BBK 11: ಒದೆ ತಿನ್ನುವುದಕ್ಕೂ ಮುನ್ನವೇ ಬಿಗ್ ಬಾಸ್ ಮನೆಯಲ್ಲಿ ಲಾಯರ್ ಜಗದೀಶ್; ಬೆಂಗಳೂರಿಗೆ ಕಾಲಿಟ್ಟ ನಿವೇದಿತಾ ಗೌಡ
ಬಿಗ್ ಬಾಸ್ ಕನ್ನಡ ಸೀಸನ್ 11 ಗ್ರ್ಯಾಂಡ್ ಫಿನಾಲೆ ಅದ್ಧೂರಿಯಾಗಿ ಆರಂಭ ಆಗಿದೆ. ಕಿಚ್ಚ ಸುದೀಪ್ ನಡೆಸಿಕೊಡುವ ಕೊನೆಯ ಫಿನಾಲೆಯನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ ವೀಕ್ಷಕರು. ನಿರೀಕ್ಷೆಯಂತೆ ಬಿಗ್ ಬಾಸ್ ಮನೆಯಲ್ಲಿ ಎಲಿಮಿನೇಟ್ ಆದ ಸ್ಪರ್ಧಿಗಳೆಲ್ಲರೂ ಆಗಮಿಸಿದ್ದಾರೆ. ಆರು ಮಂದಿಯಲ್ಲಿ ಬಿಗ್ ಬಾಸ್ ಟ್ರೋಪಿಯನ್ನು ಗೆಲ್ಲೋರು ಯಾರು? ಅನ್ನೋದನ್ನು ಎದುರು ನೋಡುತ್ತಿದ್ದಾರೆ.
ಇದಕ್ಕೂ ಮುನ್ನ ಬಿಗ್ ಬಾಸ್ ಮನೆಯಲ್ಲಿ ಕಿರುತೆರೆ ವೀಕ್ಷಕರ ಮನರಂಜನೆಗೆ ಸಖತ್ ಅರೆಂಜ್ಮೆಂಟ್ ಆಗಿದೆ. ಬಿಗ್ ಬಾಸ್ ಮನೆಯೊಳಗೆ ಇರುವ ಸ್ಪರ್ಧಿಗಳು ಕನ್ನಡದ ಸೂಪರ್ ಸ್ಟಾರ್ ಹಾಡುಗಳಿಗೆ ವೀಕ್ಷಕರನ್ನು ರಂಜಿಸಿದ್ದಾರೆ. ಹಾಗೇ ಸಿಕ್ಕಾಪಟ್ಟೆ ಸರ್ಪ್ರೈಸ್ ಕೊಟ್ಟಿದ್ದಾರೆ. ಅದರಲ್ಲಿ ಲಾಯರ್ ಜಗದೀಶ್ ಹಾಗೂ ನಿವೇದಿತಾ ಗೌಡ ಮನೆಯೊಳಗೆ ಎಂಟ್ರಿ ಕೊಟ್ಟು ಫಿನಾಲೆ ಸ್ಪರ್ಧಿಗಳನ್ನು ಭೇಟಿ ಮಾಡಿದ್ದಾರೆ.

ಕಳೆದ ಕೆಲವು ದಿನಗಳಿಂದ ಲಾಯರ್ ಜಗದೀಶ್ ಸುದ್ದಿಯಲ್ಲಿ ಇದ್ದಾರೆ. ಸಾರ್ವಜನಿಕರೊಂದಿಗೆ ಗಲಾಟೆ ಮಾಡಿಕೊಂಡಿದ್ದಾರೆ. ಫೇಸ್ ಬುಕ್‌ನಲ್ಲಿ ಲೈವ್ ಬಂದು ಸಂಚಲನ ಸೃಷ್ಟಿಸಿದ್ದಾರೆ. ಇತ್ತೀಚೆಗೆ ಸಾರ್ವಜನಿಕರು ಲಾಯರ್ ಜಗದೀಶ್‌ಗೆ ಥಳಿಸಿದ್ದನ್ನು ವಿಡಿಯೋ ಮೂಲಕ ಹಂಚಿಕೊಂಡಿದ್ದರು. ಹೀಗಾಗಿ ಬಿಗ್ ಬಾಸ್ ಮನೆಯೊಳಗೆ ಲಾಯರ್ ಜಗದೀಶ್ ಕಾಣಿಸಿಕೊಳ್ಳುವುದಿಲ್ಲ ಎಂದೇ ನಿರೀಕ್ಷೆ ಮಾಡಲಾಗಿತ್ತು.
ಸಾರ್ವಜನಿಕರೊಂದಿಗೆ ಗಲಾಟೆ ಮಾಡಿಕೊಂಡಿದ್ದಷ್ಟೇ ಅಲ್ಲದೆ, ಅವರ ಗನ್ ಮ್ಯಾನ್ ಗುಂಡು ಹಾರಿಸಿದ್ದ ಹಿನ್ನೆಲೆ ಪೊಲೀಸರು ಲಾಯರ್ ಜಗದೀಶ್ ಅವರನ್ನು ಬಂಧಿಸಿದ್ದರು. ಹೀಗಿದ್ದರೂ ಬಿಗ್ ಬಾಸ್ ಮನೆಯಲ್ಲಿ ಲಾಯರ್ ಜಗದೀಶ್ ಹೇಗೆ ಬಂದರು ಅನ್ನೋ ಪ್ರಶ್ನೆಗೆ ಉತ್ತರ ಸಿಂಪಲ್. ಲಾಯರ್ ಜಗದೀಶ್ ಅರೆಸ್ಟ್ ಆಗುವುದಕ್ಕೂ ಮುನ್ನ ಗ್ರ್ಯಾಂಡ್ ಫಿನಾಲೆಯನ್ನು ಶೂಟ್ ಮಾಡಲಾಗಿತ್ತು. ಹೀಗಾಗಿ ಬಿಗ್ ಬಾಸ್ ಮನೆಯೊಳಗೆ ಎಂಟ್ರಿ ಕೊಟ್ಟಿದ್ದರು ಎನ್ನಲಾಗಿದೆ.
ಇನ್ನೊಂದು ಕಡೆ ಮಾಜಿ ಬಿಗ್ ಬಾಸ್ ಸ್ಪರ್ಧಿ ನಿವೇದಿತಾ ಗೌಡ ವಿದೇಶ ಪ್ರವಾಸದಲ್ಲಿ ಇದ್ದರು. ಅಲ್ಲಿಂದ ರೀಲ್ಸ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದ್ದರು. ಹಾಟ್ ಅಂಡ್ ಗ್ಲಾಮರಸ್ ಆಗಿ ನಿವೇದಿತಾ ಗೌಡ ಕಾಣಿಸಿಕೊಂಡಿದ್ದರು. ಥೈಲ್ಯಾಂಡ್‌ನಲ್ಲಿ ಹೆಚ್ಚು ದಿನ ಕಳೆದಿದ್ದ ನಿವೇದಿತಾ ಗೌಡ, ಬಳಿಕ ಶ್ರೀಲಂಕಾಗೂ ಹೋಗಿದ್ದರು. ಅಲ್ಲಿಂದನೂ ಒಂದಿಷ್ಟು ವಿಡಿಯೋಗಳನ್ನು ಪೋಸ್ಟ್ ಮಾಡಿ ಸದ್ದು ಮಾಡಿದ್ದರು.

'ಬಾಯ್ಸ್ Vs ಗರ್ಲ್ಸ್' ಹೊಸ ರಿಯಾಲಿಟಿ ಶೋ ಆರಂಭ ಆಗುತ್ತಿದೆ. ಅದರಲ್ಲಿ ಭಾಗವಹಿಸುವ ಸ್ಪರ್ಧಿಗಳು ಭಾಗವಹಿಸಿದ್ದರು. ಇವರೊಂದಿಗೆ ಇಲ್ಲಿವರೆಗೂ ಬಿಗ್ ಬಾಸ್ ಗೆದ್ದ ಕೆಲವು ವಿನ್ನರ್ಸ್ ಎಂಟ್ರಿ ಕೊಟ್ಟಿದ್ದರು. ಇವರೊಂದಿಗೆ ನಿವೇದಿತಾ ಗೌಡ ಕೂಡ ಬಿಗ್ ಬಾಸ್ ಮನೆಯೊಳಗೆ ಎಂಟ್ರಿ ಕೊಟ್ಟಿದ್ದಾರೆ.


Click it and Unblock the Notifications











