BBK 11: ಲಾಯರ್ ಜಗದೀಶ್ ಎದೆ ಮೇಲೆ ಕಾಲಿಟ್ಟು ಹಾರಿದ ಹಂಸ; 'ಮುಂಗಾರು ಮಳೆ' ಫೀಲ್‌ನಲ್ಲಿ ವಕೀಲ್ ಸಾಬ್
ಬಿಗ್‌ಬಾಸ್ ಕನ್ನಡ ಸೀಸನ್ 11 ಆರಂಭದ ದಿನದಿಂದಲೇ ಕಿತ್ತಾಟ ಶುರುವಾಗಿತ್ತು. ಮೊದಲ ವಾರ ಲಾಯರ್ ಜಗದೀಶ್ ಆರ್ಭಟವೇ ಹೈಲೈಟ್ ಆಗಿತ್ತು. ತನ್ನ ಪ್ರತಿಸ್ಪರ್ಧಿಗಳಿಗೆ ಮಾತಾಡುವುದಕ್ಕೂ ಬಿಡದಷ್ಟು ಡಾಮಿನೆಟ್ ಮಾಡಿದ್ದರು. ವೀಕೆಂಡ್‌ನಲ್ಲಿ ಕಿಚ್ಚ ಸುದೀಪ್ ಬಂದು ಕ್ಲಾಸ್ ತೆಗೆದುಕೊಂಡ ಮೇಲೆ ಲಾಯರ್ ಜಗದೀಶ್ ಬದಲಾಗಿದ್ದಾರೆ. ಸ್ವರ್ಗದಿಂದ ನರಕಕ್ಕೆ ಹೋದರೂ ಎಂಜಾಯ್ ಮಾಡುತ್ತಿದ್ದಾರೆ.
ಹೌದು, ಲಾಯರ್ ಜಗದೀಶ್ ಮೊದಲ ವಾರ ರೆಬೆಲ್ ಸ್ಟಾರ್ ಆಗಿದ್ದರು. ಆದರೆ, ಈ ವಾರ ಗೋಲ್ಡನ್ ಸ್ಟಾರ್ ಆಗಿ ಬದಲಾಗಿದ್ದಾರೆ. ಕಿರುತೆರೆ ವೀಕ್ಷಕರಿಗೆ ಎರಡನೇ ವಾರ ದಿನದಿಂದ ದಿನಕ್ಕೆ ಮಜಾ ಸಿಗುತ್ತಿದೆ. ಅದರಲ್ಲೂ ಲಾಯರ್ ಜಗದೀಶ್ ಹಾಗೂ ಹಂಸ ಜೋಡಿ ಮಸ್ತ್ ಮನರಂಜನೆ ನೀಡುತ್ತಿದ್ದಾರೆ. ಇವರಿಬ್ಬರ ನಡುವಿನ ಮಾತುಕತೆ ಕಿರುತೆರೆ ವೀಕ್ಷಕರಿಗೆ ನಗಿಸುವುದಕ್ಕೆ ಶುರು ಮಾಡಿದೆ.

ಇಂದು (ಅಕ್ಟೋಬರ್ 8) ಬೆಳಗ್ಗೆಯ ಪ್ರೋಮೊವನ್ನು ಕಲರ್ಸ್ ಕನ್ನಡ ರಿಲೀಸ್ ಮಾಡಿದೆ. ಈ ಪ್ರೋಮೊ ನೋಡಿದವರೆ, ಇವತ್ತಿನ ಎಪಿಸೋಡ್ ವೀಕ್ಷಕರಿಗೆ ಮನರಂಜನೆ ನೀಡುತ್ತೆ ಅನ್ನೋದು ಖಾತರಿಯಾಗಿದೆ. ಈ ಪ್ರೋಮೊದಲ್ಲಿ ಲಾಯರ್ ಜಗದೀಶ್ 'ಮುಂಗಾರು ಮಳೆ' ಫೀಲ್‌ನಲ್ಲಿ ಇದ್ದಾರೆ. ಅಷ್ಟೇ ಯಾಕೆ, ನಟಿ ಹಂಸ ಲಾಯರ್ ಜಗದೀಶ್ ಎದೆ ಮೇಲೆ ಕಾಲಿಟ್ಟು ಜಿಗಿದಿದ್ದೂ ಆಗಿದೆ.
ಲಾಯರ್ ಜಗದೀಶ್ ಈಗ ಗೋಲ್ಡನ್ ಸ್ಟಾರ್
ಕಿರಿಕ್‌ಗೆ ಹೆಸರಾಗಿದ್ದ ಲಾಯರ್ ಜಗದೀಶ್ ಫುಲ್ ರೊಮ್ಯಾಂಟಿಕ್ ಮೂಡ್‌ನಲ್ಲಿ ಇದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ತರ ಮನೆಯೊಳಗೆ ಓಡಾಡಿಕೊಂಡಿದ್ದಾರೆ. ಅದರಲ್ಲೂ ಕ್ಯಾಪ್ಟನ್ ಹಂಸ ಅವರೊಂದಿಗೆ ಲಾಯರ್ ಜಗದೀಶ್ ರೊಮ್ಯಾಂಟಿಕ್ ಡೈಲಾಗ್‌ಗಳನ್ನು ಬಿಟ್ಟು ರೇಗಿಸುತ್ತಿದ್ದಾರೆ. ಇವರಿಬ್ಬರ ಜುಗಲ್‌ಬಂದಿ ಈ ವಾರ ಮತ್ತಷ್ಟು ಸದ್ದು ಮಾಡೋದು ಗ್ಯಾರಂಟಿ ಅಂತ ಅನಿಸುತ್ತೆ.
ಬಿಗ್ ಬಾಸ್ ಮನೆಯ ಈ ವಾರದ ಕ್ಯಾಪ್ಟನ್ ಹಂಸ ಹೋದ ಕಡೆಯಲ್ಲೆಲ್ಲಾ ಲಾಯರ್ ಜಗದೀಶ್ ಕಾಣಿಸಿಕೊಳ್ಳುತ್ತಿದ್ದಾರೆ. ರೊಮ್ಯಾಂಟಿಕ್ ಮೂಡ್‌ನಲ್ಲಿ ಹಂಸ ಅವರನ್ನು ರೇಗಿಸುತ್ತಿದ್ದಾರೆ. ಇದು ಮನೆಯಲ್ಲಿರುವ ಸ್ಪರ್ಧಿಗಳಿಗೂ ಕಿಕ್ ಕೊಡುತ್ತಿದೆ. ಸಿನಿಮಾ ಡೈಲಾಗ್ ಬಿಟ್ಕೊಂಡು, ಹಾಡು ಹಾಡ್ಕೊಂಡು ಲಾಯರ್ ಜಗದೀಶ್ ಮನೆಯೊಳಗಿರುವ ಸ್ಪರ್ಧಿಗಳಿಗೂ ಮನರಂಜನೆ ನೀಡುತ್ತಿದ್ದಾರೆ.
ಜಗದೀಶ್ ಎದೆ ಮೇಲೆ ಕಾಲಿಟ್ಟ ಹಂಸ
'ಮುಂಗಾರು ಮಳೆ' ಸಿನಿಮಾದ ಜನಪ್ರಿಯ ಹಾಡು "ಅನಿಸುತಿದೆ ಯಾಕೋ ಇಂದು.." ಇಲ್ಲಿ ರೀ ಕ್ರಿಯೇಟ್ ಆಗಿದೆ. ಕ್ಯಾಪ್ಟನ್ ಹಂಸ ಅವರೊಂದಿಗೆ ಫ್ಲರ್ಟ್ ಮಾಡುತ್ತಿರುವ ಲಾಯರ್ ಜಗದೀಶ್ ವರ್ತನೆ ನೋಡಿ ಸಿಡಿಮಿಡಿಗೊಳ್ಳುತ್ತಿದ್ದ ಹಂಸ ಈಗ ಒಗ್ಗಿಕೊಳ್ಳುವುದಕ್ಕೆ ಶುರು ಮಾಡಿದ್ದಾರೆ ಎನಿಸುತ್ತಿದೆ. ಲಾಯರ್ ಜಗದೀಶ್ ಕೂಡ ಹಂಸ ಏಕವಚನದಲ್ಲಿ ಮಾತಾಡಿಸಿದರೂ ಸಿಟ್ಟಾಗುತ್ತಿಲ್ಲ. ಇಬ್ಬರ ಜೋಡಿ ಈ ವಾರ ಉಳಿದ ಸ್ಪರ್ಧಿಗಳನ್ನು ತಿಂದಾಕುವ ಹಾಗೆ ಕಾಣಿಸುತ್ತಿದೆ.
ಕ್ಯಾಪ್ಟನ್ ಆಗಿರುವ ಹಂಸ ಅವರನ್ನು ರೇಗಿಸಬೇಕು ಅಂತ ಲಾಯರ್ ಜಗದೀಶ್ ಪಟ್ಟು ಹಿಡಿದು ಕೂತಂತೆ ಇದೆ. ಈ ಕಾರಣಕ್ಕೆ ಜಗದೀಶ್ ರೊಮ್ಯಾಂಟಿಕ್ ಮೂಡ್‌ನಲ್ಲಿ ಜಾರಿದ್ದಾರೆ. ಏನೇ ಇದ್ದರೂ ವಕೀಲ್ ಸಾಬ್ ರೊಮ್ಯಾಂಟಿಕ್ ಆಗಿ ಬದಲಾಗಿದ್ದಕ್ಕೆ ಸೋಶಿಯಲ್ ಮೀಡಿಯಾದಲ್ಲೂ ಚರ್ಚೆಯಾಗುತ್ತಿದೆ. ಜಗದೀಶ್ ಹಾಗೂ ಹಂಸ ಜೋಡಿಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಒಟ್ನಲ್ಲಿ ಜಗದೀಶ್ ಎದೆ ಮೇಲೆ ಕಾಲಿಟ್ಟು ಹಂಸ ಜಿಗಿದ ಮೇಲೆ 'ಮುಂಗಾರು ಮಳೆ' ವಾತಾವರಣ ಸೃಷ್ಟಿಯಾಗಿರುವುದಂತೂ ನಿಜ.


Click it and Unblock the Notifications











