BBK 11:"ಹನುಮಂತನ ಭಿಕ್ಷೆಯಿಂದ ಫಿನಾಲೆಗೆ ಬಂದಿದ್ದೀಯಾ ನೆನಪಿಟ್ಕೊ" ಮೋಕ್ಷಿತಾ ಈಗ ಟ್ರೋಲ್ ಆಗ್ತಿರೋದ್ಯಾಕೆ?

ಬಿಗ್ ಬಾಸ್ ಕನ್ನಡ 11 ಕೊನೆಯ ದಿನದ ಗ್ರ್ಯಾಂಡ್ ಫಿನಾಲೆಗೆ ಇನ್ನೇನು ಕ್ಷಣ ಗಣನೆ ಶುರುವಾಗಿದೆ. ಬಿಗ್ ಬಾಸ್ ಮನೆಯೊಳಗೆ ಐದು ಮಂದಿ ಸದಸ್ಯರು ಇದ್ದಾರೆ. ಉಗ್ರಂ ಮಂಜು, ರಜತ್, ತ್ರಿವಿಕ್ರಮ್, ಹನುಮಂತು ಹಾಗೂ ಮೋಕ್ಷಿತಾ ಪೈ ಕಣದಲ್ಲಿ ಇದ್ದಾರೆ. ಈ ಐದು ಮಂದಿಯಲ್ಲಿ ಯಾರ ಮುಡಿಗೆ ಬಿಗ್ ಬಾಸ್ ಟ್ರೋಫಿ ಸಿಗುತ್ತೆ ಅನ್ನೋದನ್ನು ನೋಡುವುದಕ್ಕೆ ಕಿರುತೆರೆ ವೀಕ್ಷಕರು ಕುತೂಹಲದಿಂದ ಕಾಯುತ್ತಿದ್ದಾರೆ.

ನಿನ್ನೆ (ಜನವರಿ 25) ಬಿಗ್ ಬಾಸ್ ಮನೆಯಿಂದ ಭವ್ಯಾ ಗೌಡ ಹೊರ ಬಿದ್ದಿದ್ದರು. ಕೊನೆಯ ಹಂತದವರೆಗೂ ಬಂದು ಐದನೇ ರನ್ನರ್ ಅಪ್‌ಗೆ ತೃಪ್ತಿ ಪಟ್ಟುಕೊಳ್ಳಬೇಕಾಗಿ ಬಂದಿದೆ. ಈ ವೇಳೆ ಎಲಿಮಿನೇಟ್ ಆಗಿ ಗ್ರ್ಯಾಂಡ್ ಫಿನಾಲೆಗೆ ಬಂದಿದ್ದ ಸ್ಪರ್ಧಿಗಳಲ್ಲಿ ಏಳು ಮಂದಿ ಮೋಕ್ಷಿತಾ ಹೊರಗೆ ಬರಬೇಕು ಅಂತಲೇ ವೋಟ್ ಮಾಡಿದ್ದರು. ಈ ವೇಳೆ ಸೋಶಿಯಲ್ ಮೀಡಿಯಾದಲ್ಲಿ ಹನುಮಂತು ಹಾಗೂ ಮೋಕ್ಷಿತಾ ನಡುವಿನ ಸಂಭಾಷಣೆಯ ಹಳೆಯ ವಿಡಿಯೋ ಹರಿದಾಡುತ್ತಿತ್ತು.

Bigg Boss Kannada 11 netizens trolling Mokshitha Pai on insulting Hanumantha earlier

ಇದು ಆಗ ತಾನೇ ಹನುಮಂತು ಬಿಗ್ ಬಾಸ್ ಮನೆಯೊಳಗೆ ಎಂಟ್ರಿ ಕೊಟ್ಟಿದ್ದ ಸಮಯ. ಆ ವೇಳೆ ಹನುಮಂತುಗೆ ಮೋಕ್ಷಿತಾ ಅವಮಾನ ಮಾಡಿದ್ದರು ಅನ್ನೋದು ನೆಟ್ಟಿಗರ ವಾದ. ಹೀಗಾಗಿ ಮೋಕ್ಷಿತಾ ವಿರುದ್ಧ ನೆಟ್ಟಿಗರು ತಿರುಗಿಬಿದ್ದಿದ್ದಾರೆ. ಇನ್ನು ಈ ವಿಡಿಯೋದಲ್ಲಿ ಮೋಕ್ಷಿತಾ ಜೊತೆ ಗೌತಮಿ ಜಾದವ್ ಹಾಗೂ ಉಗ್ರಂ ಮಂಜು ಕೂಡ ಇದ್ದಾರೆ. ಆಗಿದ್ದರೆ, ಮೋಕ್ಷಿತಾ ಟ್ರೋಲ್ ಆಗುತ್ತಿರುವುದು ಯಾಕೆ? ಆ ವಿಡಿಯೋದಲ್ಲಿ ಅಂತಹದ್ದು ಏನಿದೆ? ಅಂತ ನೋಡುವುದಾದರೇ..

ಮೋಕ್ಷಿತಾ ಪೈ, ಗೌತಮಿ ಜಾದವ್ ಹಾಗೂ ಉಗ್ರಂ ಮಂಜು ಮೂವರು ಕೂತು ಮಾತಾಡುತ್ತಿರುತ್ತಾರೆ. ಈ ವೇಳೆ ಆಗ ತಾನೇ ಬಿಗ್ ಬಾಸ್ ಮನೆಯೊಳಗೆ ಎಂಟ್ರಿ ಕೊಟ್ಟಿದ್ದ ಹನುಮಂತು ಅವರಿದ್ದ ಬಳಿಗೆ ಹೋಗುತ್ತಾನೆ. ಆ ವೇಳೆ ಹನುಮಂತನಿಗೆ ಮೋಕ್ಷಿತಾ ಮಾತಾಡುತ್ತಿದ್ದೇವೆ ಆಮೇಲೆ ಬನ್ನಿ ಎಂದು ಅವಮಾನ ಮಾಡಿ ಕಳುಹಿಸಿದ್ದರು. ಆದರೆ, ಕೊನೆಯಲ್ಲಿ ಫಿನಾಲೆಗೆ ತಲುಪುವುದಕ್ಕೆ ಹನುಮಂತನೇ ಬೇಕಾಯ್ತು ಎಂದು ಟ್ರೋಲ್ ಮಾಡುತ್ತಿದ್ದಾರೆ. ಅಷ್ಟಕ್ಕೂ ಆ ಸಂಭಾವಣೆ ಏನು ಅಂದರೆ..

"ಹನುಮಂತು ಮಾತಾಡುತ್ತಿದ್ದೇವೆ ಆಮೇಲೆ ಬನ್ನಿ" ಎಂದು ಮೋಕ್ಷಿತಾ ಹೇಳುತ್ತಾರೆ. ಆಗ ಗೌತಮಿ "ನಗುತ್ತಾ ಸಾರಿ.." ಎಂದು ಹೇಳುತ್ತಾರೆ. ಹನುಮಂತು "ಇಲ್ಲ ಅಕ್ಕ.." ಎಂದು ಅಲ್ಲಿಂದ ಬೇಜಾರು ಮಾಡಿಕೊಳ್ಳದೆ ಹೋಗುತ್ತಾರೆ. ಆಗ ಗೌತಮಿ " ಪಾಪ ಜನರಲ್ ಆಗಿ ಬರುತ್ತಿದ್ದರು ಅನಿಸುತ್ತೆ. ನಾವು ಮಾತಾಡಿರುವುದು ಅವರಿಗೆ ಗೊತ್ತಿರಲ್ಲ." ಎನ್ನುತ್ತಾರೆ. ಆಗ ಮೋಕ್ಷಿತಾ " ಹಾಗೆ ಅಂದುಕೊಳ್ಳಬೇಡಿ" ಎನ್ನುತ್ತಾರೆ. ಆಗ ಉಗ್ರಂ ಮಂಜು ಕೂಡ " ಅವಳು ಹೇಳಿದ್ದು ಕರೆಕ್ಟ್.. ಗೊತ್ತಿರಲ್ಲ" ಎಂದು ಹೇಳುತ್ತಾರೆ. ಈ ವಿಡಿಯೋ ಮತ್ತೆ ಗ್ರ್ಯಾಂಡ್ ಫಿನಾಲೆ ಸಮಯದಲ್ಲಿ ವೈರಲ್ ಆಗುತ್ತಿದೆ.

ಗ್ರ್ಯಾಂಡ್ ಫಿನಾಲೆ ಕಳುಹಿಸುವುದಕ್ಕೆ ಇದೇ ಹನುಮಂತುಗೆ ಬಿಗ್ ಬಾಸ್ ಅವಕಾಶ ನೀಡಿದ್ದರು. ಆ ವೇಳೆ ಹನುಮಂತು ತನ್ನ ಗೆಳೆಯ ಧನರಾಜ್ ಹೆಸರನ್ನು ತೆಗೆದುಕೊಳ್ಳಬಹುದು ಎಂದು ನಿರೀಕ್ಷೆ ಮಾಡಿದ್ದರು. ಆದರೆ, ಹನುಮಂತು ಫಿನಾಲೆಗೆ ಮೋಕ್ಷಿತಾ ಹೋಗಬೇಕು ಎಂದು ಹೇಳಿದ್ದರು. ಆಗ ಕಿರುತೆರೆ ವೀಕ್ಷಕರಿಗೆ ದೊಡ್ಡ ಶಾಕ್ ಆಗಿತ್ತು. ಆಗಲೂ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು.

ಹನುಮಂತು ಬಿಗ್ ಬಾಸ್ ಮನೆಯೊಳಗೆ ಬಂದ ಸಮಯದಲ್ಲಿ ಮೋಕ್ಷಿತಾ ಅವಮಾನ ಮಾಡಿದ್ದರು. ಆದರೂ, ಮೋಕ್ಷಿತಾರನ್ನು ಫಿನಾಲೆ ತಲುಪಿಸಿದ್ದು ಹನುಮಂತು. ಅವನ ಭಿಕ್ಷೆಯಿಂದಲೇ ಹನುಮಂತು ಫಿನಾಲೆವರೆಗೂ ಬಂದಿದ್ದಾರೆ. ಅಂದು ಅವಮಾನ.. ನಾಳೆ ಸನ್ಮಾನ ಎಂದು ನೆಟ್ಟಿಗರು ಹಳೆಯ ವಿಡಿಯೋವನ್ನು ಇಟ್ಟುಕೊಂಡು ಟ್ರೋಲ್ ಮಾಡುವುದಕ್ಕೆ ಶುರು ಮಾಡಿದ್ದಾರೆ.

More from Filmibeat

English summary
Bigg Boss Kannada 11 netizens trolling Mokshitha Pai on insulting Hanumantha earlier
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X