BBK 11: ಬಿಗ್‌ ಬಾಸ್‌ಗೆ ಭರ್ಜರಿ ರೆಸ್ಪಾನ್ಸ್; ಟಿಆರ್‌ಪಿ ನೋಡಿ ಕಿಚ್ಚ ದಿಲ್‌ ಖುಷ್.. ಕೇಕ್ ಕತ್ತರಿಸಿ ಸಂಭ್ರಮ!

ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್ ಕನ್ನಡ 11 ಅದ್ಧೂರಿಯಾಗಿ ಆರಂಭ ಆಗಿತ್ತು. ಸೆಪ್ಟೆಂಬರ್ 29ರಂದು ಈ ಸಿನಿಮಾಗೆ ಗ್ರೇಟ್ ಓಪನಿಂಗ್ ಸಿಕ್ಕಿದೆ. ಕಿಚ್ಚ ಸುದೀಪ್ ನಡೆಸಿಕೊಡುವ ಈ ರಿಯಾಲಿಟಿ ಶೋಗೆ ಪ್ರೇಕ್ಷಕರಿಗೆ ಮೆಚ್ಚುಗೆ ವ್ಯಕ್ತವಾಗಿದೆ. ಬಿಗ್‌ಬಾಸ್ ಕನ್ನಡ 11ರ ಓಪನಿಂಗ್ ಡೇ ಅನ್ನು ಕಿರುತೆರೆಯ ವೀಕ್ಷಕರು ಮೆಚ್ಚಿಕೊಂಡಿದ್ದಾರೆ.

ಈಗಾಗಲೇ ಕಳೆದ ವಾರದ ಟಿಆರ್‌ಪಿ ಲಿಸ್ಟ್ ಹೊರ ಬಿದ್ದಿದೆ. ಪ್ರೇಕ್ಷಕರಿಂದ ರೆಸ್ಪಾನ್ ಹೇಗಿರುತ್ತೆ? ಅನ್ನುವ ಕುತೂಹಲಕ್ಕೆ ತೆರೆಬಿದ್ದಿದೆ. ಬಿಗ್ ಬಾಸ್ ಕನ್ನಡ ಮೊದಲ ವಾರದ ಟಿಆರ್‌ಪಿ ಲಿಸ್ಟ್ ರಿಲೀಸ್ ಆಗಿದೆ. ಇದರಲ್ಲಿ ಓಪನಿಂಗ್ ಡೇ ಅನ್ನು ಕಿರುತೆರೆಯಲ್ಲಿ ಅತೀ ಹೆಚ್ಚು ಮಂದಿ ವೀಕ್ಷಕರು ವೀಕ್ಷಣೆ ಮಾಡಿದ್ದಾರೆ. ಈ ಮೂಲಕ ಆರಂಭದ ದಿನವೇ ಶುಭಾರಂಭ ಮಾಡಿದೆ.

Bigg Boss Kannada 11 Kichcha Sudeep and team celebrated by cutting cake

ಬಿಗ್‌ ಬಾಸ್ ಕನ್ನಡ 11 ಸಕ್ಸಸ್‌ಫುಲ್ ಸೀಸನ್ ಅಂತ ಸಾಬೀತಾಗಿತ್ತು. ಆರಂಭದ ದಿನಗಳಲ್ಲೇ ಶುರುವಾಗಿದ್ದ ಕಿತ್ತಾಟ ನೋಡಿ ಕೆಲವು ಟೀಕೆ ಮಾಡಿದ್ದೂ ಇದೆ. ಆದರೆ, ಬಹುತೇಕ ಮಂದಿ ಈ ಶೋ ನೋಡಿದ್ದಕ್ಕೆ ಈ ವಾರ ಬಂದಿರುವ ಟಿಆರ್‌ಪಿ ಎಲ್ಲದಕ್ಕೂ ಉತ್ತರ ಕೊಟ್ಟಿದೆ. ಇದೇ ಖುಷಿಯನ್ನು ಕಿಚ್ಚ ಸುದೀಪ್ ತಂಡದೊಂದಿಗೆ ಹಂಚಿಕೊಂಡಿದ್ದಾರೆ.

ಬಿಗ್‌ಬಾಸ್ ಎರಡನೇ ವಾರವನ್ನು ಯಶಸ್ವಿಯಾಗಿ ಮುಗಿಸಿದೆ. 2ನೇ ವೀಕೆಂಡ್‌ನ ಶೂಟಿಂಗ್‌ನಲ್ಲಿ ಕಿಚ್ಚ ಸುದೀಪ್ ಈಗಾಗಲೇ ಭಾಗಿಯಾಗಿದ್ದಾರೆ. ಇದೇ ವೇಳೆ ಮೊದಲನೇ ದಿನ ಹಾಗೂ ಮೊದಲನೇ ವಾರದ ಟಿಆರ್‌ಪಿಯಲ್ಲಿ ಟಾಪ್‌ ಲಿಸ್ಟ್‌ ಸೇರಿದ್ದಕ್ಕೆ ಬಿಗ್‌ಬಾಸ್‌ ಸೆಟ್‌ನಲ್ಲಿಯೇ ಸಂಭ್ರಮಿಸಿದ್ದಾರೆ. ಬಿಗ್‌ಬಾಸ್ ತಂಡದೊಂದಿಗೆ ಕೇಕ್ ಕಟ್ ಮಾಡಿ ಖುಷಿ ಪಟ್ಟಿದ್ದಾರೆ.

ಬಿಗ್‌ ಬಾಸ್ ಕನ್ನಡ 11 ಮೊದಲ ದಿನ ಅಂದರೆ, ಸೆಪ್ಟೆಂಬರ್ 29ರ ದಿನ ಈ ಶೋ ಅನ್ನು ಅತೀ ಹೆಚ್ಚು ಮಂದಿ ವೀಕ್ಷಣೆ ಮಾಡಿದ್ದಾರೆ. ಕಾಮ್‌ ಸ್ಕೋರ್ ನೀಡಿದ ಟಿಆರ್‌ಪಿ ಪಟ್ಟಿಯಲ್ಲಿ ಬಿಗ್‌ ಬಾಸ್ ಕನ್ನಡ 11ಕ್ಕೆ ಸುಮಾರು 9.9 ರಷ್ಟು ಅಂಕ ಬಂದಿವೆ. ಬ್ಲಾಕ್ ಬಸ್ಟರ್ ಓಪನಿಂಗ್ ಪಡೆದುಕೊಂಡಿದ್ದಕ್ಕೆ ಸೆಟ್ಟಿನಲ್ಲಿಯೇ ಸಂಭ್ರಮಾಚರಣೆ ಮಾಡಲಾಗಿದೆ. ಕಿಚ್ಚ ಕೂಡ ಕಲರ್ಸ್ ಕನ್ನಡ ತಂಡದೊಂದಿಗೆ ಕೇಕ್ ಕತ್ತರಿಸಿ ಖುಷಿ ಪಟ್ಟಿದ್ದಾರೆ. ಈ ವಿಡಿಯೋವನ್ನು ಕಲರ್ಸ್ ಕನ್ನಡ ತನ್ನ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಹಂಚಿಕೊಂಡಿದೆ.

ಬಿಗ್ ಬಾಸ್ ಕನ್ನಡ 11 ಉಳಿದ ದಿನಗಳಲ್ಲೂ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ವಾರಾಂತ್ಯದಲ್ಲಿ ಕಿಚ್ಚ ಸುದೀಪ್ ಬರುವ ಎರಡು ದಿನಗಳನ್ನು ಹೊರತು ಪಡಿಸಿ, ಉಳಿದ ಐದು ದಿನಗಳಲ್ಲಿ ಈ ಶೋಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಸರಾಸರಿ 6.6 ರಷ್ಟು ಟಿಆರ್‌ಪಿ ಅಂಕ ಬಂದಿದೆ. ಈ ಹಿನ್ನೆಲೆಯಲ್ಲಿ ಮೊದಲ ವಾರ ಬಿಗ್‌ ಬಾಸ್ ಯಶಸ್ಸಿನ ಹಾದಿಯಲ್ಲಿ ಮುಂದಕ್ಕೆ ಸಾಗುತ್ತಿದೆ. ಇನ್ನು ಎರಡನೇ ವಾರದ ಹೇಗಿರುತ್ತೆ ಅನ್ನೋದು ಕುತೂಹಲವಿದೆ.

ಬಿಗ್‌ ಬಾಸ್ ಕನ್ನಡದಲ್ಲಿ ಸದ್ಯ ಲಾಯರ್ ಜಗದೀಶ್, ಹಂಸ ಜೋಡಿ ಮನರಂಜನೆ ನೀಡುತ್ತಿದೆ. ಹಾಗೇ ಉಗ್ರಂ ಮಂಜು, ಗೋಲ್ಡ್ ಸುರೇಶ, ಚೈತ್ರಾ ಕುಂದಾಪುರ, ತ್ರಿವಿಕ್ರಮ್ ಗಮನ ಸೆಳೆಯುತ್ತಿದ್ದಾರೆ. ಇವರೊಂದಿಗೆ ಗೌತಮಿ ಜಾದವ್, ಮೋಕ್ಷಿತಾ ಪೈ ಅವರ ಬಗ್ಗೆನೂ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ. ಮೊದಲ ವಾರ ಯಶಸ್ಸಿನ ಹಾದಿಯಲ್ಲಿ ಸಾಗಿರುವ ಬಿಗ್‌ ಬಾಸ್ ಎರಡನೇ ವಾರದಲ್ಲಿ ವೀಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆಯಾ? ಅನ್ನೋ ಮುಂದಿನ ವಾರ ಗೊತ್ತಾಗಲಿದೆ.

More from Filmibeat

English summary
Bigg Boss Kannada 11 Kichcha Sudeep and team celebrated by cutting cake:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X