BBK 11: ಗೌತಮಿ ಪತಿಯ ಮಾತು.. ಉಗ್ರಂ ಮಂಜು ಪ್ರಾಮಿಸ್: ಕಟಕಟೆಯಲ್ಲಿ ತರಾಟೆ ತೆಗೆದುಕೊಳ್ಳೋದ್ಯಾರಿಗೆ?

ಬಿಗ್‌ಬಾಸ್ ಕನ್ನಡ ಸೀಸನ್ 11 ಇನ್ನೇನು ಮುಗಿಯುವ ಹಂತಕ್ಕೆ ಬಂದಿದ್ದೆ. ಒಬ್ಬೊಬ್ಬರಾಗಿಯೇ ಬಿಗ್‌ ಬಾಸ್ ಮನೆಯಿಂದ ಹೊರಗೆ ಹೋಗುತ್ತಿದ್ದಾರೆ. ಮನೆಯೊಳೆಗ ಉಳಿದು ಕೊಂಡವರು ಗೆಲ್ಲೋದಕ್ಕೆ ಮೈಂಡ್ ಗೇಮ್ ಆಡುತ್ತಿದ್ದಾರೆ. ಒಬ್ಬರಿಗಿಂತ ಇಬ್ಬರು ತಂತ್ರ ಹೆಣೆಯುವುದಕ್ಕೆ ಶುರು ಮಾಡಿದ್ದಾರೆ. ಇಂದು ಕಿಚ್ಚ ಕಟಕಟಯಲ್ಲಿ ಕೆಲವು ವಿಷಯಗಳು ಚರ್ಚೆಯಾಗಲಿದೆ.

ಈಗಾಗಲೇ ಕಲರ್ಸ್ ಕನ್ನಡ ಕಿಚ್ಚ ಕಟಕಟೆಯಲ್ಲಿ ಏನೆಲ್ಲ ಚರ್ಚೆಯಾಗುತ್ತೆ ಅನ್ನೋ ಪ್ರೋಮೊ ಝಲಕ್ ಅನ್ನು ರಿಲೀಸ್ ಮಾಡಿದೆ. ಇದರಲ್ಲಿ ಕಿಚ್ಚ ಸುದೀಪ್ ಕೆಲವು ಪ್ರಮುಖ ವಿಷಯಗಳನ್ನು ಚರ್ಚೆ ಮಾಡುತ್ತಾರೆ. ಅದರಲ್ಲಿ 'ಸತ್ಯ' ಖ್ಯಾತಿಯ ಗೌತಮಿ ಜಾದವ್‌ಗೆ ಪತಿ ಹೇಳಿದ ಮಾತು, ಸಹೋದರಿಗೆ ಉಗ್ರಂ ಮಂಜು ಕೊಟ್ಟ ಪ್ರಾಮಿಸ್ ಬಗ್ಗೆ ಗಂಭೀರ ಚರ್ಚೆಯಾಗುವ ಸಾಧ್ಯತೆಯಿದೆ.

Bigg Boss Kannada 11 Kichcha Sudeep will discuss with Gauthami and Ugram Manju matter

ಇನ್ನು ಕ್ಯಾಪ್ಟನ್ ಆಗಿರುವ ರಜತ್ ಕಿಶನ್, ಮೋಕ್ಷಿತಾ ಪೈ ಹಾಗೂ ಚೈತ್ರಾ ಕುಂದಾಪುರ ವಿಷಯಗಳನ್ನು ಎತ್ತುವ ಸಾಧ್ಯತೆಯಿದೆ. ಹಾಗಿದ್ದರೆ, ಗೌತಮಿ ಜಾದವ್ ಹಾಗೂ ಉಗ್ರಂ ಮಂಜು ಈ ವಾರ ಹೈಲೈಟ್ ಆಗಿರುವುದು ಯಾಕೆ? ಕಿಚ್ಚನ ಪ್ರೋಮೊದಲ್ಲಿ ಅಂತಹದ್ದು ಏನಿದೆ? ತಿಳಿಯುವುದಕ್ಕೆ ಮುಂದೆ ಓದಿ.

ಇತ್ತೀಚೆಗೆ ಬಿಗ್‌ಬಾಸ್ ಮನೆಯೊಳಗೆ ಸ್ಪರ್ಧಿಗಳ ಕುಟುಂಬಸ್ಥರು ಆಗಮಿಸಿದ್ದರು. ಮನೆಯೊಳಗೆ ಬಂದು ತಮ್ಮವರಿಗೆ ಕೆಲವು ಸಲಹೆಗಳನ್ನು ಕೊಟ್ಟು ಹೋಗಿದ್ದರು. ಕೆಲವು ಸ್ಪರ್ಧಿಗಳು ಎಚ್ಚರಿಕೆಯನ್ನೂ ಕೊಟ್ಟು ಹೋಗಿದ್ದರು. ಇದನ್ನೇ ಮುಂದಿಟ್ಟುಕೊಂಡು ಸ್ಪರ್ಧೆಗಳು ತಮ್ಮ ಆಟದ ತಂತ್ರವನ್ನು ಬದಲಾವಣೆ ಮಾಡಬಹುದು ಅಂದುಕೊಂಡಿದ್ದರು. ಹೀಗಿದ್ದರೂ, ಕೆಲ ಸ್ಪರ್ಧಿಗಳು ಮತ್ತದೇ ತಪ್ಪು ಮಾಡುತ್ತಿದ್ದಾರೆ. ಆ ಬಗ್ಗೆ ವೇದಿಕೆ ಮೇಲೆ ಕಿಚ್ಚ ಸುದೀಪ್ ತರಾಟೆಗೆ ತೆಗೆದುಕೊಳ್ಳಬಹುದು.

Bigg Boss Kannada 11 Kichcha Sudeep will discuss with Gauthami and Ugram Manju matter

ಕಿಚ್ಚ ಸುದೀಪ್ ಪ್ರೋಮೊದಲ್ಲಿ ಈಗಾಗಲೇ ಕೆಲವು ಸುಳಿವುಗಳನ್ನು ಕೊಟ್ಟಿದ್ದಾರೆ. ಕೆಲವು ಪ್ರಶ್ನೆಗಳನ್ನು ಎತ್ತಿದ್ದಾರೆ. "ಈ ವಾರ ಸ್ಪರ್ಧಿಗಳು ತಮ್ಮ ರಕ್ತ ಸಂಬಂಧಿಗಳನ್ನು ಭೇಟಿ ಮಾಡಿದ್ರು. ಮನೆ ಊಟ ತಿಂದು ಮೈ ಮರೆತವರು ಯಾರು? ಮನೆಯವರ ಮಾತನ್ನು ಕೇಳಿ ಎಚ್ಚರ ಆದವರು ಯಾರು? ಅಂತ ಕೇಳಿದ್ದು, ಅದರಲ್ಲಿ ಇಬ್ಬರು ಸ್ಪರ್ಧಿಗಳನ್ನು ಹೈಲೈಟ್ ಮಾಡಲಾಗಿದೆ. ಗೌತಮಿ ಜಾದವ್‌ಗೆ ಪತಿ ಕೊಟ್ಟ ಸಲಹೆ ಹಾಗೂ ಸಹೋದರಿಗೆ ಉಗ್ರಂ ಮಂಜು ಮಾಡಿದ ಪ್ರಾಮಿಸ್ ಹೈಲೈಟ್ ಮಾಡಲಾಗಿದೆ.

ಗೌತಮಿ ಜಾದವ್ ಪತಿ ಅಭಿಷೇಕ್ ಕಾಸರಗೋಡು ಬಿಗ್ ಬಾಸ್ ಮನೆಯೊಳಗೆ ಬಂದಿದ್ದರು. ಈ ವೇಳೆ ತಮ್ಮ ಪತ್ನಿಗೆ ಹೇಗಿರಬೇಕು ಎಂದು ಸಲಹೆಯನ್ನು ಕೊಟ್ಟಿದ್ದಾರೆ. ಈ ವೇಳೆ ಪತಿ ಅಭಿಷೇಕ್ ನಿನ್ನನ್ನು ಉಪಯೋಗಿಸಿಕೊಳ್ಳುತ್ತಿರುವುದು ಅವರು ಬಿ ಕೇರ್‌ಫುಲ್ ಎಂದು ಹೇಳಿದ್ದರು. ಅವಕಾಶ ಸಿಕ್ಕಿದಾಗ ಅವರನ್ನೇ ತುಳಿದುಕೊಂದಕ್ಕೆ ಹೋಗಬೇಕು ಎಂದು ಸಲಹೆಯನ್ನು ನೀಡಿದ್ದರು. ಆ ಸಲಹೆಯನ್ನು ಗೌತಮಿ ಒಪ್ಪಿಕೊಂಡು ಅಳವಡಿಸಿಕೊಂಡಿದ್ದಾರಾ? ಈ ಬಗ್ಗೆ ಕಿಚ್ಚ ಇಂದು (ಜನವರಿ 4) ಚರ್ಚೆ ಮಾಡಲಿದ್ದಾರೆ.

ಹಾಗೇ ಉಗ್ರಂ ಮಂಜು ಮನೆಯವರೂ ಬಿಗ್ ಬಾಸ್ ಮನೆಯೊಳಗೆ ಬಂದಿದ್ದರು. ತಂದೆ ರಾಗಿ ರಾಮಣ್ಣ, ತಾಯಿ ಲಲಿತಮ್ಮ, ಸಹೋದರಿ ದೀಪಿಕಾ ಹಾಗೂ ಅವರ ಮಗಳು ಮನೆಗೆ ಬಂದಿದ್ದರು. ಈ ವೇಳೆ ಉಗ್ರಂ ಮಂಜುಗೆ ಸಹೋದರಿ ಕೊಟ್ಟ ಸಲಹೆಗೆ ಪ್ರಾಮಿಸ್ ಮಾಡಿದ್ದರು. ಎಲ್ಲರೂ ನಿನ್ನನ್ನು ದಾಟಿ ಮುಂದಕ್ಕೆ ಹೋಗ್ತಿದ್ದಾರೆ. ಯಾರ ಬಾಲ ಹಿಡಿಯೋದಕ್ಕೆ ಹೋಗಬೇಡ. ನಿನ್ನ ಆಟವನ್ನು ನೀನು ಆಡಬೇಕು ಎಂದಿದ್ದರು. ಅದಕ್ಕೆ ಉಗ್ರಂ ಮಂಜು ಪ್ರಾಮಿಸ್ ಮಾಡಿದ್ದರು. ಅದನ್ನು ಪ್ರಾಮಿಸ್ ಅನ್ನು ಇನ್ನೂ ಕಾಪಾಡಿಕೊಂಡಿದ್ದಾರಾ? ಅದೂ ಕೂಡ ಚರ್ಚೆಯಾಗಲಿದೆ.

ಇವರೊಂದಿಗೆ ಭವ್ಯಾ ಹಾಗೂ ತ್ರಿವಿಕ್ರಮ್ ಕೂಡ ಈ ವಾರ ಕಿಚ್ಚ ಕಟುವಾದ ಪ್ರಶ್ನೆಗಳಿಗೆ ಉತ್ತರಿಸಬೇಕಾಗಿ ಬರಬಹುದು. ಸದ್ಯ ಕಿಚ್ಚ ಸುದೀಪ್ ಬಿಗ್‌ಬಾಸ್ ಪ್ರೋಮೊ ಅಂತೂ ಸಖತ್ ಖಡಕ್ ಆಗಿದೆ.

More from Filmibeat

English summary
Bigg Boss Kannada 11 Kichcha Sudeep will discuss with Gauthami and Ugram Manju matter;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X