BBK 11:ಮೋಸದಾಟ ಆಡಿದ್ದು ಧನರಾಜ್ ಒಬ್ರೇ ಅಲ್ಲ; ತ್ರಿವಿಕ್ರಮ್, ರಜತ್, ಮೋಕ್ಷಿತಾನೂ ಇದ್ದಾರೆ.. ನೆಟ್ಟಿಗರೇ ಕೊಟ್ರು ಸಾಕ್ಷಿ
ಬಿಗ್‌ಬಾಸ್ ಕನ್ನಡ ಸೀಸನ್ 11 ಮುಗಿಯುವುದಕ್ಕೆ ಇನ್ನು ಕೆಲವೇ ದಿನಗಳು ಬಾಯಿ ಉಳಿದಿವೆ. ಅಷ್ಟರಲ್ಲೇ ಬಿಗ್ ಬಾಸ್ ಶೋನಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಗುತ್ತಿದೆ. ನಿನ್ನೆಯ (ಜನವರಿ 15) ಎಪಿಸೋಡ್‌ನಲ್ಲಿ ಒಬ್ಬರು ಮಧ್ಯರಾತ್ರಿ ಎಲಿಮಿನೇಟ್ ಆಗುತ್ತಾರೆ ಎಂದು ನಿರೀಕ್ಷೆ ಮಾಡಲಾಗಿತ್ತು. ಪ್ರೋಮೊದಲ್ಲೂ ಅದನ್ನೇ ಹೇಳಲಾಗಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಎಲ್ಲವೂ ಉಲ್ಟಾ ಆಗಿತ್ತು.
ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ಆರು ಮಂದಿ ಸ್ಪರ್ಧಿಗಳು ಇದ್ದರು. ತ್ರಿವಿಕ್ರಮ್, ಭವ್ಯಾ ಗೌಡ, ಗೌತಮಿ ಜಾದವ್, ಮೋಕ್ಷಿತಾ, ಉಗ್ರಂ ಮಂಜು ಹಾಗೂ ರಜತ್ ಇದ್ದರು. ಇನ್ನು ಹನುಮಂತ ಹಾಗೂ ಧನರಾಜ್ ಇಬ್ಬರೂ ಸೇಫ್ ಆಗಿ ಉಳಿದಿದ್ದರು. ಉಳಿದಿದ್ದ ಆರು ಮಂದಿಯಲ್ಲಿ ಯಾರಾದೂ ಒಬ್ಬರು ಆಚೆ ಹೋಗುವುದಕ್ಕೆ ಕನ್ಫರ್ಮ್ ಆಗಿತ್ತು.

ತ್ರಿವಿಕ್ರಮ್, ಭವ್ಯಾ ಗೌಡ, ಗೌತಮಿ ಜಾದವ್, ಮೋಕ್ಷಿತಾ, ಉಗ್ರಂ ಮಂಜು ಹಾಗೂ ರಜತ್ ಸೇರಿದಂತೆ ಹನುಮಂತ ಹಾಗೂ ಧನರಾಜ್ ಇಷ್ಟೋ ಮಂದಿ ಮನೆಯಿಂದ ಯಾರು ಹೊರ ಹೋಗುತ್ತಾರೆ ಅಂತ ಗೆಸ್ ಮಾಡಿದ್ದರು. ಕೊನೆಯಲ್ಲಿ ಗೌತಮಿ ಹಾಗೂ ಭವ್ಯಾ ಗೌಡ ಉಳಿದುಕೊಂಡಿದ್ದರು. ಇಬ್ಬರಲ್ಲಿ ಒಬ್ಬರು ಹೊರ ಹೋಗುವುದು ಫಿಕ್ಸ್ ಅಂತಿದ್ದಾಗಲೇ ಇಬ್ಬರೂ ಸೇಫ್ ಆಗಿದ್ದರು. ಕೊನೆಯಲ್ಲಿ ಅದು ಧನರಾಜ್ ಕಡೆಗೆ ತಿರುಗಿತ್ತು. ಈಗ ಎಲ್ಲರೂ ಧನರಾಜ್ ಔಟ್ ಎಂದೇ ಅಂದುಕೊಂಡಿದ್ದಾರೆ. ಮೋಸ ಮಾಡಿ ಟಾಸ್ಕ್ ಗೆದ್ದಿದ್ದಾರೆ ಅನ್ನೋದು ಆರೋಪದಡಿ ಎಲಿಮಿನೇಟ್ ಆಗಿದ್ದಾರೆ ಎನ್ನಲಾಗಿದೆ.
ಈ ಸುದ್ದಿ ಹೊರ ಬೀಳುತ್ತಿದ್ದಂತೆ ನೆಟ್ಟಿಗರು ಧನರಾಜ್ ಬೆಂಬಲಕ್ಕೆ ಬಂದು ನಿಂತಿದ್ದಾರೆ. ಧನರಾಜ್ ಮೋಸದಾಟ ಆಡಿಲ್ಲ ಅಂತ ಕೆಲವರು ವಾದ ಮಾಡುತ್ತಿದ್ದಾರೆ. ಇನ್ನು ಕೆಲವರು ಧನರಾಜ್ ಅಷ್ಟೇ ಅಲ್ಲ ಇನ್ನೂ ಮೂವರು ಮಂದಿ ಸದಸ್ಯರು ಮೋಸದಾಟ ಆಗಿದ್ದಾರೆ. ಅವರು ಬಿಗ್ ಬಾಸ್ ಕಣ್ಣೀಗೆ ಕಾಣಲೇ ಇಲ್ಲವೇ ಎಂದು ಆರೋಪ ಹೊರ ಹಾಕಿತ್ತಿದ್ದಾರೆ. ಸೋಶಿಯಲ್ ಮೀಡಿಯಾ ಈ ಮಿಡ್ ನೈಟ್ ಎಲಿಮಿನೇಷನ್ ಬಗ್ಗೆ ಏನು ಚರ್ಚೆ ನಡೆಯುತ್ತಿದೆ? ತಿಳಿಯಲು ಮುಂದೆ ಓದಿ.
ಮಿಡ್ ವೀಕ್ ಎಲಿಮಿನೇಷನ್‌ನಿಂದ ತಪ್ಪಿಸಿಕೊಳ್ಳುವುದಕ್ಕೆ ಬಿಗ್ ಬಾಸ್ ಟಾಸ್ಕ್ ಒಂದನ್ನು ನೀಡಿತ್ತು. ಅದರಲ್ಲಿ ಧನರಾಜ್ ಟಾಸ್ಕ್ ಗೆದ್ದಿದ್ದು ಎಲಿಮಿನೇಷನ್‌ನಿಂದ ಸೇಫ್ ಆಗಿದ್ದರು. ಆದರೆ, ಟಾಸ್ಕ್ ಗೆದ್ದ ಬಳಿಕ ಧನರಾಜ್ ಬಂದು ಉಗ್ರಂ ಮಂಜು ಬಳಿ ತನಗೆ ಮಿರರ್‌ನಲ್ಲಿ ಕಾಣಿಸುತ್ತಿತ್ತು ಎಂದು ಹೇಳಿಕೊಂಡಿದ್ದರು. ಅದು ಕೊನೆಯ ಕ್ಷಣದಲ್ಲಿ ಬಿಗ್ ಬಾಸ್‌ಗೆ ಗೊತ್ತಾಗಿದೆ. ಹೀಗಾಗಿ ಗೌತಮಿ ಅಥವಾ ಭವ್ಯಾ ಗೌಡ ಎಲಿಮಿನೇಷನ್ ಆಗಬೇಕಿದ್ದವರು ಬಚಾವ್ ಆಗಿದ್ದು, ಈಗ ಧನರಾಜ್ ಕಡೆಗೆ ವಾಲಿದೆ.
ಇನ್ನು ಕೆಲವರು ಬಿಗ್ ಬಾಸ್ ಮನೆಯಲ್ಲಿ ಧನರಾಜ್ ಒಬ್ಬರೇ ಮೋಸದಾಟ ಆಡಿಲ್ಲ. ತ್ರಿವಿಕ್ರಮ್, ಮೋಕ್ಷಿತಾ ಹಾಗೂ ರಜತ್ ಮೂವರೂ ಮೋಸದಾಟ ಆಡಿದ್ದಾರೆ ಅಂತ ಸಾಕ್ಷಿ ಕೂಡ ಕೊಟ್ಟಿದ್ದಾರೆ. ಇವರ ತಪ್ಪನ್ನು ಯಾಕೆ ಪರಿಗಣಿಸಿಲ್ಲ ಎಂದು ಆ ದೃಶ್ಯದ ತುಣುಕುಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿದ್ದಾರೆ. ಮೂವರ ವಿಡಿಯೋಗಳು ಈಗ ಚರ್ಚೆಯಲ್ಲಿದೆ.
ಇನ್ನೊಂದು ಕಡೆ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಬಿಗ್ ಬಾಸ್ ಅನ್ನೇ ತರಾಟೆಗೆ ತೆಗೆದುಕೊಂಡಿದ್ದಾರೆ. ಧನರಾಜ್ ಆಡಿದ್ದು ಮೋಸದಾಟ ಅಲ್ಲ ಅದು ಸ್ಮಾರ್ಟ್ ಗೇಮ್ ಎನ್ನುತ್ತಾರೆ. ಅವರಿಗೆ ಸಿಕ್ಕ ಅವಕಾಶವನ್ನು ಅವರು ಬಳಸಿಕೊಂಡಿದ್ದಾರೆ. ಅದನ್ನು ಮೋಸದಾಟ ಎಂದು ಪರಿಗಣಿಸಿ ಅವರನ್ನು ಮನೆಯಿಂದ ಹೊರಗೆ ಕಳುಹಿಸಬೇಡಿ ಅಂತ ತಮ್ಮ ವಾದವನ್ನು ಮಂಡಿಸುತ್ತಿದ್ದಾರೆ.


Click it and Unblock the Notifications











