BBK 11:ಈ ವಾರ 5 ಮಂದಿ ಎಲಿಮಿನೇಟ್.. ಕಿಚ್ಚನ ಪಂಚಾಯ್ತಿಯಲ್ಲಿ ಯಾರಿಗೆ ಗೇಟ್ ಪಾಸ್?
ಇನ್ನು ಎರಡೇ ವಾರ ಬಿಗ್ ಬಾಸ್ ಕನ್ನಡ 11 ಮುಗಿದೇ ಹೋಗುತ್ತೆ. ಮನೆಯೊಳಗೆ ಒಟ್ಟು 9 ಮಂದಿ ಸದಸ್ಯರು ಇದ್ದಾರೆ. ಇವರಲ್ಲಿ ಐದು ಮಂದಿ ಬಿಗ್ ಬಾಸ್ ಫಿನಾಲೆಯಲ್ಲಿ ಕಾಣಿಸಿಕೊಳ್ಳುತ್ತಾರೆ. ಈಗಾಗಲೇ ಬಿಗ್ ಬಾಸ್ ಫಿನಾಲೆಗೆ ಒಬ್ಬರಿಗೆ ಟಿಕೆಟ್ ಸಿಕ್ಕಿದೆ. ಉಳಿದ ಎಂಟು ಮಂದಿಯಲ್ಲಿ ಐದು ಮಂದಿ ವಾರ ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ಇದ್ದಾರೆ.
ಇಂದು (ಜನವರಿ 11) ಕಿಚ್ಚನ ಪಂಚಾಯ್ತು ಕಳೆದ ಒಂದು ವಾರದಲ್ಲಿ ಮನೆಯೊಳಗೆ ನಡೆದ ಹೈಡ್ರಾಮಾ, ಆಟ, ಕಿತ್ತಾಟ, ಮೈಂಡ್ ಗೇಮ್‌ಗಳ ಬಗ್ಗೆ ಚರ್ಚೆಯಾಗಲಿದೆ. ಹಾಗೇ ಈಗಾಗಲೇ ಎಲಿಮಿನೇಷನ್‌ಗೆ ನಾಮಿನೇಟ್ ಆಗಿರುವ ಐದು ಮಂದಿಯಲ್ಲಿ ಹೊರಗೆ ಹೋಗುವ ಸ್ಪರ್ಧಿಯ ಹೆಸರು ಕಿಚ್ಚ ಸುದೀಪ್ ಬಹಿರಂಗಗೊಳಿಸುತ್ತಾರಾ? ಒಬ್ಬರಾ? ಇಲ್ಲ ಇಬ್ಬರು ಎಲಿಮಿನೇಟ್ ಆಗುತ್ತಾರಾ? ಅನ್ನೋ ಕುತೂಹಲವಿದೆ.

ಬಿಗ್‌ಬಾಸ್ ಫಿನಾಲೆಗೆ ಟಿಕೆಟ್ ಪಡೆಯಲೇಬೇಕು ಅಂತ ಮನೆಯೊಳಗೆ ಇರುವ 9 ಮಂದಿ ಸದಸ್ಯರು ಸಿಕ್ಕಾಪಟ್ಟೆ ಹರಸಾಹಸ ಪಟ್ಟಿದ್ದರು. ಅವರಲ್ಲಿ ಒಬ್ಬರಿಗೆ ಟಿಕೆಟ್ ಸಿಕ್ಕಿದೆ. ಆ ಸ್ಪರ್ಧಿ ಇನ್ನು ಎರಡು ವಾರ ಸೇಫ್ ಜೋನ್‌ನಲ್ಲಿರುತ್ತಾರೆ. ಹಾಗಿದ್ದರೆ, ಐದು ಮಂದಿಯಲ್ಲಿ ಈ ಬಾರಿ ಮನೆಯಿಂದ ಹೊರಗೆ ಬರೋದ್ಯಾರು? ಎಲಿಮಿನೇಷನ್ ಆಗೋದು ಎಷ್ಟು ಮಂದಿ? ತಿಳಿಯಲು ಮುಂದೆ ಓದಿ.
ಹನುಮಂತನಿಗೆ ಫಿನಾಲೆ ಟಿಕೆಟ್
ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಿಗ್‌ಬಾಸ್ ಮನೆಯೊಳಗೆ ಪ್ರವೇಶ ಪಡೆದಿದ್ದ ಹನುಮಂತ ವೀಕ್ಷಕರ ಮನಸ್ಸು ಗೆದ್ದಿದ್ದಾನೆ. ಇದ್ದಿದ್ದನ್ನು ಇದ್ದಂಗೆ ಹೇಳುತ್ತಾ? ತನ್ನ ಗಾಯನದಿಂದ ಮನೆಯೊಳಗಿರುವ ಸ್ಪರ್ಧಿಗಳ ಮನಸ್ಸು ಗೆದ್ದಾನೆ. ಟಾಸ್ಕ್‌ಗಳಲ್ಲೂ ಹನುಮಂತ ಮುಂದಿದ್ದ. ಅದರಲ್ಲೂ ಫಿನಾಲೆಗೆ ಟಿಕೆಟ್ ಪಡೆಯುವ ಟಾಸ್ಕ್‌ಗಳಲ್ಲಿ ಹನುಮಂತ ಆಕ್ಟಿವ್ ಆಗಿ ಭಾಗವಹಿಸಿ ಟಿಕೆಟ್ ಗಿಟ್ಟಿಸಿಕೊಂಡಿದ್ದಾನೆ. ವೈಲ್ಡ್ ಕಾರ್ಟ್ ಎಂಟ್ರಿ ಕೊಟ್ಟು ಫಿನಾಲೆವರೆಗೂ ಪ್ರವೇಶ ಮಾಡಿದ ಕನ್ನಡದ ಮೊದಲ ಸ್ಪರ್ಧಿ ಎನಿಸಿಕೊಂಡಿದ್ದಾರೆ.

5 ಮಂದಿ ಯಾರು?
ಈ ವಾರ ಬಿಗ್‌ಬಾಸ್ ಕನ್ನಡ 11 ರೋಚಕ ಹಂತ ತಲುಪಿದೆ. ಫಿನಾಲೆ ಟಿಕೆಟ್‌ಗೆ ಶ್ರಮವಹಿಸಿದ್ದ 9 ಮಂದಿಯಲ್ಲಿ ಐದು ಮಂದಿ ಈ ವಾರ ಮನೆಯೊಂದ ಹೊರ ಹೋಗುವವರ ಪಟ್ಟಿಯಲ್ಲಿದ್ದಾರೆ. ಅವರಲ್ಲಿ ಭವ್ಯಾ ಗೌಡ, ತ್ರಿವಿಕ್ರಮ್, ಮೋಕ್ಷಿತಾ , ಚೈತ್ರಾ ಕುಂದಾಪುರ ಹಾಘೂ ಧನರಾಜ್ ಆಚಾರ್ ಇದ್ದಾರೆ. ಈ ವಾರ ಐವರು ಮಂದಿಯಲ್ಲಿ ಒಬ್ಬರು ಇಲ್ಲವೇ ಇಬ್ಬರು ಮನೆಯಿಂದ ಹೊರ ಹೋಗಬಹುದು ಎಂದು ಅಂದಾಜು ಮಾಡಲಾಗುತ್ತಿದೆ.
ಸೇಫ್ ಆಗಿದ್ದು ಯಾರು?
ಈ ವಾರ ಎಲಿಮಿನೇಷನ್ ಪ್ರಕ್ರಿಯೆಯಿಂದ ಸೇಫ್ ಆದವರು ಉಗ್ರಂ ಮಂಜು, ಗೌತಮಿ ಜಾದವ್ ಹಾಗೂ ರಜತ್. ಈ ವಾರ ರಜತ್ ಕ್ಯಾಪ್ಟನ್ ಆಗಿದ್ದರಿಂದ ಸೇಫ್ ಆಗಿದ್ದಾರೆ. ಇನ್ನು ಉಗ್ರಂ ಮಂಜು ಹಾಗೂ ಗೌತಮಿ ಜಾದವ್ ಇಬ್ಬರು ಚೆನ್ನಾಗಿ ಆಟ ಆಡಿದ್ದರಿಂದ ಅವರು ಸೇಫ್ ಆದರು. ಇಲ್ಲದೇ ಹೋಗಿದ್ದರೆ, ಈ ವಾರ ಈಗಾಗಲೇ ಎಲಿಮಿನೇಷನ್‌ಗೆ ನಾಮಿನೇಟ್ ಆಗಿರುವ ಐದು ಮಂದಿ ಸದಸ್ಯರಲ್ಲಿ ಉಗ್ರಂ ಮಂಜು ಹಾಗೂ ಗೌತಮಿ ಕೂಡ ಇರುತ್ತಿದ್ದರು.
ಇಬ್ಬರು ಎಲಿಮಿನೇಟ್ ಆಗಬಹುದೇ?
ಬಿಗ್‌ಬಾಸ್ ಕನ್ನಡ 11 ಮುಗಿಯುವುದಕ್ಕೆ ಇನ್ನು ಎರಡು ವಾರ ಬಾಕಿ ಉಳಿದಿದೆ. ಫೈನಲ್‌ಗೆ ಐದು ಮಂದಿ ಪ್ರವೇಶ ಪಡೆಯುತ್ತಾರೆ. ಈಗಾಗಲೇ 9 ಮಂದಿಯಲ್ಲಿ ಹನುಮಂತ ಫೈನಲ್‌ಗೆ ಪ್ರವೇಶ ಕೊಟ್ಟಾಗಿದೆ. ಇನ್ನು ನಾಲ್ಕು ಮಂದಿಯ ಫಿನಾಲೆಗೆ ಎಂಟ್ರಿ ಕೊಡಬೇಕು. ಈ ಹಿನ್ನೆಲೆಯಲ್ಲಿ ಈ ವಾರ ಇಬ್ಬರನ್ನು ಎಲಿಮಿನೇಟ್ ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ. ಧನರಾಜ್ ಹಾಗೂ ಚೈತ್ರಾ ಕುಂದಾಪುರ ಇಬ್ಬರು ಎಲಿಮಿನೇಟ್ ಆಗಬಹುದು ಎಂದು ಅಂದಾಜು ಮಾಡಲಾಗುತ್ತಿದೆ. ಅದಕ್ಕೆ ಕಿಚ್ಚನ ಪಂಚಾಯ್ತಿಯಲ್ಲಿ ಉತ್ತರ ಸಿಗಲಿದೆ.


Click it and Unblock the Notifications











