BBK 11: ಬಿಗ್‌ಬಾಸ್ ಮನೆಯಿಂದ ಹೊರ ಹೋಗೋದು ಗೌತಮಿನೂ ಅಲ್ಲ ಭವ್ಯಾನೂ ಅಲ್ಲ; ಇವರೇ!
ಬಿಗ್ ಬಾಸ್ ಕನ್ನಡ 11 ರೋಚಕ ಹಂತ ತಲುಪಿದೆ. ಇಂದಿನ (ಜನವರಿ 15) ಎಪಿಸೋಡ್‌ನಲ್ಲಿ ಮಿಡ್ ನೈಟ್ ಇರುವ ಬಗ್ಗೆ ಬಿಗ್‌ಬಾಸ್ ಪ್ರೋಮೊದಲ್ಲಿ ರಿವೀಲ್ ಮಾಡಿತ್ತು. ಈ ಬಾರಿ ಒಬ್ಬರು ಮನೆಯಿಂದ ಹೊರ ಹೋಗುವುದು ಫಿಕ್ಸ್ ಅಂತಲೇ ಹೇಳಲಾಗಿತ್ತು. ಎಪಿಸೋಡ್ ಆರಂಭಕ್ಕೂ ಮುನ್ನವೇ ಗೌತಮಿ ಜಾದವ್ ಎಲಿಮಿನೇಟ್ ಆಗಿರಬಹುದು ಎಂದು ಲೆಕ್ಕಾಚಾರ ಹಾಕಿದ್ದರು. ಅದೀಗ ತಲೆ ಕೆಳಗಾಗಿದೆ.
ಕಿಚ್ಚನ ಪಂಚಾಯ್ತಿಯಲ್ಲಿ ಸ್ವತ: ಕಿಚ್ಚ ಸುದೀಪ್ ಈ ಬಾರಿ ಮಿಡ್ ನೈಟ್ ಎಲಿಮಿನೇಷನ್ ಇರುತ್ತೆ ಎಂದು ಹೇಳಿದ್ದರು. ಅದರಂತೆ ಮಿಡ್ ನೈಟ್ ಎಲಿಮಿನೇಷನ್ ಪ್ರಕ್ರಿಯೆ ಬಿಗ್‌ಬಾಸ್ ಮನೆಯಲ್ಲಿ ನಡೆಯುತ್ತಿದೆ. ನಾಮಿನೇಟ್ ಆಗಿದ್ದ ಆರು ಮಂದಿ ಸ್ಪರ್ಧಿಗಳು ಸೇಫ್ ಆಗಿದ್ದಾರೆ. ಹಾಗಂತ ಬಿಗ್ ಬಾಸ್ ಚಮಕ್ ಕೊಟ್ಟಿಲ್ಲ. ಆದರೆ, ಭಯಂಕರ ಟ್ವಿಸ್ಟ್ ಕೊಟ್ಟಿದೆ.

ಮೊದಲು ನಾಮಿನೇಟ್ ಆದವರು ಆರೋಪ ಹಾಗೂ ಪ್ರತ್ಯಾರೋಪ ಮಾಡಿದ್ದರು. ಬಳಿಕ ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ಇದ್ದವರು ಒಬ್ಬೊಬ್ಬರಾಗಿಯೇ ಸೇಫ್ ಆಗುತ್ತಾ ಬಂದರು. ಕೊನೆಯಲ್ಲಿ ಗೌತಮಿ ಜಾದವ್ ಹಾಗೂ ಭವ್ಯಾ ಗೌಡ ಉಳಿದು ಕೊಂಡಿದ್ದರು. ಇಡೀ ದಿನ ಗೌತಮಿ ಜಾದವ್ ಅಂತ ಹಾಕಿದ್ದ ಲೆಕ್ಕವೆಲ್ಲ ತಲೆ ಕೆಳಗಾಗಿತ್ತು. ಯಾಕಂದ್ರೆ ಇಬ್ಬರಲ್ಲಿ ಮೊದಲ ಸೇಫ್ ಆಗಿದ್ದೇ ಗೌತಮಿ. ಇನ್ನೇನು ಭವ್ಯಾ ಗೌಡ ಹೊರಗೆ ಬರಬೇಕು ಅನ್ನುವಷ್ಟರಲ್ಲಿ ಅವರೂ ಸೇಫ್ ಎಂದು ಬಿಗ್ ಬಾಸ್. ಹಾಗಿದ್ದರೆ, ಮಿಡ್ ನೈಟ್ ಎಲಿಮಿನೇಷನ್ ಇಲ್ವಾ? ಡೋರ್ ಯಾಕೆ ಇನ್ನೂ ಕ್ಲೋಸ್ ಆಗಿಲ್ಲ? ನಾಮಿನೇಷನ್ ಪ್ರಕ್ರಿಯೆಯಲ್ಲಿ ಇದ್ದವರೆಲ್ಲ ಸೇಫ್ ಅಂದ್ಮೇಲೆ ಹೊರ ಹೋಗೋದು ಯಾರು?
ಹೌದು, ಇವತ್ತು (ಜನವರಿ 15) ಬಿಗ್ ಬಾಸ್ ಮನೆಯಿಂದ ಗೌತಮಿ ಜಾದವ್ ಇಲ್ಲ ಭವ್ಯಾ ಗೌಡ ಹೊರ ಬರುತ್ತಾರೆ ಅಂತಲೇ ನಂಬಲಾಗಿತ್ತು. ಇವತ್ತು ಬಾರದೆ ಹೋದರೂ ನಾಳೆಗಂತೂ ಟ್ವಿಸ್ಟ್ ಕೊಟ್ಟು ಎಂಡ್ ಮಾಡುತ್ತಾರೆ ಎಂದು ನಿರೀಕ್ಷೆ ಮಾಡುತ್ತಿದ್ದವರಿಗೆ ಬಿಗ್ ಬಾಸ್ ಶಾಕ್ ಕೊಟ್ಟಿದೆ. ಕೊನೆಯಲ್ಲಿ ಉಳಿದು ಕೊಂಡಿದ್ದ ಇವರಿಬ್ಬರನ್ನೂ ಬಿಗ್ ಬಾಸ್ ಸೇಫ್ ಮಾಡಿದೆ. ಆದರೆ, ಎಪಿಸೋಡ್ ಕೊನೆಯಲ್ಲಿ ಮಿಡ್ ನೈಟ್ ಎಲಿಮಿನೇಷನ್ ಆಗುತ್ತೆ ಅಂತಲೂ ಹೇಳಿದೆ.
ಬಿಗ್‌ಬಾಸ್ ಇನ್ನೂ ಮಹಾದ್ವಾರವನ್ನು ಕ್ಲೋಸ್ ಮಾಡಿಲ್ಲ. ಅಂದರೆ, ನಾಳೆ (ಜನವರಿ 16) ಸಂಚಿಕೆಯಲ್ಲಿ ಒಬ್ಬರು ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗುವುದು ಗ್ಯಾರಂಟಿ. ಈಗಾಗಲೇ ತ್ರಿವಿಕ್ರಮ್, ರಜತ್, ಉಗ್ರಂ ಮಂಜು, ಮೋಕ್ಷಿತಾ, ಗೌತಮಿ ಜಾದವ್ ಹಾಗೂ ಭವ್ಯಾ ಗೌಡ ಈ ಆರೂ ಮಂದಿನೂ ಸೇಫ್ ಆಗಿದ್ದಾರೆ. ಉಳಿದವರಲ್ಲಿ ಧನರಾಜ್ ಹಾಗೂ ಹನುಮಂತು. ಹಾಗಿದ್ದರೆ ಹೊರ ಹೋಗುವವರು ಯಾರು?
ಹನುಮಂತು ಈಗಾಗಲೇ ಫಿನಾಲೆಗೆ ಟಿಕೆಟ್ ಸಿಕ್ಕಿದೆ. ಅಂದ್ಮೇಲೆ ಧನರಾಜ್ ನಾಳೆ (ಜನವರಿ 16) ಬಿಗ್‌ಬಾಸ್ ಮನೆಯಿಂದ ಹೊರಗೆ ಹೋಗೋದು ಕನ್ಫರ್ಮ್ ಎಂದು ಹೇಳಲಾಗುತ್ತಿದೆ. ಧನರಾಜ್ ಈ ಬಾರಿ ಟಾಸ್ಕ್‌ನಲ್ಲಿ ಗೆದ್ದು ಎಲಿಮಿನೇಷನ್ ಪ್ರಕ್ರಿಯೆಯಿಂದ ಬಚಾವ್ ಆಗಿದ್ದರು. ಆದರೆ, ಸಂಚಿಕೆಯ ಕೊನೆಯಲ್ಲಿ ಟಾಸ್ಕ್ ವೇಳೆ ಧನರಾಜ್ ಕಡೆಯಿಂದ ತಪ್ಪು ನಡೆದಿದೆ ಎಂದು ಹೇಳಲಾಗಿದೆ. ಹಾಗೇ ಧನರಾಜ್ ಕಣ್ಣೀರಿನಿಂದ ಎಪಿಸೋಡ್ ಅನ್ನು ಕೊನೆ ಮಾಡಲಾಗಿದೆ.
ನಾಳೆಯ ಎಪಿಸೋಡ್‌ನಲ್ಲಿ ಧನರಾಜ್ ಮನೆಯಿಂದ ಹೊರ ಬರುತ್ತಾರಾ? ಮಿಡ್ ನೈಟ್ ಎಲಿಮಿನೇಷನ್‌ನಲ್ಲಿ ಟ್ವಿಸ್ಟ್ ಕೊಟ್ಟು ವೀಕ್ಷಕರಿಗೆ ಕಿಕ್ ಕೊಟ್ಟ ಬಿಗ್ ಬಾಸ್ ಮುಂದಿನ ಸಂಚಿಕೆಯಲ್ಲೂ ಹಾಗೇ ಮಾಡುತ್ತಾರಾ? ಇಲ್ಲ ಮೊದಲೇ ರಿವೀಲ್ ಮಾಡುತ್ತಾರಾ? ಅನ್ನೋದು ಸದ್ಯಕ್ಕೆ ಈಗ ಕುತೂಹಲ.


Click it and Unblock the Notifications











