮಾಡಿಕೊಂಡ ಗೌತಮಿಗೆ 8ನೇ ಸ್ಥಾನ: ಮುಂದಿನ ಎಪಿಮಿನೇಷನ್ ಯಾರದ್ದು?

ಬಿಗ್‌ ಬಾಸ್ ಕನ್ನಡ ಸೀಸನ್ 11ರ ಕೊನೆಯ ವೀಕೆಂಡ್. ಈ ಸೀಸನ್‌ನಲ್ಲಿ ಕಿಚ್ಚ ನಡೆಸಿಕೊಡುವ ಕೊನೆ ಪಂಚಾಯ್ತಿ. ಇಂದು (ಜನವರಿ 18) ಬಿಗ್ ಬಾಸ್‌ ಶೋ ಸಿಕ್ಕಾಪಟ್ಟೆ ಕುತೂಹಲವನ್ನು ಕೆರಳಿಸಿತ್ತು. ನಾಮಿನೇಟ್ ಆಗಿರುವ ಐದು ಮಂದಿಯಲ್ಲಿ ಇಬ್ಬರು ಬಿಗ್ ಬಾಸ್ ಮನೆಯಿಂದ ಹೊರ ಬರಬೇಕಾಗಿತ್ತು. ಯಾರು ಆಚೆ ಬರುತ್ತಾರೆ ಅನ್ನೋದು ದೊಡ್ಡ ಸವಾಲಾಗಿತ್ತು.

ಮಿಡ್ ವೀಕ್ ಎಲಿಮಿನೇಷನ್ ಅನ್ನು ರದ್ದು ಗೊಳಿಸಿದ್ದ ಬಿಗ್ ಬಾಸ್‌ ವೀಕೆಂಡ್‌ನಲ್ಲಿ ಡಬಲ್ ಎಲಿಮಿನೇಷನ್ ಇರುತ್ತೆ ಅನ್ನೋ ಸುಳಿವನ್ನು ನೀಡಿತ್ತು. ಹಾಗೇ ಇಂದು ಕಿಚ್ಚನ ವೇದಿಕೆಯಲ್ಲಿ ಒಬ್ಬರು ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ. ಅವರೇ ಗೌತಮಿ ಜಾದವ್. ಬಿಗ್ ಬಾಸ್‌ನ ಕೊನೆಯ ವಾರದಲ್ಲಿ ಗೌತಮಿ ಜಾದವ್ ಎಲಿಮಿನೇಟ್ ಆಗಿದ್ದು ಅವರ ಫ್ಯಾನ್ಸ್‌ಗೆ ಬೇಸರ ತರಿಸಿದೆ.

Bigg Boss Kannada 11 Gauthami Jadav eliminated because of her personality she said

ವಾರದ ಮಧ್ಯದಲ್ಲಿ ಎಲಿಮಿನೇಷನ್‌ನಲ್ಲೂ ಕೊನೆಯದಾಗಿ ಉಳಿದುಕೊಂಡಿದ್ದ ಇಬ್ಬರಲ್ಲಿ ಗೌತಮಿ ಜಾದವ್ ಹಾಗೂ ಭವ್ಯಾ ಗೌಡ ಇದ್ದರು. ಇಬ್ಬರಲ್ಲಿ ಒಬ್ಬರು ಹೊರ ಹೋಗುವುದು ಫಿಕ್ಸ್ ಅಂದಾಗಲೂ ಗೌತಮಿ ಜಾದವ್ ಹೆಸರು ಮುಂಚೂಣಿಯಲ್ಲಿ ಇತ್ತು. ಆದರೆ, ವಿಡ್ ವೀಕ್ ಎಲಿಮಿನೇಷನ್‌ನಲ್ಲಿ ಹೇಗೋ ಬಚಾವ್ ಆಗಿದ್ದರು. ಆದರೆ, ವೀಕೆಂಡ್ ಎಲಿಮಿನೇಷನ್‌ನಲ್ಲಿ ಎಲಿಮಿನೇಟ್ ಆದ ಮೊದಲ ಸ್ಪರ್ಧಿಯಾಗಿ ಹೊರ ಹೊಮ್ಮಿದ್ದಾರೆ.

ಕಿಚ್ಚ ಸುದೀಪ್ ಎಂಟ್ರಿಯಾಗುತ್ತಿದ್ದಂತೆ ಬಿಗ್‌ ಬಾಸ್ ಮನೆಯೊಳಗಿದ್ದ ಸ್ಪರ್ಧಿಗಳಿಗೆ ಢವ ಢವ ಶುರುವಾಗಿತ್ತು. ಈ ವೀಕೆಂಡ್‌ನಲ್ಲಿ ಇಬ್ಬರು ಎಲಿಮಿನೇಟ್ ಆಗೋದು ಪಕ್ಕಾ ಅನ್ನೋದು ಮೊದಲೇ ಗೊತ್ತಿದ್ದರಿಂದ ನಾಮಿನೇಟ್ ಆಗಿದ್ದ ಐದೂ ಮಂದಿ ಸ್ಪರ್ಧಿಗಳು ಟೆನ್ಷನ್‌ನಲ್ಲಿಯೇ ಇದ್ದರು. ಅದು ಅವರ ಮುಖದಲ್ಲಿ ಎದ್ದು ಕಾಣುತ್ತಿತ್ತು. ಅದರಲ್ಲೂ ಗೌತಮಿ ಭವ್ಯಾ ಗೌಡ ಹಾಗೂ ಧನರಾಜ್ ಮುಖದಲ್ಲಿ ಎಲಿಮಿನೇಷನ್ ಭಯವಿತ್ತು.

ವೀಕೆಂಡ್‌ನ ಎರಡು ದಿನಗಳಲ್ಲಿ ಅಂದರೆ ಶನಿವಾರ ಒಬ್ಬರು ಹಾಗೂ ಭಾನುವಾರ ಇನ್ನೊಬ್ಬರು ಎಲಿಮಿನೇಟ್ ಆಗೋದು ಗ್ಯಾರಂಟಿ ಅಂತಾಗಿತ್ತು. ಮೊದಲ ದಿನ ಅಂದರೆ, ಇಂದು (ಜನವರಿ 18) 'ಸತ್ಯ' ಖ್ಯಾತಿಯ ಗೌತಮಿ ಜಾದವ್ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ. ಈಗ ಭಾನುವಾರ ಯಾರು ಎಲಿಮಿನೇಟ್ ಆಗುತ್ತಾರೆ ಅನ್ನೋದು ಕೂತೂಹಲ ಎಲ್ಲರನ್ನೂ ಮನೆ ಮಾಡಿರೋದಂತೂ ನಿಜ.

Bigg Boss Kannada 11 Gauthami Jadav eliminated because of her personality she said

ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಿದ್ದಂತೆ ಗೌತಮಿ ಜಾದವ್‌ಗೆ ಕಿಚ್ಚ ಸುದೀಪ್ ಪ್ರಶ್ನೆ ಮಾಡಿದ್ದರು. ಕೊನೆ ಹಂತದಲ್ಲಿ ಮನೆಯಿಂದ ಹೊರ ಬಂದಿದ್ದೀರಿ. ಎಲ್ಲಿ ಎಡವಿದ್ದೀರಿ? ಎಂದು ಕೇಳಿದ್ದರು. ಅದಕ್ಕೆ ಗೌತಮಿ ಜಾದವ್ ತನ್ನ ವ್ಯಕ್ತಿತ್ವವೇ ಎಲ್ಲದಕ್ಕೂ ಕಾರಣ ಎಂದಿದ್ದಾರೆ. ನನಗೆ ನೇರವಾಗಿ ವಿರೋಧ ಕಟ್ಟಿಕೊಂಡು ಹೇಳುವುದಕ್ಕೆ ಆಗುವುದಿಲ್ಲ ಎಂದು ಪುನರುಚ್ಛರಿಸಿದ್ದಾರೆ. ವೇದಿಕೆ ಮೇಲೂ ಮತ್ತೆ ಪಾಸಿಟಿವಿಟಿ ಮಂತ್ರವನ್ನೇ ಹಾಕಿದ್ದಾರೆ.

ನಿರೀಕ್ಷೆ ಮಾಡಿದಂತೆ ಗೌತಮಿ ಜಾದವ್ ಮನೆಯಿಂದ ಹೊರ ಬಂದಿದ್ದಾಗಿದೆ. ನಾಳೆ (ಜನವರಿ 20) ಇನ್ನೊಬ್ಬರು ಮನೆಯಿಂದ ಹೊರ ಬರಲಿದ್ದಾರೆ. ಅವರು ಯಾರು ಅನ್ನೋದು ಇನ್ನೂ ಸಸ್ಪೆನ್ಸ್ ಆಗಿಯೇ ಉಳಿದಿದೆ. ಧನರಾಜ್ ಹಾಗೂ ಭವ್ಯಾ ಗೌಡ ರೇಸ್‌ನಲ್ಲಿ ಇದ್ದಾರೆ. ಇಬ್ಬರಲ್ಲಿ ಯಾರು ಹೊರಗೆ ಬರುತ್ತಾರೆ ಅನ್ನೋದೇ ಸದ್ಯ ನಿಗೂಢ. ಆದರೆ, ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಧನರಾಜ್ ಹೆಸರು ಎಲಿಮಿನೇಷನ್ ಪಕ್ಕಾ ಅನ್ನೋ ಪೋಸ್ಟ್‌ಗಳು ಓಡಾಡುತ್ತಿವೆ. ಯಾರು ಹೊರ ಬಂದರು ಅನ್ನೋದನ್ನು ನೋಡುವುದಕ್ಕೆ ನಾಳೆ (ಜನವರಿ 19) ವರೆಗೂ ಕಾಯಲೇ ಬೇಕು.

More from Filmibeat

English summary
Bigg Boss Kannada 11 Gauthami Jadav eliminated because of her personality she said
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X