BBK 11: ಕಿಚ್ಚ ಪರಪ್ಪನ ಅಗ್ರಹಾರ, ಕ್ರಿಮಿನಲ್ ಪದಗಳನ್ನು ತೆಗೆದಿದ್ಯಾಕೆ ?ಟಾಂಗ್ ಕೊಟ್ಟಿದ್ದು ವಕೀಲ್ ಸಾಬ್‌ಗೇನಾ?
ಬಿಗ್ ಬಾಸ್ ಕನ್ನಡ ಕನ್ನಡ ಸೀಸನ್ 11 ಆರಂಭ ಆಗಿ ಒಂದು ವಾರ ಮುಗಿದು ಹೋಗಿದೆ. ಸ್ವರ್ಗ ಹಾಗೂ ನರಕ ಕಲ್ಪನೆ ಕೈ ತಪ್ಪಿ ಹೋಗಿದೆ. ಸ್ವರ್ಗದಲ್ಲಿ ಇದ್ದವರು ನರಕ ಅನುಭವಿಸಿದ್ದಾರೆ. ನರಕದಲ್ಲಿದ್ದವರು ಸ್ವರ್ಗದಲ್ಲಿದ್ದಷ್ಟು ನೆಮ್ಮದಿ ಕಂಡುಕೊಂಡಿದ್ದಾರೆ. ಬಿಗ್ ಬಾಸ್ ಲೆಕ್ಕಾಚಾರವೆಲ್ಲ ತಲೆಕೆಳಗಾಗಿ ಹೋಗಿದೆ.
ವಾರ ಪೂರ್ತಿ ಕಿತ್ತಾಟದಲ್ಲಿಯೇ ಬಿಗ್‌ಬಾಸ್ ಮುಗಿದು ಹೋಗಿದೆ. ಲಾಯರ್ ಜಗದೀಶ್ ಆರ್ಭಟ. ಉಳಿದ ಸ್ಪರ್ಧಿಗಳಿಗೆ ಪ್ರಾಣ ಸಂಕಟ ಅನ್ನೋ ಸ್ಥಿತಿ ನಿರ್ಮಾಣ ಆಗಿತ್ತು. ಬಿಗ್ ಬಾಸ್ ಹಾಕಿದ ರೂಲ್ಸ್ ಬ್ರೇಕ್ ಆಗಿತ್ತು. ಬಿಗ್‌ಬಾಸ್‌ಗೆ ಅವಾಜ್ ಕೂಡ ಬಿತ್ತು. ಮೊದಲ ವಾರವೇ ಶೋ ಎಲ್ಲಿಗೆ ಹೋಗ್ತಿದೆ ಅನ್ನುವಾಗಲೇ ಒಂದು ವಾರ ಕಳೆದು ಹೋಗಿತ್ತು.

ಮೊದಲ ವಾರದಲ್ಲಿ ಆತ ಇಷ್ಟೆಲ್ಲ ತಪ್ಪುಗಳನ್ನು ಸರಿ ಮಾಡುವುದಕ್ಕೆ ಅಂತಾನೇ ಕಿಚ್ಚ ಸುದೀಪ್ ಎಂಟ್ರಿ ಕೊಟ್ಟಿದ್ದರು. ಒಂದು ವಾರ ಎಲ್ಲಾ ಅಸಮಧಾನಗಳಿಗೂ ಕಿಚ್ಚನ ತೀಕ್ಷಣ ಪ್ರಶ್ನೆಗಳೇ ಉತ್ತರ ಆಗಿದ್ದವು. ಲಾಯರ್ ಜಗದೀಶ್, ಹಂಸಾ, ಮೊದಲ ದಿನದ ಕಿಚ್ಚ ಪ್ರಶ್ನೆಗಳಿಗೆ ಪೇಚಾಡಿದ್ದು ಕಾಣಿಸಿತ್ತು. ಅದರೆ, ಇದೆಲ್ಲಕ್ಕಿಂತ ಹೆಚ್ಚಾಗಿ ಕಿಚ್ಚ ಚಪ್ಪಲಿ ಧರಿಸದೆ ವೇದಿಕೆಗೆ ಬಂದಿದ್ದು ಕುತೂಹಲ ಕೆರಳಿಸಿತ್ತು. ಪರಪ್ಪನ ಅಗ್ರಹಾರ, ಕ್ರಿಮಿನಲ್ ಅಂತಹ ಕೆಲವು ಪದಗಳೂ ಕಿಚ್ಚನ ಬಾಯಿಯಿಂದ ಬಂತು. ಅದ್ಯಾಕೆ? ತಿಳಿಯಲು ಮುಂದೆ ಓದಿ.
ಬಿಗ್ ಬಾಸ್ ವೀಕ್ಷಕರಿಗೆ ಈ ವಾರ ಕಿಚ್ಚ ಟಾರ್ಗೆಟ್ ಲಾಯರ್ ಜಗದೀಶ್ ಅನ್ನೋದು ಗೊತ್ತಿತ್ತು. ಯಾಕಂದ್ರೆ ಲಾಯರ್ ಜಗದೀಶ್ ಇಟ್ಟ ಹಾವಳಿ ಹಾಗಿತ್ತು. ಅವರ ವರ್ತನೆಗೆ ಕಿಚ್ಚ ಸುದೀಪ್ ಕ್ಲಾಸ್ ತೆಗೆದುಕೊಳ್ಳುತ್ತಾರೆ ಅನ್ನೋದು ಖಾತರಿಯಾಗಿತ್ತು. ಆದರೆ, ಲಾಯರ್ ಜಗದೀಶ್‌ಗೂ ಮುನ್ನ ನಟಿ ಹಂಸಾ ಅವರಿಗೂ ಕ್ಲಾಸ್ ಕೊಟ್ಟಿದ್ದು ಗಮನ ಸೆಳೆಯಿತು.
ಕಿಚ್ಚ ಸುದೀಪ್ ಪ್ರತಿಯೊಬ್ಬ ಸ್ಪರ್ಧಿಯೊಂದಿಗೂ ಸಿಕ್ಕಾಪಟ್ಟೆ ಕೂಲ್ ಆಗಿ ಅವರವರ ತಪ್ಪುಗಳನ್ನು ಮನವರಿಕೆ ಕೊಟ್ಟಿದ್ದರು. ಹಂಸಾ ಕ್ಯಾಪ್ಟನ್ ಆಗಿ ಮಾಡಿದ ತಪ್ಪನ್ನು ಮನವರಿಕೆ ಮಾಡಿಕೊಟ್ಟಿದ್ದರು. ಇದರ ಜೊತೆ ಲಾಯರ್ ಜಗದೀಶ್ ಅವರಿಗೂ ಅವರ ತಪ್ಪಿನ ಅರಿವನ್ನು ಅಷ್ಟೇ ಕೂಲ್ ಮಾಡಿಸಿದರೂ, ಮಾತಿನ ಚಾಟಿ ಏಟು ಚುರುಕು ಮುಟ್ಟಿಸಿತ್ತು.
ಲಾಯರ್ ಜಗದೀಶ್ ಹಾಗೂ ಕಿಚ್ಚ ಸುದೀಪ್ ನಡುವಿನ ಸಂಭಾಷಣೆಯ ಹೈಲೈಟ್ ಹೀಗಿದೆ. "ಬಿಗ್‌ಬಾಸ್ ಮನೆಯ ರೂಲ್ ಅನ್ನು ನಿಭಾಯಿಸದೇ ಹೋದರೆ, ಒಂದು ವೇಳೆ ಕರ್ನಾಟಕದ ಸಿ ಎಂ ಆದರೆ, ಹೇಗೆ ನಿಭಾಯಿಸುತ್ತೀರ?", "ನಾವು ಹೇಗೆ ಬಿಗ್ ಬಾಸ್ ನಡೆಸಿಕೊಳ್ಳಬೇಕು ನೀವು ಹೇಳಿ?", "ಇದು ಬಿಗ್‌ಬಾಸ್ ಮನೆ.. ಪರಪ್ಪನ ಅಗ್ರಹಾರ ಜೈಲು ಅಲ್ಲ", "ಈ ಬಾರಿ ಎರಡು ಒಂದು ಇವೆ ಅದರಲ್ಲಿ ಒಂದು ನೀವು.. ಎರಡು ಒಂದು ಸೇರಿದರೆ ಹನ್ನೊಂದು. ಆ ಹನ್ನೊಂದು ನಾನೇ." ಇಂತಹ ಕಿಚ್ಚನ ಪಂಚಿಂಗ್ ಡೈಲಾಗ್ ಶನಿವಾರದ ಎಪಿಸೋಡ್‌ನ ಹೈಲೈಟ್.
ಆದರೆ, ಕೊನೆಯಲ್ಲಿ ಕಾಡಿದ್ದು, "ಪರಪ್ಪನ ಅಗ್ರಹಾರ ಜೈಲು ಅಲ್ಲ", "ಕ್ರಿಮಿನಲ್" ಅನ್ನುವ ಪದಗಳು ಕಿಚ್ಚ ಸುದೀಪ್ ಬಾಯಿಂದ ಹೊರಬಂತು. ಇದು ಲಾಯರ್ ಜಗದೀಶ್ ಹೇಳಿದ ಮಾತುಗಳೇ? ಅಥವಾ ಲಾಯರ್ ಜಗದೀಶ್ ಅವರನ್ನು ಇಟ್ಟುಕೊಂಡು ಬೇರೆಯವರಿಗೆ ಟಾಂಗ್ ಕೊಟ್ಟಿದ್ದೇ? ಅನ್ನೋ ಪ್ರಶ್ನೆ ಅಂತೂ ಕೊನೆಯಲ್ಲಿ ಹುಟ್ಟಿಕೊಂಡಿತ್ತು.


Click it and Unblock the Notifications










