Bigg Boss Kannada 11 Grand Finale: ಮೋಕ್ಷಿತಾಗೆ ಹೆಚ್ಚು ವೋಟ್; ಕೈ ತಪ್ಪಿತೇ ಟ್ರೋಫಿ?

ಬಿಗ್‌ ಬಾಸ್ ಕನ್ನಡ 11 ಫಿನಾಲೆ ಶುರುವಾಗುತ್ತಿದ್ದಂತೆ ಮನೆಯೊಳಗೆ ಇರುವ ಆರು ಮಂದಿ ಸ್ಪರ್ಧಿಗಳು ಭವಿಷ್ಯ ನಿರ್ಧಾರ ಆಗುತ್ತಿದೆ. ಈ ಸೀಸನ್‌ನ ಬಿಗ್ ಬಾಸ್ ಗೆಲ್ಲುವವರ ಲಿಸ್ಟ್‌ನಲ್ಲಿ ಕೆಲವರ ಹೆಸರು ಓಡಾಡುತ್ತಿದೆ. ಆರು ಮಂದಿಗಳಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ಹೆಸರುಗಳಲ್ಲಿ ಮೋಕ್ಷಿತಾ ಪೈ ಕೂಡ ಒಬ್ಬರು. ಸೋಶಿಯಲ್ ಮೀಡಿಯಾದಲ್ಲಿ ಮೋಕ್ಷಿತಾಗೆ ಹೆಚ್ಚು ಬೆಂಬಲ ಸೂಚಿಸುತ್ತಿದ್ದಾರೆ.

118 ದಿನಗಳ ಕಾಲ ಬಿಗ್‌ ಬಾಸ್ ಮನೆಯಲ್ಲಿ ಮೋಕ್ಷಿತಾ ಪೈ ತಮ್ಮದೇ ರೀತಿಯಲ್ಲಿ ಆಟ ಆಡಿಕೊಂಡು ಬಂದಿದ್ದಾರೆ. ಕೆಲವೊಮ್ಮೆ ಎಮೋಷನಲ್ ಆಗಿದ್ದಾರೆ. ಕೆಲವೊಮ್ಮೆ ಅಗ್ರೆಸಿವ್ ಆಗಿ ಆಟ ಆಡಿದ್ದಾರೆ. ಮೈಂಡ್‌ ಗೇಮ್ ಆಡಿದ್ದಾರೆ. ಕಿರುತೆರೆ ವೀಕ್ಷಕರನ್ನು ರಂಜಿಸಿದ್ದಾರೆ. ಮನೆಯೊಳಗಿರುವ ಸದಸ್ಯರೊಂದಿಗೆ ಕಿತ್ತಾಡಿದ್ದಾರೆ. ಕೆಲವೊಮ್ಮೆ ವೀಕ್ಷಕರಿಗೆ ಬೇಜಾರು ಮಾಡಿದ್ದಾರೆ. ಮತ್ತೆ ಕೆಲವರ ಕಣ್ಣಿಗೆ ಭೇಷ್ ಎನಿಸಿದ್ದಾರೆ.

Bigg Boss Kannada 11 Grand Finale most eliminated contestants voted Mokshita Pai

ಮೋಕ್ಷಿತಾ ಪೈ ಬಿಗ್ ಬಾಸ್ ಫಿನಾಲೆಗೂ ಮುನ್ನ ಎಲಿಮಿನೇಟ್ ಆಗುತ್ತಾರೆ ಅಂತ ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇನ್ನು ಕೆಲವರು ಬಿಗ್ ಬಾಸ್ ಗೆದ್ದೇ ಗೆಲ್ಲತ್ತಾರೆ ಅಂತ ಅಭಿಪ್ರಾಯ ಪಟ್ಟಿದ್ದರು. ಆದರೆ, ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿಗಳಲ್ಲಿ ಮೋಕ್ಷಿತಾ ಬಗ್ಗೆ ಏನು ಅಭಿಪ್ರಾಯವಿದೆ? ಅವರ ಪ್ರಕಾರ ಮೋಕ್ಷಿತಾ ಬಿಗ್ ಬಾಸ್ ಗೆಲ್ಲುವ ಫೇವರಿಟ್ ಸ್ಪರ್ಧಿನಾ? ಹೌದಾ ಅಲ್ವಾ? ಅನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಅದರಲ್ಲಿ ಮೋಕ್ಷಿತಾಗೆ ಹೆಚ್ಚು ವೋಟ್ ಬಿದ್ದಿದೆ. ಅಂದ್ರೆ ಗೆಲ್ಲಬೇಕು ಅಂತ ಅಲ್ಲ. ಬಿಗ್ ಬಾಸ್ ಗೆಲ್ಲಬಾರದು ಅಂತ. ಹಾಗಿದ್ದರೆ, ಯಾರೆಲ್ಲ ಮೋಕ್ಷಿತಾ ವಿರುದ್ಧ ವೋಟ್ ಮಾಡಿದ್ದಾರೆ ಅನ್ನೋದನ್ನು ನೋಡುವುದಾರೇ..

ಬಿಗ್ ಬಾಸ್‌ನಿಂದ ಈಗಾಗಲೇ ಎಲಿಮಿನೇಟ್ ಆಗಿರುವ ಸ್ಪರ್ಧಿಗಳ ಬಳಿಕ ಕಿಚ್ಚ ಸುದೀಪ್ ಯಾರು ಗೆಲ್ಲಬೇಕು ಎಂದು ಅಭಿಪ್ರಾಯ ಕೇಳಿದ್ದರು. ಈ ವೇಳೆ ಎಲಿಮಿನೇಟ್ ಆದ ಸ್ಪರ್ಧಿಗಳಲ್ಲಿ ಹೆಚ್ಚು ಮಂದಿ ಮೋಕ್ಷಿತಾ ಮನೆಯಿಂದ ಹೊರಬರಬೇಕು ಅಂತ ಅಭಿಪ್ರಾಯ ಪಟ್ಟಿದ್ದಾರೆ. ಮೋಕ್ಷಿತಾ ವಿರುದ್ಧ ಸುಮಾರು 7 ವೋಟ್‌ಗಳು ಬಂದಿವೆ. ಇವರು ಮೋಕ್ಷಿತಾ ಗೆಲ್ಲಬಾರದು ಎಂದು ಹೇಳಿದ್ದಾರೆ. ಹೀಗಾಗಿ ಮೋಕ್ಷಿತಾಗೆ ಬಿಗ್ ಬಾಸ್ ಟ್ರೋಫಿ ಕೈ ಚೆಲ್ಲುತ್ತಾ? ಅನ್ನೋ ಅನುಮಾನಗಳು ವ್ಯಕ್ತವಾಗುತ್ತಿದೆ.

ಕಿಚ್ಚನ ಪ್ರಶ್ನೆಗೆ ಧನರಾಜ್, ಗೌತಮಿ ಜಾದವ್, ಗೋಲ್ಡ್ ಸುರೇಶ್, ಯಮುನಾ, ಅನುಷಾ ರೈ, ಧರ್ಮ ಕೀರ್ತಿರಾಜ್, ರಂಜಿತ್ ಇಷ್ಟೂ ಮಂದಿ ಮೋಕ್ಷಿತಾ ಹೆಸರನ್ನು ತೆಗೆದುಕೊಂಡು ಅಚ್ಚರಿ ಮೂಡಿಸಿದ್ದರು. ಆರು ಮಂದಿಯಲ್ಲಿ ಅತೀ ಹೆಚ್ಚು ವೋಟ್‌ಗಳನ್ನು ಪಡೆದುಕೊಂಡಿದ್ದವರಲ್ಲಿ ಮೋಕ್ಷಿತಾ ಪೈ ಹೆಸರು ಮುಂಚೂಣಿಯಲ್ಲಿದೆ. ಇನ್ನು ಹನುಮಂತುಗೆ 5 ವೋಟ್ ಹಾಗೂ ತ್ರಿವಿಕ್ರಮ್‌ಗೆ 5 ವೋಟ್ ಬಂದಿದೆ. ಇದೇ ವೇಳೆ ಎಷ್ಟು ವೋಟ್‌ಗಳು ಬಂದಿದೆ ಎಂದು ಕಿಚ್ಚ ಸುದೀಪ್ ರಿವೀಲ್ ಮಾಡಿದ್ದಾರೆ.

ಇದೂವರೆಗೂ ಬಿಗ್‌ ಬಾಸ್‌ ಅತೀ ಹೆಚ್ಚು ವೋಟ್ ಬಂದಿದೆ ಎಂದು ಕಿಚ್ಚ ಸುದೀಪ್ ಅನೌನ್ಸ್ ಮಾಡಿದ್ದಾರೆ. ಸುಮಾರು ಐದು ಕೋಟಿಗೂ ಅಧಿಕ ವೋಟ್‌ಗಳು ಬಂದಿದೆ. ಬಿಗ್ ಬಾಸ್ ಇತಿಹಾಸದಲ್ಲೇ ಇಷ್ಟೊಂದು ವೋಟ್ ಬಂದಿರುವ ಇತಿಹಾಸವೇ ಇಲ್ಲ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ. ಇನ್ನು ಟಾಪ್ ವೋಟ್ ಪಡೆದಿದ್ದು ಸುಮಾರು 5,23,89,318 ಎಂದು ಸುದೀಪ್ ರಿವೀಲ್ ಮಾಡಿದ್ದಾರೆ. ಹಾಗೆ ಅತೀ ಕಡಿಮೆ ವೋಟ್ ಪಡೆದ ಸ್ಪರ್ಧಿ 64 ಲಕ್ಷ ಎಂದು ಹೇಳಿದ್ದಾರೆ.

ಸದ್ಯ ಬಿಗ್ ಬಾಸ್‌ ಮನೆಯಿಂದ ಅತೀ ಕಡಿಮೆ ವೋಟ್ ಪಡೆದ ಸ್ಪರ್ಧಿ ಯಾರು? ಬಿಗ್ ಬಾಸ್ ಫಿನಾಲೆಯಿಂದ ಹೊರ ಬರುತ್ತಿರುವ ಮೊದಲ ಸ್ಪರ್ಧಿ ಯಾರು ? ಅನ್ನೋ ಮಾತು ಕುತೂಹಲಕ್ಕೆ ಇನ್ನು ಕೆಲವೇ ಕ್ಷಣಗಳಲ್ಲಿ ತೆರೆ ಬೀಳಲಿದೆ.

More from Filmibeat

English summary
Bigg Boss Kannada 11 Grand Finale: Most eliminated contestants voted for Mokshita Pai. Will she be able to win?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X