Bigg Boss Kannada 11 Grand Finale:5ನೇ ರನ್ನರ್ ಅಪ್ ಭವ್ಯಾ ಗೌಡಗೆ ಸಿಕ್ಕಿದ ಕ್ಯಾಶ್ ಪ್ರೈಸ್ ಎಷ್ಟು?
ಬಿಗ್ ಬಾಸ್ ಕನ್ನಡ 11 ಗ್ರ್ಯಾಂಡ್ ಫಿನಾಲೆಯ ಮೊದಲ ದಿನ ಮುಕ್ತಾಯವಾಗಿದೆ. ಮೊದಲನೇ ದಿನದ ಕೊನೆಯಲ್ಲಿ ಬಿಗ್ ಬಾಸ್ ಮನೆಯಿಂದ 6ನೇ ಸ್ಪರ್ಧಿ ಹಾಗೂ 5ನೇ ರನ್ನರ್ ಅಪ್ ಆಗಿ ಭವ್ಯಾ ಗೌಡ ಹೊರ ಬಂದಿದ್ದಾರೆ. ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿದ್ದ ಭವ್ಯಾ ಗೌಡಗೆ ನಿರಾಸೆಯಾಗಿದೆ. ಕೊನೆಯ ಗಳಿಗೆಯಲ್ಲಿ ಎಡವಿದ್ದಾರೆ.
ಗ್ರ್ಯಾಂಡ್ ಫಿನಾಲೆಯಲ್ಲಿದ್ದ ಆರು ಮಂದಿಯಲ್ಲಿ ಕೊನೆಯ ನಾಲ್ಕುನೇ ರನ್ನರ್ ಅಪ್ ಆಗಬಹುದು ಎಂಬ ನಿರೀಕ್ಷೆಯಿತ್ತು. ರಜತ್ ಕಿಶನ್ ಮೊದಲು ಬಿಗ್ ಬಾಸ್ ಮನೆಯಿಂದ ಹೊರ ಬರಬಹುದು ಎಂಬ ನಿರೀಕ್ಷೆ ಮಾಡಲಾಗಿತ್ತು. ಆದರೆ, ಮೊದಲು ಎಲಿಮಿನೇಟ್ ಆಗಿದ್ದು ಭವ್ಯಾ ಗೌಡ. ಆರು ಮಂದಿಯ ಪೈಕಿ ಬಂದಿರುವ ವೋಟ್‌ಗಳ ಪೈಕಿ ಭವ್ಯಾ ಗೌಡಗೆ ಹೆಚ್ಚು ವೋಟ್‌ಗಳು ಬಂದಿದ್ದರಿಂದ 5ನೇ ರನ್ನರ್ ಅಪ್‌ಗೆ ತೃಪ್ತಿ ಪಟ್ಟುಕೊಳ್ಳಬೇಕಾಯ್ತು.

17 ವಾರಗಳ ಕಾಲ ಬಿಗ್ ಬಾಸ್ ಮನೆಯಲ್ಲಿದ್ದ ಭವ್ಯಾ ಗೌಡ ಟ್ರೋಫಿ ಗೆಲ್ಲುವುದಕ್ಕೆ ಸಿಕ್ಕಾಪಟ್ಟೆ ಫೈಟ್ ಮಾಡಿದ್ದರು. ಉಳಿದ ಸ್ಪರ್ಧಿಗಳಿಗೆ ಖಡಕ್ ಪೈಪೋಟಿ ಕೊಟ್ಟಿದ್ದರು. ಅವರಿಗೆ ಸಿಕ್ಕಿದ ಸಂಭಾವನೆಯನ್ನು ಹೊರತು ಪಡಿಸಿ, 5ನೇ ರನ್ನರ್ ಅಪ್ ಆಗಿ ವೇದಿಕೆ ಮೇಲೆ ಸಿಕ್ಕಿದ ಸಂಭಾವನೆ ಎಷ್ಟು ಅನ್ನೋದನ್ನು ನೋಡುವುದಾರೇ..
ಬಿಗ್ ಬಾಸ್ ಕನ್ನಡ 11 ರ ಗ್ರ್ಯಾಂಡ್ ಫಿನಾಲೆವರೆಗೂ ಬಂದು ಕೊನೆಯಲ್ಲಿ ಎಡವಿದ ಭವ್ಯಾ ಗೌಡಗೆ 64 ಲಕ್ಷ ಮಂದಿ ವೋಟ್ ಮಾಡಿದ್ದರು. ಆದರೂ ಕೂಡ ಇದು ಅತೀ ಕಡಿಮೆ ಎಂದು ಸಾಬೀತಾಗಿದೆ. ಯಾಕಂದ್ರೆ ಬಿಗ್ ಬಾಸ್ ಕನ್ನಡ 11ರ ವಿನ್ನರ್ ಆಗಲಿರುವ ಸ್ಪರ್ಧಿಗೆ ಈಗಾಗಲೇ 5 ಕೋಟಿಗೂ ಅಧಿಕ ವೋಟ್‌ಗಳು ಬಂದಿವೆ ಅನ್ನೋದನ್ನು ರಿವೀಲ್ ಮಾಡಲಾಗಿದೆ. ಅದ್ಯಾರು ಅನ್ನೋದು ನಾಳೆ ಗೊತ್ತಾಗಲಿದೆ.
ಅಂದ್ಹಾಗೆ ಎಲಿಮಿನೇಟ್ ಆದ ಭವ್ಯಾ ಗೌಡಗೆ ಹೊರ ಬರುತ್ತಿದ್ದಂತೆ ವೇದಿಕೆ ಕ್ಯಾಶ್ ಪ್ರೈಸ್ ಸಿಕ್ಕಿದೆ. ಶ್ರೀಕೃಷ್ಣ ಹಳ್ಳಿತುಪ್ಪ ಅವರಿಂದ ಭವ್ಯಾ ಗೌಡಗೆ 2 ಲಕ್ಷ ರೂಪಾಯಿ ಕ್ಯಾಶ್ ಪ್ರೈಸ್ ಸಿಕ್ಕಿದೆ. ಹಾಗೇ ಸುದರ್ಶನ್ ಸಿಲ್ಕ್ಸ್ ಅವರಿಗೆ 1 ಲಕ್ಷ ರೂಪಾಯಿ ಹಣ ಬಂದಿದೆ. ಇಕೋ ಪ್ಲ್ಯಾನೆಟ್ ಎಲಿವೇಟರ್ ಅವರಿಂದ ಭವ್ಯಾ ಗೌಡಗೆ 50 ಸಾವಿರ ರೂಪಾಯಿ ಸಿಕ್ಕಿದೆ. ಒಟ್ಟು ಮೂರುವರೆ ಲಕ್ಷ ರೂಪಾಯಿ ಸಂಭಾವನೆಯನ್ನು ಹೊರತು ಪಡಿಸಿ ಲಭಿಸಿದೆ.
ಈ ಬಾರಿ ಬಿಗ್ ಬಾಸ್ ಕನ್ನಡ 11ರಲ್ಲಿ ಅಂತಿಮ ಹಂತದಲ್ಲಿ ಇಬ್ಬರು ಮಹಿಳೆಯರು ಇರುತ್ತಾರೆ ಎಂಬ ಮಾತು ಕೇಳಿ ಬಂದಿತ್ತು. ಮೊದಲೆರಡು ಸ್ಥಾನದಲ್ಲಿ ಮೋಕ್ಷಿತಾ ಹಾಗೂ ಭವ್ಯಾ ಇರಬಹುದು ಎಂಬ ನಿರೀಕ್ಷೆ ಕೂಡ ಇತ್ತು. ಆದರೆ, ಗ್ರ್ಯಾಂಡ್ ಫಿನಾಲೆ ಮೊದಲ ಹಂತದಲ್ಲಿಯೇ ಒಬ್ಬರು ಮಹಿಳಾ ಅಭ್ಯರ್ಥಿ ಹೊರ ಬಿದ್ದಿದ್ದಾರೆ. ಈಗ ಬಿಗ್ ಬಾಸ್ ಮನೆಯಲ್ಲಿ ಉಳಿದುಕೊಂಡಿದ್ದು ಮೋಕ್ಷಿತಾ ಮಾತ್ರ. ಇವರು ಫೈನಲ್ ವರೆಗೂ ಹೋಗುತ್ತಾರಾ? ಅನ್ನೋ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ. ಅದಕ್ಕೂ ಇನ್ನು ಕೆಲವು ಗಂಟೆಗಳು ಕಾಯಬೇಕು.
ಇನ್ನು ಭವ್ಯಾ ಗೌಡ ಬಿಗ್ ಬಾಸ್ ಮನೆಯೊಳಗೆ ಪ್ರವೇಶ ಮಾಡುವುದಕ್ಕೂ ಮುನ್ನ ಧಾರಾವಾಹಿ ಮೂಲಕ ಜನಪ್ರಿಯತೆ ಗಳಿಸಿದ್ದರು. ಅವರು ನಟಿಸಿದ 'ಗೀತಾ' ಧಾರಾವಾಹಿ ಇದೇ ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗಿತ್ತು. ಬಿಗ್ ಬಾಸ್‌ನಲ್ಲಿ ಖಡಕ್ ಆಗಿ ಆಟ ಆಡಿದ ಮಹಿಳೆ ಅಂದರೆ ಅದು ಭವ್ಯಾ ಗೌಡ. ತನ್ನನ್ನು ಟೀಕೆ ಮಾಡಿದವರಿಗೆ ಖಡಕ್ ಆಗಿ ತಿರುಗೇಟು ಕೊಡುತ್ತಿದ್ದರು. ಆದರೆ, ತ್ರಿವಿಕ್ರಮ್ ನೆರವಿನಿಂದ ಗ್ರ್ಯಾಂಡ್ ಫಿನಾಲೆವರೆಗೂ ಬಂದಿದ್ದಾರೆ ಅನ್ನೋ ಟೀಕೆಗಳು ವ್ಯಕ್ತವಾಗಿದ್ದವು. ಈಗ 5ನೇ ರನ್ನರ್ ಅಪ್ ಆಗಿ ಹೊರ ಬಂದಿದ್ದಾರೆ.


Click it and Unblock the Notifications











