BBK 11: ಬಿಗ್‌ಬಾಸ್ ಕನ್ನಡ ಗ್ರ್ಯಾಂಡ್ ಫಿನಾಲೆ; ಕಿಚ್ಚನ ಮ್ಯಾಕ್ಸಿಮಮ್ ಸ್ಟೆಪ್ಸ್ ಹೇಗಿದೆ?
ಬಿಗ್ ಬಾಸ್ ಕನ್ನಡ 11ರ ಗ್ರ್ಯಾಂಡ್ ಫಿನಾಲೆಗೆ ಕ್ಷಣ ಗಣನೆ ಶುರುವಾಗಿದೆ. ಇಂದು (ಜನವರಿ 25) ಬಿಗ್ ಬಾಸ್ ವೇದಿಕೆ ಮೇಲೆ ಕಿಚ್ಚ ಸುದೀಪ್ ಲುಕ್ ರಂಗು ರಂಗಾಗಿದೆ. ಇದು ಕಿಚ್ಚ ನಿರೂಪಣೆ ಮಾಡುತ್ತಿರುವ ಕೊನೆಯ ಸೀಸನ್. ಹೀಗಾಗಿ ಸುದೀಪ್ ವೇದಿಕೆ ಮೇಲೆ ಸಖತ್ ಆಗಿ ಮಿಂಚುತ್ತಿದ್ದಾರೆ. ಕೂಲ್ ಆಗಿದ್ದರೂ ಕೆಂಪು ಬಣ್ಣದ ಕೂಲಿಂಗ್ ಗ್ಲಾಸ್, ರಂಗು ರಂಗಾಗಿರುವ ಶರ್ಟ್, ಜೀನ್ಸ್ ತೊಟ್ಟು ವೇದಿಕೆ ಭರ್ಜರಿ ಹೆಜ್ಜೆ ಹಾಕಿದ್ದಾರೆ.
ಬಿಗ್ ಬಾಸ್ ವೇದಿಕೆ ಮೇಲೆ ಕಿಚ್ಚ ಸುದೀಪ್ ಹಾಕಿದ 'ಮ್ಯಾಕ್ಸ್' ಮ್ಯಾಕ್ಸಿಮಸ್ ಸ್ಟೆಪ್ಸ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಸುದೀಪ್ ಮ್ಯಾನರಿಸಂ, ಸ್ಟೈಲ್, ನೋಡಿ ಥ್ರಿಲ್ ಆಗಿದ್ದಾರೆ. ಇನ್ನು ಇಂದು (ಜನವರಿ 25) ಸಂಜೆ 6 ಗಂಟೆಗೆ ಕಲರ್ಸ್ ಕನ್ನಡದಲ್ಲಿ ಗ್ರ್ಯಾಂಡ್ ಫಿನಾಲೆ ಶುರುವಾಗಲಿದೆ. ಎರಡು ದಿನಗಳು ನಡೆಯುವ ಗ್ರ್ಯಾಂಡ್ ಫಿನಾಲೆಯಲ್ಲಿ ಕಿಚ್ಚ ಸುದೀಪ್ ಮಾತುಗಳನ್ನು ಕೇಳುವುದಕ್ಕೆ ಅಂತಾನೇ ವೀಕ್ಷಕರು ಕಾದು ಕೂತಿದ್ದಾರೆ.

ಬಿಗ್ ಬಾಸ್ ಆರಂಭ ಆಗುವ ವೇಳೆ ಸ್ಪರ್ಧಿಗಳನ್ನು ಪರ್ಫಾಮೆನ್ಸ್ ಮೂಲಕ ವೇದಿಕೆ ಮೇಲೆ ಬರಮಾಡಿಕೊಂಡಿದ್ದ ಕಿಚ್ಚ ಮುಕ್ತಾಯದ ಹಂತದಲ್ಲಿ ಅವರೇ ಹೆಜ್ಜೆ ಹಾಕಿದ್ದಾರೆ. ಸಾಮಾನ್ಯವಾಗಿ ಬಿಗ್ ಬಾಸ್ ವೇದಿಕೆ ಮೇಲೆ ಸುದೀಪ್ ಹೆಜ್ಜೆ ಹಾಕಿದ್ದು ತೀರಾ ವಿರಳ. ಈ ಬಾರಿ ವೇದಿಕೆ ಮೇಲೆ ಸುದೀಪ್ ಪರ್ಫಾಮೆನ್ಸ್ ನೋಡುವುದಕ್ಕೆ ಸಿಗಲಿದೆ. ಈಗಾಗಲೇ ಕಲರ್ಸ್ ಕನ್ನಡ ಕಿಚ್ಚನ ಪ್ರೋಮೊ ರಿಲೀಸ್ ಮಾಡಿ ಮತ್ತಷ್ಟು ಕುತೂಹಲವನ್ನು ಹೆಚ್ಚಿಸಿದ್ದಾರೆ.
ಕಿಚ್ಚ ಸುದೀಪ್ ನಿರೂಪಣೆ ಮಾಡುತ್ತಿರುವ ಕೊನೆಯ ಬಿಗ್ ಬಾಸ್ ಸೀಸನ್. ಹೀಗಾಗಿ ಎರಡು ದಿನಗಳ ಕಾಲ ಬಿಗ್ ಬಾಸ್ ವೇದಿಕೆ ರಂಗು ರಂಗಾಗಿರುತ್ತೆ. ಬಿಗ್ ಬಾಸ್ ಕನ್ನಡ 11 ಗ್ರ್ಯಾಂಡ್ ಫಿನಾಲೆಯ ಮೊದಲನೇಯ ದಿನ ಯಾರೆಲ್ಲ ಸ್ಪರ್ಧಿಗಳು ಮನೆಯಿಂದ ಹೊರ ಬೀಳುತ್ತಾರೆ ಅನ್ನೋದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ. ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಯಾರು ಗೆಲ್ಲಬಹುದು ಅನ್ನೋ ಲೆಕ್ಕಾಚಾರ ಕೂಡ ಶುರುವಾಗಿದೆ.
ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಗ್ರ್ಯಾಂಡ್ ಫಿನಾಲೆಗೆ ತಲುಪಿರುವವರು ಆರು ಮಂದಿ. ಟಿಕೆಟ್ ಟು ಫಿನಾಲೆಯಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಹನುಮಂತ ಫಿನಾಲೆ ತಲುಪಿದ್ದರು. ಆನಂತ್ರ ಫಿನಾಲೆಗೆ ಹೋಗಿದ್ದು ಮೋಕ್ಷಿತಾ ಪೈ, ಬಳಿಕ ತ್ರಿವಿಕ್ರಮ್ ಫಿನಾಲೆ ತಂಡವನ್ನು ಸೇರಿಕೊಂಡಿದ್ದರು. ಉಳಿದು ಉಗ್ರಂ ಮಂಜು, ಗೌತಮಿ ಜಾದವ್, ಧನರಾಜ್, ಭವ್ಯಾ ಗೌಡ ಹಾಗೂ ರಜತ್. ಇವರಲ್ಲಿ ರಜತ್, ಉಗ್ರಂ ಮಂಜು, ಭವ್ಯಾ ಗೌಡ ಸೇಫ್ ಆಗಿದ್ದರು. ಗೌತಮಿ ಜಾದವ್ ಹಾಗೂ ಧನರಾಜ್ ಬಿಗ್ ಬಾಸ್ ಮನೆಯಿಂದ ಹೊರ ಬಿದ್ದಿದ್ದರು.
ಈಗ ಉಳಿದಿರುವ ಆರು ಮಂದಿಯಲ್ಲಿ ಬಿಗ್ ಬಾಸ್ ಟ್ರೋಫಿ ಯಾರಿಗೆ ಒಲಿಯುತ್ತೆ ಅನ್ನೋದೇ ಕುತೂಹಲ. ರಜತ್, ಉಗ್ರಂ ಮಂಜು, ಭವ್ಯಾ ಗೌಡ, ಮೋಕ್ಷಿತಾ ಪೈ, ತ್ರಿವಿಕ್ರಮ್ ಹಾಗೂ ಹನುಮಂತ ಪರ ಮನೆಯ ಹೊರಗಡೆ, ಸೋಶಿಯಲ್ ಮೀಡಿಯಾದಲ್ಲಿ ಭರ್ಜರಿಯಾಗಿ ಪ್ರಚಾರ ಮಾಡಲಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಎಲ್ಲರಿಗೂ ಬೆಂಬಲ ಸಿಗುವುದಕ್ಕೆ ಶುರುವಾಗಿದೆ. ಯಾರಿಗೆ ಹೆಚ್ಚು ವೋಟ್ ಬೀಳುತ್ತೆ? ಯಾರು ಗೆಲ್ಲುತ್ತಾರೆ? ಅನ್ನೋದು ಇನ್ನೂ ಸೀಕ್ರೆಟ್.
ಇನ್ನು ಸೋಶಿಯಲ್ ಮೀಡಿಯಾದಲ್ಲಿ ಸ್ಪರ್ಧಿಗಳ ಪರ ಕಾಮೆಂಟ್‌ಗಳು ಜೋರಾಗಿವೆ. "ಹನುಮಂತ, ಮೋಕ್ಷಿ ಯಾರು ವಿನ್ ಆದ್ರೂ ಖುಷಿ" ಎಂದು ಕಾಮೆಂಟ್ ಮಾಡಲಾಗುತ್ತಿದೆ. ಇದೇ ಇನ್ನೊಂದು ಕಡೆ "ಮೋಕ್ಷಿತಾಳ ಉತ್ತಮ ಆಟ ಉತ್ತಮ ವ್ಯಕ್ತಿತ್ವಕ್ಕೆ ನಮ್ಮ ಸಪೋರ್ಟ್" ಅಂತಿದ್ದಾರೆ. "ಮೋಕ್ಷಿತಾ ವ್ಯಕ್ತಿತ್ವಗಳ ಸಾರಥಿ" ಎನ್ನುತ್ತಿದ್ದಾರೆ. ಹಾಗೇ "ಗೆದ್ದೇ ಗೆಲ್ಲುತ್ತೇನೆ ಒಂದು ದಿನ ಗೆಲ್ಲಲೇ ಬೇಕು ಒಳ್ಳೆತನ ಭವ್ಯಾ ಗೌಡ" ಪರ ಕಾಮೆಂಟ್ ಪಾಸ್ ಆಗುತ್ತಿದೆ. ಹೀಗೇ ಉಗ್ರಂ ಮಂಜು, ತ್ರಿವಿಕ್ರಮ್ ಪರ ಕೂಡ ಕಾಮೆಂಟ್‌ಗಳು ಪಾಸ್ ಆಗುತ್ತಿವೆ


Click it and Unblock the Notifications











