ದಯವಿಟ್ಟು ಅಪಾರ್ಥ ಮಾಡ್ಕೊಬೇಡಿ: ಮಂಜಣ್ಣಂದು-ಜಗ್ಗಣ್ಣಂದು ವಿಡಿಯೋದಲ್ಲೇನೋ ಮಿಸ್ ಹೊಡೆದಿದೆ

ಬಿಗ್‌ ಬಾಸ್ ಕನ್ನಡ ಸೀಸನ್‌ 11 ದಿನದಿಂದ ದಿನಕ್ಕೆ ರಂಗೇರುತ್ತಿದೆ. ಮನೆಯವರ ಕಿತ್ತಾಟ, ಕಿರುಚಾಟವೇ ಹೆಚ್ಚು ನೋಡುವುದಕ್ಕೆ ಸಿಕ್ಕರೂ ಅಲ್ಲಲ್ಲಿ ಕಾಮಿಡಿಗೂ ಒಂದಿಷ್ಟು ಜಾಗ ಕೊಡುತ್ತಿದ್ದಾರೆ. ಬಿಗ್‌ಬಾಸ್ ಮನೆಯಲ್ಲಿ ಇರುವ ಸ್ಪರ್ಧಿಗಳ ಪೈಕಿ ಲಾಯರ್ ಜಗದೀಶ್, ಚೈತ್ರಾ ಕುಂದಾಪುರ, ಉಗ್ರಂ ಮಂಜು ಅಗ್ರೆಸಿವ್ ಆಗಿದ್ದಾರೆ. ಇನ್ನು ಉಳಿದವರು ಲಾಯರ್ ಜಗದೀಶ್ ಹಾವಳಿ ತಡೆದುಕೊಳ್ಳಲು ಆಗದೆ ವಿಲವಿಲ ಅಂತ ಒದ್ದಾಡುತ್ತಿದ್ದಾರೆ.

ಬಿಗ್‌ಬಾಸ್ ಆರಂಭ ಆಗಿ ಮೂರನೇ ವಾರ. ಇನ್ನೇನು ಎರಡು ದಿನಗಳಲ್ಲಿ ಇನ್ನೊಂದು ವೀಕೆಂಡ್ ಬಂದು ಬಿಡುತ್ತೆ. ಆರಂಭದ ದಿನದಿಂದಲೇ ಕಿತ್ತಾಡುತ್ತಿರುವ ಸ್ಪರ್ಧಿಗಳಿಗೆ ಕಿಚ್ಚ ಸುದೀಪ್ ಬುದ್ಧಿವಾದ ಹೇಳಿ ಹೇಳಿ ಸುಸ್ತಾದಂತೆ ಇದೆ. ಈ ಮಧ್ಯೆ ಲಾಯರ್ ಜಗದೀಶ್ ಹಾಗೂ ರಂಜಿತ್ ಇಬ್ಬರ ಮಧ್ಯೆ ಫೈಟ್ ಆಗಿದ್ದು, ಬಿಗ್ ಬಾಸ್ ಮನೆಯಿಂದ ಹೊರಬಿದ್ದಿದ್ದಾರೆ ಅನ್ನೋ ಸುದ್ದಿನೂ ಹೊರಬಿದ್ದಿದೆ.

Bigg Boss Kannada 11 Lawyer Jagadish Ugram Manju kissing video went viral

ಈ ಮಧ್ಯೆ ಲಾಯರ್ ಜಗದೀಶ್‌ಗೆ ಸೋಶಿಯಲ್ ಮೀಡಿಯಾದಲ್ಲಿ ಫ್ಯಾನ್ ಫಾಲೋವಿಂಗ್ ಹೆಚ್ಚಾಗುತ್ತಿದೆ. ಮನೆಯೊಗಳೆ ಒಂಟಿ ಸಿಂಹ ಎಂದು ಹೇಳಿಕೊಂಡು ಓಡಾಡುತ್ತಿರುವ ಲಾಯರ್ ಜಗದೀಶ್ ನಿಜಕ್ಕೂ ಒಂಟಿಯಾಗಿದ್ದಾರೆ. 16 ಮಂದಿ ಸದಸ್ಯರೇ ಒಂದು ಕಡೆ. ಲಾಯರ್ ಜಗದೀಶ್ ಅವರೇ ಒಂದು ಕಡೆ. ಈ ಮಧ್ಯೆ ಲಾಯರ್ ಜಗದೀಶ್ ಹಾಗೂ ಉಗ್ರಂ ಮಂಜು ಗಲಾಟೆ ನಡೆಯುತ್ತಿದೆ. ವಿಚಿತ್ರ ಅಂದರೆ, ಇದೇ ಗ್ಯಾಪ್‌ನಲ್ಲಿ ಜಗ್ಗಣ್ಣ ಹಾಗೂ ಮಂಜಣ್ಣ ಕಿಸ್ಸಿಂಗ್ ವಿಡಿಯೋ ಕೂಡ ಸದ್ದು ಮಾಡುತ್ತಿದೆ.

ಜಗ್ಗಣ್ಣ-ಮಂಜಣ್ಣ ಕಿಸ್ಸಿಂಗ್ ವಿಡಿಯೋ

ಬಿಗ್‌ ಬಾಸ್ ಮನೆಯಲ್ಲಿ ಲಾಯರ್ ಜಗದೀಶ್ ಆಕ್ರೋಶವನ್ನು ತಡೆದುಕೊಳ್ಳಲಾಗದೆ ಮನೆಯವರು ಬೇಸತ್ತಿದ್ದರು. ಆದರೆ, ಈಗ ಉಗ್ರಂ ಮಂಜು ಕೂಡ ಉಗ್ರಾವತಾರ ತಾಳುತ್ತಿದ್ದಾರೆ. ಲಾಯರ್ ಜಗದೀಶ್ ವಿರುದ್ಧ ಮಂಜು ತಿರುಗಿಬಿದ್ದಿದ್ದಾರೆ. ವಕೀಲ್ ಸಾಬ್‌ಗೆ ಎಷ್ಟು ಕಿರಿಕಿರಿ ಮಾಡುವುದಕ್ಕೆ ಸಾಧ್ಯವೋ ಅಷ್ಟು ಕಿರಿಕಿರಿ ಮಾಡುತ್ತಿದ್ದಾರೆ. ವೀಕ್ಷಕರಿಗೆ ಒಂದು ಕಡೆ ಮನರಂಜನೆ ಸಿಗುತ್ತಿದ್ದರೆ, ಇನ್ನೊಂದು ಕಡೆ ಎಲ್ಲೆ ಹೊಡೆದಾಡಿಕೊಳ್ಳುತ್ತಾರೋ ಅನ್ನೋ ಆತಂಕವಿತ್ತು. ಆದರೆ, ನಾನು ಮೈ ಕೈ ಮುಟ್ಟಲ್ಲ ಅಂತ ಉಗ್ರಂ ಮಂಜು ಘೋಷಣೆನೂ ಮಾಡಿದ್ದರು.

ಮೈ ಕೈ ಮುಟ್ಟಲ್ಲ ಅಂತ ಲಾಯರ್ ಜಗದೀಶ್ ತಾಳ್ಮೆ ಪರೀಕ್ಷೆ ಮಾಡಿದ್ದರು. ಇದನ್ನು ನೋಡಿದ್ದ ವೀಕ್ಷಕರಿಗೆ ಶಾಕಿಂಗ್ ಸುದ್ದಿಯೊಂದು ಸಿಕ್ಕಿದೆ. ಲಾಯರ್ ಜಗದೀಶ್ ಹಾಗೂ ಉಗ್ರಂ ಮಂಜು ಉಗ್ರಾವತಾರ ತಾಳುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ಸದ್ದು ಮಾಡುತ್ತಿದೆ. ಇಬ್ಬರೂ ಕಿತ್ತಾಡುತ್ತಿರುವ ವೇಳೆ ಜಗದೀಶ್ ಹಾಗೂ ಉಗ್ರಂ ಮಂಜು ಚುಂಬಿಸಿಕೊಂಡ ವಿಡಿಯೋ ಒಂದು ವೈರಲ್ ಆಗುತ್ತಿದೆ. ಇದೇ ವಿಚಾರಕ್ಕೆ ಜಗಣ್ಣ ಹಾಗೂ ಮಂಜಣ್ಣ ಇಬ್ಬರೂ ಟ್ರೋಲ್‌ ಆಗುತ್ತಿದ್ದಾರೆ.

ಚುಂಬಿಸಿಕೊಂಡಿದ್ದು ನಿಜವೇ?

ಲಾಯರ್ ಜಗದೀಶ್ ಹಾಗೂ ಉಗ್ರಂ ಮಂಜು ಗ್ಯಾಪ್‌ನಲ್ಲಿ ಚುಂಬಿಸಿದ ವಿಡಿಯೋ ಟ್ರೋಲ್ ಆಗುತ್ತಿದೆ. ಆದರೆ, ಈ ವಿಡಿಯೋ ನಿಜವೇ? ಕಲರ್ಸ್ ಕನ್ನಡ ಪ್ರಸಾರ ಮಾಡಿಲ್ಲವೇ? ಅನ್ನೋ ಪ್ರಶ್ನೆ ಮೂಡಿದೆ. ನೆಟ್ಟಿಗರು ಇದೇ ವಿಡಿಯೋವನ್ನು ಇಟ್ಟುಕೊಂಡು ನೆಟ್ಟಿಗರು ತಮಾಷೆಯಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಮಂಜಣ್ಣನಿಗೆ ಸಿನಿಮಾ ಅನುಭವ ಜಾಸ್ತಿ. ಅದೇ ಲಾಯರ್ ಜಗದೀಶ್‌ಗೆ ಕಡಿಮೆ ಎಂದು ಮಾತಾಡಿಕೊಳ್ಳುತ್ತಿದ್ದಾರೆ.

ನೆಟ್ಟಿಗರು ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದು ನೆಟ್ಟಿಗರು ತಮಾಷೆ ಮಾಡುತ್ತಿದ್ದಾರೆ. ಇನ್ನೊಂದು ಕಡೆ ಲಾಯರ್ ಜಗದೀಶ್ ಹಾಗೂ ರಂಜಿತ್ ಮ್ಯಾಟರ್ ಇನ್ನೂ ರಿವೀಲ್ ಆಗಿಲ್ಲ. ಮನೆಯೊಳಗೆ ಇದ್ದಾರೋ ಇಲ್ಲವೋ ಅನ್ನೋದು ವೀಕ್ಷಕರಿಗೆ ತಿಳಿಸಿಲ್ಲ. ಬಹುಶ: ಇಂದಿನ ಎಪಿಸೋಡ್‌ನಲ್ಲಿ ಇಬ್ಬರ ಎಲಿಮಿನೇಟ್ ಆಗಿದ್ದಾರೋ ಇಲ್ಲವೋ ಅನ್ನೋದು ಗೊತ್ತಾಗಲಿದೆ.

More from Filmibeat

English summary
Bigg Boss Kannada 11 Lawyer Jagadish, Ugram Manju kissing video went viral:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X